Posts

Showing posts from June, 2014

ಅಪ್ಪನ ಡೈರಿಯಿಂದ ಕದ್ದ ಪುಟ...

Image
ಈವಾಗ ಹೇಗೆ ಸಮಯ ಕಳೆಯುತ್ತಿದ್ದೀರಿ? ಕೆಲಸದಿಂದ ನಿವೃತ್ತಿ ಹೊಂದಿದ ನಂತರ ಎಷ್ಟೋ ಜನ ಇದೇ ಪ್ರಶ್ನೆಯನ್ನು ಅದೆಷ್ಟು ಬಾರಿ ಕೇಳಿದ್ದಾರೇನೋ ಗೊತ್ತಿಲ್ಲ. ಹಳ್ಳಿಯಲ್ಲಿರುವ ಕಾರಣ ಹಿತ್ತಿಲಲ್ಲಿ ಒಮ್ಮೆ ಸುತ್ತಾಡಿ, ದನ ಕರು, ಗಿಡ, ಮರ ಎಲ್ಲವನ್ನೂ ನೋಡ್ಕೋಳೋದು, ಇನ್ನೇನೋ ವಸ್ತು ತರೋಕೆ ಅಂತಾ ಅಂಗಡಿಗೆ ಹೋಗಿ ಬರೋದು, ಎರಡ್ಮೂರು ದಿನಪತ್ರಿಕೆ ಓದೋದು, ಆಮೇಲೆ ಟೀವಿ ನೋಡ್ತಾ ಕುಳಿತರೆ ದಿನ ಕಳೆದು ಹೋಗುವುದೇ ಗೊತ್ತಾಗಲ್ಲ. ಈವಾಗಂತೂ ವಿಶ್ವಕಪ್ ಫುಟ್ಬಾಲ್ ಇದೆ ಅಲ್ವಾ? ನಿದ್ದೆ ಬರುವಷ್ಟು ಹೊತ್ತು ಟೀವಿ ನೋಡ್ಬಹುದು. ಇಷ್ಟೊಂದು ವರ್ಷ ಸ್ವಂತ ಕೆಲಸದಲ್ಲಿ ಬ್ಯುಸಿಯಾಗಿದ್ದ ನನಗೆ ನಿವೃತ್ತಿ ನಂತರ ಮನೆಯಲ್ಲಿ ಸುಮ್ಮನೆ ಕೂರೋದು ಅಂದ್ರೆ ಕಿರಿಕಿರಿ. ಅದಕ್ಕೆ ಮನೆಯ ಹೊರಗೆ ಸುತ್ತಾಡ್ತಾ ಇರ್ತೀನಿ. ಅಪ್ಪಾ ಟೈಮ್ ಸಿಕ್ಕಾಗಲೆಲ್ಲಾ ಏನಾದ್ರೂ ಬರೀರಿ ಅಂತಾ ಮಗಳು ಹೇಳ್ತಾನೇ ಇರ್ತಾಳೆ. ನಾನು ನಕ್ಕು ಸುಮ್ಮನಾಗ್ತೀನಿ .ನಿಜವಾಗ್ಲೂ, ನನಗೆ ಬರೆಯೋಕೆ ಬರಲ್ಲ. ಬರೆದದ್ದನ್ನು ಓದೋದು ಇಷ್ಟ. ಹೂಂ..ಇವತ್ತು ಏನಾದ್ರೂ ಬರೆಯೋಣ ಅಂತಾ ಪ್ರಯತ್ನ ಮಾಡಿದೆ. ಏನು ಬರೆಯಲಿ? ಅಂತಾ ಯೋಚಿಸ್ತಾ ಕುಳಿತುಕೊಂಡು ಒಂದು ಗಂಟೆ ಹಾಳು ಮಾಡಿಬಿಟ್ಟೆ! ಮನಸ್ಸಲ್ಲಿರೋದನ್ನೇಲ್ಲಾ ಖಾಲಿ ಹಾಳೆಯಲ್ಲಿ ಗೀಚಿದರೆ ಮನಸ್ಸು ನಿರಾಳವಾಗುತ್ತೆ ಅಂತಾ ನನ್ನವಳು ಆಗಾಗ್ಗೆ ಹೇಳ್ತಾನೇ ಇರ್ತಾಳೆ. ಅವಳ ಮನಸ್ಸನ್ನು ಕಾಡುವ ಯಾವುದೇ ವಿಷಯ ಇರಲಿ ಅದನ್ನು ಹಾಳೆಯಲ್ಲಿ ಗೀಚಿದರೆ ಮಾತ್ರ ಆಕೆ

ಈ ಕ್ಷಣದ ಮೌನ

Image
ನೀ ನನ್ನೊಂದಿಗೆ ಮಾತು ಬಿಟ್ಟ ಕ್ಷಣ ಮೌನದಲಿ ಮಾತು ಮೊಳಕೆಯೊಡೆದಿತ್ತು ನಾವಿಬ್ಬರೂ ಹೆಚ್ಚು ಮಾತನಾಡಿದ್ದೂ ಈ ಮೌನದಲ್ಲೇ... ಆರೋಹಣ ಅವರೋಹಣದ ನಿಟ್ಟುಸಿರ ಸಂಜೆಗಳಲಿ ಬಯ್ಯ ಮಲ್ಲಿಗೆ ಬಿರಿಯುವಾಗ ನೀನದನ್ನು ವಸಂತವೆಂದು ಕರೆದೆ ನನ್ನ ಪ್ರೀತಿಯ ಸೆಳೆತವನ್ನು ನದಿಗೆ ಹೋಲಿಸುವಾಗ ನೀನು ಪ್ರಶಾಂತ ಸಾಗರವಾಗಿದ್ದೆ... ದಿಗಂತದಲಿ ಹಾರಾಡುವ ಹಕ್ಕಿಗೂ ನೀರಲ್ಲಿ ತೇಲುವ ಮೀನಿಗೂ ಇದೆ ಬಂಧನದ ಭಯ! ಪ್ರೀತಿಯ ಬಾಹುಗಳಲ್ಲಿ ಕಣ್ಮುಚ್ಚಿ ಬಂಧಿಯಾಗುವ ಹೊತ್ತು ಸೇರಿಕೊಳ್ಳುವ ತವಕದ ಹಿಂದೆ ಕಳೆದುಕೊಳ್ಳುವ ಭೀತಿ ಮುಖವಾಡ ಧರಿಸಿ ನಕ್ಕಾಗ ಮಾತು-ಮೌನದ ನಡುವೆ ಪ್ರೀತಿ ಬಿಕ್ಕಳಿಸಿದ್ದು ಕೊನೆಗೂ ಕೇಳಲೇ ಇಲ್ಲ