Posts

ಅಲೆಮಾರಿ ಬದುಕು

ಕನಸುಗಳ ಮರಳದಂಡೆಯಲಿ ನೋವ ಹೊತ್ತು ನಡೆವೆವು ಬೆನ್ನಿಗಂಟಿದ ಹೊಟ್ಟೆ, ಅಳುವ ಕೂಸು ಹೊತ್ತು, ಇನ್ನೊಂದು ಮೂಟೆ ರಟ್ಟೆಯಲಿ ವೇದನೆಯ ಗಂಟು ಅಲ್ಲ ಇದು, ಜೀವನದ ಕುಂಟುಗಳಿವು ಪ್ರಕ್ಷುಬ್ಧ ಬದುಕಿನ ಭಗ್ನ ಕನವರಿಕೆ ಅಲೆಮಾರಿಗಳು ನಾವು, ಬದುಕ ಅಲೆ ಸುಳಿಗೆ ಸಿಕ್ಕಿದರೂ ತುಂಡು ರೊಟ್ಟಿ, ಹೊತ್ತು ಕೂಳಿಗಾಗಿ ಸಾಗುವೆವು ಇನ್ನೂ ಮುಂದೆ ಮುಂದೆ ಬರಿಗಾಲ ಪಾದ ಒಡೆದು ರಕ್ತ ಚಿಮ್ಮುತಿರೆ ಬೆವರ ಹನಿ ಮಾಲೆಗಳು ಎದೆ ನಡುವೆ ಹರಿದು ಹೊಕ್ಕಳ ಬಳ್ಳಿಯಲ್ಲಿ ತಂಗಿ ಮತ್ತೂ ಹರಿದಾಗ ಎದೆಗೂಡಿನೊಳು ಚಿಗುರೊಡೆದ ನೆನಪುಗಳ ಒರೆಸಿಟ್ಟ ಮುಗ್ದ ಬೆರಳು ಬೆಳಕು ಸಾಯುವ ಮುನ್ನ ಬೀಡು ಸೇರುವ ತವಕ, ಗೆಜ್ಜೆ ದನಿಗಳ ನಡುವೆ ಸರಿದ ನೆರಳು ಹೃದಯದಲಿ ಅದುಮಿಟ್ಟ ನೋವಿನಾ ಸೆಲೆಯು ಹಾಡಾಗಿ ಉಕ್ಕಿ ಕಪ್ಪು ತುಟಿಗಳಲಿ ಉಸಿರ ಬಿಗಿ ಹಿಡಿದು ಬಿಕ್ಕಿ ಅತ್ತಾಗ, ಬಾಹು ಬಲವಿಲ್ಲದೆ ಬಾಹುಬಲಿಗಳಾದೆವು ಒಂದೆಡೆ ಇನ್ನೊಂದೆಡೆ ಭವಿಷ್ಯ ನುಡಿಯುವ ಮಂಡ ಕಪ್ಪೆಗಳಾಗಿ ಸುಖದ ರೂಪದ ಬಯಕೆ ದುಃಖದಲಿ ದಿನರಾತ್ರಿ ಹದವಾಗಿ ಹರಿಯುತಿರೆ ಗುರಿಯಿರದ ದಾರಿಯೊಳು ತೆವಳುವೆವು ನಿಡುಸುಯ್ವ ಕ್ಷಿತಿಜದಂಚಿಗೆ.

ಸಮಾಜಕ್ಕೆ ಬೆಲೆವೆಣ್ಣುಗಳು ಬೇಕೆ?

