Posts

'ಎಂಡೋ ನಿಷೇಧಿಸಿ' - ಶರದ್ ಪವಾರ್ ಗೊಂದು ಬಹಿರಂಗ ಪತ್ರ

ಶರದ್ ಪವಾರ್ ಜೀ, ನಮಸ್ತೆ. ಕೇಂದ್ರ ಕೃಷಿ ಮಂತ್ರಿಯಾಗಿದ್ದು ಕೊಂಡು ಭ್ರಷ್ಟಾಚಾರದ ಹೊದಿಕೆ ಹೊದ್ದು ಗಾಢ ನಿದ್ರೆಗೆ ಜಾರಿರುವ ನೀವು ಎಂದಾದರೂ ಸಾಮಾನ್ಯ ಜನರ ಬಗ್ಗೆ ಯೋಚಿಸಿದ್ದೀರಾ? ಹಣ ಕೂಡಿಡುವ ನಿಮ್ಮ ಕಾಯಕದ ನಡುವೆ ಒಂದಷ್ಟು ಹೊತ್ತು ವಿರಾಮ ಸಿಕ್ಕರೆ ಎಂಡೋಸಲ್ಫಾನ್ ಪೀಡಿತರ ಬಗ್ಗೆ ಒಮ್ಮೆ ದೃಷ್ಟಿ ಹಾಯಿಸಿ. ಕೇರಳದ ಪುಟ್ಟ ಜಿಲ್ಲೆಯಾದ ಕಾಸರಗೋಡಿನ ಎಣ್ಮಕಜೆ, ಬೋವಿಕ್ಕಾನ, ಪೆರ್ಲ, ಪೆರಿಯ ಮೊದಲಾದ ಊರುಗಳಲ್ಲಿ ಎಂಡೋಸಲ್ಫಾನ್ ಎಂಬ ವಿಷದಿಂದಾಗಿ ಪ್ರಾಣ ಕಳೆದುಕೊಂಡವರೆಷ್ಟು ಮಂದಿ? ಇನ್ನೂ ಜೀವಂತ ಶವವಾಗಿರುವವರು, ಅಂಗವೈಕಲ್ಯತೆಯಿಂದು ಬಳಲುತ್ತಿರುವ ಮಕ್ಕಳು ...ಇಲ್ಲೊಂದು ನರಕವಿದೆ. ಸಂಕಷ್ಟಕ್ಕೆ ಸಿಲುಕಿರುವ ಈ ಜನರ ಕೂಗು ನಿಮಗೆ ಕೇಳಿಸುತ್ತಿಲ್ಲವೇ? ಗೇರುಬೀಜದ ಮರಗಳಿಗೆ ಈ ವಿಷವನ್ನು ಸಿಂಪಡಿಸಿ ಜನರ ಬಾಳನ್ನು ನರಕವಾಗಿಸಿದ ಪ್ಲಾಂಟೇಷನ್ ಕಾರ್ಪರೇಷನ್ ಇದೀಗ ಮೌನ ವಹಿಸಿರುವುದು ಎಷ್ಟು ಸರಿ?. ಕಾಸರಗೋಡಿನ 11 ಪಂಚಾಯತುಗಳ ಜನರು ಎರಡು ದಶಕಗಳಿಂದ ಎಂಡೋ ಪೀಡೆಗೆ ಬಲಿಯಾಗುತ್ತಾ ಬಂದಿರುವುದು ನಿಮಗೆ ಕಾಣಿಸುವುದಿಲ್ಲವೇ? ಎಂಡೋ ಪೀಡಿತರ ಸಂಕಷ್ಟಗಳ ಬಗ್ಗೆ ದಿನ ನಿತ್ಯವೂ ಒಂದಲ್ಲ ಒಂದು ಸುದ್ದಿ ವರದಿಯಾಗುತ್ತಲೇ ಇದ್ದರೂ ನೀವು ಕಿವಿ, ಕಣ್ಣು ಮುಚ್ಚಿ ಕುಳಿದ್ದೀರಾ? 'ಎಂಡೋ' ವಿಷ ಎಂದು ಇಷ್ಟರವರೆಗೆ ಪ್ರೂವ್ ಆಗಿಲ್ಲ ಆದ್ದರಿಂದ ಎಂಡೋ ನಿಷೇಧ ಯಾಕೆ ಅಂತಾ ಕೇಳ್ತಿದ್ದೀರಲ್ಲಾ? ಎಂಡೋ ಪೀಡಿತ ಪ್ರದೇಶಗಳಿಗೊಮ್ಮೆ ಭೇಟಿ ನೀಡಿ ನೋಡಿ...

