Posts

ಕಾಡುವ ನೆನಪುಗಳಿಗೂ ಇದೆ ಘಮ

Image
  ರಜೆ ಇದ್ದಾಗಲೆಲ್ಲ ಹೀಗೆಯೇ..ಅದೆಷ್ಟು ಪ್ರಯತ್ನಿಸಿದರೂ ನಿದ್ದೆ ಬರುವುದಿಲ್ಲ. ಆಫೀಸಿಗೆ ಹೋಗದೇ ಇರುವ ದಿನ  ಬೇಡವೆಂದರೂ  ಬೇಗ ಎಚ್ಚರವಾಗುತ್ತದೆ. ನಾಳೆ ಆಫೀಸು ಇದೆ, ಬೆಳಗ್ಗೆ ಬೇಗ ಏಳಲೇ ಬೇಕು ಎಂದು ಮೊಬೈಲ್ ದೂರ ಇರಿಸಿ ಮಲಗಿಕೊಂಡು ಇನ್ನೇನು ನಿದ್ದೆ ಬಂತು ಅನ್ನುವಾಗ ಮೂಗಿಗೆ ಅಡರಿದ್ದು ಲ್ಯಾವೆಂಡರ್ ಘಮ. ನಿಶ್ಶಬ್ದವಾದ ರಾತ್ರಿಯಲ್ಲಿ ಮೆಲ್ಲನೆ ತಿರುಗುವ ಫ್ಯಾನ್. ಒಂದು ಕಣ್ಣು ಮಿಟುಕಿಸಿದಂತೆ ಉರಿಯುತ್ತಿರುವ ಗುಡ್ ನೈಟು ಅದರ ನಡುವೆ ಈ ಲ್ಯಾವೆಂಡರ್  ಸುವಾಸನೆ. ಇದೆಲ್ಲಿಂದ  ಘಂ ಅನ್ನಿಸಿತು ಎಂದು ನೋಡಿದಾಗ  ರೂಂ ಫ್ರೆಶ್ನರ್ ಪಾಕೆಟ್, ಬೆಡ್ ಪಕ್ಕ ಬಿದ್ದಿತ್ತು. ಅದೆನ್ನೆತ್ತಿ ಅದಿಡುವ ಸ್ಥಳದಲ್ಲಿ ನೇತು ಹಾಕಿ ಮತ್ತೆ ಮಲಗಲು ಪ್ರಯತ್ನಿಸಿದೆ. ಊಹೂಂ ಎಲ್ಲಿ ಬರುತ್ತೆ ನಿದ್ದೆ? ಅಂದ ಹಾಗೆ ಪರಿಮಳಕ್ಕೂ ನನಗೂ ಬಾರೀ ನಂಟು. ಪಿಜಿಯಲ್ಲಿದ್ದಾಗ ನಾಲ್ಕನೇ ಫ್ಲೋರಿನ ರೂಮಿನಿಂದಲೇ ಬೆಳಗ್ಗಿನ ತಿಂಡಿ ಏನು ಎಂಬುದನ್ನು ಅರಿಯುತ್ತಿದ್ದ ಚುರುಕು ಮೂಗು. ನಮ್ಮಮ್ಮನಿಗೂ ಹಾಗೆಯೇ ಮೂಗಿಗೆ ಸ್ಮೆಲ್ ಬಡಿಯುವುದು ಬಾರೀ ಬೇಗ. ಅಮ್ಮ ಸ್ಮೆಲ್ ನೋಡಿಯೇ ಅಡುಗೆ ಚೆನ್ನಾಗಿದೆಯೋ ಇಲ್ಲವೋ, ಯಾವ ಪದಾರ್ಥ  ಜಾಸ್ತಿ ಆಗಿದೆ ಎಂಬುದನ್ನು ಹೇಳಿ ಬಿಡುತ್ತಿದ್ದರು. ಅಡುಗೆಯಲ್ಲಿ ಏನು ಹೆಚ್ಚು ಕಮ್ಮಿ ಆಗಿದೆ ಎಂದು ರುಚಿ ನೋಡದೇ ಬರೀ ಸ್ಮೆಲ್ ನಿಂದಲೇ ಪತ್ತೆ ಹಚ್ಚುವಂಥಾ  ಸಾಮರ್ಥ್ಯ ನನ್ನ ಮೂಗಿಗೆ ಇಲ್ಲವಾದರೂ ಪರಿಮಳದ ವಿಷಯದಲ್ಲಿ ತುಸು ಪ್ರೀತಿ ಜಾಸ್ತಿ ನನಗೆ. 

