ಹೃದಯದೊಂದಿಗೆ ಒಂದು ಸಲ್ಲಾಪ...

ನಾನು: ಏ ಹೃದಯಾ... ಏನು ಯೋಚನೆ ಮಾಡ್ತಾ ಇದ್ದೀಯಾ...?

ಹೃದಯ: ಹಾಗೇ ಸುಮ್ಮನೆ ಇದ್ದೇನೆ.

ನಾನು: ಇಲ್ಲಾ ಏನೋ ಯೋಚನೆ ಮಾಡುವಂತಿದೆ...ನನ್ನಲ್ಲಿ ಹೇಳಲಾರೆಯಾ?

ಹೃದಯ: ಏನಿಲ್ಲಾ ಬಿಡು...

ನಾನು: ಹೇಳೇ...

ಹೃದಯ: ಹೂಂ. ನೋಡು ಈ ಲಾಲ್್ಬಾಗ್ ಎಷ್ಟು ಸುಂದರವಾಗಿದೆಯಲ್ಲಾ..

ನಾನು: ಹೌದು

ಹೃದಯ: ಎಷ್ಟೊಂದು ಸಸ್ಯ, ಹೂಗಳು ಮತ್ತೆ..

ನಾನು: ಮತ್ತೆ (?)

ಹೃದಯ: ಪ್ರೇಮಿಗಳು!

ನಾನು: ಹೂಂ..

ಹೃದಯ: ನಿನ್ನಲ್ಲೊಂದು ಪ್ರಶ್ನೆ ಕೇಳಲಾ?

ನಾನು: ಕೇಳು..

ಹೃದಯ: ಈ ಪ್ರೇಮಿಗಳನ್ನು ನೋಡಿ ನಿನಗೆ ಏನೂ ಅನಿಸಲ್ವಾ...

ನಾನು: ಏನು ಅನಿಸಬೇಕು ಹೇಳು. ಅಬ್ಬಾ ಎಷ್ಟೊಂದು ಪ್ರೇಮಿಗಳಿದ್ದಾರೆ! ಒಂದೊಂದು ಜೋಡಿಯೂ ಭಿನ್ನ ವಿಭಿನ್ನ..

ಹೃದಯ: ಅಷ್ಟೇನಾ...

ನಾನು: ಅವರ ಸ್ಟೈಲು, ಸ್ಮೈಲು, ಲುಕ್, ವೇ ಆಫ್ ಎಕ್ಸಪ್ರೆಶನ್ ಎಲ್ಲಾ ಇಂಟರೆಸ್ಟಿಂಗ್

ಹೃದಯ: ಮತ್ತೆ..

ನಾನು: ಏನಿಲ್ಲಾ..

ಹೃದಯ: ಪ್ರೀತಿಯಲ್ಲಿ ಮುಳುಗಿರುವ ಅವರ ಕಣ್ಣಲ್ಲಿ ಸಂತೋಷ ನೋಡಿದ್ದೀಯಾ?

ನಾನು: ಹೌದು..ನೋಡು ಹುಡ್ಗನ ತೆಕ್ಕೆಯಲ್ಲಿರುವ ಆ ಹುಡ್ಗಿ ಎಷ್ಟೊಂದು ಖುಷಿಯಾಗಿದ್ದಾಳೆ..ಅತ್ತ ನೋಡು ಅವಳ ಹೆಗಲ ಮೇಲೆ ಕೈ ಹಾಕಿ ಕುಳಿತ ಹುಡುಗ ಅವಳ ಸೌಂದರ್ಯವನ್ನು ವರ್ಣನೆ ಮಾಡುವಂತಿದೆ.

ಹೃದಯ: ಮತ್ತೆ...ಹುಡ್ಗರ ಬಗ್ಗೆ ಹೇಳಲ್ವಾ..

ನಾನು: ಹೂಂ..ಮರದ ಮರೆಯಲ್ಲಿ ಕುಳಿತ ಆ ಜೋಡಿಯನ್ನೇ ನೋಡು. ಅವ ಕದ್ದು ಮುಚ್ಚಿ ಅವಳ ಕೆನ್ನೆಗೆ ಮುತ್ತಿಡುತ್ತಾನೆ. ಅವಳು ನಾಚುತ್ತಾಳೆ..ಅವಳಿಂದ ಮುತ್ತು ಪಡೆಯಲು ಅವ ಹವಣಿಸುತ್ತಾನೆ...ಮತ್ತೆ ಅಲ್ಲಿ ಮುತ್ತಿನ ಮಳೆ :)

ಹೃದಯ: ಹಾಗೆ ಹೇಳಿದರೆ ಪ್ರೇಮಿಗಳೆಲ್ಲಾ ಖುಷಿಯಾಗಿದ್ದಾರೆ ಅಂತಾನಾ?

