Posts

Showing posts with the label ಹಾಗೇ ಸುಮ್ಮನೆ

ಏಕಾಂತತೆ ಮತ್ತು ನಾನು...

'ಎಂ ಥಾ ಮಳೆಯಪ್ಪಾ...ಈ ಟ್ರಾಫಿಕ್ ಜಾಮ್ ನಲ್ಲಿ ಮಳೆ ಬಂದರೆ ಕಿರಿಕಿರಿಯೇ.'."ನಾವು ಕೇಳಿದಷ್ಟು ದುಡ್ಡು ಕೊಟ್ಟರೆ ಬರುತ್ತೇವೆ" ಎಂದು ಹೇಳಿದ ರಿಕ್ಷಾವಾಲನಿಗೆ ಮನಸ್ಸಲ್ಲೇ ಹಿಡಿಶಾಪ ಹಾಕಿ ಅದೇ ರಿಕ್ಷಾ ಏರಿ ಮನೆಯತ್ತ ಹೊರಟ ಮಂದಿ. ಈ ನೂಕು ನುಗ್ಗಲಿನಲ್ಲಿಯೂ 'ನಾ ಫಸ್ಟು...ನಾ ಮುಂದೆ' ಎಂದು ಪುಟ್ಟ ಮಕ್ಕಳು ಉಚ್ಚೆ ಹೊಯ್ದು ಓಡಿಕೊಂಡು ಬರುವ ಹಾಗೆ ಬಿಎಂಟಿಸಿ ಬಸ್ ಗಳೆಡೆಯಲ್ಲೇ ನುಗ್ಗುವ ಬೈಕುಗಳು. ಬದುಕು ಬವಣೆಗಳ ನಡುವೆಯೂ ಮಳೆ ಸುರಿದಿದೆ. ಕಾಮೋ೯ಡ ಕವಿದಿದ್ದ ಬಾನು ತಿಳಿಯಾಗುತ್ತಿದೆ. ಕತ್ತಲ ಬದುಕಿನಲ್ಲಿ ಮಿಂಚು ಹರಿದು ಬೆಳಕಿನ ಸ್ಪಶ೯ ನೀಡಿದಾಗ ಭಾರವಾದ ಎದೆ ನಡುಗಿದೆ. ಈ ನೀರವತೆಯಲ್ಲಿನ ಏಕಾಂತತೆಯಲ್ಲಿ ನೆನಪುಗಳು ಮಾತ್ರ ಸದ್ದಿಲ್ಲದೆ ಬಂದು ಮನದ ಕದ ತಟ್ಟಿವೆ. ಪೀಜಿಯ ಕಿಟಿಕಿಯ ಮೂಲಕ ಇಣುಕಿದರೆ ಧೋ ಎಂದು ಸುರಿವ ಮಳೆ...ಒಣಗಲು ಹಾಕಿದ ಬಟ್ಟೆ ತಾರಸಿ ಮೇಲೆ ಹಾಗೆಯೇ ಇದೆ. ಮಳೆಯೊಂದಿಗೆ ತೀಡಿ ಬರುತ್ತಿರುವ ಗಾಳಿಯು ಆ ಬಟ್ಟೆಯನ್ನು ತನ್ನೊಡನೆ ಬಾ ಎಂದು ಕರೆಯುತ್ತಿದೆ. ಅದನ್ನು ನಾ ಬಿಡಲಾರೆ ಎಂದು ಬಟ್ಟೆಗೆ ಸಿಕ್ಕಿಸಿದ ಕ್ಲಿಪ್ ಗಾಳಿ ಜತೆ ಗುದ್ದಾಟಕ್ಕೆ ತೊಡಗಿದೆ. ರೂಮ್ ಮೇಟ್ ಲ್ಯಾಪ್ ಟಾಪ್ ಹಿಡಿದು ಧ್ಯಾನದಲ್ಲಿ ಕುಳಿತಂತಿದ್ದಾಳೆ. ಇಂಟರ್ ನೆಟ್ ಗೆ ಸಿಗ್ನಲ್ ಸಿಗುತ್ತಿಲ್ಲ ಎಂದು ಗೊಣಗುತ್ತಾ ಕಿಟಕಿಯ ಗಾಜು ಸರಿಸಿದ್ದಾಳೆ. ಆವಾಗಲೇ ತಣ್ಣನೆ ಗಾಳಿ ರೂಮಿನೊಳಗೆ ಪ್ರವೇಶಿಸಿದೆ. ಅಬ್ಬಾ ಸಿಗ...

