Posts

"ಕರ್ನಾಟಕ ಚೆಕ್ ಪೋಸ್ಟ್ ಗಳಲ್ಲಿ ಮಾಮೂಲುದಾರರು"- ನಟ ಪೃಥ್ವೀರಾಜ್ ಹೇಳಿದ ರಿಯಲ್ ಸ್ಟೋರಿ

Image
ಚೆ ಕ್ ಪೋಸ್ಟ್ ಗಳಲ್ಲಿ ಕತ೯ವ್ಯ ನಿರತರಾಗಿರುವ ಪೊಲೀಸರು ಲಂಚ ಕೇಳುವುದು ಹೊಸತೇನಲ್ಲ. ಅವರಿಗೆ 'ಮಾಮೂಲು' ಕೊಟ್ಟು ರಾಜ್ಯದ ಗಡಿ ದಾಟಿ ಬರುವ ಪ್ರತಿಯೊಬ್ಬ ಪ್ರಯಾಣಿಕನು ಪೊಲೀಸರಿಗೆ ಹಿಡಿಶಾಪ ಹಾಕುತ್ತಾನೆಯೇ ಹೊರತು ಯಾರೂ ಈ ಬಗ್ಗೆ ಕೇಸು ದಾಖಲಿಸುವುದಿಲ್ಲ ಎಂಬುದು ದುರದೃಷ್ಟಕರ. ಕೇರಳ-ಕನಾ೯ಟಕ ಗಡಿ ಪ್ರದೇಶದಲ್ಲಿ ಪೊಲೀಸರು ಮಾಮೂಲು ವಸೂಲಿ ಮಾಡುತ್ತಿರುವ ಬಗ್ಗೆ ಮಲಯಾಳ ಮನೋರಮಾ ಪತ್ರಿಕೆಯಲ್ಲೊಂದು ಸುದ್ದಿ ಪ್ರಕಟವಾಗಿದೆ. ಈ ಸುದ್ದಿ ಕನಾ೯ಟಕದ ಜನತೆಗೂ ತಲುಪಲಿ ಎಂಬ ಆಶಯದೊಂದಿಗೆ ಈ ಬ್ಲಾಗ್ ಬರೆಯುತ್ತಿದ್ದೇನೆ. ಕೇರಳ ಕನಾ೯ಟಕ ಗಡಿಪ್ರದೇಶವಾದ ಗುಂಡ್ಲುಪೇಟೆಯಲ್ಲಿ ರಂಜಿತ್ ನಿದೇ೯ಶನದ 'ಇಂಡಿಯನ್ ರುಪೀ' ಎಂಬ ಮಲಯಾಳಂ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ವೇಳೆ ಗಡಿಪ್ರದೇಶದಲ್ಲಿ ಕನಾ೯ಟಕ ಪೊಲೀಸರು ಲಂಚಕ್ಕಾಗಿ ತಮ್ಮನ್ನು ಪೀಡಿಸಿದ ಘಟನೆಯ ಬಗ್ಗೆ ಮಲಯಾಳಂ ಚಿತ್ರನಟ ಪೃಥ್ವೀರಾಜ್ ಹೇಳಿದ ರಿಯಲ್ ಸ್ಟೋರಿ . "ರಾಜ್ಯದ ಗಡಿ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ಮತ್ತು ಪೊಲೀಸ್ ಏಯ್ಡ್ ಪೋಸ್ಟ್ ಗಳಿರುವುದೇ ಪ್ರಯಾಣಿಕರ ಹಾಗೂ ಸರಕು ಸಾಗಾಟಗಾರರ ಭದ್ರತೆಗಾಗಿ. ಇವರಿಗೆ ಜನರಿಂದ 'ಮಾಮೂಲು' ವಸೂಲು ಮಾಡುವ ಅಧಿಕಾರವಿರುವುದಿಲ್ಲ. ಆದರೆ, ಬತ್ತೇರಿಯಿಂದ ಗುಂಡ್ಲುಪೇಟೆಗೆ ತಲುಪಲು ನಮ್ಮ ಸಿನಿಮಾ ಟ್ರೂಪ್ ಗೆ ಪ್ರತಿಯೊಂದು ಚೆಕ್ ಪೋಸ್ಟ್ ನಲ್ಲಿ ಪ್ರತಿ ದಿನ ನೀಡಬೇಕಾಗಿ ಬಂದ ಹಣ 200 ರು. ಪ್ರತಿ ಪ್ರಯಾಣದ ನಡ...