ಈ ಮಳೆಯೇ ಹಾಗೆ...

ಈ ಮಳೆಯೇ ಹಾಗೆ... ನಮ್ಮೂರಿನ ಮಳೆಯಂತಿಲ್ಲ ಇದು ಮಳೆ ಬಂದ ಕೂಡಲೇ ಮಣ್ಣಿನ ವಾಸನೆ ಮೂಗನ್ನು ಮೆತ್ತಿ ಕೊಳ್ಳುವುದಿಲ್ಲ... ಈ ಮಳೆಯೇ ಹಾಗೆ... ಮನೆ ಬಿಟ್ಟು ಹೊರಗೆ ಕಾಲಿಡಲು ಬಿಡುವುದಿಲ್ಲ ಚರಂಡಿ ನೀರು ರೋಡಲ್ಲಿ ಹರಿದರೂ ನಾವ್ಯಾರು ತಲೆ ಕೆಡಿಸಿಕೊಂಡಂತ್ತಿಲ್ಲ ಈ ಮಳೆಯೇ ಹಾಗೆ... ಬಿರುಸಿನ ಮಳೆಗೆ ಕೊಡೆ ಹಾರುವುದಿಲ್ಲ ರೈನ್್ಕೋಟ್್ಗಳೆಡೆಯಲ್ಲಿ ಮಿಣುಕುವ ಕಣ್ಣುಗಳು ಲಿಫ್ಟ್ ಕೇಳಿದರೂ ಕೊಡುವುದಿಲ್ಲ ಈ ಮಳೆಯೇ ಹಾಗೆ... ಒಮ್ಮೆ ಪಿರಿ ಪಿರಿ, ಎಡೆ ಬಿಡದೆ ಸುರಿಯೆ ಕಿರಿಕಿರಿ ಕೆಂಪು ದೀಪದಡಿಯಲ್ಲಿ ವಿಷಣ್ಣನಾಗಿ ನಿಂತ ಗಾಡಿಗಳ ಗಾಲಿಗಳು ಮುಂದೆ ಚಲಿಸುವುದೇ ಇಲ್ಲ ಈ ಮಳೆಯೇ ಹಾಗೆ... ತಂಗಾಳಿಯೊಂದಿಗೆ ನೆನಪು ಹೊತ್ತು ತರುತಿದೆ ಕಳೆದ ಬಾಲ್ಯ, ಯೌವನದ ಮಿಡಿತ ತುಡಿತದೊಳು ಕಣ್ಣೀರಾಗಿ ಹರಿದು, ಮತ್ತೆ ಮೋಡವಾಗುತಿದೆ.

