Posts

ಹೃದಯದೊಂದಿಗೆ ಒಂದು ಸಲ್ಲಾಪ...

ನಾನು: ಏ ಹೃದಯಾ... ಏನು ಯೋಚನೆ ಮಾಡ್ತಾ ಇದ್ದೀಯಾ...? ಹೃದಯ: ಹಾಗೇ ಸುಮ್ಮನೆ ಇದ್ದೇನೆ. ನಾನು: ಇಲ್ಲಾ ಏನೋ ಯೋಚನೆ ಮಾಡುವಂತಿದೆ...ನನ್ನಲ್ಲಿ ಹೇಳಲಾರೆಯಾ? ಹೃದಯ: ಏನಿಲ್ಲಾ ಬಿಡು... ನಾನು: ಹೇಳೇ... ಹೃದಯ: ಹೂಂ. ನೋಡು ಈ ಲಾಲ್್ಬಾಗ್ ಎಷ್ಟು ಸುಂದರವಾಗಿದೆಯಲ್ಲಾ.. ನಾನು: ಹೌದು ಹೃದಯ: ಎಷ್ಟೊಂದು ಸಸ್ಯ, ಹೂಗಳು ಮತ್ತೆ.. ನಾನು: ಮತ್ತೆ (?) ಹೃದಯ: ಪ್ರೇಮಿಗಳು! ನಾನು: ಹೂಂ.. ಹೃದಯ: ನಿನ್ನಲ್ಲೊಂದು ಪ್ರಶ್ನೆ ಕೇಳಲಾ? ನಾನು: ಕೇಳು.. ಹೃದಯ: ಈ ಪ್ರೇಮಿಗಳನ್ನು ನೋಡಿ ನಿನಗೆ ಏನೂ ಅನಿಸಲ್ವಾ... ನಾನು: ಏನು ಅನಿಸಬೇಕು ಹೇಳು. ಅಬ್ಬಾ ಎಷ್ಟೊಂದು ಪ್ರೇಮಿಗಳಿದ್ದಾರೆ! ಒಂದೊಂದು ಜೋಡಿಯೂ ಭಿನ್ನ ವಿಭಿನ್ನ.. ಹೃದಯ: ಅಷ್ಟೇನಾ... ನಾನು: ಅವರ ಸ್ಟೈಲು, ಸ್ಮೈಲು, ಲುಕ್, ವೇ ಆಫ್ ಎಕ್ಸಪ್ರೆಶನ್ ಎಲ್ಲಾ ಇಂಟರೆಸ್ಟಿಂಗ್ ಹೃದಯ: ಮತ್ತೆ.. ನಾನು: ಏನಿಲ್ಲಾ.. ಹೃದಯ: ಪ್ರೀತಿಯಲ್ಲಿ ಮುಳುಗಿರುವ ಅವರ ಕಣ್ಣಲ್ಲಿ ಸಂತೋಷ ನೋಡಿದ್ದೀಯಾ? ನಾನು: ಹೌದು..ನೋಡು ಹುಡ್ಗನ ತೆಕ್ಕೆಯಲ್ಲಿರುವ ಆ ಹುಡ್ಗಿ ಎಷ್ಟೊಂದು ಖುಷಿಯಾಗಿದ್ದಾಳೆ..ಅತ್ತ ನೋಡು ಅವಳ ಹೆಗಲ ಮೇಲೆ ಕೈ ಹಾಕಿ ಕುಳಿತ ಹುಡುಗ ಅವಳ ಸೌಂದರ್ಯವನ್ನು ವರ್ಣನೆ ಮಾಡುವಂತಿದೆ. ಹೃದಯ: ಮತ್ತೆ...ಹುಡ್ಗರ ಬಗ್ಗೆ ಹೇಳಲ್ವಾ.. ನಾನು: ಹೂಂ..ಮರದ ಮರೆಯಲ್ಲಿ ಕುಳಿತ ಆ ಜೋಡಿಯನ್ನೇ ನೋಡು. ಅವ ಕದ್ದು ಮುಚ್ಚಿ ಅವಳ ಕೆನ್ನೆಗೆ ಮುತ್ತಿಡುತ್ತಾನೆ. ಅವಳು ನಾಚುತ್ತಾಳೆ..ಅವಳಿಂದ ಮುತ್ತು ಪಡೆಯಲು ಅವ ಹವಣಿಸುತ್...