ಮತ್ತೆ ಬ್ಲಾಗ್ ಬಾಗಿಲು ತೆರೆದಿದ್ದೇನೆ...

Image
ಬದುಕು ಆ ಕ್ಷಣಕ್ಕೆ ಖಾಲಿ ಖಾಲಿ ಅನಿಸಿಬಿಡುತ್ತದೆ.ಗುರುವೋ ಗುರಿಯೋ ಇಲ್ಲದಂತೆ ಕಾಣುತ್ತದೆ.ಮುಂದೇನು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಎಲ್ಲಿಗೆ ಹೋಗಬೇಕು, ಎಲ್ಲಿ ನಿಲ್ಲಬೇಕು ಎಂಬ ಯಾವುದೇ ನಿರ್ಧಾರವಿಲ್ಲದೆ ಅದೊಂದು ಪಯಣ.ಕುಟುಂಬದಲ್ಲಿನ ಆಪ್ತರ ಅಗಲಿಕೆ ಬದುಕನ್ನು ನಲುಗಿಸಿ ಬಿಟ್ಟಿತ್ತು. ಒಂದಷ್ಟು ದಿನ ಅತ್ತು ಮತ್ತೆ ಕಣ್ಣೀರು ಒರೆಸಿ ನಿತ್ಯ ಕಾಯಕಕ್ಕೆ. ಎಲ್ಲ ನೋವುಗಳನ್ನು ನುಂಗಿ ನಗುವುದೆಷ್ಟ ಕಷ್ಚ. ಮನೆಯಲ್ಲಿ ಸೂತಕದ ಛಾಯೆ. ಎಲ್ಲರ ಮುಖದಲ್ಲೂ ದುಃಖ ,ಅವರಲ್ಲಿ ನನ್ನ ದುಃಖವನ್ನು ತೋಡಿಕೊಳ್ಳುವುದಾದರೂ ಹೇಗೆ? ಈ ಬದುಕು ನಶ್ವರ, ಹುಟ್ಟಿದವರು ಒಂದು ದಿನ ಸಾಯಲೇ ಬೇಕು ಎಂಬುದು ನಿತ್ಯ ಸತ್ಯ. ಆದರೆ ಸಾವು ಅದನ್ನು ಅರಗಿಸಿಕೊಳ್ಳುವುದು ಕಷ್ಟದ ವಿಷಯ. ಕೆಲಸದಲ್ಲಿ ತಲ್ಲೀನರಾಗಿದ್ದು ಬಿಟ್ಟರೆ ನೋವು ಗೊತ್ತಾಗುವುದಿಲ್ಲ. ಆದರೆ ಅದರ ನಡುವೆ ಸಿಕ್ಕ ಗ್ಯಾಪ್ ನಲ್ಲಿ ಆ ಸಾವು-ನೋವು ಚುಚ್ಚಿ ಬಿಡುತ್ತದೆ. ಇವತ್ತು ನಮ್ಮ ಜತೆ ಇದ್ದವರು ಮತ್ತೆ ಇಲ್ಲ, ಅವರು ತಿರುಗಿ ಬರುವುದೇ ಇಲ್ಲ ಎಂದು ಮನಸ್ಸಿಗೆ ಹೇಳುತ್ತಾ ಇದ್ದರೂ ಕಾಯುವಿಕೆ ಕಣ್ಣುಗಳಲ್ಲಿ ನೀರು ತುಂಬಿಸುತ್ತದೆ.   ಈ ಜಗತ್ತೇ ಬೇಡ ಎಂದು ಕಿರುಚಿ ಹೇಳುವುದೋ, ಈ ಬದುಕು ಸಾಕಾಗಿದೆ ಎಂದು ಬಿಕ್ಕಿ ಬಿಕ್ಕಿ ಅಳುವುದೋ...ಇದನ್ನು ಗೊಂದಲವೆನ್ನಲೋ ಮನಸ್ಸಿನ ನೋವು ಎನ್ನಲೋ. ಕತ್ತಲೆ ಕೋಣೆಯೊಂದರಲ್ಲಿ ನನ್ನನ್ನು ಬಂಧಿಸಿಟ್ಟ ಸ್ಥಿತಿ. ಕಿರುಚಿದ್ದು, ಅತ್ತಿದ್ದು ಕೂಗಿದ್ದು ಯಾರಿಗೂ ಕೇಳಿಸುವುದ