'ಸ್ವಂತಿಕೆ'ಯ ಅನುಭವ ಅನುಭವಿಸಿದವನೇ ಬಲ್ಲ...

ಇಂದು ಬೆಳಗ್ಗೆ ಊರಿನಿಂದ ನನ್ನ ಸ್ನೇಹಿತ ಫೋನ್ ಮಾಡಿದಾಗ 'ಏನ್ ಮಾರಾಯ್ತಿ ಈವಾಗ ಏನೂ ಬರೆಯಲ್ವಾ?' ಅಂತಾ ಕೇಳಿದ್ದ. "ಸಿಕ್ಕಾಪಟ್ಟೆ ಬ್ಯುಸಿ ಮಾರಾಯಾ. ಆಫೀಸಿನಲ್ಲೇ ದಿನ ಪೂರ್ತಿ ಕಳೆದು ಹೋಗುತ್ತೆ. ಇನ್ನು ಬ್ಲಾಗ್ ಬರೆಯೋಕೆ ಸಮಯವೇ ಸಾಕಾಗ್ತಾ ಇಲ್ಲ" ಅಂತಾ ಹೇಳಿದ್ದೆ. ನಿಜವಾಗಿಯೂ ನನ್ನ ಬ್ಲಾಗ್ ಅಪ್್ಡೇಟ್ ಆಗದೆ ತುಂಬಾ ಸಮಯ ಆಯ್ತು. ಏನಾದರೂ ಬರೆಯಬೇಕು ಅಂತ ಕುಳಿತುಕೊಂಡರೆ ಏನು ಬರೆಯಬೇಕು ಅಂತಾನೇ ಗೊತ್ತಾಗಲ್ಲ. ಯಾವ ವಿಷಯ ಬರೆಯ ಬೇಕು ಎಂದು ಯೋಚಿಸುತ್ತಲೇ ಆ ದಿನ ಕಳೆದು ಹೋಗುತ್ತದೆ. ಆಫೀಸಿಗೆ ಹೋದ ನಂತರ ಏನಾದರೂ ಬರೆಯಬೇಕು ಎಂದು ಯೋಚಿಸಿಕೊಂಡೇ ಪಿಜಿಯಿಂದ ಹೊರಡುತ್ತೇನೆ. ಆದರೆ ಆಫೀಸಿಗೆ ಬಂದ ಮೇಲೆ ಈ ಯೋಚನೆಗಳ್ಯಾವುದೂ ಅಕ್ಷರ ರೂಪಕ್ಕೆ ಇಳಿಯುವುದಿಲ್ಲ ಎಂಬುದು ಸತ್ಯ. ಹೆಚ್ಚಿನ ಯೋಚನೆಗಳು ತಲೆಯಲ್ಲಿ ಹೊಳೆಯುವುದೇ ಬಸ್ಸಿನಲ್ಲಿ ಸೀಟು ಸಿಕ್ಕದೆ ಚಡಪಡಿಸುವಾಗ, ಯಾವುದೋ ಪರೀಕ್ಷೆಗೆ ತುರಾತುರಿಯಲ್ಲಿ ಸಿದ್ದತೆ ನಡೆಸುವಾಗ ಇಲ್ಲದಿದ್ದರೆ ಬಾತ್್ರೂಮಲ್ಲಿ. ಆ ಸಮಯದಲ್ಲಿ ಬರೆಯಲಂತೂ ಸಾಧ್ಯವಿಲ್ಲ, ನಂತರ ಬರೆಯೋಣ ಅಂದ್ರೆ ಇನ್ನೊಂದು ಯೋಚನೆ ತಲೆಯೊಳಗೆ ಹೊಕ್ಕಿ ಅಲ್ಲಿ ಸಜ್ಜಿಗೆ ಬಜಿಲ್ ಆಗಿರುತ್ತೆ. ಪತ್ರಿಕಾ ಕಚೇರಿ ಅಂದ ಮೇಲೆ ದಿನಾ ನಾವು ಬರೆಯುತ್ತಲೇ ಇರುತ್ತೇವೆ. ಅದೂ ಡೆಡ್್ಲೈನ್ ಇಟ್ಟುಕೊಂಡು. ಪ್ರತಿಯೊಂದು ದಿನವೂ ಹೊಸ ಹೊಸ ಐಡಿಯಾಗಳನ್ನು ಹುಡುಕಿ ನಮ್ಮನ್ನು ನಾವೇ ಅಪ್್ಡೇಟ್ ಮಾಡಿಕೊಳ್ಳಬೇಕು. ಅದೇನೋ ಇಂತ...

