Posts

Showing posts from June, 2011

ಅಪ್ಪನಿಗೊಂದು ಪತ್ರ

ಪ್ರೀತಿಯ ಪಪ್ಪಾ, ಹೇಗಿದ್ದೀರಾ? ನಾನು ಚೆನ್ನಾಗಿದ್ದೇನೆ. ಆದರೆ ಮನಸ್ಸು ಯಾವುದೋ ಸುಳಿಯಲ್ಲಿ ಸಿಕ್ಕಿ ಚಡಪಡಿಸುತ್ತಿದೆ. ನನ್ನ ವೇದನೆಯನ್ನು ಯಾರಲ್ಲೂ ಹೇಳಿ ಕೊಳ್ಳಲು ಆಗದೆ ನಾನು ಒದ್ದಾಡುತ್ತಿದ್ದೇನೆ. ಸುಮ್ಮನೆ ಕುಳಿತು ಜೋರಾಗಿ ಅತ್ತು ಬಿಡಬೇಕೆಂದು ಅನಿಸುತ್ತಿದೆ. ಆದರೆ ಅಳುವಷ್ಟು ಸ್ವಾತಂತ್ರ್ಯವೂ ನನ್ನಲ್ಲಿ ಇಲ್ಲಪ್ಪಾ... ದಿನವೂ ನಗು ನಗುತ್ತಿದ್ದ ಹುಡುಗಿ ನಾನು. ನನ್ನ ಜೀವನದಲ್ಲಿ ನಾನು ಬಯಸಿದ್ದೆಲ್ಲವನ್ನೂ ನೀವು ನನಗೆ ನೀಡಿದ್ದೀರಿ. ಚಿಕ್ಕವಳಿರುವಾಗ ನಾನು ಅತ್ತರೆ ನಿಮ್ಮ ಮನಸ್ಸು ಅದೆಷ್ಟು ನೋಯುತಿತ್ತು!. ನಾನು ದೂರದ ಊರಿಗೆ ಹೊರಟು ನಿಂತಾಗ ನಿಮ್ಮ ಕಣ್ಣಂಚಲ್ಲಿ ನೀರ ಹನಿ ಕಂಡಿದ್ದೆ. ಕಣ್ಣೀರೊರಸುತ್ತಾ ನಿಮ್ಮನ್ನು ಅಪ್ಪಿ ಹಿಡಿದಾಗ, ಪುಟ್ಟೀ...ನೀನು ಪಪ್ಪನ ಮಗಳಲ್ವಾ..ಹೀಗೆಲ್ಲಾ ಚಿಕ್ಕ ಮಕ್ಕಳ ತರ ಅಳ್ಬಾದು೯ ಅಂತಾ ನನಗೆ ಮುತ್ತಿಟ್ಟು ಕಳುಹಿಸಿಕೊಟ್ಟವರು ನೀವು. ಪಪ್ಪಾ...ನನ್ನ ಜೀವನದಲ್ಲಿ ಬಂದ ಮೊದಲ ಪುರುಷನೇ ನೀವು. ಪಪ್ಪ ಎನ್ನುವುದಕ್ಕಿಂತ ಮಿಗಿಲಾಗಿ ನೀವು ನನ್ನ ಬೆಸ್ಟ್ ಫ್ರೆಂಡ್ ಆಗಿದ್ದಿರಿ. ನನ್ನ ಕೈಗೆ ಮದರಂಗಿ ಇಡುವಾಗ ನಿಮ್ಮ ಕೈ ಗೂ ಮದರಂಗಿ ಇಟ್ಟು ಸಂಭ್ರಮಿಸುತ್ತಿದ್ದೆ. ನೇಲ್ ಪಾಲಿಶ್ ಖರೀದಿ ಮಾಡುವಾಗ ನೇಲ್ ಪಾಲೀಶ್ ನಿಮ್ಮ ಉಗುರಿಗೆ ಹಚ್ಚಿ ಸ್ಯಾಂಪಲ್ ನೋಡುತ್ತಿದೆ. ಅಮ್ಮ ನನ್ನನ್ನು ಬೈದಾಗೆಲ್ಲಾ ನಿಮ್ಮ ಮಡಿಲಲ್ಲಿ ಬಿದ್ದು ಅಳುತ್ತಿದ್ದೆ. ಅಕ್ಕನ ಜತೆ ಜಗಳವಾಡಿದಾಗ 'ಹೋಗಲಿ ಬಿಡು ಅವಳು ದೊಡ