ನಾನೆಂಬ ಸ್ತ್ರೀ

Image
ನಾ ನೆಂಬ ಸ್ತ್ರೀ ನನ್ನೊಳಗಿನ ಅಗ್ನಿಕುಂಡದಲ್ಲುರಿದು ಆಹುತಿಯಾಗಲಾರೆ ಜ್ವಲಂತ ವಿಚಾರಗಳನ್ನೆಲ್ಲಾ ಶಿಥಿಲವಾದ ಹೆಣ್ಣಿನ ರೆಕ್ಕೆ ಸದ್ದುಗಳಲ್ಲೇ ಜೋಡಿಸಿಟ್ಟಿದ್ದೀನಿ ಬಿಕ್ಕಳಿಸುತ್ತಾ ವಿಕಸಿತವಾಗುವ ಮಣ್ಣಲ್ಲಿ ನಿದಿರೆಗೆ ಜಾರುವಾಗಲೂ ಬೆಳಕೆಂಬ ಅಮ್ಮ ನಂದಾದೀಪವಾಗಿ ಉರಿಯುತಿರಲು ಹುತ್ತರಿ ತೆನೆ ಗದ್ದೆಗಳ ಪುಣ್ಯ ಭೂಮಿಯಲಿ ಬೆಳೆಯುವ ಕ್ರಾಂತಿ ಬೀಜವನು ಅವಳು ಬಿತ್ತುತ್ತಿದ್ದಾಳೆ ನೀನಿನ್ನು ಮೈಕೊಡವಿ ಎದ್ದು ಬಾ ಅಂಧಕಾರದ ಆತ್ಮವೊಂದು ಕರೆಯುತ್ತಿದೆ ಬಂಧನದ ಸರಪಳಿ ನೋವಿನ ವೇಷಗಳನ್ನು ಕಿತ್ತೆಸೆದು ಅವಳು ಮುಗುಳ್ನಕ್ಕಳು ದೀರ್ಘ ಶಾಂತ ನಿಗೂಢ ಜೋಕಾಲಿಯಲಿ ನಿದ್ರಿಸಿದ್ದ ಬೆಳಗು ಕಿರಣಗಳು ಎಚ್ಚೆತ್ತು ಮೌನಿ ಮುಕ್ತಿ ಕುಟೀರದ ನೆತ್ತಿಯಲ್ಲುರಿದು ಕರಗಿ ಅಗ್ನಿ ಜ್ವಾಲೆಯಾಗಿ ಧಗಧಗಿಸಿದವು... (ಆದಿವಾಸಿ ಮಹಾಸಭಾ ನಾಯಕಿ, ಸಾಮಾಜಿಕ ಕಾರ್ಯಕರ್ತೆ ಸಿ.ಕೆ ಜಾನು ಬರೆದ ಮಲಯಾಳಂ ಕವಿತೆಯ ಅನುವಾದ) (ಚಿತ್ರ ಕೃಪೆ: ಕೆಪಿಎನ್)