ನಳ್ಳಿಯಲ್ಲಿ ಇವತ್ತೂ ನೀರಿಲ್ಲ...

ಕಾಸರಗೋಡು ಸಿಟಿಯಲ್ಲಿರುವ ನನ್ನ ದೊಡ್ಡಮ್ಮನ ಮನೆಗೆ ಹೋದ ದಿನ. ಅಂದು ಅನಿವಾರ್ಯವಾಗಿ ಅಲ್ಲಿ ಉಳಕೊಳ್ಳಬೇಕಾಗಿ ಬಂದಿದ್ದರೂ ಅದೇಕೋ ಹಳ್ಳಿಯಲ್ಲಿರುವ ನನ್ನ ಮನೆಯಲ್ಲಿ ಆರಾಮವಾಗಿ ಮಲಗಿ ನಿದ್ದೆ ಹೋಗುವ ನನಗೆ ಅಲ್ಲಿನ ದೊಡ್ಡ ದೊಡ್ಡ ಸೊಳ್ಳೆ, ವಾಹನಗಳ ಗದ್ದಲದಿಂದ ಮಧ್ಯರಾತ್ರಿಯ ವರೆಗಂತೂ ನಿದ್ದೆ ಬರಲಿಲ್ಲ. ಆಮೇಲೆ ಯಾವಾಗ ನಿದ್ದೆ ಬಂತೋ ಎಂದು ಗೊತ್ತಿಲ್ಲ. ಅಂತೂ ಮುಂಜಾನೆ ಸುಮಾರು ನಾಲ್ಕು ಗಂಟೆಗೆ ಮನೆಯಲ್ಲಿ ಪಾತ್ರೆಗಳ ಸದ್ದು ಕೇಳಿಸಿ ಎಚ್ಚೆತ್ತು ಕೊಂಡೆ. ರೈಲ್ವೇ ನಿಲ್ದಾಣದ ಪಕ್ಕದಲ್ಲೇ ಇರುವ ಮನೆಯಾಗಿದ್ದರಿಂದ ಅಣ್ಣಂದಿರು ಯಾರೋ ಬೆಳಗ್ಗಿನ ರೈಲಿಗೆ ಹೋಗುತ್ತಿರಬೇಕು ಅದಕ್ಕಾಗಿಯೇ ಇಷ್ಟೊಂದು ಗೌಜಿ ಅಂದುಕೊಂಡೆ. ಆದ್ರೆ ಅದಾಗಿರಲಿಲ್ಲ. ದೊಡ್ಡಮ್ಮನಂತೂ ನನ್ನ ಅಕ್ಕ ಅಣ್ಣಂದಿರನ್ನೆಲ್ಲಾ ಎಬ್ಬಿಸಿ ಬಿಂದಿಗೆ, ಪಾತ್ರೆ ಹಿಡಿದು ಕೊಂಡು ಅವಸರವಾಗಿ ಮನೆಯಿಂದ ಹೊರ ನಡೆದರು. ಆಗಲೇ ಗೊತ್ತಾದದ್ದು. ಮನೆಯ ಮುಂದಿರುವ ಸಾರ್ವಜನಿಕ ನಳ್ಳಿಯಲ್ಲಿ ನೀರು ಬಂದಿದೆ ಎಂದು. ಆ ಬೆಳಗ್ಗಿನ ಜಾವದಲ್ಲೇ ನಳ್ಳಿ ಮುಂದೆ ಪಾತ್ರೆಗಳ ಸಾಲು ಜೊತೆಗೆ ನಿದ್ದೆಗಣ್ಣಲ್ಲೇ ತಮ್ಮ ಸರದಿ ಯಾವಾಗ ಬರುವುದೋ ಎಂದು ಕಾದು ಕುಳಿತು ಕೊಂಡಿರುವ ಮಂದಿಯನ್ನು ಕಂಡರೆ ಅಯ್ಯೋ ಪಾಪ ಎನಿಸದಿರಲಾರದು. ಅಂತೂ ಈ ದಿನ ನೀರು ಸಿಕ್ಕಿತು ಎಂಬ ಸಮಾಧಾನದಲ್ಲಿ ಎಲ್ಲರೂ ಪಾತ್ರೆಯಲ್ಲಿ ನೀರು ತುಂಬಿಕೊಂಡು ಮನೆಯತ್ತ ನಡೆದರು. ಇದೆಲ್ಲವೂ ನನಗೆ ಹೊಸತು ಎನಿಸಿದರೂ, ಇದು ಇಲ್ಲಿಯವರ ದಿನಚರಿ ಎಂದು ದ...