ದೊಡ್ಡವರಾಗುವುದೆಂದರೆ....?

" ಮಗಳು ದೊಡ್ಡವಳಾಗಿದ್ದಾಳೆ" ಎಂದು ಮಾವನ ಮನೆಯಿಂದ ಕರೆ ಬಂದಾಗ, ನನ್ನ ಅಪ್ಪ ಅಮ್ಮ ಎಲ್ಲರೂ ಸ್ವೀಟ್ಸ್ ತೆಗೊಂಡು ಮಾವನ ಮನೆಗೆ ದೌಡಾಯಿಸಿದ್ದು ಈಗಲೂ ನೆನಪಿದೆ. ಆವಾಗ ನಾನು ತುಂಬಾ ಚಿಕ್ಕವಳು. ಅಕ್ಕ (ಮಾವನ ಮಗಳು) ದೊಡ್ಡವಳಾಗಿದ್ದಾಳೆ ಎಂದು ಗಡದ್ದಾಗಿ ಫಂಕ್ಷನ್ ಮಾಡಿದಾಗ, ಅವಳಿಗೆ ಸಿಕ್ಕಿದ ಉಡುಗೊರೆ, ಸ್ವೀಟ್ಸ್ ಎಲ್ಲಾ ನೋಡಿ ಇದೆಲ್ಲಾ ಯಾಕೆ ಮಾಡ್ತಾರೆ ಅಂತಾ ಅಮ್ಮನಿಗೆ ಕೇಳಿದ್ದೆ. ಅವಳು ದೊಡ್ಡವಳಾಗಿದ್ದಾಳೆ ಎಂದು ಅಮ್ಮ ಹೇಳಿದಾಗ, ಅಕ್ಕ ಮೊದಲಿನಂತೆಯೇ ಇದ್ದಾಳೆ. ಉದ್ದನೂ ಆಗಿಲ್ಲ, ದಪ್ಪನೂ ಆಗಿಲ್ಲ. ಮೊದಲ ಬಾರಿ ಸಾರಿ ಉಟ್ಟು ಮದುಮಗಳಂತೆ ಕಾಣಿಸ್ತಾ ಇದ್ಳು. ಅದು ಬಿಟ್ರೆ ಬೇರೇನೂ ವ್ಯತ್ಯಾಸ ನನಗೆ ಗೊತ್ತಾಗಿಲ್ಲ. ಆವಾಗ ನನ್ನ ಇನ್ನೊಬ್ಬಳು ಕಸಿನ್, ನಾವೂ ದೊಡ್ಡವರಾದ್ರೆ ಇಷ್ಟೆಲ್ಲಾ ಗೌಜಿ ಮಾಡ್ತಾರಂತೆ, ತುಂಬಾ ಸ್ವೀಟ್ಸ್ ತಿನ್ಬಹುದಲ್ವಾ ಅಂದಿದ್ಳು. ಅದಕ್ಕೆ ಇನ್ನೊಬ್ಬಳು ನಿನ್ನ ಅಕ್ಕ ಮೊದಲು ದೊಡ್ಡವಳಗ್ತಾಳೆ ಮತ್ತೆ ನೀನು ಅಂದಾಗ ನನ್ನ ಅಕ್ಕ ಬೇಗ ದೊಡ್ಡವಳಾಗಲಿ ಆವಾಗ ನನಗೂ ತುಂಬಾ ಸ್ವೀಟ್ಸ್ ತಿನ್ನೋಕೆ ಸಿಗುತ್ತೆ ಅಂತಾ ಪುಟ್ಟ ಮನಸ್ಸಿನಲ್ಲೇ ಲೆಕ್ಕ ಹಾಕಿದ್ದೆ. ಅದಿರಲಿ ಬಿಡಿ, ಮನೆಯಲ್ಲಿ ನಾನು ಏನು ಹೇಳಿದ್ರೂ 'ನೀನು ಚಿಕ್ಕವಳು' ಎಂಬ ಮಾತು by Default ಆಗಿ ಎಲ್ಲರ ಬಾಯಿಂದ ಬರುತ್ತಿತ್ತು. ಅದು ಮಾಡಿಕೊಡಲಾ? ಇದು ಮಾಡಬಹುದಾ? ಅಂತಾ ಕೇಳಿದರೂ ಇದೇ ಉತ್ತರ. ಏಳನೇ ಕ್ಲಾಸಿಗೆ ತಲುಪಿದ್ರೂ 'ಚಿಕ್ಕ...