ಮರಳಲ್ಲಿ ಬರೆದ ಸಾಲುಗಳು

Image
ನೀ ನು ಅಂತರಾತ್ಮದ ಕರೆಗೆ ಓಗೊಟ್ಟು ಹೊರ ನಡೆದಾಗ ಕಡಲತಡಿಯಲ್ಲಿ ಏಕಾಂತದ ನಿಟ್ಟುಸಿರು ಪ್ರೀತಿಯ ಆಲಿಂಗನವ ಬಯಸಿದ ಎಳೆ ಮೈಗೆ ಉಪ್ಪು ನೀರಿನ ಸಿಂಚನ ತನ್ನೊಳಗಿರುವ ಚಿಪ್ಪಿನೆಡೆಯಲಿ ಅಡಗಿ ಕುಳಿತಿರುವ ಮುತ್ತು ಹೊರಬರಲು ಕಾಯುವ ವೇಳೆ ಏಕಾಂತದಲೊಂದು ಬಯಕೆ ನಿನ್ನೊಡಲಿಗೆ ಬರಲೆ? ಹೆಜ್ಜೆ ಮುಂದಿಟ್ಟು ತಿರುಗಿ ನೋಡಿದಾಗ ಒದ್ದೆ ಮರಳಲ್ಲಿ ಪುಟ್ಟ ಪಾದದ ಗುರುತು ಅಮ್ಮನಂತಿರುವ ಕಡಲು ಬೇಡವೆನ್ನುವುದಿಲ್ಲ ನನ್ನನ್ನೂ ಈ ಬಂಧನವ ಕಳಚಿ ಸಾಧಿಸುವುದೇನು ಬಂತು? ಒಂದೊಂದು ಹೆಜ್ಜೆಯಲೂ ಕಂಬನಿಯ ಕತೆಗಳ ಅಳಿದುಳಿದ ಸಾಲು ಹರಿದು ಹಾಕಿದ ಪುಟಗಳಲಿ ನೆನಪುಗಳ ಕುರುಹು ಕಲ್ಲು ಬಂಡೆಯನ್ನಪ್ಪಳಿಸಿದ ನೀರ ಹನಿಯೊಂದು ಪ್ರೀತಿಯನು ಚಿಮ್ಮಿಸಿ ಮುಳುಗಿ ಹೋಗುತಿದೆ ನೀರ ಗುಳ್ಳೆಗಳಲಿ ಬಣ್ಣ ಬಣ್ಣದ ಪ್ರತಿಬಿಂಬ ಅಲೆಗಳಲಿ ಒಂದಾಗುತ್ತಾ ಮಾಯವಾದಾಗ ಏಕಾಂತದ ಕೋಟೆಯಲಿ ನಾನು ಸ್ವತಂತ್ರಳಾಗುತ್ತಿದ್ದೆ