ಮಹಿಳೆಯರ ಮೇಲಿನ ದಬ್ಬಾಳಿಕೆ ಶೋಷಣೆ ಇಂದು ನಿನ್ನೆಯ ಕಥೆಯಲ್ಲ. ಮನೆಯಲ್ಲಾದರೂ, ಕಚೇರಿಯಲ್ಲಾದರೂ ಶೋಷಣೆಗೆ ಒಳಪಡುವವಳು ಮಹಿಳೆಯೇ. ಮಾನಸಿಕವಾಗಿ ಅಥವಾ ಶಾರೀರಿಕವಾಗಿ ಶೋಷಣೆ ನಡೆಸುತ್ತಾ ಬಂದಿರುವ ಪುರುಷ ಪ್ರಧಾನ ಸಮಾಜವು ಶೋಷಣೆಗೊಳಗಾದ ಮಹಿಳೆಯನ್ನು ಯಾವ ರೀತಿ ಸ್ವೀಕರಿಸಿದೆ ಎಂಬುದು ಚಿಂತಿಸಬೇಕಾದ ವಿಷಯ. ಯಾವುದೇ ರೀತಿಯಲ್ಲಿಯೂ ಮಹಿಳೆ ಶೋಷಣೆಗೊಳಗಾದರೆ, ಅದರಲ್ಲೂ ದೈಹಿಕ ಶೋಷಣೆಗೊಳಗಾದರೆ ಸಮಾಜವು ಅವಳ ಜೊತೆ ಹೇಗೆ ವರ್ತಿಸುತ್ತದೆ ಎಂಬುದು ಇಲ್ಲಿ ಪ್ರಧಾನವಾದುದು. ಹೆಣ್ಣಿನ ದೈಹಿಕ ಸುಖ ಬಯಸುವ ಪುರುಷ ವರ್ಗ ಯಾವ ಸಂದರ್ಭದಲ್ಲೂ ಬೇಕಾದರೂ ಮಹಿಳೆಯ ಮೇಲೆ ಅತ್ಯಾಚಾರ ನಡೆಸಬಹುದು. ಹಾಡಹಗಲೇ ಅದೆಷ್ಟೋ ಹೆಣ್ಣು ಮಕ್ಕಳು ಕಾಮದ ಬಲೆಗೆ ಬಿದ್ದು ನರಳುತ್ತಿರುವಾಗ ಇನ್ನು ರಾತ್ರಿ ಕಾಲದ ಬಗ್ಗೆ ಹೇಳುವುದೇನಿದೆ? ಹೆಣ್ಣು ಒಂಟಿ ಎಂದು ಅನಿಸಿದಾಕ್ಷಣ ಕಾಮಣ್ಣರ ಕಣ್ಣಿಗೆ ಗುರಿಯಾಗ ತೊಡಗುವ ಮಹಿಳೆಗೆ ಒಂದೆಡೆಯಾದರೆ, ಪುರುಷ ಜೊತೆಗಿದ್ದರೂ ಕೆಲವೊಮ್ಮೆ ಇಂತಹ ದುರಂತಗಳಿಗೆ ಎಡೆಯಾಗುವ ಪರಿಸ್ಥಿತಿ ಬಂದಿದೆ. ಉದಾಹರಣೆಗೆ ಪ್ರಸ್ತುತ ಹೊಸ ವರ್ಷ ದಿನಾಚರಣೆ ವೇಳೆ ಮುಂಬೈಯಲ್ಲಿ ನಡೆದ ಘಟನೆಯನ್ನೇ ನೆನಪಿಸಿಕೊಳ್ಳಿ. ಹೆಣ್ಣು ಎಷ್ಟು ಸುರಕ್ಷಿತಳು ಎಂದು ಇದರಿಂದ ತಿಳಿಯುತ್ತದೆ. ಬರೀ ಪ್ರಾಯಕ್ಕೆ ಬಂದ ಹೆಣ್ಣು ಮಾತ್ರವಲ್ಲ ದಿನೇ ದಿನೇ ಹೆಣ್ಣು ಹಸುಗೂಸಿನಿಂದ ಹಿಡಿದು ವೃದ್ಧೆಯರ ವರೆಗೆ ಇಂದು ಮಾನಭಂಗಗಳು ನಡೆಯುತ್ತಿದೆ. ಇವುಗಳಿಗೆ ಕಡಿವಾಣ ಹಾಕುವವರು ಯಾರು? ಅತ್...

ಆರ್ಥಿಕ ಅಸಮಾನತೆ ನಡುವಿನ ಮಹಿಳೆಯ ಬದುಕು....

