ಒಂದು ಪೈದ್ಯ

ಇವತ್ತು 22/ 7 ಅಂದ್ರೆ Pi Approximation Day. π (ಪೈ) ಬಗ್ಗೆ ಈ ತಿಂಗಳ ರೀಡರ್ಸ್ ಡೈಜೆಸ್ಟ್್ನಲ್ಲಿ ತುಂಬಾ ಮಾಹಿತಿಪೂರ್ಣ ಲೇಖನ ಬಂದಿತ್ತು. ಅದರಲ್ಲಿ Piems (pi and poem) ಬಗ್ಗೆ ಓದಿದಾಗ ಇಂಥದ್ದೇ ಕವನ (ಪೈದ್ಯ) ಕನ್ನಡದಲ್ಲಿ ಯಾಕೆ ರಚಿಸಬಾರದು ಎಂದು ಅನಿಸಿತು. Piems ನಲ್ಲಿ ಪೈ ಬೆಲೆಯ ಪ್ರತಿಯೊಂದು ಅಂಕಿಗೆ ಸಮವಾಗಿ ಕವನದ ಅಕ್ಷರಗಳ ಜೋಡಣೆ ಇರುತ್ತದೆ.
ಅಂದರೆ 3.14159265358... ಈ ಅಂಕಿಗಳಿಗೆ ಸಮವಾಗಿ ಅಕ್ಷರ ಜೋಡಿಸಿದಾಗ ಕವನ ಈ ರೀತಿ ಮೂಡಿಬಂತು.

ಗೆಳೆಯಾ ನಾ ಹೇಳಲೇನು

ನಾ ಬರೆದಿರುವ ಹೃದಯದಾಕವನವನು

ನನ್ನ ಹೃದಯವೀಣೆಯು ಮಿಡಿಯುತಿದೆ

ಇನಿಯಾ

ಕಾಯುತಿರುವೆ ಒಲುಮೆಯಭಿಕ್ಷೆಗಾಗಿ

Comments

ಅಪರೂಪದ ಪ್ರಯತ್ನ...ಗಣಿತವನ್ನು ಮನದ ಕುಣಿತಕ್ಕೆ ಸಮೀಕರಿಸಿರುವುದು ಚೆನ್ನಾಗಿದೆ..
ಗಣಿತದ ಗುಣಿತಾಕ್ಷರ ಮನಸಿನ ಪಟಲದ ಮೇಲೆ ಕುಣಿತ ಇದೆ...
ಸುಂದರ..
ನಿಮ್ಮ ಮೆಚ್ಚುಗೆಗೆ ನನ್ನಿ
Anuradha said…
ಚೆನ್ನಾಗಿದೆ ..

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