ಹಸಿವು

Image
ಹಸಿವಿನ ಸುಖ, ಪ್ರಣಯದ ನೋವು ಅಸ್ತಮಿಸಿದ ಹೊತ್ತು ಕತ್ತಲೆಯಲಿ ಎಲ್ಲವನು ನುಂಗಿ ಬದುಕಿದ ನಾನು ವಿಷಯ ದಾರಿದ್ರ್ಯದ ಮೂಟೆಯನ್ನು ಹೊತ್ತು ಭಿಕ್ಷಾಟನೆಗೆ ಹೊರಟು ನಿಂತಿದ್ದೇನೆ ನನಗೇನೂ ಕೊಡಲು ಬಯಸದವರು ನನ್ನಿಂದ ಪಡೆಯಲಿಚ್ಛಿಸದವರು ಬರೆದಿಟ್ಟ ಲೆಕ್ಕ ಪುಸ್ತಕದಲ್ಲಿ ನನ್ನ ಹಸಿವಿನ ಲೆಕ್ಕ ಸೊನ್ನೆಯಾಗಿಯೇ ಉಳಿದಿತ್ತು ಎಲ್ಲವನ್ನೂ ಕೂಡಿಸಿ, ಕಳೆದು ಗುಣಿಸಿ, ಭಾಗಿಸಿದ ದೇಹಗಳು ನನ್ನ ಹಾದು ಹೋದವು ರಕ್ತವೇ ಇಲ್ಲದ ಮೂಳೆ ಮಾಂಸಗಳ ತಡಿಕೆ ನೋಡಿ ನನಗೆ ಅಚ್ಚರಿ! ಅವರ ಹೆಜ್ಜೆ ಬೆನ್ನತ್ತಿ ಮುಂದೆ ನಡೆದೆ ನನಗೆ ಗೊತ್ತಿಲ್ಲದ, ನನ್ನನ್ನು ಅರಿಯದ ದಾರಿಯಲ್ಲಿ ಅಪರಿಚಿತ ಮುಖಗಳೆಡೆ ನಾನು ಒಬ್ಬಂಟಿ ನಾನಾರೆಂದು ಕೇಳಲು ಯಾರೂ ಇಲ್ಲದ ಬೀದಿಯಲಿ ಎಲ್ಲರೂ ನಾನಾರೆಂದು ಪಿಸುಗುಡುವ ಸದ್ದು ಗಹಗಹಿಸಿ ನಕ್ಕು ನನ್ನ ಸೋಕಿದ ಬರಡು ಭೂಮಿಯ ಉಷ್ಣ ಗಾಳಿ ದೇಹವನು ಗೀರಿ ರಕ್ತ ಹರಿಸಿದಾಗ ಆ ರಕ್ತಕ್ಕೆ ಗಂಧವಿರಲಿಲ್ಲ.. ಹೀಗೂ ಇರಬಹುದೆ? ದೇಹ ದಣಿದಿತ್ತು, ನಿದ್ರಿಸಲು ರಾತ್ರಿಯನ್ನರಸಿದೆ ಬೆಳಕಿನ ಕಿರಣಗಳು ವಕ್ರೀಭವನಗೊಂಡ ದಾರಿಗಳಲ್ಲಿ ಕಪ್ಪು ಬೆಳಕಿಗೆ ಜಾಗವಿರಲಿಲ್ಲ ನೆರಳು ಬಯಸಿ, ಓಡುವ ಮರಗಳ ಹಿಂದೆ ಓಡಿ ಹೋಗುತ್ತಿರುವ ನೆರಳುಗಳ ಹಿಂದೆ ಓಡುತ್ತಾ, ಓಡಲಾರದೆ ಬಿದ್ದು ಬಿಟ್ಟೆ! ಕುಸಿದು ಬಿದ್ದ ನನ್ನ ದೇಹ ಆ ಭೂಮಿಗೂ ಬೇಡವಾಗಿತ್ತು ಅಸ್ತಿತ್ವವಿಲ್ಲದ ನಾನು ಭಾರವಾದ ದೇಹ ಹೊತ್ತು ಮತ್ತೆ ಹೊರಟು ನಿಂತಿದ

