Posts

Showing posts from September, 2011

"ಕರ್ನಾಟಕ ಚೆಕ್ ಪೋಸ್ಟ್ ಗಳಲ್ಲಿ ಮಾಮೂಲುದಾರರು"- ನಟ ಪೃಥ್ವೀರಾಜ್ ಹೇಳಿದ ರಿಯಲ್ ಸ್ಟೋರಿ

Image
ಚೆ ಕ್ ಪೋಸ್ಟ್ ಗಳಲ್ಲಿ ಕತ೯ವ್ಯ ನಿರತರಾಗಿರುವ ಪೊಲೀಸರು ಲಂಚ ಕೇಳುವುದು ಹೊಸತೇನಲ್ಲ. ಅವರಿಗೆ 'ಮಾಮೂಲು' ಕೊಟ್ಟು ರಾಜ್ಯದ ಗಡಿ ದಾಟಿ ಬರುವ ಪ್ರತಿಯೊಬ್ಬ ಪ್ರಯಾಣಿಕನು ಪೊಲೀಸರಿಗೆ ಹಿಡಿಶಾಪ ಹಾಕುತ್ತಾನೆಯೇ ಹೊರತು ಯಾರೂ ಈ ಬಗ್ಗೆ ಕೇಸು ದಾಖಲಿಸುವುದಿಲ್ಲ ಎಂಬುದು ದುರದೃಷ್ಟಕರ. ಕೇರಳ-ಕನಾ೯ಟಕ ಗಡಿ ಪ್ರದೇಶದಲ್ಲಿ ಪೊಲೀಸರು ಮಾಮೂಲು ವಸೂಲಿ ಮಾಡುತ್ತಿರುವ ಬಗ್ಗೆ ಮಲಯಾಳ ಮನೋರಮಾ ಪತ್ರಿಕೆಯಲ್ಲೊಂದು ಸುದ್ದಿ ಪ್ರಕಟವಾಗಿದೆ. ಈ ಸುದ್ದಿ ಕನಾ೯ಟಕದ ಜನತೆಗೂ ತಲುಪಲಿ ಎಂಬ ಆಶಯದೊಂದಿಗೆ ಈ ಬ್ಲಾಗ್ ಬರೆಯುತ್ತಿದ್ದೇನೆ. ಕೇರಳ ಕನಾ೯ಟಕ ಗಡಿಪ್ರದೇಶವಾದ ಗುಂಡ್ಲುಪೇಟೆಯಲ್ಲಿ ರಂಜಿತ್ ನಿದೇ೯ಶನದ 'ಇಂಡಿಯನ್ ರುಪೀ' ಎಂಬ ಮಲಯಾಳಂ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ವೇಳೆ ಗಡಿಪ್ರದೇಶದಲ್ಲಿ ಕನಾ೯ಟಕ ಪೊಲೀಸರು ಲಂಚಕ್ಕಾಗಿ ತಮ್ಮನ್ನು ಪೀಡಿಸಿದ ಘಟನೆಯ ಬಗ್ಗೆ ಮಲಯಾಳಂ ಚಿತ್ರನಟ ಪೃಥ್ವೀರಾಜ್ ಹೇಳಿದ ರಿಯಲ್ ಸ್ಟೋರಿ . "ರಾಜ್ಯದ ಗಡಿ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ಮತ್ತು ಪೊಲೀಸ್ ಏಯ್ಡ್ ಪೋಸ್ಟ್ ಗಳಿರುವುದೇ ಪ್ರಯಾಣಿಕರ ಹಾಗೂ ಸರಕು ಸಾಗಾಟಗಾರರ ಭದ್ರತೆಗಾಗಿ. ಇವರಿಗೆ ಜನರಿಂದ 'ಮಾಮೂಲು' ವಸೂಲು ಮಾಡುವ ಅಧಿಕಾರವಿರುವುದಿಲ್ಲ. ಆದರೆ, ಬತ್ತೇರಿಯಿಂದ ಗುಂಡ್ಲುಪೇಟೆಗೆ ತಲುಪಲು ನಮ್ಮ ಸಿನಿಮಾ ಟ್ರೂಪ್ ಗೆ ಪ್ರತಿಯೊಂದು ಚೆಕ್ ಪೋಸ್ಟ್ ನಲ್ಲಿ ಪ್ರತಿ ದಿನ ನೀಡಬೇಕಾಗಿ ಬಂದ ಹಣ 200 ರು. ಪ್ರತಿ ಪ್ರಯಾಣದ ನಡ