Posts

Showing posts with the label ನಮ್ಮೂರು

ಬಸ್ ಪಯಣದ ಸುಖ

Image
ಮೊನ್ನೆ ಶಿವಾಜಿನಗರಕ್ಕೆ ಹೋಗುತ್ತಿದ್ದಾಗ ನನ್ನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಹುಡುಗಿಯೊಬ್ಬಳು ಫೋನಲ್ಲಿ ಮಾತನಾಡುತ್ತಿರುವುದು ಬೇಡ ಬೇಡವೆಂದರೂ ನನ್ನ ಕಿವಿಗೆ ಬೀಳುತ್ತಿತ್ತು. ಸಾಮಾನ್ಯವಾಗಿ ಬಸ್‌ನಲ್ಲಿ ಪ್ರಯಾಣಿಸುವಾಗ ಕುಳಿತುಕೊಳ್ಳಲು ಸೀಟು ಸಿಕ್ಕರೆ ಪುಸ್ತಕ ಓದುವುದು ಅಭ್ಯಾಸ. ಅಂದು ಬಸ್ಸಿನಲ್ಲಿ ಜನ ತುಂಬಾ ಇದ್ದರೂ ಪುಣ್ಯಕ್ಕೆ ನನಗೆ ಸೀಟು ಸಿಕ್ಕಿತ್ತು. ಹಿಂದಿನ ಸೀಟಲ್ಲಿ ಕುಳಿತ ನನ್ನಷ್ಟೇ ವಯಸ್ಸಿನ ಹುಡುಗಿಯೊಬ್ಬಳು ವಟ ವಟ ಎಂದು ಫೋನಲ್ಲಿ ಮಾತು ಶುರು ಹಚ್ಚಿಕೊಂಡಿದ್ದಳು. ಇಂಗ್ಲೀಷ್‌ನಲ್ಲಿ ಆಕೆ ಜೋರಾಗಿ ಮಾತನಾಡುತ್ತಿದ್ದುದರಿಂದಲೇ ನನ್ನ ಕಿವಿ ನೆಟ್ಟಗಾಯಿತು. ವೈ ಯು ಇನ್‌ಸರ್ಟಿಂಗ್ ಯುವರ್ ನೋಸ್ ಇನ್ ಬಿಟ್‌ವೀನ್. ಐ ಯೆಸ್ಟರ್‌ಡೇ ಟೋಲ್ಡ್ ನಾ..ಅಂಡರ್‌ಸ್ಟಾಂಡ್ ಪಾ..ಹೀಗೇ ಆಕೆಯ ಇಂಗ್ಲಿಷ್ ಸಂಭಾಷಣೆ ಮುಂದುವರಿಯಿತು. ಮಾತು ಮಾತುಗಳೆಡೆಯಲ್ಲಿ ಆಕೆ ನೋಪಾ, ಯೆಸ್ ಪಾ ಅಂತ ಹೇಳುತ್ತಾ ತನ್ನ ಏರುದನಿಯನ್ನು ಸ್ವಲ್ಪ ಸ್ವಲ್ಪವೇ ತಗ್ಗಿಸುತ್ತಿದ್ದಳು. ಒಮ್ಮೆ ಹಿಂತಿರುಗಿ ನೋಡಿದೆ, ಆಕೆ ಫೋನ್ ಸಂಭಾಷಣೆಯಲ್ಲಿ ಮಗ್ನಳಾಗಿದ್ದಾಳೆ. ಪುಸ್ತಕ ಹಿಡಿದುಕೊಂಡು ಕೂತಿದ್ದೆನಾದರೂ ವೈ ಯು ಇನ್‌ಸರ್ಟಿಂಗ್ ಯುವರ್ ನೋಸ್ ಇನ್ ಬಿಟ್‌ವೀನ್ ಎಂಬ ವಾಕ್ಯ ನನ್ನ ಕಿವಿಗೆ ಬೇಡ ಬೇಡವೆಂದರೂ ಅಪ್ಪಳಿಸುತ್ತಿತ್ತು. ಆಕೆ ಹೇಳಿದ್ದು, ನೀನ್ಯಾಕೆ ಮಧ್ಯೆ ಮೂಗು ತೂರಿಸುತ್ತೀಯಾ ಎಂಬುದನ್ನೇ ಅಲ್ಲವೇ? ಕನ್ನಡ ಪ್ರತಿಪದವನ್ನೂ ಹಾಗೆಯೇ ಇಂಗ್ಲಿಷ್‌ಗೆ ಅನುವಾದ...