ಸ್ಟೇಟಸ್ ? 35 ಸಿಂಗಲ್

Image
ಹಲೋ ..ನಿಮ್ಮಲ್ಲಿ ಒಂದು ಪ್ರಶ್ನೆ ಕೇಳಲಾ? ಹೇಳಿ... ನಿಮಗೆ ಬಾಯ್ ಫ್ರೆಂಡ್ ಇಲ್ವಾ? ಯಾಕೆ? ಸುಮ್ನೆ...ಕೇಳಿದ್ದು ಅಷ್ಚೇ... ಹ್ಮ್... ನಿಮ್ದು ಲವ್ ಫೈಲ್ಯೂರಾ? ಯಾಕೆ? ನಿಮ್ಮ ಕವನದಲ್ಲಿ ವಿಷಾದ ಇಣುಕುತ್ತೆ.. ಕೈ ಕೊಟ್ಟು ಹೋದ ಹುಡ್ಗನ ಬಗ್ಗೆ ಬರೆದಂತಿದೆ.. ಹಾಗೇನಿಲ್ಲ... ಓಕೆ ಇಂಥಾ ಪ್ರಶ್ನೆಗಳು ಆಗೊಮ್ಮೆ ಈಗೊಮ್ಮೆ ಫೇಸ್ಬುಕ್ ಇನ್ ಬಾಕ್ಸಲ್ಲಿ ಒಕ್ಕರಿಸಿ ಬಿಡುತ್ತವೆ. ಫೇಸ್ ಬುಕ್ ನಲ್ಲಿರೋ ಕೆಲವರಿಗೆ ರಿಲೇಷನ್ ಶಿಪ್ ಸ್ಟೇಟಸ್ ನಲ್ಲಿ ಸಿಂಗಲ್ ಅನ್ನೋ ಪದದ ಮೇಲೆಯೇ ಕಣ್ಣು. ಕೆಲವರಂತೂ ನಿಮಗೆ ಅಫೇರ್ ಏನೂ ಇಲ್ವಾ? ಮದ್ವೆ ಯಾವಾಗ? ಎಂಬ ಪ್ರಶ್ನೆಗಳನ್ನು ಕೇಳುತ್ತಾರೆ. ಇದಕ್ಕೆ ಏನೆಂದು ಉತ್ತರಿಸಲಿ? ಬರೀ ಫೇಸ್ ಬುಕ್ನಲ್ಲಷ್ಟೇ ಪರಿಚಯವಿರುವ ವ್ಯಕ್ತಿ ನಮ್ಮ ವೈಯಕ್ತಿಕ ವಿಷಯಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿ ಕಿರಿ ಕಿರಿ ಅನಿಸಿದರೆ ಏನು ಮಾಡುವುದು? ಉತ್ತರ ಸಿಂಪಲ್ ..ಬ್ಲಾಕ್! ಅಂದ ಹಾಗೆ ಹುಡುಗಿಯರ ರಿಲೇಷನ್ ಶಿಪ್ ಸ್ಟೇಟಸ್ ಗಳಲ್ಲಿ ಈ ಸಿಂಗಲ್' ಅನ್ನೋದು ಕುತೂಹಲದ ಮೂಟೆ. ಮದ್ವೆ ಆಗದೇ ಸಿಂಗಲ್ ಆಗಿರೋ ಹುಡುಗಿ ಒಂದೆಡೆಯಾದರೆ, ಸಂಬಂಧದಿಂದ ಹೊರ ಬಂದವಳು ಇನ್ನೊಂದೆಡೆ. ಇಲ್ಲಿ ಇಬ್ಬರೂ ಸಿಂಗಲ್ ಹುಡ್ಗೀರೇ. ಇಬ್ಬರ ಜೀವನಾನುಭವಗಳು ಮಾತ್ರ ಬೇರೆ ಬೇರೆಯಾಗಿರುತ್ತವೆ.ಆದಾಗ್ಯೂ, ಒಬ್ಬ ಹುಡುಗನನ್ನು ನೋಡಿದಾಗ ಇವರಿಬ್ಬರ ಮನಸ್ಸಿನಲ್ಲಿ ಮೂಡುವ ಪ್ರೇಮದ ಭಾವನೆಗಳು ಒಂದೇ ರೀತಿಯದ್ದಾಗಿದ್ದರೂ, ಅದನ್ನು ಸ್

ಬಸ್ ಪಯಣದ ಸುಖ

Image
ಮೊನ್ನೆ ಶಿವಾಜಿನಗರಕ್ಕೆ ಹೋಗುತ್ತಿದ್ದಾಗ ನನ್ನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಹುಡುಗಿಯೊಬ್ಬಳು ಫೋನಲ್ಲಿ ಮಾತನಾಡುತ್ತಿರುವುದು ಬೇಡ ಬೇಡವೆಂದರೂ ನನ್ನ ಕಿವಿಗೆ ಬೀಳುತ್ತಿತ್ತು. ಸಾಮಾನ್ಯವಾಗಿ ಬಸ್‌ನಲ್ಲಿ ಪ್ರಯಾಣಿಸುವಾಗ ಕುಳಿತುಕೊಳ್ಳಲು ಸೀಟು ಸಿಕ್ಕರೆ ಪುಸ್ತಕ ಓದುವುದು ಅಭ್ಯಾಸ. ಅಂದು ಬಸ್ಸಿನಲ್ಲಿ ಜನ ತುಂಬಾ ಇದ್ದರೂ ಪುಣ್ಯಕ್ಕೆ ನನಗೆ ಸೀಟು ಸಿಕ್ಕಿತ್ತು. ಹಿಂದಿನ ಸೀಟಲ್ಲಿ ಕುಳಿತ ನನ್ನಷ್ಟೇ ವಯಸ್ಸಿನ ಹುಡುಗಿಯೊಬ್ಬಳು ವಟ ವಟ ಎಂದು ಫೋನಲ್ಲಿ ಮಾತು ಶುರು ಹಚ್ಚಿಕೊಂಡಿದ್ದಳು. ಇಂಗ್ಲೀಷ್‌ನಲ್ಲಿ ಆಕೆ ಜೋರಾಗಿ ಮಾತನಾಡುತ್ತಿದ್ದುದರಿಂದಲೇ ನನ್ನ ಕಿವಿ ನೆಟ್ಟಗಾಯಿತು. ವೈ ಯು ಇನ್‌ಸರ್ಟಿಂಗ್ ಯುವರ್ ನೋಸ್ ಇನ್ ಬಿಟ್‌ವೀನ್. ಐ ಯೆಸ್ಟರ್‌ಡೇ ಟೋಲ್ಡ್ ನಾ..ಅಂಡರ್‌ಸ್ಟಾಂಡ್ ಪಾ..ಹೀಗೇ ಆಕೆಯ ಇಂಗ್ಲಿಷ್ ಸಂಭಾಷಣೆ ಮುಂದುವರಿಯಿತು. ಮಾತು ಮಾತುಗಳೆಡೆಯಲ್ಲಿ ಆಕೆ ನೋಪಾ, ಯೆಸ್ ಪಾ ಅಂತ ಹೇಳುತ್ತಾ ತನ್ನ ಏರುದನಿಯನ್ನು ಸ್ವಲ್ಪ ಸ್ವಲ್ಪವೇ ತಗ್ಗಿಸುತ್ತಿದ್ದಳು. ಒಮ್ಮೆ ಹಿಂತಿರುಗಿ ನೋಡಿದೆ, ಆಕೆ ಫೋನ್ ಸಂಭಾಷಣೆಯಲ್ಲಿ ಮಗ್ನಳಾಗಿದ್ದಾಳೆ. ಪುಸ್ತಕ ಹಿಡಿದುಕೊಂಡು ಕೂತಿದ್ದೆನಾದರೂ ವೈ ಯು ಇನ್‌ಸರ್ಟಿಂಗ್ ಯುವರ್ ನೋಸ್ ಇನ್ ಬಿಟ್‌ವೀನ್ ಎಂಬ ವಾಕ್ಯ ನನ್ನ ಕಿವಿಗೆ ಬೇಡ ಬೇಡವೆಂದರೂ ಅಪ್ಪಳಿಸುತ್ತಿತ್ತು. ಆಕೆ ಹೇಳಿದ್ದು, ನೀನ್ಯಾಕೆ ಮಧ್ಯೆ ಮೂಗು ತೂರಿಸುತ್ತೀಯಾ ಎಂಬುದನ್ನೇ ಅಲ್ಲವೇ? ಕನ್ನಡ ಪ್ರತಿಪದವನ್ನೂ ಹಾಗೆಯೇ ಇಂಗ್ಲಿಷ್‌ಗೆ ಅನುವಾದ