ಹೆಣ್ಣು ನೋಡೋದು ಅಂದ್ರೆ ಸುಮ್ನೇನಾ?

ನ ಮ್ಮ ಈ ಆನಂದ ಇದ್ದಾನಲ್ಲ...ಇವನಿಗೆ ಬರೀ ಹೆಣ್ಣು ನೋಡೋದೆ ಕೆಲ್ಸ .ಆದಾಗ್ಯೂ, ವಯಸ್ಸು ಇಪ್ಪತ್ಮೂರು ದಾಟಿದ ಮೇಲೆ ಹೆಣ್ಣು ಹುಡುಕೋಕೆ ಆರಂಭ ಮಾಡಿದ್ದಾನೆ ಈ ಮಹಾನುಭಾವ. ಈ ಶೋಧ ಕಾರ್ಯ ಆರಂಭವಾಗಿ ಮೂರು ವರ್ಷಗಳಾದರೂ ಇವನ ಮನಸ್ಸಿಗೆ ಒಪ್ಪುವಂತ ಹುಡುಗಿ ಈವರೆಗೆ ಯಾವುದೂ ಸಿಕ್ಕಿಲ್ಲಂತೆ. ಹೆಣ್ಣು ನೋಡೋಕೆ ಹೋಗೋದರಲ್ಲೇ ಇವನು ಆನಂದ ಕಂಡುಕೊಂಡಿದ್ದಾನೆ ಎಂದರೆ ಅತಿಶಯೋಕ್ತಿಯಾಗಲಾರದು. ತಾಳಿ ಕಟ್ಟಲು ಯೋಗ್ಯವಾದ ಹುಡುಗಿ ಬೇಕೂಂತಾ ಇವ ಅಲೆಯದ ಊರಿಲ್ಲ. ಕುಡಿಯದ ಬಾವಿ, ಬೋರ್್ವೆಲ್, ಬಾಟಲಿ ನೀರಿಲ್ಲ. ಈವರೆಗೆ ಹುಡುಗಿ ನೋಡೋಕೆ ಹೋಗಿ ಅಲ್ಲಿನ ಕಾಫಿ, ತಿಂಡಿ, ಊಟ ಮಾಡಿಕೊಂಡು ದೇಹದ ಭಾರ ಜಾಸ್ತಿ ಮಾಡಿದ್ದಲ್ಲದೆ ಬೇರ್ಯಾವ ಬದಲಾವಣೆಯೂ ಇವನಲ್ಲಿ ಕಂಡುಬಂದಿಲ್ಲ. ಹುಡುಗಿ ನೋಡಿದ ಮೇಲೆ, ಹೇಗೆ ...ನಿಂಗೆ ಇಷ್ಟ ಆಯ್ತಾ? ಅಂತಾ ಬ್ರೋಕರ್ ಕೇಳಿದ್ರೆ, "ಹುಡುಗಿ ರಾಗಿಣಿಯಷ್ಟು ಎತ್ತರ ಇಲ್ಲ, ರಕ್ಷಿತಾನಂತೆ ಡುಮ್ಮಿ, ರಮ್ಯಾನಂತೆ ಮೂಗಿನಲ್ಲಿ ಕೋಪ, ಬಿಪಾಶಾನಂತೆ ಕಪ್ಪು, ಪೂಜಾ ಗಾಂಧಿ ತರಾ ಸ್ಮೈಲಾದ್ರೂ ಬೇಡ್ವ?. ಕನಿಷ್ಠ ಐಶ್ವರ್ಯಾಳಂತ ಕಣ್ಣು, ಪ್ರಿಯಾಮಣಿಯಂತಾ ಫಿಗರು, ಮೀರಾ ಜಾಸ್ಮಿನ್ ತರಾ ಸ್ವಲ್ಪ ನಾಚಿಕೆಯಾದ್ರೂ ತೋರಿಸ್ಬೇಡ್ವೆ? ಇದ್ಯಾವುದೇ ಗುಣಗಳಿಲ್ಲದ ಹೆಣ್ಣನ್ನು ನಾನು ವರಿಸುವುದೇ? "ಎಂದು ಮರುಪ್ರಶ್ನಿಸುತ್ತಿದ್ದ. "ಏನು ಮಾರಾಯಾ... ನೀನು ಹೇಳುವ ಸೈಜಿನ, ತೂಕದ ಹುಡುಗಿಯನ್ನು ಕಂಡುಹಿಡಿಬೇಕಾದ್ರೆ ನಂಗೆ ಈ ಜನ್ಮ ಸಾಕಾ...