ನಗೀನಾಳ ಡೈರಿಯಿಂದ...

ಅದು ಮರೀನಾ ಬೀಚ್ ನ ಸುಂದರ ಸಂಜೆ. ಜೋಡಿ ಹಕ್ಕಿಗಳು ಕಲರವಗುಟ್ಟುತ್ತಿರುವಂತೆ ಯುವ ಪ್ರೇಮಿಗಳು ಕೈ ಕೈ ಹಿಡಿದು, ಮೈಗೆ ಮೈ ಬೆಸೆದು ಆ ಮನೋಹರವಾದ ಸಂಜೆಯಲ್ಲಿ ತಮ್ಮ ಪ್ರಣಯಗೀತೆಗೆ ಹೆಜ್ಜೆ ಹಾಕುತ್ತಿದ್ದರು. ಮರಳದಂಡೆಯಲ್ಲಿ ನಡೆದು ಮೂಡಿದ ಹೆಜ್ಜೆಗುರುತನ್ನು ಅಳಿಸಿ ಹಾಕುತ್ತಿರುವ ತೆರೆಗಳನ್ನು ನೋಡುತ್ತಾ ಅವಳು ನನ್ನೊಂದಿಗೆ ಅವನೂ ಇರುತ್ತಿದ್ದರೆ ಎಂದು ಭಾವಿಸಿರಬಹುದೇನೋ. ಅವಳ ಕಣ್ಣಾಲಿಗಳು ತುಂಬಿದ್ದವು. ಭೋರ್ಗರೆವ ಕಡಲಿನಂತೆ ಅವಳ ದುಃಖ ಹೃದಯದಲ್ಲಿ ಉಮ್ಮಳಿಸಿ ಬರುತ್ತಿದ್ದರೂ, ಅದನ್ನೆಲ್ಲಾ ಬದಿಗೊತ್ತಿ ನಾನು ಬದುಕ ಬೇಕು...ಸೋಲೊಪ್ಪಿಕೊಳ್ಳಲು ತನ್ನಿಂದ ಸಾಧ್ಯವಿಲ್ಲ ಎಂದು ಗಟ್ಟಿ ಮನಸ್ಸು ಮಾಡಿ ನಿಟ್ಟುಸಿರು ಬಿಟ್ಟಳು. -------- ಈ ಮೊದಲು ಬಣ್ಣದ ಚಿಟ್ಟೆಯಂತೆ ಹಾರಿ ಕುಣಿದಾಡಿದವಳಲ್ಲ ಅವಳು. ಅವನ ಪರಿಚಯವಾದ ನಂತರ ತನ್ನ ಜೀವನವೇ ಬದಲಾಯಿತು ಎಂದು ಆಕೆ ಪದೇ ಪದೇ ಹೇಳುತ್ತಿದ್ದಳು. ಇದು ನಿಜವೂ ಹೌದು. ಕಾಲೇಜು ದಿನಗಳಲ್ಲಿ ಸ್ವಪ್ನ ಲೋಕದಲ್ಲಿ ವಿಹರಿಸುತ್ತಾ ಮುಗ್ದ ಮನಸ್ಸಿನ ಬಾಲೆಯಂತೆ ತನ್ನದೇ ಪ್ರಪಂಚವನ್ನು ಸೃಷ್ಠಿಸಿಕೊಂಡು ಬೆಳ್ಳಿ ಮೋಡದಂತೆ ತೇಲಾಡುತ್ತಿದ್ದ ಆ ಹುಡುಗಿ ತನ್ನ ಪ್ರೀತಿಗಾಗಿ, ಅವನಿಗಾಗಿ ಎಲ್ಲವನ್ನೂ ತೊರೆದಳು. ಅಂದಹಾಗೆ ಅವರಿಬ್ಬರೂ ಪ್ರೀತಿ ಪ್ರಣಯ ಅಂತಾ ಪಾರ್ಕು, ಹೋಟೆಲ್ ಸುತ್ತಿಲ್ಲ. ಮನಸ್ಸಿನಲ್ಲೇ ತಮ್ಮ ಪ್ರೀತಿಯನ್ನು ಬಚ್ಚಿಟ್ಟು, ಕಣ್ಣಲ್ಲೇ ಮಾತನಾಡಿ ಪ್ರಣಯ ಲೋಕದ ಸುಖ ಪಡೆದವರು. ಅವನಿಗೂ ಇವಳೆಂದರೆ ಬಹಳ ಅಚ...