ಮಹಿಳಾ ದಿನಾಚರಣೆಯ ನೂರನೇ ವರ್ಷವನ್ನು ಆಚರಿಸುವ ಈ ಸಂದರ್ಭನಲ್ಲಿ ಪ್ರಸ್ತುತ ಅಂತಾರಾಷ್ಟ್ರೀಯ ಮಹಿಳಾ ಸಂಘಟನೆಯು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ "ಆರ್ಥಿಕ ಮತ್ತು ಲಿಂಗ ಸಮಾನತೆ"ಎಂಬ ಧ್ಯೇಯವಾಕ್ಯ ಘೋಷಿಸಿದೆ. ಆದರೆ ಶತಮಾನ ಕಳೆದರೂ ಇಂದಿಗೂ ಹಳ್ಳಿಗಳಲ್ಲಿ ಕನಿಷ್ಠ ಕೂಲಿಗಾಗಿ ದಿನವಿಡೀ ದುಡಿಯುವ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸಿಲ್ಲ ಎನ್ನುವುದು ನಮ್ಮ ಕಣ್ಣ ಮುಂದಿರುವ ಜ್ವಲಂತ ಸಾಕ್ಷಿಯ ನಡುವೆ ಮಹಿಳೆಯರ ವೇತನ ಸಮಾನತೆಯ ಘೋಷಣೆಯೊಂದಿಗಿನ ನೂರನೇ ವರ್ಷಾಚರಣೆ ವಿಪರ್ಯಾಸವಲ್ಲವೇ? ಇತ್ತೀಚೆಗೆ ಅಮೆರಿಕವು ಪ್ರಕಟಿಸಿದ "2007 ಜಾಗತಿಕ ನಗರಾಭಿವೃದ್ಧಿ ಪರಿಷ್ಕರಣಾ ವರದಿ"ಯಲ್ಲಿ ಭಾರತದ ಅತೀ ಹೆಚ್ಚು ಜನರು ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ ಎಂಬ ಸುದ್ದಿಯನ್ನು ನಾವೀಗಾಗಲೇ ಓದಿದ್ದೇವೆ. ಪ್ರಸ್ತುತ ವರದಿ ಪ್ರಕಾರ ಭಾರತದ ಜನಸಂಖ್ಯೆಯ 70 ಪ್ರತಿಶತ ಮಂದಿಯೂ ಹಳ್ಳಿಗಳಲ್ಲಿ ವಾಸವಾಗಿದ್ದಾರೆ ಇನ್ನುಳಿದ 30% ಮಂದಿ ಮಾತ್ರ ನಗರವಾಸಿಗಳಾಗಿದ್ದಾರೆ. ಅಂದರೆ ಇಲ್ಲಿನ ಬಹುತೇಕ ಮಂದಿಯೂ ಕೃಷಿಯನ್ನು ಅವಲಂಬಿಸಿಕೊಂಡಿದ್ದು, ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕಂಡುಕೊಳ್ಳಬೇಕಾದುದು ಅತೀ ಅಗತ್ಯ ಎಂದಾಯಿತು. ಇದರ ಜೊತೆಗೆ ಗ್ರಾಮೀಣ ಜನರಿಗೆ ಉದ್ಯೋಗವನ್ನು ಒದಗಿಸುವ ಮೂಲಕ ದೇಶದ ಆರ್ಥಿಕತೆಯಲ್ಲಿ ಬೆಳವಣಿಗೆಯನ್ನು ಹೊಂದಬಹುದೆಂದು ತಜ್ಞರ ಅಭಿಪ್ರಾಯ. ಅದೇನೇ ಇರಲಿ ಗ್ರಾಮೀಣ ಜನರ ಅಥವಾ ಮಧ್ಯಮ ವರ್ಗದ ಜನರ ಆರ್ಥಿಕತೆಯ...

ಒಲವಿನ ಉಡುಗೊರೆ ಕೊಡಲೇನು..