ಹೃದಯದೊಂದಿಗೆ ಒಂದು ಸಲ್ಲಾಪ...

ನಾನು: ಏ ಹೃದಯಾ... ಏನು ಯೋಚನೆ ಮಾಡ್ತಾ ಇದ್ದೀಯಾ...? ಹೃದಯ: ಹಾಗೇ ಸುಮ್ಮನೆ ಇದ್ದೇನೆ. ನಾನು: ಇಲ್ಲಾ ಏನೋ ಯೋಚನೆ ಮಾಡುವಂತಿದೆ...ನನ್ನಲ್ಲಿ ಹೇಳಲಾರೆಯಾ? ಹೃದಯ: ಏನಿಲ್ಲಾ ಬಿಡು... ನಾನು: ಹೇಳೇ... ಹೃದಯ: ಹೂಂ. ನೋಡು ಈ ಲಾಲ್್ಬಾಗ್ ಎಷ್ಟು ಸುಂದರವಾಗಿದೆಯಲ್ಲಾ.. ನಾನು: ಹೌದು ಹೃದಯ: ಎಷ್ಟೊಂದು ಸಸ್ಯ, ಹೂಗಳು ಮತ್ತೆ.. ನಾನು: ಮತ್ತೆ (?) ಹೃದಯ: ಪ್ರೇಮಿಗಳು! ನಾನು: ಹೂಂ.. ಹೃದಯ: ನಿನ್ನಲ್ಲೊಂದು ಪ್ರಶ್ನೆ ಕೇಳಲಾ? ನಾನು: ಕೇಳು.. ಹೃದಯ: ಈ ಪ್ರೇಮಿಗಳನ್ನು ನೋಡಿ ನಿನಗೆ ಏನೂ ಅನಿಸಲ್ವಾ... ನಾನು: ಏನು ಅನಿಸಬೇಕು ಹೇಳು. ಅಬ್ಬಾ ಎಷ್ಟೊಂದು ಪ್ರೇಮಿಗಳಿದ್ದಾರೆ! ಒಂದೊಂದು ಜೋಡಿಯೂ ಭಿನ್ನ ವಿಭಿನ್ನ.. ಹೃದಯ: ಅಷ್ಟೇನಾ... ನಾನು: ಅವರ ಸ್ಟೈಲು, ಸ್ಮೈಲು, ಲುಕ್, ವೇ ಆಫ್ ಎಕ್ಸಪ್ರೆಶನ್ ಎಲ್ಲಾ ಇಂಟರೆಸ್ಟಿಂಗ್ ಹೃದಯ: ಮತ್ತೆ.. ನಾನು: ಏನಿಲ್ಲಾ.. ಹೃದಯ: ಪ್ರೀತಿಯಲ್ಲಿ ಮುಳುಗಿರುವ ಅವರ ಕಣ್ಣಲ್ಲಿ ಸಂತೋಷ ನೋಡಿದ್ದೀಯಾ? ನಾನು: ಹೌದು..ನೋಡು ಹುಡ್ಗನ ತೆಕ್ಕೆಯಲ್ಲಿರುವ ಆ ಹುಡ್ಗಿ ಎಷ್ಟೊಂದು ಖುಷಿಯಾಗಿದ್ದಾಳೆ..ಅತ್ತ ನೋಡು ಅವಳ ಹೆಗಲ ಮೇಲೆ ಕೈ ಹಾಕಿ ಕುಳಿತ ಹುಡುಗ ಅವಳ ಸೌಂದರ್ಯವನ್ನು ವರ್ಣನೆ ಮಾಡುವಂತಿದೆ. ಹೃದಯ: ಮತ್ತೆ...ಹುಡ್ಗರ ಬಗ್ಗೆ ಹೇಳಲ್ವಾ.. ನಾನು: ಹೂಂ..ಮರದ ಮರೆಯಲ್ಲಿ ಕುಳಿತ ಆ ಜೋಡಿಯನ್ನೇ ನೋಡು. ಅವ ಕದ್ದು ಮುಚ್ಚಿ ಅವಳ ಕೆನ್ನೆಗೆ ಮುತ್ತಿಡುತ್ತಾನೆ. ಅವಳು ನಾಚುತ್ತಾಳೆ..ಅವಳಿಂದ ಮುತ್ತು ಪಡೆಯಲು ಅವ ಹವಣಿಸುತ್...