ನಾನು: ಇಲ್ಲ..ನೋಡು ಆ ಹುಲ್ಲುಗಾವಲಿನಲ್ಲಿ ಕುಳಿತ ಈ ಪ್ರೇಮಿಗಳ ಕಣ್ಣಲ್ಲಿ ನೀರು ಕಂಡೆಯಾ? ಅವಳು ಅಳ್ತಾ ಇದ್ದಾಳೆ. ಅವ ಅವಳನ್ನು ಸಮಾಧಾನಿಸುತ್ತಿದ್ದಾನೆ..ಅವನ ಕಣ್ಣಂಚಿನಲ್ಲೂ ಹನಿಯಿದೆ. ಅವ ಅವಳಂತೆ ಜೋರಾಗಿ ಅಳಲಾಗದೆ ದುಃಖವನ್ನು ನುಂಗಿ ಚಡಪಡಿಸುತ್ತಿದ್ದಾನೆ.

ಹೃದಯ: ತುಂಬಾ ಅಬ್ಸರ್ವ್ ಮಾಡ್ತಿದ್ದೀಯಾ..

ನಾನು: ಇನ್ನು ಮುಗಿದಿರಲ್ಲ..ಅಲ್ಲೊಂದು ಯುವ ಜೋಡಿಗಳು ಪರಸ್ಪರ ಜಗಳವಾಡುವಂತೆ ಕಾಣುತ್ತಿದೆ. ಅವ ಕಠೋರನಂತೆ ವರ್ತಿಸುತ್ತಿದ್ದಾನೆ.

ಹೃದಯ: ಅವ ಕೈ ಕೊಟ್ಟ ಅಂತಾ ಅನಿಸುತ್ತದೆ...ಇಲ್ಲದಿದ್ದರೆ ಹುಡ್ಗಿ ಯಾಕೆ ಅಷ್ಟೊಂದು ಕೂಗಾಡ್ಬೇಕು?

ನಾನು:ಬೇರೆ ಯಾವುದೋ ಹುಡುಗಿ ಬಗ್ಗೆ ಮಾತಾಡ್ತಾ ಇದ್ದಾಳೆ ಅವಳು. ಅವರ ಪ್ರೇಮಲೋಕಕ್ಕೆ ಯಾವುದೋ ಹುಡುಗಿ ಎಂಬ ವೈರೆಸ್ ದಾಳಿಯಾಗಿದೆ ಅಂತಾ ಕಾಣುತ್ತೆ.

ಹೃದಯ: ಹುಡುಗಿಯರಿಗೆ ಇಲ್ಲ ಸಲ್ಲದ ಸಂಶಯ ಬೇರೆ. ಪೊಸೆಸಿವ್್ನೆಸ್ ಜಾಸ್ತಿ.

ನಾನು: ಹಾಗೇನಿಲ್ಲಾ..ಇಲ್ಲಿ ಹುಡುಗ ಹುಡುಗಿ ಸಮಾನರು. ಇಬ್ಬರೂ ಪ್ರೇಮಿಗಳೇ ಆಗಿದ್ದರೂ ಅವರ ಲವ್, ವೇ ಆಫ್ ಎಕ್ಸ್್ಪ್ರೆಶನ್ ಡಿಫರೆಂಟಾಗಿರುತ್ತದೆ. ಹುಡುಗಿಯರ ಮನಸ್ಸು ಹೂವಿನಂತೆ ಬೇಗ ಬೇಜಾರು ಮಾಡಿಕೊಳ್ಳುತ್ತಾರೆ.

ಹೃದಯ: ಹೆಣ್ಣು ಅಂದ ಮಾತ್ರಕ್ಕೆ ಪಕ್ಷಪಾತ ಸರಿಯಲ್ಲ...

ನಾನು: ಆದ್ರೂ ಹೆಣ್ಮನಸ್ಸು ಗಂಡಿನಷ್ಟು ಗಟ್ಟಿಯಾಗಿರಲ್ಲ..

ಹೃದಯ: ವಾದ ಬೇಡ..ನಿನಗೇನೂ ಅನಿಸಲ್ವಾ..?

ನಾನು: ಅರ್ಥ ಆಗಿಲ್ಲಾ..

ಹೃದಯ: ಬಿಡಿಸಿ ಹೇಳ್ಬೇಕಾ?

ನಾನು: ಹೇಳು..

ಹೃದಯ: ಹದಿಹರೆಯದ ವಯಸ್ಸು ನಿನ್ನದು. ಪ್ರೀತಿ ಮಾಡ್ಬೇಕು ಅಂತಾ ಅನಿಸಲಿಲ್ಲವಾ?

ನಾನು: ಸುಮ್ಮನಿರು..

ಹೃದಯ: ಅಂದ್ರೆ ನಿನಗೂ ಲವ್ ಮಾಡ್ಬೇಕು ಅಂತಾ ಅನಿಸಿದೆ. (ತುಂಟ ನಗು)

ನಾನು: ಹೂಂ..ಆದ್ರೆ ಏನೋ ಹೆದರಿಕೆ ಆಗ್ತಾ ಇದೆ.

ಹೃದಯ: ಯಾಕೆ?