ಯುರೇಕಾ...ಯುರೇಕಾ

ನೋಡು..ಮಗು ಅಲ್ಲಿದೆ ಅಜ್ಜಿಮನೆ ಇನ್ನೊಂದು ಹೆಜ್ಜೆ ಅಷ್ಟೇ.. ಈಗ ನಡೆದದ್ದು 2 ಮೈಲಿಯಷ್ಟಾಗಿತ್ತು ಇನ್ನೂ ಸ್ವಲ್ಪ ದೂರ.. ಅಪ್ಪ ಮಗನನ್ನು ಪುಸಲಾಯಿಸಿ ಹೆಜ್ಜೆ ಹಾಕುತ್ತಿದ್ದ ಅಪ್ಪ.... ವರುಷ ಸರಿದಾಗ ಮನೆಯ ಮುಂದಿನ ಡಾಂಬರು ರೋಡಿನಲ್ಲಿ ಮಗ ಓಡಾಡಿದ ಮಗು ಓಡು, ಇನ್ನೂ ಜೋರಾಗಿ ಓಡು ಅಪ್ಪ ಹುರಿದುಂಬಿಸಿದ ಮಗ ಓಡುತ್ತಲೇ ಇದ್ದ ಇದು ಮ್ಯಾರಥಾನ್ ಅಲ್ಲ, ಕ್ರಾಸ್್ಕಂಟ್ರಿ ರೇಸ್ ಅಲ್ಲ... ಬದುಕ ಬಂಡಿಯನ್ನೆಳೆಯಲು ಅವ ಓಡುತ್ತಿದ್ದ ಮುದ್ದು ಗಲ್ಲದಲ್ಲಿ ಕಾಣಿಸಿತ್ತು ಗಡ್ಡ ಹೆಗಲ ಮೇಲಿತ್ತು ಕನಸುಗಳ ಭಾರ ಓಡು ಮಗು ಓಡು ಇನ್ನೂ ಓಡಬೇಕೆಂದ ಮುದಿ ಕೂದಲಿನ ಅಪ್ಪ... ಗಮ್ಯ ಸ್ಥಾನವೆಲ್ಲೋ ಯಾರಿಗೇನು ಗೊತ್ತು? ನಿನ್ನ ಮುಂದಿರುವ ಜನರ ಕಾಲೆಳೆದು ಹೊರದಬ್ಬು ಹಿಂದಿರುವ ಮಂದಿಯನ್ನು ಒದೆಕೊಟ್ಟು ತಳ್ಳು ಇಷ್ಟು ಸಾಕಾಗದಿದ್ದರೆ ಅವರ ಮನ ಚಿವುಟು ಅವರ ಕಣ್ಣೀರಲಿ ತೇಲುತ್ತಾ ನೀ ದಡವ ಸೇರು ಮಗ ಓಡುತ್ತಲೇ ಇದ್ದ ಪಿತೃ ವಾಕ್ಯ ಪಾಲಕನಂತೆ ಲಜ್ಜೆ ಬಿಡು ನೀನು...ಎಲ್ಲರಿಂದ ಮುಂದೆ ಸಾಗು ಕಿವಿ ಕೇಳಿಸದು, ಕಣ್ಣು ಕಾಣಿಸದು... ಲಜ್ಜೆ ಬಿಟ್ಟು ವಿವಸ್ತ್ರನಾಗಿ ಮಗ ಓಡುತ್ತಿದ್ದ ಜನ ನಕ್ಕಾಗ ಅಪ್ಪ ಹೇಳಿದ ಯುರೇಕಾ....ಯುರೇಕಾ...