ಯಾಕೋ ಹಳೆಯದೆಲ್ಲಾ ನೆನಪಾಗುತಿದೆ...

ಇಂ ಜಿನಿಯರಿಂಗ್ ಓದುತ್ತಿದ್ದ ಕಾಲದಲ್ಲಿ ಬೆಂಗಳೂರು ನಮ್ಮ ಕನಸಿನ ಊರಾಗಿತ್ತು. ಕಲಿಕೆಯಲ್ಲಿ ಅಷ್ಟೇನೂ ಮುಂದೆ ಇಲ್ಲದಿದ್ದರೂ ಹೇಗಾದರೂ ಪರೀಕ್ಷೆಯಲ್ಲಿ 'ಬಚಾವ್್' ಆಗಿ ಎದ್ದು ನಿಲ್ಲುತ್ತಿದ್ದೆ. ಅಂತಿಮ ವರ್ಷ ಕ್ಯಾಂಪಸ್ ಇಂಟರ್್ವ್ಯೂನಲ್ಲಿ ನನ್ನ ಬುದ್ಧಿವಂತ ಗೆಳೆಯರೆಲ್ಲ ಪಾಸಾದಾಗ ನಾವು ಕಂಗ್ರಾಟ್ಸ್ ಹೇಳುವ ಗುಂಪಿನಲ್ಲಿ ನಿಲ್ಲಬೇಕಾಗಿ ಬಂತು. ನನ್ನ ಹಾಗೆಯೇ ಎಂಟು ಹುಡುಗಿಯರು ನಮ್ಮ ಗ್ಯಾಂಗ್್ನಲ್ಲಿದ್ದರು. ಕೆಲಸ ಗಿಟ್ಟಿಸಿಕೊಳ್ಳಬೇಕೆಂದು ನಾವು ಕಂಪನಿಗಳಿಗೆ ರೆಸ್ಯೂಮೆ ಫಾರ್ವ್್ರ್ಡ್ ಮಾಡುತ್ತಿರಬೇಕಾದರೆ ನಿಮಗೆ ಯಾಕೆ ಕೆಲಸ? ಹೇಗಾದರೂ ಸಾಫ್ಟ್್ವೇರ್ ಇಂಜಿನಿಯರ್ ಒಬ್ಬ ಮದುವೆ ಆಗುತ್ತಾನೆ. ಆಮೇಲೆ ಗಂಡ, ಮನೆ ಮಕ್ಕಳು ಅಂತಾ ಲೈಫ್ ಕಳೆದುಹೋಗಿ ಬಿಡುತ್ತೆ ಎಂದು 'ಬಿಟ್ಟಿ' ಉಪದೇಶ ನೀಡುವ ಹುಡುಗರಿಗೂ ಏನೂ ಕಮ್ಮಿಯಿರಲಿಲ್ಲ. ಇಂಟರ್್ವ್ಯೂನಲ್ಲಿ ಪಾಸಾಗುವ ಅರ್ಹತೆ ನಮಗಿರಲಿಲ್ಲವೋ, ನಮ್ಮನ್ನು ಆಯ್ಕೆ ಮಾಡುವ ಅರ್ಹತೆ ಅವರಿಗಿರಲಿಲ್ಲವೋ ಅಂತೂ ನಮ್ಮ ಬೆಂಗಳೂರು ಕನಸು ಕನಸಾಗಿಯೇ ಉಳಿದಿತ್ತು. ಬೆಂಗಳೂರು ಹೋಗಿ ಅಲ್ಲಿ ಕೆಲಸ ಹುಡುಕೋಣ ಎಂದರೆ ಅಷ್ಟೊಂದು ದುಡ್ಡು ಇರಬೇಕಲ್ವಾ? ಕೆಲವೊಮ್ಮೆ ಕೆಲಸ ಸಿಕ್ಕದೇ ಇದ್ದರೆ? ಮನಸ್ಸಲ್ಲಿ ನೂರಾರು ಚಿಂತೆಗಳು. ಕಾಲೇಜಿನಲ್ಲಿರುವಾಗ ಉತ್ತರ ಭಾರತದಿಂದಲೋ ಇನ್ನಾವುದೋ ರಾಜ್ಯದಿಂದ ಬಂದ ಮಕ್ಕಳು ಇಂಗ್ಲಿಷ್್ನಲ್ಲಿ ಮಾತನಾಡಿದರೆ, ಇದು ಕೇರಳ. ನಮ್ಮ ರಾಜ್ಯ ಇಲ್ಲಿ ಮಲಯಾಳಂ ಕಲಿತುಕೊಳ್ಳಿ ಎ...