ನಮ್ಮೂರ ಗೋರ್ಮೆಂಟು ಬಾವಿ

" ಊ ರಿಗೊಬ್ಬಳೇ ಪದ್ಮಾವತಿ" ಎಂಬಂತೆ ನಮ್ಮೂರಲ್ಲೂ ಒಂದು ಸರ್ಕಾರಿ ಬಾವಿ ಇದೆ. ಸರ್ಕಾರಿ ಬಾವಿ ಎಂದು ಯಾರು ಹೇಳಲ್ಲ...ಎಲ್ಲರೂ ಅದನ್ನು ಗೋರ್ಮೆಂಟು ಬಾವಿ ಎಂದೇ ಹೇಳೋದು. ನಮ್ಮೂರಿನ ಜನರ ದಾಹ ತೀರಿಸುವ ಏಕೈಕ ಜಲನಿಧಿ ಇದು. ಊರ ಮಧ್ಯೆ ಸಿಮೆಂಟು ಕಟ್ಟೆಯ ಈ ಬಾವಿಯ ಪಕ್ಕವೇ ಸಿಮೆಂಟಿನ ಒಂದು ಸಣ್ಣ ಟ್ಯಾಂಕ್ ಕೂಡ ಇದೆ. ನೀರು ಸೇದೋಕೆ ಬಂದೋರು ಯಾರಾದ್ರೂ ಆ ಟ್ಯಾಂಕ್್ಗೆ ಒಂದು ಕೊಡ ನೀರು ಹಾಕಿ ಬಿಟ್ಟರೆ ಅಲ್ಲಿರುವ ಪ್ರಾಣಿ ಪಕ್ಷಿಗಳ ದಾಹವೂ ಇಂಗುತ್ತದೆ. ಗೋರ್ಮೆಂಟು ಬಾವಿ ಅಂದರೆ ಇನ್ನು ಹೇಳಬೇಕೆ? ಸ್ವಂತ ಮನೆ ಕಟ್ಟಿ ಬಾವಿ ತೋಡುವವರೆಗೂ, ಮನೆಯ ಬಾವಿಯಲ್ಲಿ ನೀರು ಬತ್ತಿದಾಗಲೂ ನೆನಪಾಗುವುದೇ ಈ ಬಾವಿ. ಈವಾಗ ಮನೆಗೊಂದು ಬೋರ್್ವೆಲ್ ಜತೆಗೆ ಪಂಚಾಯತ್ ವತಿಯಿಂದ ಮನೆ ಮನೆಗೆ ನೀರು ಸೌಕರ್ಯವಿರುವುದರಿಂದ ಬಾಡಿಗೆ ಮನೆಯಲ್ಲಿ ವಾಸವಿರುವವರೇ ಈ ಬಾವಿಯ ಗಿರಾಕಿಗಳು. ಬೆಳಗ್ಗೆ ಬೆಳಕು ಮೂಡುತ್ತಲೇ ನೀರೆಯರು ಬಾವಿಯತ್ತ ಧಾವಿಸುತ್ತಾರೆ. ಚಾ ಆಯ್ತಾ? ತಿಂಡಿ ಏನು? ಎಂಬ ಒನ್ ಲೈನ್ ಪ್ರಶ್ನೆಗೆ ಒಂದೇ ಪದದಲ್ಲಿ ಉತ್ತರಿಸಿ ನೀರು ಸೇದಿ ಗಡಿಬಿಡಿಯಲ್ಲಿ ನೀರು ಕೊಂಡೊಯ್ಯುವುದು ಬೆಳಗ್ಗಿನ ವಿಶೇಷ . ಮಧ್ಯಾಹ್ನದ ವೇಳೆಗೆ ಬಾವಿಕಟ್ಟೆಯ ಸುತ್ತಲೂ ತಟ ಪಟ ಅಂತಾ ಬಟ್ಟೆ ಒಗೆಯುವವರೇ ಜಾಸ್ತಿ. ಅಲ್ಲೇ ಬಟ್ಟೆ ಒಗೆದು ಪಕ್ಕದಲ್ಲಿರುವ ಮರಗಳ ಕೊಂಬೆಗಳಿಗೆ ಹಗ್ಗ ಕಟ್ಟಿಯೋ, ಇಲ್ಲದಿದ್ದರೆ ಅಲ್ಲೇ ಪಾರೆಕಲ್ಲಿನ ಮೇಲೆ ಬಟ್ಟೆ ಒಣಗಿಸಿ ಮನೆಗೆ ಮರಳುವವರೇ ಜಾ...