ಹ್ಯಾಪಿ ಬರ್ತ್ ಡೇ ಟು ಮೀ...

Image
ಇ ವತ್ತು ನನ್ನ ಬ್ಲಾಗ್ ಅನುರಾಗದ ಹುಟ್ಟು ಹಬ್ಬ. ಕಳೆದ 4 ವಷ೯ಗಳಿಂದ ನನ್ನ ಮನಸ್ಸಿಗೆ ತೋಚಿದ್ದೆಲ್ಲವನ್ನೂ ಈ ಬ್ಲಾಗ್ ನಲ್ಲಿ ಗೀಚಿದ್ದೇನೆ. ಉದ್ಯೋಗದ ನಿಮಿತ್ತ ಚೆನ್ನೈಗೆ ತೆರಳಿದಾಗ ಕನ್ನಡದಲ್ಲಿ ಹೇಗೆ ಟೈಪ್ ಮಾಡಬೇಕೆಂದೇ ಗೊತ್ತಿರಲಿಲ್ಲ. ಅಲ್ಲಿ ಕನ್ನಡ ಟೈಪ್ ಮಾಡಲು ಕಲಿತೆ. ಇಂಟರ್ನೆಟ್ ನಲ್ಲಿ ಇನ್ನೊಬ್ಬರ ಬ್ಲಾಗ್ ನೋಡುತ್ತಿದ್ದರೆ ನನಗೂ ಒಂದು ಬ್ಲಾಗ್ ಬೇಕೆಂಬ ಆಸೆ ಹುಟ್ಟಿಕೊಂಡಿತ್ತು. ಆವಾಗ ಹುಟ್ಟಿಕೊಂಡದ್ದೇ ಅನುರಾಗ. ಆಮೇಲೆ ಸಮಯ ಸಿಕ್ಕಾಗೆಲ್ಲಾ ಬ್ಲಾಗ್ ನಲ್ಲಿ ಗೀಚಿದ್ದೇ ಗೀಚಿದ್ದು, ಕೆಲವೇ ಸಮಯಗಳಲ್ಲಿ ನಾನೂ ಬ್ಲಾಗ್ ಲೋಕದಲ್ಲಿ ಪರಿಚಿತಳಾಗಿಬಿಟ್ಟೆ.ಅನುರಾಗದೊಂದಿಗೆ ಇನ್ನು ಮೂರು ಬ್ಲಾಗ್ ಗಳನ್ನು ಆರಂಭಿಸಿದೆ. ಬ್ಲಾಗ್ ಲೋಕದಲ್ಲಿನ ಈ ಪಯಣದಲ್ಲಿ ಹಲವಾರು ಗೆಳೆಯರು ಹಿತೈಷಿಗಳು ಸಿಕ್ಕಿದರು.ನನ್ನ ಲೇಖನಕ್ಕೆ ಪ್ರತಿಕ್ರಿಯೆ ನೀಡುವ ಮೂಲಕ ಪ್ರೋತ್ಸಾಹಿಸಿದರು. ಇನ್ನು ಕೆಲವರು ಕಾಲೆಳೆದರು. ಕೆಲವು ಕಾಲಗಳ ವರೆಗೆ ನನ್ನ ಬ್ಲಾಗ್ ನಿದ್ರಾವಸ್ಥೆಯಲ್ಲಿತ್ತು. ಈಗ ಮತ್ತೆ ಎಚ್ಚೆತ್ತುಕೊಂಡಿದೆ. ನಿಮ್ಮೆಲ್ಲರ ಆಶೀವಾ೯ದ ಮತ್ತು ಪ್ರೋತ್ಸಾಹದೊಂದಿಗೆ ಬ್ಲಾಗ್ ಲೋಕದಲ್ಲಿ ನನ್ನ ಪಯಣ ಸಾಗುತ್ತಿದೆ...ಅನುರಾಗದೊಂದಿಗೆ... ಎಲ್ಲರಿಗೂ ನನ್ನಿ, ರಶ್ಮಿ ಕಾಸರಗೋಡು.

