ದೇವರಿದ್ದಾನೆ!
 ಅಮ್ಮಾ ಈ ಎಳನೀರಲ್ಲಿ  ನೀರು ಹೇಗೆ ಬಂತು  ಎಂದು ಕೇಳುವ ಕೂಸು  ಅಗರಬತ್ತಿಯ ಪರಿಮಳದಲ್ಲಿ  ಉತ್ತರ ಕಂಡು ಕೊಂಡಿತ್ತು...     ದೇವರಿದ್ದಾನೆ!      ನೀ ನೋಡಿದ್ದೀಯಾ?  ಕೇಳಿದ್ದಳು ಗೆಳತಿ..  ಹೂಂ ನೋಡಿದ್ದೇನೆ ಕಣೇ..      ಖಾಲಿ ಹೊಟ್ಟೆಯಲ್ಲಿ ಮಲಗಿರುವಾಗ  ಸಿಕ್ಕ ಬ್ರೆಡ್ಡು ತುಂಡುಗಳಲ್ಲಿ  ಜೇಬು ಖಾಲಿಯಾಗಿರುವಾಗ  ಪ್ರತಿಫಲ ಬಯಸದೆ  ಯಾರೋ ಕೊಟ್ಟ ದುಡ್ಡಲ್ಲಿ   ನಾನವನ ಕಂಡಿದ್ದೆ     ಮೊನ್ನೆ ಮತ್ತೆ ಸಿಕ್ಕಿದ ಕಣೇ  ಕಣ್ಣೀರು ಸುರಿಸಿ ನಡೆಯುವಾಗ  ನೋಡಿ ನಕ್ಕಿದ್ದ  ದುರುಗುಟ್ಟಿ ನೋಡಿದೆ  ನಾನಿದ್ದೀನಿ ಎಂದು ಹೇಳಿದ     ಎಲ್ಲಿ ಎಂದು ಕೇಳಿಯೇ ಬಿಟ್ಟೆ  ನಿನ್ನಲ್ಲಿ ಎಂದು ಬಿಡುವುದೆ?