ಉದಯೋನ್ಮುಖ ಬರಹಗಾರರಿಗೆ ಆಮಂತ್ರಣ

ನಾನು ಮತ್ತು ನನ್ನ ಗೆಳೆಯರು ಸೇರಿ ಉದಯೋನ್ಮುಖ ಬರಹಗಾರರನ್ನು ಒಂದು ಗೂಡಿಸುವ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳುತ್ತಿದ್ದೇವೆ. ಕಾರ್ಯಕ್ರಮದ ದಿನಾಂಕ ಮತ್ತು ಸ್ಥಳವನ್ನು ಆಮೇಲೆ ತಿಳಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ, ಭಾಷೆ, ಪ್ರಸ್ತುತ ಪರಿಸ್ಥಿತಿ, ಸವಾಲುಗಳು, ದೋಷಗಳು ಹೀಗೆ ಒಂದಷ್ಟು ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಇದು ಚರ್ಚಾಗೋಷ್ಠಿಯಲ್ಲ, ಸಮ್ಮೇಳನವೂ ಅಲ್ಲ. ಬದಲಾಗಿ ನಾವಿಲ್ಲಿ ಕೈಗೊಳ್ಳುವಂತಹ ತೀರ್ಮಾನಗಳು ಚಾಲ್ತಿಗೆ ಬರಬೇಕು. ನಾವು ಪ್ರಚಾರಕ್ಕಾಗಿ ಈ ಕಾರ್ಯಕ್ರಮವನ್ನು ಕೈಗೊಂಡಿಲ್ಲ. ಏನಿದ್ದರೂ ಇದು ಕನ್ನಡದ ಸೇವೆ, ಇದು ನಮ್ಮ ಭಾಷೆಗೆ ಸಲ್ಲಬೇಕು. ಇದಕ್ಕಾಗಿ ನಿಮ್ಮ ಸಹಕಾರ ಬೇಕು. ಕನ್ನಡಕ್ಕಾಗಿ ತುಡಿಯುವ ಮನ ನಿಮ್ಮದಾಗಿದ್ದರೆ ಬನ್ನಿ... ನಾವೆಲ್ಲರೂ ಒಟ್ಟಾಗಿ ಸೇರೋಣ.. ಪ್ರಸ್ತುತ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಮಾನದಂಡದಗಳು ಇಂತಿವೆ: 1. ಉದಯೋನ್ಮುಖ ಬರಹಗಾರರು (ಬರವಣಿಗೆಯಲ್ಲಿ ಆಸಕ್ತಿಯುಳ್ಳವರು) ಮಾತ್ರ 1. ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಜ್ಞಾನ 2. ಕನ್ನಡಕ್ಕಾಗಿ ತುಡಿಯುವ ಮನಸ್ಸು 3. ಪ್ರಸಕ್ತ ವಿದ್ಯಮಾನಗಳ ಬಗ್ಗೆ ಅರಿವು 5. ಭಾಗವಹಿಸಲಿಚ್ಛಿಸುವವರು ಈ ಕೆಳಗಿನ ಪ್ರಶ್ನೆಗೆ 100 ಪದಗಳಿಗೆ ಮೀರದಂತೆ ಉತ್ತರಿಸಬೇಕು. ಪ್ರಶ್ನೆ: ಸಾಹಿತ್ಯಕ್ಕೆ ಓದು ಅಗತ್ಯವೇ? ಸಾಹಿತಿ ಆದವನಿಗೆ ಸಾಮಾಜಿಕ ಬದ್ಧತೆಗಳಿರಬೇಕೆ? ನಿಮ್ಮ ಉತ್ತರವನ್ನು ಏಪ್ರಿಲ್ 25ರ ಮೊದಲು sanakabrahma@gmail.com...

ಅಪ್ಪನ ಮನದಲ್ಲೊಮ್ಮೆ ಇಣುಕಿ...