ನಿರೀಕ್ಷೆಯಲ್ಲಿ...ಹಾಗೇ ಸುಮ್ಮನೆ

ನಾವು ಚಿಕ್ಕವರಿರುವಾಗ ಮಕ್ಕಳೆಲ್ಲರೂ ಸೇರಿ ನೆಲದ ಮೇಲೆ ಎರಡೂ ಕೈಗಳನ್ನಿರಿಸಿ "ಅಟ್ಟಾ ಮುಟ್ಟಾ" ಆಟವಾಡುವಾಗ ಅದರಲ್ಲಿ ಬರುವಂತಹ "ನಿನ್ನ ಗಂಡ ಎಲ್ಲಿಗೆ ಹೋದ? ಕಾಶಿಗೆ ಹೋದ..ಏನು ತಂದ? ಗಿರಿಗಿಟಿ ತಂದ.. ಯಾರಿಗೆ ಕೊಟ್ಟ? ಅರಸನ ಮಗಳಿಗೆ ಕೊಟ್ಟ..."ಎಂದು ಹೇಳಿ ಮುಗಿಸುವಾಗ 'ಏನು ತಂದ? ಯಾರಿಗೆ ಕೊಟ್ಟ ?'ಎಂಬ ಪ್ರಶ್ನೆಗಳು ನನ್ನನ್ನು ಅಷ್ಟೊಂದು ಚಿಂತೆಗೀಡು ಮಾಡಿರಲಿಲ್ಲ. ಹುಂ! ನಿಮಗೂ ಏನೂ ಅರ್ಥವಾಗಿಲ್ಲವೇ? ಹೇಳ್ತೇನೆ ಕೇಳಿ.. ದೂರದ ಊರಿನಿಂದ ಸ್ವಂತ ಮನೆಗೆ ಹಿಂತಿರುಗುವಾಗ ಯಾರಾದರೂ ಬರಿ ಕೈಯಲ್ಲಿ ಹೋಗುತ್ತಾರೆಯೇ? ಇಲ್ಲವಲ್ಲಾ.. ಕನಿಷ್ಠ ಪಕ್ಷ ಮನೆಯವರಿಗೆ ಏನಾದರೂ ವಸ್ತುಗಳನ್ನು ಕೊಂಡುಕೊಳ್ಳುವುದು ವಾಡಿಕೆ. ನಾವು ಕೊಟ್ಟ ವಸ್ತು ಅದೆಷ್ಟೇ ಚಿಕ್ಕದಾಗಿರಲಿ..ಅದನ್ನು ನಮ್ಮ ಆಪ್ತರಿಗೆ ನೀಡುವಾಗ ಅವರ ಮುಖದಲ್ಲಿ ಕಾಣುವ ಸಂತಸ ಅದನ್ನು ನೋಡಿಯೇ ನಮ್ಮ ಮನ ತುಂಬಿ ಬರುತ್ತದೆ. ಅಲ್ಲವೇ? ನಾವು ಚಿಕ್ಕವರಿರುವಾಗ (ನಮ್ಮ ಮನೆಯ ಸುತ್ತ ಮುತ್ತಲೂ ಹೆಚ್ಚಾಗಿ ಗಲ್ಫ್ ಉದ್ಯೋಗಿಗಳ ಮನೆಯಿದೆ) ಪಕ್ಕದ ಮನೆಯವರು ಮಗ ಅಥವಾ ಗಂಡ ಊರಿಗೆ ಬಂದಿದ್ದಾನೆ ಆತ ಬರುವಾಗ ಇದನ್ನೆಲ್ಲಾ ತಂದಿದ್ದಾನೆ ಎಂದು ದೊಡ್ಡ ಪಟ್ಟಿಯೊಂದನ್ನೇ ನಮ್ಮೆದುರಿಡುತ್ತಿದ್ದರು. ಅವರೇನೂ ಹೇಳದಿದ್ದರೂ, ನಿಮ್ಮವರು ಊರಿಗೆ ಬರುವಾಗ ಏನೆಲ್ಲಾ ತಂದಿದ್ದಾರೆ? ಎಂದು ಕೇಳುವುದು ಕೂಡಾ ಇಲ್ಲಿ ಸರ್ವ ಸಾಮಾನ್ಯವಾಗಿತ್ತು. ಇದು ಮಾತ್ರವಲ್ಲದೆ ಯಾರಾದರೂ ದೂರದ ಊರ...