ನನ್ನ ಗ್ರಾಮ

ನಿತ್ಯ ಹಚ್ಚ ಹಸುರಾಗಿ ಕಂಗೊಳಿಸುವುದೀ ನನ್ನೂರು ತೆನೆ ತುಂಬಿ ನಿಂತ ಗದ್ದೆ, ಬಾಳೆ ತೆಂಗು ಕಂಗಿನ ತೋಟ ಇಕ್ಕೆಲಗಳಲಿ, ಸುತ್ತಲೂ ಹಬ್ಬಿದ ಬೇಲಿ ಹೂಗಳು.. ಇದು ನನ್ನ ಗ್ರಾಮ...ಆಗಿತ್ತು! ದುಡಿದ ರೈತನಿಗೆ ಬೆಳೆಯು ದಕ್ಕದಿರಲು ಹಚ್ಚ ಹೊಲದಲ್ಲಿ ಕೆಂಬಾವುಟ ಹಾರಿಸಿದ್ದರಂತೆ ನಮ್ಮ ಹಿರಿಯರು, ಅಮ್ಮ ಹೇಳಿದ ನನ್ನೂರಿನ ವಿಪ್ಲವದ ನೆನಪು... ಹೋರಾಟ ಮುಂದುವರಿಯಲು ಹೀಗೆ ದಣಿಯು ದಣಿದಿದ್ದ, ಬಡವ ಗೆದ್ದಿದ್ದ ನನ್ನೂರಿನ ಕೆಂಪು ವಿಪ್ಲವವು ಸಮಾನತೆಗೆ ಉಸಿರು ಭೂಮಿ ಹಸುರಾಗಲು ಕೊಂಚ ರಕ್ತವೂ ಚಿಮ್ಮಿತ್ತು, ಅಪ್ಪ ಹೇಳಿದ್ದ ಶಾಂತಿ ನೆಲೆಸಿದ ಈ ಸಮರದ ಜೊತೆಗೆ ಹುತಾತ್ಮರ ಮಂಟಪವೂ ಎದ್ದು ನಿಂತಿತ್ತು. ಇಂದು ಬರಡಾಗಿದೆ ನನ್ನ ಸುಂದರ ಗ್ರಾಮ, ಅಲ್ಲಲ್ಲಿ ಎರಡಂತಸ್ತಿನ ಮಹಲು,ಗೋಪುರ ಹಸಿರನುಳಿಸಲು ಹೋರಾಡಿದ ಜನರೆಲ್ಲಿ? ಅವರೆಂದೋ ಮಣ್ಣು ಪಾಲಾಗಿ, ಅವರ ಮಕ್ಕಳು ಲಾರಿಯಲಿ ತಂದ ಮಣ್ಣನು ಬರಡು ಭೂಮಿಗೆ ಸುರಿದು, ಕೆಂಪು ಇಟ್ಟಿಗೆಯಲಿ ಗೋಡೆ ಕಟ್ಟುತ್ತಿದ್ದಾರೆ...