ಮ ಗಳು ದೊಡ್ಡವಳಾಗುವುದನ್ನು ನೋಡಿದರೆ ಯಾವ ಅಪ್ಪನಿಗೆ ಖುಷಿಯಾಗಲ್ಲ ಹೇಳಿ? ಅವಳಿಡುವ ಪುಟ್ಟ ಹೆಜ್ಜೆಯ ಗೆಜ್ಜೆ ನಾದ ಅಪ್ಪನ ಮನಸ್ಸಿನ ದನಿಯಾಗುತ್ತದೆ. ಪೀ....ಪೀ...ಸದ್ದು ಹೊರಡಿಸುವ, ಹೆಜ್ಜೆಯಿಟ್ಟಾಗ ಲೈಟ್ ಹೊತ್ತಿಕೊಳ್ಳುವ ಆ ಚಿಕ್ಕ ಬೂಟಿನ ಸದ್ದಿಗೆ ಅವ ನಗುತ್ತಾನೆ. ಎರಡು ಜಡೆಯಲ್ಲೂ ಮಲ್ಲಿಗೆ ಮುಡಿದು, ಬಣ್ಣ ಬಣ್ಣದ ಫ್ರಾಕ್ ಹಾಕಿಕೊಂಡು ಅಪ್ಪನ ಕಿರುಬೆರಳು ಹಿಡಿದು ನಡೆಯುವ ಮಗಳು ಈವಾಗ ಕೂದಲು ಹರಡಿ ಬಿಟ್ಟು ಸುಯ್ಯಿ ಅಂತಾ ಸ್ಕೂಟಿಯೇರುತ್ತಾಳೆ. ಕೈ ತುಂಬಾ ಬಳೆ ಬೇಕು ಎಂದು ಹಠ ಹಿಡಿಯುತ್ತಿದ್ದ ಪೋರಿ ಈಗ ರಟ್ಟೆಯಲ್ಲಿ ಟ್ಯಾಟೂ ಹಾಕಿಸಿ ಸ್ಲೀವ್ ಲೆಸ್ ಟೀಶರ್ಟ್ ಹಾಕ್ತಾಳೆ. ಅವಳ ಹೈ ಹೀಲ್ಡ್ ಶೂವಿನ ಟಕ್ ಟಕ್ ಸದ್ದು ಮಹಡಿಯವರೆಗೂ ಕೇಳಿಸುತ್ತದೆ. ಅಪ್ಪನ ಜತೆ ಕುಳಿತು ಬಟ್ಟಲಿಗೆ ಕೈ ಹಾಕಿ ದೋಸೆ ತಿನ್ನುತ್ತಿದ್ದ ಮಗಳು ಡಯಟ್ ಅಂತಾ ಕ್ಯಾರೆಟ್ ಜೂಸ್ ಕುಡಿದು ಹೊಟ್ಟೆ ತುಂಬುತ್ತಾಳೆ. ಮಗಳು ಬದಲಾಗಿದ್ದಾಳೆ. ಕಾಲಕ್ಕೆ ತಕ್ಕಂತೆ ಅವಳು ಜೀವನದಲ್ಲಿ ಬಣ್ಣ ತುಂಬಿಕೊಂಡಿದ್ದಾಳೆ. ದಿನಪತ್ರಿಕೆ ಕೈಯಲ್ಲಿ ಹಿಡಿದು ನಿತ್ಯ ಭವಿಷ್ಯ ಪುಟ ತಿರುವಿದರೂ, ಮಗಳ ಭವಿಷ್ಯದ ಬಗ್ಗೆ ಅಪ್ಪ ಚಿಂತೆಯಲ್ಲಿ ಮುಳುಗುತ್ತಾನೆ. ಅವನ ಕಣ್ಣುಗಳು ಮಸುಕಾದರೂ ಮನಸ್ಸಿನ ದೃಷ್ಟಿ ಶುಭ್ರವಾಗಿದೆ. ರಂಗು ಕಾಣದ ಕೂದಲುಗಳಲ್ಲಿ, ಸುಕ್ಕುಗಟ್ಟಿದ ಚರ್ಮದಲ್ಲಿ ಬದುಕಿನ ಕಪ್ಪು ಬಿಳುಪು ಚಿತ್ರಗಳ ಛಾಯೆಯಿದೆ. ಕಲರ್್ಫುಲ್ ಬದುಕಿನಲ್ಲಿ ಓಡಾಡುವ ಮಗಳ ಹಾದಿಯನ್ನೇ ನೋಡುತ್ತಾ ಅಪ್...

ಹಳೇ ನಿದ್ರೆ ಪುರಾಣ...