ವ್ಯಾಲೆಂಟೇನ್ಸ್ ದಿನ ಹತ್ತಿರ ಬರುತ್ತಿದ್ದಂತೆ ಅವಳಿಗೆ ನಿದ್ದೆ ಹತ್ತುತ್ತಲೇ ಇರಲಿಲ್ಲ. ರಾತ್ರಿ ಮುಗ್ಗುಲ ಬದಲಿಸಿ ಕಾಲ ಕಳೆದರೂ ತನ್ನ ಪ್ರಿಯತಮನಿಗೆ ಯಾವ ರೀತಿಯ ವ್ಯಾಲೆಂಟೇನ್ಸ್ ಡೇ ಗಿಫ್ಟ್ ಕೊಡಲಿ ಎಂದು ಅವಳು ಪದೇ ಪದೇ ಚಿಂತಿಸುತ್ತಿದ್ದಳು . ಅವನೊಂದಿಗೆ ಕಳೆದ ಸುಮಧುರ ಕ್ಷಣಗಳನ್ನು ನೆನೆದು ಸುಮ್ ಸುಮ್ನೆ ನಕ್ಕು ಅಪ್ಪಿಕೊಳ್ಳುತ್ತಿದ್ದ ತಲೆದಿಂಬು, ಒಂದು ಗಳಿಗೆ ಅವನಿಂದ ದೂರವಿರಲಾರದೆ ಚಡಪಡಿಸುವಾಗ ಕಣ್ಣೀರು ಸುರಿದು ಮುಸು ಮುಸು ಅತ್ತು ಮುಖ ಮರೆಸಿಕೊಂಡ ಆ ದಿಂಬು..ಅಬ್ಬಾ ಮನಸ್ಸಿನ ಎಷ್ಟು ಭಾವನೆಗಳನ್ನು ನಾವು ಆ ದಿಂಬಿನೊಂದಿಗೆ ಹಂಚಿಕೊಳ್ಳುವುದಿಲ್ಲ!!!. ಗಿಫ್ಟ್ ..ಗಿಫ್ಟ್ ಅದು ಮಾತ್ರವೇ ಇದೀಗ ಅವಳ ಕನಸು ಮನಸ್ಸಿನಲ್ಲಿತ್ತು. ಯಾವ ತರದ ಉಡುಗೊರೆ ನೀಡಿ ತನ್ನ ಪ್ರೀತಿಯನ್ನು ಪ್ರಕಟಿಸಲಿ? ಸಾಗರದಷ್ಟು ಆಳವೂ ಆಗಸದಂತೆ ವಿಶಾಲವಾಗಿರುವ ನನ್ನ ಪ್ರೀತಿಯನ್ನಳೆಯಲು ಈ ಒಂದು ಉಡುಗೊರೆಗೆ ಸಾಧ್ಯವೇ? ಪ್ರೇಮ ಲೋಕದಲ್ಲಿ ಹಲವು ಕಾಲ ವಿಹರಿಸಿದವರಿಗೆ ಕಳೆದ ವ್ಯಾಲೆಂಟೇನ್ಸ್ ಗಿಫ್ಟ್ ಗಿಂತ ಮಿಗಿಲಾದದ್ದು ಈ ಬಾರಿ ನೀಡ ಬೇಕೆನಿಸಿದರೆ, ಮೊದ ಮೊದಲು ಹೊಸ ಚಿಗುರ ಪ್ರೇಮಕ್ಕೆ ಯಾವ ಉಡುಗೊರೆ ಆರಿಸ ಬೇಕೆಂಬ ಗೊಂದಲ. ಇನ್ನು ಕೆಲವರಿಗೆ ಗಿಫ್ಟ್ ಆರಿಸಿ ಆಯ್ತು ಅದನ್ನು ಕೊಡುವುದೇಗೆ? ಪಡೆಯುವುದು ಹೇಗೆ? ಒಂದು ವೇಳೆ ಗಿಫ್ಟ್ ಸಿಕ್ಕಿದರೆ ಅದನ್ನು ಮನೆಯವರ ಮುಂದೆ ಹೇಗೆ ಬಚ್ಚಿಡ ಬೇಕೆಂಬ ಸಮಸ್ಯೆ. ಅದನ್ನು ಚಿರಕಾಲ ಕಾಪಾಡಿ ಕೊಂಡು ಬಂದು "ಯಹ್ ಪ್...

ಸಲ್ಲಾಪ

ಮುನಿದಾಗ ಸತಿ ಕೇಳಿದ ಪತಿ ನಿನಗಾಗಿ ತರಲಾ ಗಗನದಾ ತಾರೆ ಕಣ್ಣು ಕೆಂಪಾಗಿಸಿ ಎಂದಳಾಕೆ ತರಲಾರದವನು ಸೀರೆ ಕೊಂಡು ಬರುವನೇ ತಾರೆ?

ವ್ಯಥೆ

ನನ್ನ ಪ್ರೇಯಸಿಗಾಗಿ ತೆರೆದಿಟ್ಟ ಹೃದಯದ ಬಾಗಿಲು ಚಿಲಕ ಹಾಕಿ ಬೀಗ ಜಡಿದಳು ನನ್ನ ಮಾವನ ಮಗಳು!!