ನನ್ನದೂ ಒಂದು

ನೂ ರು ರುಪಾಯಿಗೆ ಸಿಕ್ಕ ಫ್ಯಾಷನ್ ಚಪ್ಪಲಿ ಮೆಟ್ಟಿ, ಅದೇ ಜೀನ್ಸು, ಮೇಲೊಂದು ಟೀ ಶರ್ಟು ಮತ್ತೊಂದು ಬ್ಯಾಗು, ಪರ್ಸ್... ಬಿಎಂಟಿಸಿಯಲ್ಲಿ ಹೈ ಹೀಲ್ಡ್ ಚಪ್ಪಲಿ ತುಳಿತಕ್ಕೆ ಚೀರಿ, ನೂಕು ನುಗ್ಗಲಲ್ಲಿ ಚಡಪಡಿಸಿ ಬಿದ್ದು ಏಳುತಿದೆ ಬದುಕು... ಅವಸರದಲ್ಲಿ ಅರ್ಧಂಬರ್ಧ ತಿಂದ ತಿಂಡಿ ಬಸ್ಸಲ್ಲೇ ಜೀರ್ಣವಾಗಿ ಹೊಸ ಕನಸುಗಳು ಮತ್ತೆ ಚಿಗುರುತ್ತಿವೆ ಮನಸ್ಸಲ್ಲಿ ದಾರಿಯಂಗಡಿಗಳಲ್ಲಿ ತೂಗು ಹಾಕಿದ ಟೀ ಶರ್ಟು, ಸಲ್ವಾರುಗಳು ಕೈ ಬೀಸಿ ಕರೆಯುತ್ತಿವೆ... ನೂರು ರುಪಾಯಿ ಇಡಿ ನೋಟು ಬಸ್ ಪಾಸು, ಐಡಿ ಕಾರ್ಡಿನ ನಡುವೆ ಬೆಚ್ಚನೆ ಕುಳಿತಿರಲು ಹಳೇ ರಸೀದಿ ತುಂಡುಗಳು ನಡುಗ ತೊಡಗಿದ್ದವು ಒಂದರ ಹಿಂದೆ ಮತ್ತೊಂದರಂತೆ! ಕಾಯಬೇಕಾಗಿದೆ ತಿಂಗಳ ಪಗಾರಕ್ಕೆ ಮನೆಗೆ ಕಳುಹಿಸಬೇಕಾಗಿದೆ ಒಂದಿಷ್ಟು ಮೊತ್ತ ಮನೆ ಬಾಡಿಗೆ, ಕ್ರೀಮು, ಪೌಡರು ಒಂದಷ್ಟು ಮ್ಯಾರಿ ಬಿಸ್ಕತ್ತು! ಪಟ್ಟಿ ಬೆಳೆಯುತ್ತಿದ್ದರೆ ಹಣ ಕುಗ್ಗುತ್ತಿತ್ತು ಜೇಬಲ್ಲಿ ಕೊನೆಗೂ 'ಪಟ್ಟಿ'ಯಲ್ಲಿ ಕೆಲವೊಂದನ್ನು ಕಳೆದು, ಉಳಿದದ್ದನ್ನು ಕೂಡಿಸಿ ಹೇಗೋ 'ಅಡ್ಜೆಸ್ಟ್' ಮಾಡಿ ಮುಂದಿನ ಪಗಾರಕ್ಕಾಗಿ ದಿನ ಎಣಿಕೆ ಶುರುವಾಗಿದೆ...