ಇ ತ್ತೀಚೆಗೆ ಬ್ಲಾಗ್ ಬರೆಯೋದು ಕಡಿಮೆ ಆಗಿದೆ. ಕೆಲಸದ ಒತ್ತಡ, ಸಮಯದ ಅಭಾವ ಮತ್ತೊಮ್ಮೆ ಮೂಡ್ ಇಲ್ಲ ಹೀಗೆ ಹಲವಾರು ಕಾರಣಗಳಿಂದ ಬ್ಲಾಗ್ ಬರವಣಿಗೆ ನಿಂತುಹೋಗಿದೆ. ಏನಾದರೂ ಬರೆಯೋಣ ಎಂದು ಕೂತರೆ ವಿಷಯಗಳೇ ಸಿಗಲ್ಲ. ಈ ವಿಷಯಗಳೇ ಹಾಗೇ...ಏನಾದರೂ ಕೆಲಸ ಮಾಡುವಾಗ ಬ್ಲಾಗ್ ಬರೆಯೋಣ ಅಂತಾ ಅನಿಸುತ್ತೆ. ಟಾಯ್ಲೆಟ್್ನಲ್ಲೇ ಹೆಚ್ಚಿನ ವಿಷಯಗಳು ನೆನಪಿಗೆ ಬರುತ್ತೆ, ಆಮೇಲೆ ಬಂದು ಬರೆಯೋಣ ಎಂದು ಕೂತರೇ ಪದಗಳೇ ಸಿಗದು. ಕೆಲವೊಮ್ಮೆ ಬರೆಯಲು ವಿಷಯಗಳು ಸುಮಾರು ಇರುತ್ತದೆ, ಇವುಗಳಲ್ಲಿ ಯಾವುದನ್ನು ಬರೆಯಲಿ? ಎಂಬುದೇ ದೊಡ್ಡ ಪ್ರಶ್ನೆಯಾಗಿ ಕಾಡುವುದೂ ಉಂಟು. ಅಂತೂ ಬ್ಲಾಗ್್ಗೆ ಏನು ಬರೆಯಲಿ? ಎಂಬ ಚಿಂತೆಯಿಂದ ಮುಕ್ತಳಾಗಲು ಅಪ್ಪನಿಗೆ ಫೋನಾಯಿಸಿ, ಏನಾದರೂ ವಿಷಯ ಹೇಳಿ ಅಂದೆ. ನಿನಗಿಷ್ಟವಿರುವ ವಿಷಯದ ಬಗ್ಗೆ ಬರಿ..ಅಂದ್ರು. ಆಮೇಲೆ ನನಗಿಷ್ಟವಿರುವ ವಿಷಯಗಳನ್ನು ಪಟ್ಟಿ ಮಾಡತೊಡಗಿದೆ. ಅರೇ..ವಿಷಯ ಸಿಕ್ಕಿತು.. ನಿದ್ದೆ! ನಿದ್ದೆ ಯಾರಿಗೆ ಇಷ್ಟ ಇಲ್ಲ ಹೇಳಿ? ನಮ್ಮ ದೇವೇಗೌಡ್ರನ್ನು ನೋಡಿ...ಇನ್ನು ವಿಧಾನಸಭೆ, ಲೋಕ ಸಭಾ ಕಲಾಪದ ನಡುವೆ ಗಡದ್ದಾಗಿ ನಿದ್ದೆ ಹೋಗುವ ಮಂದಿಯನ್ನಂತೂ ನಾವು ನೋಡಿಯೇ ಇರುತ್ತೇವೆ. ನಿದ್ದೆ ಅದೊಂದು ಸುಖ, ಭಾಗ್ಯ...ಅದು ಎಲ್ಲರಿಗೂ ಒಲಿಯುವುದಿಲ್ಲ. ನನಗಂತೂ ನಿದ್ದೆ ಅಂದ್ರೆ ಸಿಕ್ಕಾಪಟ್ಟೆ ಇಷ್ಟ ಕಣ್ರೀ..ನಾನು ಪಾಪುವಾಗಿದ್ದಾಗ ನಿದ್ದೆ ಮಾಡ್ತಾನೇ ಇರ್ತಿಲ್ವಂತೆ. ಹಾಗಂತ ರಾತ್ರಿ ವೇಳೆ ರಂಪಾಟ ಮಾಡಿ ಅಮ್ಮನ ನಿದ್ದೆಯನ್ನೂ ಕೆಡಿಸ...

ಆಕೆ 'ಸ್ವಬಂಧನ'ದಿಂದ ಮುಕ್ತವಾಗಲಿ...