ನಿರೀಕ್ಷೆಯಲ್ಲಿ...ಹಾಗೇ ಸುಮ್ಮನೆ

ನಾವು ಚಿಕ್ಕವರಿರುವಾಗ ಮಕ್ಕಳೆಲ್ಲರೂ ಸೇರಿ ನೆಲದ ಮೇಲೆ ಎರಡೂ ಕೈಗಳನ್ನಿರಿಸಿ "ಅಟ್ಟಾ ಮುಟ್ಟಾ" ಆಟವಾಡುವಾಗ ಅದರಲ್ಲಿ ಬರುವಂತಹ "ನಿನ್ನ ಗಂಡ ಎಲ್ಲಿಗೆ ಹೋದ? ಕಾಶಿಗೆ ಹೋದ..ಏನು ತಂದ? ಗಿರಿಗಿಟಿ ತಂದ.. ಯಾರಿಗೆ ಕೊಟ್ಟ? ಅರಸನ ಮಗಳಿಗೆ ಕೊಟ್ಟ..."ಎಂದು ಹೇಳಿ ಮುಗಿಸುವಾಗ 'ಏನು ತಂದ? ಯಾರಿಗೆ ಕೊಟ್ಟ ?'ಎಂಬ ಪ್ರಶ್ನೆಗಳು ನನ್ನನ್ನು ಅಷ್ಟೊಂದು ಚಿಂತೆಗೀಡು ಮಾಡಿರಲಿಲ್ಲ. ಹುಂ! ನಿಮಗೂ ಏನೂ ಅರ್ಥವಾಗಿಲ್ಲವೇ? ಹೇಳ್ತೇನೆ ಕೇಳಿ.. ದೂರದ ಊರಿನಿಂದ ಸ್ವಂತ ಮನೆಗೆ ಹಿಂತಿರುಗುವಾಗ ಯಾರಾದರೂ ಬರಿ ಕೈಯಲ್ಲಿ ಹೋಗುತ್ತಾರೆಯೇ? ಇಲ್ಲವಲ್ಲಾ.. ಕನಿಷ್ಠ ಪಕ್ಷ ಮನೆಯವರಿಗೆ ಏನಾದರೂ ವಸ್ತುಗಳನ್ನು ಕೊಂಡುಕೊಳ್ಳುವುದು ವಾಡಿಕೆ. ನಾವು ಕೊಟ್ಟ ವಸ್ತು ಅದೆಷ್ಟೇ ಚಿಕ್ಕದಾಗಿರಲಿ..ಅದನ್ನು ನಮ್ಮ ಆಪ್ತರಿಗೆ ನೀಡುವಾಗ ಅವರ ಮುಖದಲ್ಲಿ ಕಾಣುವ ಸಂತಸ ಅದನ್ನು ನೋಡಿಯೇ ನಮ್ಮ ಮನ ತುಂಬಿ ಬರುತ್ತದೆ. ಅಲ್ಲವೇ? ನಾವು ಚಿಕ್ಕವರಿರುವಾಗ (ನಮ್ಮ ಮನೆಯ ಸುತ್ತ ಮುತ್ತಲೂ ಹೆಚ್ಚಾಗಿ ಗಲ್ಫ್ ಉದ್ಯೋಗಿಗಳ ಮನೆಯಿದೆ) ಪಕ್ಕದ ಮನೆಯವರು ಮಗ ಅಥವಾ ಗಂಡ ಊರಿಗೆ ಬಂದಿದ್ದಾನೆ ಆತ ಬರುವಾಗ ಇದನ್ನೆಲ್ಲಾ ತಂದಿದ್ದಾನೆ ಎಂದು ದೊಡ್ಡ ಪಟ್ಟಿಯೊಂದನ್ನೇ ನಮ್ಮೆದುರಿಡುತ್ತಿದ್ದರು. ಅವರೇನೂ ಹೇಳದಿದ್ದರೂ, ನಿಮ್ಮವರು ಊರಿಗೆ ಬರುವಾಗ ಏನೆಲ್ಲಾ ತಂದಿದ್ದಾರೆ? ಎಂದು ಕೇಳುವುದು ಕೂಡಾ ಇಲ್ಲಿ ಸರ್ವ ಸಾಮಾನ್ಯವಾಗಿತ್ತು. ಇದು ಮಾತ್ರವಲ್ಲದೆ ಯಾರಾದರೂ ದೂರದ ಊರ...

