Posts

Showing posts from May, 2010

ಹೆಣ್ಣು ನೋಡೋದು ಅಂದ್ರೆ ಸುಮ್ನೇನಾ?

ನ ಮ್ಮ ಈ ಆನಂದ ಇದ್ದಾನಲ್ಲ...ಇವನಿಗೆ ಬರೀ ಹೆಣ್ಣು ನೋಡೋದೆ ಕೆಲ್ಸ .ಆದಾಗ್ಯೂ, ವಯಸ್ಸು ಇಪ್ಪತ್ಮೂರು ದಾಟಿದ ಮೇಲೆ ಹೆಣ್ಣು ಹುಡುಕೋಕೆ ಆರಂಭ ಮಾಡಿದ್ದಾನೆ ಈ ಮಹಾನುಭಾವ. ಈ ಶೋಧ ಕಾರ್ಯ ಆರಂಭವಾಗಿ ಮೂರು ವರ್ಷಗಳಾದರೂ ಇವನ ಮನಸ್ಸಿಗೆ ಒಪ್ಪುವಂತ ಹುಡುಗಿ ಈವರೆಗೆ ಯಾವುದೂ ಸಿಕ್ಕಿಲ್ಲಂತೆ. ಹೆಣ್ಣು ನೋಡೋಕೆ ಹೋಗೋದರಲ್ಲೇ ಇವನು ಆನಂದ ಕಂಡುಕೊಂಡಿದ್ದಾನೆ ಎಂದರೆ ಅತಿಶಯೋಕ್ತಿಯಾಗಲಾರದು. ತಾಳಿ ಕಟ್ಟಲು ಯೋಗ್ಯವಾದ ಹುಡುಗಿ ಬೇಕೂಂತಾ ಇವ ಅಲೆಯದ ಊರಿಲ್ಲ. ಕುಡಿಯದ ಬಾವಿ, ಬೋರ್್ವೆಲ್, ಬಾಟಲಿ ನೀರಿಲ್ಲ. ಈವರೆಗೆ ಹುಡುಗಿ ನೋಡೋಕೆ ಹೋಗಿ ಅಲ್ಲಿನ ಕಾಫಿ, ತಿಂಡಿ, ಊಟ ಮಾಡಿಕೊಂಡು ದೇಹದ ಭಾರ ಜಾಸ್ತಿ ಮಾಡಿದ್ದಲ್ಲದೆ ಬೇರ್ಯಾವ ಬದಲಾವಣೆಯೂ ಇವನಲ್ಲಿ ಕಂಡುಬಂದಿಲ್ಲ. ಹುಡುಗಿ ನೋಡಿದ ಮೇಲೆ, ಹೇಗೆ ...ನಿಂಗೆ ಇಷ್ಟ ಆಯ್ತಾ? ಅಂತಾ ಬ್ರೋಕರ್ ಕೇಳಿದ್ರೆ, "ಹುಡುಗಿ ರಾಗಿಣಿಯಷ್ಟು ಎತ್ತರ ಇಲ್ಲ, ರಕ್ಷಿತಾನಂತೆ ಡುಮ್ಮಿ, ರಮ್ಯಾನಂತೆ ಮೂಗಿನಲ್ಲಿ ಕೋಪ, ಬಿಪಾಶಾನಂತೆ ಕಪ್ಪು, ಪೂಜಾ ಗಾಂಧಿ ತರಾ ಸ್ಮೈಲಾದ್ರೂ ಬೇಡ್ವ?. ಕನಿಷ್ಠ ಐಶ್ವರ್ಯಾಳಂತ ಕಣ್ಣು, ಪ್ರಿಯಾಮಣಿಯಂತಾ ಫಿಗರು, ಮೀರಾ ಜಾಸ್ಮಿನ್ ತರಾ ಸ್ವಲ್ಪ ನಾಚಿಕೆಯಾದ್ರೂ ತೋರಿಸ್ಬೇಡ್ವೆ? ಇದ್ಯಾವುದೇ ಗುಣಗಳಿಲ್ಲದ ಹೆಣ್ಣನ್ನು ನಾನು ವರಿಸುವುದೇ? "ಎಂದು ಮರುಪ್ರಶ್ನಿಸುತ್ತಿದ್ದ. "ಏನು ಮಾರಾಯಾ... ನೀನು ಹೇಳುವ ಸೈಜಿನ, ತೂಕದ ಹುಡುಗಿಯನ್ನು ಕಂಡುಹಿಡಿಬೇಕಾದ್ರೆ ನಂಗೆ ಈ ಜನ್ಮ ಸಾಕಾ

ಬಚ್ಚಲು ಕೋಣೆಯೊಳಗೊಮ್ಮೆ ಇಣುಕಿ...

ಬಚ್ಚಲು ಕೋಣೆಯೊಳಗೊಮ್ಮೆಇಣುಕಿ ನೋಡಿ... ಪುಟ್ಟ ಬಾಲೆಯು ಕದ್ದು ತಿಂದು ಗೊತ್ತಾಗಬಾರದೆಂಬಂತೆ ಬಾಯಿ ಮುಕ್ಕಳಿಸುತ್ತಿರಬಹುದು.. ಹದಿಹರೆಯದ ನಿಮ್ಮ ಮಗಳು ಕದ್ದು ಮುಚ್ಚಿ ಪ್ರೇಮಪತ್ರವನ್ನೋದುತಿರಬಹುದು ಬಹುಷಃ ಮೊಬೈಲ್ ಹಿಡಿದು 'ಅವನಲ್ಲಿ' ಪಿಸುಗುಟ್ಟುತ್ತಿರಬಹುದು ದುಃಖವನ್ನು ಅದುಮಿಟ್ಟ ಮಡದಿ ಯಾರೂ ಅರಿಯದಂತೆ ಕಣ್ಣೀರು ಹಾಕುತ್ತಿರಬಹುದು... ಬಹಿರ್ದೆಸೆಗೆ ಹೋದ ನಿಮ್ಮಮ್ಮ ಕಾಲು ಜಾರಿ ಬಿದ್ದು ಗೋಳಾಡುತ್ತಿರಲೂ ಬಹುದು... ಎಂದಾದರೊಂದು ದಿನ ನೀವೂ ಅತ್ತಿರಬಹುದು, ಬಿದ್ದಿರಬಹುದು ಕೋಪ ತಣಿಸಿಕೊಂಡಿರಬಹುದು ಇದೇ ಬಚ್ಚಲು ಕೋಣೆಯಲ್ಲಿ ಹೀಗೆ ಬಚ್ಚಲು ಮನೆ 'ರಹಸ್ಯ' ಮುಗಿಯುವುದೇ ಇಲ್ಲ...