ಇಲ್ಲ..ನನಗೆ ನಿನ್ನಲ್ಲಿ ಮುನಿಸು

ನಾ ನಡೆವ ದಾರಿಯಲಿ ನಿನ್ನ ಪಾದದ ಗುರುತು ಇರದೇ ಇರಬಹುದು ನಿನ್ನ ನೆರಳು ನಿನ್ನ ಕನಸಿನಲಿ ನಾ ಇಲ್ಲದಿರಬಹುದು ಗೆಳೆಯಾ... ನೀ ಸುರಿವ ಮಳೆಯಾದರೇನು? ಇಂಗಲು ನನ್ನೊಡಲ ತಳವಿದೆ ನೀ ಸುಡುವ ಬಿಸಿಲಾದರೇನು? ನನ್ನ ಹೃದಯದ ಗುಡಿಸಲೊಳಗೆ ತಣ್ಣನೆಯ ನೆರಳಿದೆ.... ನಿನ್ನ ಹೃದಯ ಬಾನಂತಿದ್ದರೇನು? ಹಕ್ಕಿಯಾಗಿ ನಿನ್ನತ್ತ ಹಾರಿ ಬರುವೆ ನೀನು ಭುವಿಯಂತೆ ಮಲಗಿದ್ದರೇನು? ಹನಿ ಹನಿಯಾಗಿ ಬಿದ್ದು ಪನ್ನೀರ ಚಿಮುಕಿಸುವೆ! ಸಮಾಂತರ ರೇಖೆಗಳು ನಾವು ಬಾಳ ಪಯಣಯದಲ್ಲಿ ಬೆಳಗು ರಜನಿಯಂತಿದೆ ನಮ್ಮ ಮಿಲನ ಜತೆಯಾಗಿದ್ದರೂ ಸೇರಲ್ಲ ಸೇರಿದರೂ ಬೆರೆಯಲ್ಲ ನಿನ್ನ ಪುಟ್ಟ ಹೃದಯದಲ್ಲಿ ನಾನಾಗಲಾರೆ ನಿನ್ನ 'ಕೆಟ್ಟ' ನೆನಪು ನಿನ್ನ ಹೃದಯವ ಕದ್ದೊಯ್ಯಲಾರೆ ನನ್ನಾಣೆಗೂ, ಇಲ್ಲ..ನನಗೆ ನಿನ್ನಲ್ಲಿ ಮುನಿಸು

ಏಕಾಂತತೆ ಮತ್ತು ನಾನು...