ಯಾತ್ರೆ

ಜೀವನದ ಅರ್ಥವನ್ನರಸಿ ಕವಲು ದಾರಿಯ ನಾಲ್ಕು ದಿನಗಳ ಯಾತ್ರೆ ಮುಗಿದಾಗ ಸುಖದ ಸೊನ್ನೆಯ ಜೊತೆಗೆ ಏಕಾಂಗಿ ನಾನು... ಕಳೆದ ಬಾಲ್ಯದ ನೆನಪುಗಳು ಮನದ ಕದ ತಟ್ಟುತಿರಲು ಮರಳಿ ಬಾರದ ನಿನ್ನೆಗಳಿಗೆ ವರ್ತಮಾನದೊಳು ಮರುಗಲೆಂತು? ಯೌವ್ವನದ ಮೆಟ್ಟಿಲಲಿ ಹೆಜ್ಜೆಯಿತ್ತಾಗ ಮಧು ಹೀರಿ ಹಾರುವ ದುಂಬಿಯಂತೆ ಮನದೊಳಗೆ ಹೊಕ್ಕು, ಮುತ್ತನಿಟ್ಟವರು ಮುದುಡಿದಾಗ ತಿಪ್ಪೆಗೆಸೆದರು ಕಸದಂತೆ ಕಳೆದ ನೋವಿಗೆ ತೇಪೆಯನು ಹಚ್ಚಿ, ಸಪ್ತಪದಿ ತುಳಿದಾಗ, ಸಂಸಾರ ಸಾಗರದ ಅಲೆಗಳಿಗೆ ಮರಳ ದಂಡೆಯಾಗಿ ಕಣ್ಣೀರ ಒತ್ತಿ, ನಕ್ಕು ಬಿಟ್ಟಿದ್ದೆ ಮೌನವಾಗಿ ಇಂತು ನನ್ನ ಜೀವನದಿ ಅತಿಥಿಯಾಗಿ ಬಂದವರು, ಕೆಲ ಕಾಲ ನಕ್ಕು, ಮತ್ತೆ ಮಸಿಯೆರಚಿ ಬಂದಣಿಗೆಯಂತೆ ನನ್ನ ರಸ ಹೀರಿ ಚಿಗುರುವಾಗ ಒಣ ವೃಕ್ಷದಂತೆ ನಾ ಧರೆಗುರುಳುತಲಿರುವೆ.

ಸ್ಮಶಾನದತ್ತ...