ನಮ್ಮೂರ ಗೋರ್ಮೆಂಟು ಬಾವಿ

" ಊ ರಿಗೊಬ್ಬಳೇ ಪದ್ಮಾವತಿ" ಎಂಬಂತೆ ನಮ್ಮೂರಲ್ಲೂ ಒಂದು ಸರ್ಕಾರಿ ಬಾವಿ ಇದೆ. ಸರ್ಕಾರಿ ಬಾವಿ ಎಂದು ಯಾರು ಹೇಳಲ್ಲ...ಎಲ್ಲರೂ ಅದನ್ನು ಗೋರ್ಮೆಂಟು ಬಾವಿ ಎಂದೇ ಹೇಳೋದು. ನಮ್ಮೂರಿನ ಜನರ ದಾಹ ತೀರಿಸುವ ಏಕೈಕ ಜಲನಿಧಿ ಇದು. ಊರ ಮಧ್ಯೆ ಸಿಮೆಂಟು ಕಟ್ಟೆಯ ಈ ಬಾವಿಯ ಪಕ್ಕವೇ ಸಿಮೆಂಟಿನ ಒಂದು ಸಣ್ಣ ಟ್ಯಾಂಕ್ ಕೂಡ ಇದೆ. ನೀರು ಸೇದೋಕೆ ಬಂದೋರು ಯಾರಾದ್ರೂ ಆ ಟ್ಯಾಂಕ್್ಗೆ ಒಂದು ಕೊಡ ನೀರು ಹಾಕಿ ಬಿಟ್ಟರೆ ಅಲ್ಲಿರುವ ಪ್ರಾಣಿ ಪಕ್ಷಿಗಳ ದಾಹವೂ ಇಂಗುತ್ತದೆ. ಗೋರ್ಮೆಂಟು ಬಾವಿ ಅಂದರೆ ಇನ್ನು ಹೇಳಬೇಕೆ? ಸ್ವಂತ ಮನೆ ಕಟ್ಟಿ ಬಾವಿ ತೋಡುವವರೆಗೂ, ಮನೆಯ ಬಾವಿಯಲ್ಲಿ ನೀರು ಬತ್ತಿದಾಗಲೂ ನೆನಪಾಗುವುದೇ ಈ ಬಾವಿ. ಈವಾಗ ಮನೆಗೊಂದು ಬೋರ್್ವೆಲ್ ಜತೆಗೆ ಪಂಚಾಯತ್ ವತಿಯಿಂದ ಮನೆ ಮನೆಗೆ ನೀರು ಸೌಕರ್ಯವಿರುವುದರಿಂದ ಬಾಡಿಗೆ ಮನೆಯಲ್ಲಿ ವಾಸವಿರುವವರೇ ಈ ಬಾವಿಯ ಗಿರಾಕಿಗಳು. ಬೆಳಗ್ಗೆ ಬೆಳಕು ಮೂಡುತ್ತಲೇ ನೀರೆಯರು ಬಾವಿಯತ್ತ ಧಾವಿಸುತ್ತಾರೆ. ಚಾ ಆಯ್ತಾ? ತಿಂಡಿ ಏನು? ಎಂಬ ಒನ್ ಲೈನ್ ಪ್ರಶ್ನೆಗೆ ಒಂದೇ ಪದದಲ್ಲಿ ಉತ್ತರಿಸಿ ನೀರು ಸೇದಿ ಗಡಿಬಿಡಿಯಲ್ಲಿ ನೀರು ಕೊಂಡೊಯ್ಯುವುದು ಬೆಳಗ್ಗಿನ ವಿಶೇಷ . ಮಧ್ಯಾಹ್ನದ ವೇಳೆಗೆ ಬಾವಿಕಟ್ಟೆಯ ಸುತ್ತಲೂ ತಟ ಪಟ ಅಂತಾ ಬಟ್ಟೆ ಒಗೆಯುವವರೇ ಜಾಸ್ತಿ. ಅಲ್ಲೇ ಬಟ್ಟೆ ಒಗೆದು ಪಕ್ಕದಲ್ಲಿರುವ ಮರಗಳ ಕೊಂಬೆಗಳಿಗೆ ಹಗ್ಗ ಕಟ್ಟಿಯೋ, ಇಲ್ಲದಿದ್ದರೆ ಅಲ್ಲೇ ಪಾರೆಕಲ್ಲಿನ ಮೇಲೆ ಬಟ್ಟೆ ಒಣಗಿಸಿ ಮನೆಗೆ ಮರಳುವವರೇ ಜಾ...