'ಎಂ ಥಾ ಮಳೆಯಪ್ಪಾ...ಈ ಟ್ರಾಫಿಕ್ ಜಾಮ್ ನಲ್ಲಿ ಮಳೆ ಬಂದರೆ ಕಿರಿಕಿರಿಯೇ.'."ನಾವು ಕೇಳಿದಷ್ಟು ದುಡ್ಡು ಕೊಟ್ಟರೆ ಬರುತ್ತೇವೆ" ಎಂದು ಹೇಳಿದ ರಿಕ್ಷಾವಾಲನಿಗೆ ಮನಸ್ಸಲ್ಲೇ ಹಿಡಿಶಾಪ ಹಾಕಿ ಅದೇ ರಿಕ್ಷಾ ಏರಿ ಮನೆಯತ್ತ ಹೊರಟ ಮಂದಿ. ಈ ನೂಕು ನುಗ್ಗಲಿನಲ್ಲಿಯೂ 'ನಾ ಫಸ್ಟು...ನಾ ಮುಂದೆ' ಎಂದು ಪುಟ್ಟ ಮಕ್ಕಳು ಉಚ್ಚೆ ಹೊಯ್ದು ಓಡಿಕೊಂಡು ಬರುವ ಹಾಗೆ ಬಿಎಂಟಿಸಿ ಬಸ್ ಗಳೆಡೆಯಲ್ಲೇ ನುಗ್ಗುವ ಬೈಕುಗಳು. ಬದುಕು ಬವಣೆಗಳ ನಡುವೆಯೂ ಮಳೆ ಸುರಿದಿದೆ. ಕಾಮೋ೯ಡ ಕವಿದಿದ್ದ ಬಾನು ತಿಳಿಯಾಗುತ್ತಿದೆ. ಕತ್ತಲ ಬದುಕಿನಲ್ಲಿ ಮಿಂಚು ಹರಿದು ಬೆಳಕಿನ ಸ್ಪಶ೯ ನೀಡಿದಾಗ ಭಾರವಾದ ಎದೆ ನಡುಗಿದೆ. ಈ ನೀರವತೆಯಲ್ಲಿನ ಏಕಾಂತತೆಯಲ್ಲಿ ನೆನಪುಗಳು ಮಾತ್ರ ಸದ್ದಿಲ್ಲದೆ ಬಂದು ಮನದ ಕದ ತಟ್ಟಿವೆ. ಪೀಜಿಯ ಕಿಟಿಕಿಯ ಮೂಲಕ ಇಣುಕಿದರೆ ಧೋ ಎಂದು ಸುರಿವ ಮಳೆ...ಒಣಗಲು ಹಾಕಿದ ಬಟ್ಟೆ ತಾರಸಿ ಮೇಲೆ ಹಾಗೆಯೇ ಇದೆ. ಮಳೆಯೊಂದಿಗೆ ತೀಡಿ ಬರುತ್ತಿರುವ ಗಾಳಿಯು ಆ ಬಟ್ಟೆಯನ್ನು ತನ್ನೊಡನೆ ಬಾ ಎಂದು ಕರೆಯುತ್ತಿದೆ. ಅದನ್ನು ನಾ ಬಿಡಲಾರೆ ಎಂದು ಬಟ್ಟೆಗೆ ಸಿಕ್ಕಿಸಿದ ಕ್ಲಿಪ್ ಗಾಳಿ ಜತೆ ಗುದ್ದಾಟಕ್ಕೆ ತೊಡಗಿದೆ. ರೂಮ್ ಮೇಟ್ ಲ್ಯಾಪ್ ಟಾಪ್ ಹಿಡಿದು ಧ್ಯಾನದಲ್ಲಿ ಕುಳಿತಂತಿದ್ದಾಳೆ. ಇಂಟರ್ ನೆಟ್ ಗೆ ಸಿಗ್ನಲ್ ಸಿಗುತ್ತಿಲ್ಲ ಎಂದು ಗೊಣಗುತ್ತಾ ಕಿಟಕಿಯ ಗಾಜು ಸರಿಸಿದ್ದಾಳೆ. ಆವಾಗಲೇ ತಣ್ಣನೆ ಗಾಳಿ ರೂಮಿನೊಳಗೆ ಪ್ರವೇಶಿಸಿದೆ. ಅಬ್ಬಾ ಸಿಗ

ನೈಂಟಿ ಜತೆಗಿನ ನಂಟು!!!