ಕಿಂಡಿಗಳು ಮುಚ್ಚಿವೆ !

ನಾವು, ಬಳಲಿ ಬೆಂಡಾದವರು ಬೆವರು ನೀರ ಸುರಿಸಿ ಎದೆಗೂಡನುಬ್ಬಿಸಿ ಮೂಳೆ ಮುರಿತದ ಹೊತ್ತಲೂ ಸತ್ತು ಬೇಸತ್ತ ನಾವು ಕೂಲಿಯವರು || 1 || ಚಿತ್ರ ವಿಚಿತ್ರ ಛಾಯೆಗಳು ಅಸ್ಪಷ್ಟ ಬದುಕ ಚಿತ್ರದ ಮೇಲೆ ಚಿತ್ತಾರ ಬರೆದಿರಲು ಮಬ್ಬು ಕತ್ತಲೆಯಲಿ ಕಣ್ಣು ಮಿಟುಕಿಸುವ ನಾವು ಕೂಲಿಯವರು || 2 || ಬದುಕು-ಬವಣೆಯ ನಡುವೆ ಹರಿದ-ಕರಿದ ಬೆಂದ ರೊಟ್ಟಿ ಗಳ ಒಳಗೆ ರಕ್ತ ಮಡುಗಟ್ಟಿ ಎದೆಗುಂದದೆ ಈಸಿ ಜೈಸುವ ನಾವು ಕೂಲಿಯವರು || 3 || ಬಂದು, ಕೊಂದು, ತಿಂದ ಜನರೆಡೆಯಲಿ ರಕ್ತದೋಕುಳಿಯ ಮಾಸದಾ ಹೆಜ್ಜೆಯದು ನಾತ ಬೀರುವ ಕೊಳೆತ ಅಸ್ಥಿಮಜ್ಜೆ ಯೆಡೆಯಲ್ಲಿ ಹಗಲಿರುಳೆನ್ನದೆ ದುಡಿವ ನಾವು ಕೂಲಿಯವರು || 4 || ಹಬ್ಬ ದಿಬ್ಬಣದಿ ಹಿಟ್ಟಿರದ ಬರಿ ಹೊಟ್ಟೆ ಮುರುಕಲು ಗುಡಿಸಲ ಹಳೆ ಮಂಚದಲಿ ಗೆದ್ದಲು ಕೆಡವಿ ಬಣ್ಣ ತೊಯ್ದ ಉಡುಬಟ್ಟೆ ಆದರೂ ಗಟ್ಟಿಯಿದೆ ನಮ್ಮ ರಟ್ಟೆ ನಾವು ಕೂಲಿಯವರು || 5 || ಕನಸುಗಳ ಹೆಣೆಯುವೆವು ಆ ಒಣದೇಹದ ಬತ್ತಿದಾ ಹೃದಯದಲಿ ನಭವ ಚುಂಬಿಸಿ, ತಾರೆಗೀಳಲು ಸದಾ ಬಯಸುವೆವು ಮೇಲೆ ಬರಲೆಂದೂ ನಾವು ಕೂಲಿಯವರು || 6|| ಏಳ ಬಯಸುವೆವು ಶಿರವೆತ್ತಿ ದೊಡ್ಡ ಪಾದ ಗಳ ದಮನ ತುಳಿತಗಳಡಿಯಿಂದ ರವಿ ರಶ್ಮಿಯ ಮುಂದೆ ದೀವಟಿಗೆ ಹಿಡಿದು ಚಂದಿರನ ಮಡಿಲಲ್ಲಿ ಜೋ ಹಾಡಲಿರುವ ನಾವು ಕೂಲಿಯವರು || 7|| ನಾವು ಅಳುವುದಿಲ್ಲ ಅತ್ತಿಲ್ಲ ದಿನಾ ಅಳುವವರಿಗೆ ಎಲ್ಲಿಂದ ಕಣ್ಣೀರು? ರಕ್ತ ಹಿಂಡಿದರೆ ರಕ್ತವೂ ಖಾಲಿ ಜೀವನದ ಗೋಳೇ ನಮ್ಮ ಈದ್, ಹೋಳಿ ! ನಾವು ಕೂಲಿಯವರು || 8 || ಎಂದೆನಿತು ಬಾಯ್...