ನಾನು: ನೀನು ಸಿನಿಮಾದಲ್ಲಿ ನೋಡಿಲ್ವಾ..ಎಷ್ಟು ರಿಸ್ಕ್ ತೆಗೊಳ್ಬೇಕು...ಅಬ್ಬಾ ನನ್ನಿಂದಂತೂ ಆಗಲ್ಲ..ಅದಕ್ಕೆ ಸುಮ್ಮನಾದೆ.

ಹೃದಯ: ಅಂದ್ರೆ ನಿನ್ನ ಭಾವನೆಗಳನ್ನು ಒತ್ತಿ ಹಿಡಿದು ಅನ್ಯಾಯ ಮಾಡುತ್ತಿದ್ದೀಯಾ..

ನಾನು: ಇಲ್ಲ...ನಾವು ಇನ್ನೊಬ್ಬರನ್ನು ಪ್ರೀತಿಸುವ ಮೊದಲು ನಮ್ಮನ್ನು ನಾವೇ ಅರಿತುಕೊಂಡಿರಬೇಕು ಎಂಬುದು ನನ್ನ ನಿಲುವು. ನಾನು ನನ್ನನ್ನು (ನನ್ನ ಹೃದಯವನ್ನು) ಸಂಪೂರ್ಣವಾಗಿ ಅರಿಯತೊಡಗಿದರೆ ನಾನು ಪ್ರೀತಿಸುವವನನ್ನೂ ಅರ್ಥ ಮಾಡಿಕೊಳ್ಳಬಲ್ಲೆ.

ಹೃದಯ: ಹೂಂ...ಹಾಗಾದ್ರೆ ನೀನು ನಿನ್ನ ಬಗ್ಗೆ ಅರಿತಿದ್ದೀಯಾ..ಇನ್ನು ಪ್ರೀತಿಯಲ್ಲಿ ಬೀಳಬಾರದೇ?

ನಾನು:ಮೌನ....

ಹೃದಯ: ನನ್ನ ಪ್ರಶ್ನೆಗೆ ಉತ್ತರ?

ನಾನು: ಸದ್ಯ ,ನೀನು ನನ್ನ ಜೊತೆಗಿದ್ದಿಯಲ್ಲಾ...ನನ್ನ ಈ ಪ್ರೀತಿಯ ಹೃದಯವನ್ನು ಇನ್ನೋರ್ವನಿಗೆ ಕೊಡಲು ಮನಸ್ಸು ಬರ್ತಾ ಇಲ್ಲ...ಐ ಲವ್ ಯು..

ಹೃದಯ: ಐ ಟೂ..

Comments

ರಶ್ಮಿ ಅವರೇ,
ಹೃದಯ ಸಂವಾದ ಚೆನ್ನಾಗಿದೆ. ಆದರೂ, ನಿಮ್ಮ ಹೃದಯದ ಬಯಕೆಗೆ ನಿರಾಸೆ ಮಾಡಬೇಡಿ. ನಮ್ಮ ಇಷ್ಟದ ವಸ್ತುವನ್ನು ಇನ್ನೊಬ್ಬರಿಗೆ ನೀಡುವುದರಲ್ಲೂ ಅನುಪಮ ಆನಂದವಿರುತ್ತದೆ.
Unknown said…
ಬರಹ ಚೆನ್ನಾಗಿದೆ
Unknown said…
This comment has been removed by the author.
Unknown said…
ರೀ ನಾನು ಈ ಕಾಮೆಂಟ್ಸ್ ಬರಿಯುವಾಗ ನನ್ನ ಇಷ್ಟದ " ಮನ್ನಲ್ ಪ್ರಾಸದವು ನೆತ್ತಿಲ್ ಛಾತಿ ಹಾಡು ಬರುತ್ತಿದೆ "(ನನ್ನ ಲ್ಯಾಪ್ ಟಾಪ್ನಲ್ಲಿ) ನನಗೆ ನನ್ನ ಕಾಲೇಜಿನ ದಿನಗಳು ನೆನಪಾಗುತ್ತಿವೆ ಬಹಳ ಚೆನ್ನಾಗಿ ಬರೆದಿದ್ದೀರಿ ಧನ್ಯವಾದಗಳು
Unknown said…
ಸೂಪರ್ ರೀ, ಚೆಂದ ಬರೀತೀರಿ.. ಕೇವಲ ಕಾಲೇಜ್, ಸ್ಕೂಲ್ ನ ತುಂಟತನದ ಬಗ್ಗೆ ಮಾತ್ರ ಬರೀತಾರೆ ಅಂದುಕೊಂಡಿದ್ದೆ, ಆದ್ರೆ ಬರ್ತಾ ಬರ್ತಾ ಮನಸ್ಸಿಗೆ ಹತ್ತಿರದ ಬರಹಗಳು, ಮನಸ್ಸಿನ ಮಾತುಕತೆ , ಮನಸ್ಸಿನೊಂದಿಗಿನ ಮಾತುಕತೆ ಬಹಳ ಆಪ್ತ ಅನಿಸುತ್ತಿದೆ..
satish said…
chennagide hrudayada maatu kate

thumba ista aytu. Modalu nammanna naavu aritukollabeku nanthara prethisoranna annodu thomba ista aytu.

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