ಅಲ್ಲೊಬ್ಬ ಮುದುಕ. ವಯಸ್ಸು ಸುಮಾರು ಎಪ್ಪತ್ತೈದು ದಾಟಿದೆ. ನಾಲ್ಕು ಜನ ಮಕ್ಕಳು, ಈ ನಾಲ್ವರಲ್ಲಿ ಒಬ್ಬಳೇ ಮುದ್ದಿನ ಮಗಳು ಪ್ರೀತಿ. ಮದುವೆಯಾಗಿದೆ. ಅಳಿಯನಿಗೆ ಗಲ್ಫ್‌ನಲ್ಲಿ ಉದ್ಯೋಗ, ಸುಖೀ ಕುಟುಂಬ. ಬಾಕಿ ಉಳಿದ ಮೂವರು ಗಂಡು ಮಕ್ಕಳು ಉದ್ಯೋಗ ಗಿಟ್ಟಿಸಿಕೊಂಡು ಮಡದಿ ಮಕ್ಕಳೊಂದಿಗೆ ಸುಖವಾಗಿದ್ದಾರೆ. ಇಂತಿರುವಾಗ ಒಂದು ದಿನ ಈ ಮುದುಕ ಅಸ್ವಸ್ಥನಾಗುತ್ತಾನೆ. ಮನೆಯಲ್ಲಿ ಕಿರಿಯ ಮಗ ಸೊಸೆ ಮೊಮ್ಮಕ್ಕಳಿಗೆ ಗಾಬರಿ. ಅಂತೂ, ಈ ಅಜ್ಜ ಬಡವ ಅಂತಾ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ತನ್ನ ಯೌವನದಲ್ಲಿ ಮಣ್ಣಲ್ಲಿ ಚೆನ್ನಾಗಿ ದುಡಿದು ಹೊನ್ನಿನ ಬೆಳೆ ಪಡೆದವ ಈತ. ಎಕ್ರೆಗಳಲ್ಲಿ ತೆಂಗು ಕಂಗಿನ ತೋಟ, ತರಕಾರಿ, ಬಾಳೆ, ಮರಗೆಣಸು ಹೀಗೆ ಎಲ್ಲಾ ರೀತಿಯ ಕೃಷಿಗಳನ್ನು ಮಾಡಿ ಲಾಭ ಪಡೆದವ. ಹತ್ತು ವರ್ಷಗಳ ಹಿಂದೆಯೇ ತನ್ನ ಕೈ ಹಿಡಿದವಳು ತೀರಿ ಹೋಗಿದ್ದರಿಂದ ಈ ಅಜ್ಜ ಎಲ್ಲದಕ್ಕೂ ಮಕ್ಕಳನ್ನು ಆಶ್ರಯಿಸಬೇಕಾದ ಸ್ಥಿತಿ ಬಂದೊದಗಿತ್ತು. ಎಷ್ಟಾದರೂ ಅಪ್ಪನಲ್ಲವೇ? ಕಿರಿ ಮಗನಂತೂ ಅತೀವ ಸ್ನೇಹದಿಂದಲೇ ಅಪ್ಪನನ್ನು ನೋಡಿಕೊಳ್ಳುತ್ತಿದ್ದ. ಒಮ್ಮೆ ಅಜ್ಜನಿಗೆ ತನ್ನ ಅವಧಿ ಮುಗಿಯುತ್ತಾ ಬಂತು ಎಂದು ಅನಿಸಿದಾಗ ತನ್ನ ನಾಲ್ಕು ಮಕ್ಕಳನ್ನೂ ಕೂಡಾ ಹತ್ತಿರ ಕರೆದ. ಹಳೆಯ ಮಂಚದ ಮೇಲೆ ಮಲಗಿದ ಮುದಿ ಜೀವದ ಸುತ್ತಲೂ ಮಕ್ಕಳು, ಮೊಮ್ಮಕ್ಕಳು ಹಾಜರಾದರು. ಅಜ್ಜ ಮಾತನಾಡತೊಡಗಿದ. ಮಕ್ಕಳೇ, ನಾನು ಇನ್ನಷ್ಟು ದಿನ ಬದುಕುವೆನೆಂದು ಯಾಕೋ ಅನಿಸುತ್ತಿಲ್ಲ. ನಿಮ್ಮನ್ನೆಲ್ಲಾ ಒಳ್ಳೆಯ ರೀತಿ...