ದಿ ನವಿಡೀ ಕೀಲಿಮಣೆ ಕುಟ್ಟುತ್ತಾ ಡೆಡ್್ಲೈನ್ ಎಂಬ ಭೂತಕ್ಕೆ ಭಯ ಪಡುತ್ತಾ ನನ್ನ ದಿನಚರಿ ಮುಗಿಯತ್ತೆ. ಇಂದು ಮಹಿಳಾ ದಿನಾಚರಣೆ ಅದಕ್ಕೆ ಏನಾದರೂ ಗೀಚೋಣ ಎಂದು ಕುಳಿತಾಗ ಹೊಳೆದ ಕೆಲವೊಂದು ವಿಚಾರಗಳಿಗೆ ಅಕ್ಷರ ರೂಪ ಕೊಡುವ ಪ್ರಯತ್ನ ಇದು. ಮಹಿಳಾ ದಿನಾಚರಣೆ ಎಂದ ಕೂಡಲೇ ಮಹಿಳೆಯ ಬಗ್ಗೆ ಬರೆಯಬೇಕಲ್ವಾ. ಇರಲಿ, ಮಹಿಳೆಯ ಬಗ್ಗೆ ಓದುವಾಗ ನಾನು ಗಮನಿಸಿದ್ದು ಅದರಲ್ಲಿ ಹೆಚ್ಚಾಗಿ ಸ್ತ್ರೀ ಶೋಷಣೆಯ ಬಗ್ಗೆಯೇ ಪುಟಗಟ್ಟಲೆ ವಿವರಣೆ ನೀಡಲಾಗುತ್ತದೆ. ಯಾವುದೇ ಮಹಿಳಾ ವಿಚಾರಗೋಷ್ಠಿಗೆ ಹೋಗಿ, ಅಲ್ಲಿ ಕೇಳುವುದೇ ಅಂದಿನ ಕಾಲದಿಂದ ಇಂದಿನ ಕಾಲದ ವರೆಗೆ ಪುರುಷರು ದಬ್ಬಾಳಿಕೆ ನಡೆಸುತ್ತಾ ಇದ್ದಾರೆ. ಪುರುಷರು ಹಾಗೆ ಮಾಡಿದ್ರು, ಹೀಗೆ ಮಾಡಿದ್ರು... ಸ್ತ್ರೀ ಶೋಷಣೆ!... ಸ್ತ್ರೀ ಎಂಬ ಪದ ಹೆಡ್್ಲೈನ್ ಆಗಿದ್ದರೆ ಅಲ್ಲಿ ಶೋಷಣೆ ಕಿಕ್ಕರ್. ಹಾಗಂತ ಇಂದಿನ ಕಾಲದಲ್ಲಿ ಸ್ತ್ರೀ ಶೋಷಣೆ ನಡೆಯುತ್ತಿಲ್ಲ ಎಂದು ನಾನು ಹೇಳಲ್ಲ. ಶೋಷಣೆ, ದಬ್ಬಾಳಿಕೆಗಳಿಗೆ ಎಂದೂ ಬ್ರೇಕ್ ಬಿದ್ದಿಲ್ಲ. ಆದರೆ ಬೇಜಾರಿನ ವಿಷ್ಯ ಏನಪ್ಪಾ ಅಂದ್ರೆ ಇಂತಹಾ ಕಥೆಗಳನ್ನು ಹೇಳುತ್ತಾ ಕೆಲವರು ತಮ್ಮನ್ನು ತಾವೇ ಸ್ತ್ರೀವಾದಿ ಎಂದು ಬಿಂಬಿಸಿಕೊಳ್ಳುತ್ತಾರೆ. ನಿಜ ಹೇಳಬೇಕಾದ್ರೆ ಓರ್ವ 'ಸ್ತ್ರೀವಾದಿ' ಎಂದರೆ ಪುರುಷರನ್ನು ದೂರುವ ಮೂಲಕ, ಆತನನ್ನು ಜರೆಯುವ ಮೂಲಕ ಸ್ತ್ರೀಯನ್ನೇ ಹೊಗಳುವ ಮೂಲಕ ಪಟ್ಟಗಿಟ್ಟಿಸಿಕೊಳ್ಳುವುದಲ್ಲ. ದಬ್ಬಾಳಿಕೆ ಮಹಿಳೆಯಿಂದಲೂ ಆಗಲ್ವಾ? ವರದಕ್ಷಿಣೆ ವಿಷಯದಲ್...