Wednesday, September 4, 2013

ಜಾಹೀರಾತು


ಸುಗಂಧ ಭರಿತ

ಸೋಪುಗಳನ್ನು

ಮೆಲ್ಲ ಮೆಲ್ಲನೆ ಮೈ ಮೇಲೆ ಜಾರಿಸಿ

ನೊರೆಗಳನ್ನೊಮ್ಮೆ ಊದಿ

ಗುಳ್ಳೆಗಳನ್ನು ಕಂಡು ನಕ್ಕು...



ಅರ್ಧ ದೇಹವನ್ನು ತುಂಡು

ಬಟ್ಟೆಯಲ್ಲಡಗಿಸಿ

ತನಗಾಗಿ ಕಾದು ನಿಂತ

ಪ್ರಿಯಕರನ ತೆಕ್ಕೆಗೆ ಬಿದ್ದು



ಅವನು ಅವಳ ದೇಹ

ಗಂಧದಲ್ಲಿ ತಲ್ಲೀನವಾಗುವ

2 ನಿಮಿಷದ ಜಾಹೀರಾತು



ಹಸಿದ ಹೊಟ್ಟೆಯಲ್ಲಿ ನಗುವುದನ್ನೂ

ಸೌಂದರ್ಯವೆಂದರೆ ದೇಹ

ಮಾತ್ರವಲ್ಲ ಎಂಬುದನ್ನು

ಬದುಕು ಆಕೆಗೆ ಕಲಿಸಿದಾಗ

ಅವಳು ಕ್ಯಾಮೆರಾ ಮುಂದೆ

ಮೀಯಲಿಲ್ಲ...

ಅವಳ ದೇಹಗಂಧವನ್ನರಸಿ

ಯಾರೂ ಬರಲಿಲ್ಲ!

No comments: