Posts

Showing posts from October, 2009

ಹೆಸರಲ್ಲಿ ಏನು (ಎಲ್ಲಾ) ಇದೆ!

ಸುಮ್ಮನೆ ಕುಳಿತಿದ್ದರೆ ತಲೆಯಲ್ಲಿ ಹುಳು ಹೊಕ್ಕಂತೆ ಏನೆಲ್ಲಾ ಯೋಚನೆ ಬಂದುಬಿಡುತ್ತೆ. ಅದಕ್ಕೆ ಏನಾದರೊಂದು ಕೆಲಸ ಮಾಡುತ್ತಾ ಇರಬೇಕೆಂದು ನನ್ನಮ್ಮ ಹೇಳ್ತಾ ಇರುತ್ತಾರೆ. ಹುಂ ಅದರಂತೆಯೇ ನಾನು ಏನಾದರೂ (ಏನೆಲ್ಲಾ ಅಂತ ಮಾತ್ರ ಕೇಳ್ಬೇಡ್ಲಿ..ಪ್ಲೀಸ್) ಕೆಲಸದಲ್ಲಿ ನನ್ನನ್ನು ತೊಡಗಿಸಿಕೊಂಡು ಬ್ಯುಸಿಯಾಗಿರುತ್ತೇನೆ. ಅದಲ್ಲಾ ಪಕ್ಕಕ್ಕಿರಲಿ, ಸದ್ಯ ಏನಾದರೂ ಕೆಲಸ ಮಾಡಬೇಕಲ್ಲಾ ಎನ್ನುವಾಗಲೇ ನನ್ನ ಬಗ್ಗೆಯೇ ನಾನು ಶೋಧ ನಡೆಸಲು ತೊಡಗಿದ್ದೇನೆ. ಇದೇನು ಈ ತರ್ಲೆ ಹುಡುಗಿ ಆಧ್ಯಾತ್ಮದತ್ತ ತಿರುಗಿದಳೇನೋ ಎಂದು ಅಂದುಕೊಳ್ಬೇಡಿ. ನನ್ನ ಬಗ್ಗೆ ನಾನು ಶೋಧ ನಡೆಸುತ್ತಿರುವುದು ಗೂಗಲ್ ಎಂಬ ಸರ್ಚ್ ಇಂಜಿನ್್ನಲ್ಲಿ. ಯಾವಾಗ ಇಂಟರ್್ನೆಟ್ ನನಗೆ ಪರಿಚಿತವಾಯಿತೋ ಅಂದಿನಿಂದ ನನಗೂ ಗೂಗಲ್್ಗೂ ಬಿಟ್ಟಿರಲಾಗದ ನಂಟು. ಮೊದಲ ಬಾರಿ ಗೂಗಲ್ ಎಂಬ ಸರ್ಚ್ ಇಂಜಿನ್್ನ್ನು ಓಪನ್ ಮಾಡಿ ಅದರಲ್ಲಿ ಹುಡುಕಿದ್ದೇ ನನ್ನನ್ನು. ಅಂದ್ರೆ ನನ್ನ ಹೆಸರು. ರಶ್ಮಿ ಅಂತ ಟೈಪ್ ಮಾಡಿ ಎಷ್ಟು ಜನ ರಶ್ಮಿಯರು ಎಲ್ಲೆಲ್ಲಿ ಇದ್ದಾರೆ? ಯಾವ್ಯಾವ ಸರ್್ನೇಮ್್ಗಳಲ್ಲಿ ಇದ್ದಾರೆ ಎಂದೆಲ್ಲಾ ಕುತೂಹಲದಿಂದ ಗಮನಿಸಿದ್ದೆ. ಪ್ರತಿಯೊಬ್ಬರಿಗೂ ಅವರವರ ಹೆಸರಿನ ಬಗ್ಗೆ ಹೆಮ್ಮೆ ಇರುವಂತೆ ನನಗೂ ಇದೆ. ಎಲ್ಲಾ ಅಪ್ಪ ಅಮ್ಮಂದಿರಿಗೂ ಮಗು ಹುಟ್ಟಿದಾಗ ತಮ್ಮ ಮಕ್ಕಳಿಗೆ ವಿಶಿಷ್ಟ ಹೆಸರಿಡಬೇಕೆಂಬ ಹಂಬಲ ಇದ್ದೇ ಇರುತ್ತದಲ್ಲಾ ಅದೇ ಹಂಬಲ ನನ್ನ ಅಪ್ಪ ಅಮ್ಮನಿಗೂ ಇತ್ತು. ನನ್ನದು ಅಂತಾ ವಿಶಿಷ್ಟ ಹೆಸರೇನು ಅಲ್ಲ