ನೈಂ ಟಿ! ಅದೊಂದು ಥರಾ ಕಿಕ್ ಕೊಡುವಂತದ್ದೇ. ಅರೇ..ನೀವು ಉದ್ದೇಶಿಸುತ್ತಿರುವ 'ಬಾಟಲಿ' ಬಗ್ಗೆ ನಾನು ಹೇಳುತ್ತಿಲ್ಲ. ನಾನು ಹೇಳೋಕೆ ಹೊರಟಿರುವುದು 90ರ ದಶಕದ ಟಿವಿ ಕಾರ್ಯಕ್ರಮಗಳ ಬಗ್ಗೆ. ದೂರದರ್ಶನ ಅದೊಂದೇ ಚಾನೆಲ್ ಸಾಕು...ಎಲ್ಲ ತಿಳಿಯೋಕೆ, ಕಲಿಯೋಕೆ. ಹಿಂದಿ ಅರ್ಥವಾಗುತ್ತಿಲ್ಲವಾದರೂ ಟಿವಿ ಮುಂದೆ ನಾವು ಹಾಜರು. ಆವಾಗನಮ್ಮ ಮನೆಯಲ್ಲಿ ಟಿವಿ ಇರಲಿಲ್ಲ, ಆದರೂ ಒಂದು ಕಿಮೀ ನಡೆದು ಪಕ್ಕದ ಮನೆಗೆ ಟಿವಿ ನೋಡಲು ಹೋಗುತ್ತಿದ್ದೆ. ಅದೂ ಮಹಾಭಾರತ ನೋಡಲು. ಮಹಾ....ಭಾರತ್ ಅಂತ ಅದರ ಹಾಡು ಶುರುವಾಗುವ ಹೊತ್ತಿಗೆ ನಾವು ಮೂವರು (ಜತೆಗೆ ಅಣ್ಣ, ಅಕ್ಕ) ಅಲ್ಲಿ ಹಾಜರು. ಅಲ್ಲಿ ಯುದ್ಧ ನಡೆಯುತ್ತಿದ್ದರೆ ಕಣ್ಣು ಮುಚ್ಚಿ ನೋಡುವುದು, ಮರಣ ಶಯ್ಯೆಯಲ್ಲಿರುವ ಬೀಷ್ಮನನ್ನು ನೋಡಿ ಅಳುವುದು ಹೀಗೆ ಸಾಗುತ್ತಿತ್ತು ನಮ್ಮ 'ಮಹಾ' ಭಾರತ. ಆಮೇಲೆ ನಮ್ಮ ಮನೆಗೂ ಬ್ಲಾಕ್ ಆ್ಯಂಡ್ ವೈಟ್ ಟಿವಿ ಬಂತು. ಟಿವಿ ಬಂದ ಮೊದಲ ದಿನ ಫುಲ್ ಚಾಲೂ. ಪ್ರೋಗ್ರಾಂ ಮುಗಿದು ಬಣ್ಣ ಬಣ್ಣದ ಸ್ಟೈಪ್ ಕಾಣಿಸಿಕೊಂಡರೂ ಅದನ್ನೇ ನೋಡುತ್ತಾ ಕುಳಿತಿರುತ್ತಿದ್ದೆವು. ರುಕಾವಟ್ ಕೆ ಲಿಯೆ ಕೇದ್ ಹೈ ಅಂದ್ರೆ ಏನೂ ಅಂತಾ ಗೊತ್ತಿಲ್ಲದಿದ್ದರೂ ಸ್ವಲ್ಪ ಸಮಯದ ನಂತರ ಪ್ರೋಗ್ರಾಂ ಬರುತ್ತೆ ಅಂತಾ ಗೊತ್ತಿತ್ತು. "ಟಿವಿ ಬಂತಾ...ಇನ್ನು ಮಕ್ಕಳು ಓದಲ್ಲ ಬಿಡಿ" ಅಂತಾ ಅಮ್ಮನಿಗೆ ಚಾಡಿ ಹೇಳುವ ನೆರೆಯವರು ಬೇರೆ. ಅಂತೂ ಟಿವಿಯ ಮೂಲಕ ಹಿಂದಿ ಬೇಗನೆ ಕಲಿತುಕೊಳ್ಳುವಂತಾಯಿ