ಅಪ್ಪನಿಗೊಂದು ಪತ್ರ

ಪ್ರೀತಿಯ ಪಪ್ಪಾ, ಹೇಗಿದ್ದೀರಾ? ನಾನು ಚೆನ್ನಾಗಿದ್ದೇನೆ. ಆದರೆ ಮನಸ್ಸು ಯಾವುದೋ ಸುಳಿಯಲ್ಲಿ ಸಿಕ್ಕಿ ಚಡಪಡಿಸುತ್ತಿದೆ. ನನ್ನ ವೇದನೆಯನ್ನು ಯಾರಲ್ಲೂ ಹೇಳಿ ಕೊಳ್ಳಲು ಆಗದೆ ನಾನು ಒದ್ದಾಡುತ್ತಿದ್ದೇನೆ. ಸುಮ್ಮನೆ ಕುಳಿತು ಜೋರಾಗಿ ಅತ್ತು ಬಿಡಬೇಕೆಂದು ಅನಿಸುತ್ತಿದೆ. ಆದರೆ ಅಳುವಷ್ಟು ಸ್ವಾತಂತ್ರ್ಯವೂ ನನ್ನಲ್ಲಿ ಇಲ್ಲಪ್ಪಾ... ದಿನವೂ ನಗು ನಗುತ್ತಿದ್ದ ಹುಡುಗಿ ನಾನು. ನನ್ನ ಜೀವನದಲ್ಲಿ ನಾನು ಬಯಸಿದ್ದೆಲ್ಲವನ್ನೂ ನೀವು ನನಗೆ ನೀಡಿದ್ದೀರಿ. ಚಿಕ್ಕವಳಿರುವಾಗ ನಾನು ಅತ್ತರೆ ನಿಮ್ಮ ಮನಸ್ಸು ಅದೆಷ್ಟು ನೋಯುತಿತ್ತು!. ನಾನು ದೂರದ ಊರಿಗೆ ಹೊರಟು ನಿಂತಾಗ ನಿಮ್ಮ ಕಣ್ಣಂಚಲ್ಲಿ ನೀರ ಹನಿ ಕಂಡಿದ್ದೆ. ಕಣ್ಣೀರೊರಸುತ್ತಾ ನಿಮ್ಮನ್ನು ಅಪ್ಪಿ ಹಿಡಿದಾಗ, ಪುಟ್ಟೀ...ನೀನು ಪಪ್ಪನ ಮಗಳಲ್ವಾ..ಹೀಗೆಲ್ಲಾ ಚಿಕ್ಕ ಮಕ್ಕಳ ತರ ಅಳ್ಬಾದು೯ ಅಂತಾ ನನಗೆ ಮುತ್ತಿಟ್ಟು ಕಳುಹಿಸಿಕೊಟ್ಟವರು ನೀವು. ಪಪ್ಪಾ...ನನ್ನ ಜೀವನದಲ್ಲಿ ಬಂದ ಮೊದಲ ಪುರುಷನೇ ನೀವು. ಪಪ್ಪ ಎನ್ನುವುದಕ್ಕಿಂತ ಮಿಗಿಲಾಗಿ ನೀವು ನನ್ನ ಬೆಸ್ಟ್ ಫ್ರೆಂಡ್ ಆಗಿದ್ದಿರಿ. ನನ್ನ ಕೈಗೆ ಮದರಂಗಿ ಇಡುವಾಗ ನಿಮ್ಮ ಕೈ ಗೂ ಮದರಂಗಿ ಇಟ್ಟು ಸಂಭ್ರಮಿಸುತ್ತಿದ್ದೆ. ನೇಲ್ ಪಾಲಿಶ್ ಖರೀದಿ ಮಾಡುವಾಗ ನೇಲ್ ಪಾಲೀಶ್ ನಿಮ್ಮ ಉಗುರಿಗೆ ಹಚ್ಚಿ ಸ್ಯಾಂಪಲ್ ನೋಡುತ್ತಿದೆ. ಅಮ್ಮ ನನ್ನನ್ನು ಬೈದಾಗೆಲ್ಲಾ ನಿಮ್ಮ ಮಡಿಲಲ್ಲಿ ಬಿದ್ದು ಅಳುತ್ತಿದ್ದೆ. ಅಕ್ಕನ ಜತೆ ಜಗಳವಾಡಿದಾಗ 'ಹೋಗಲಿ ಬಿಡು ಅವಳು ದೊಡ...

ಹ್ಯಾಪಿ ಬರ್ತ್ ಡೇ ಟು ಮೀ...

Image
ಇ ವತ್ತು ನನ್ನ ಬ್ಲಾಗ್ ಅನುರಾಗದ ಹುಟ್ಟು ಹಬ್ಬ. ಕಳೆದ 4 ವಷ೯ಗಳಿಂದ ನನ್ನ ಮನಸ್ಸಿಗೆ ತೋಚಿದ್ದೆಲ್ಲವನ್ನೂ ಈ ಬ್ಲಾಗ್ ನಲ್ಲಿ ಗೀಚಿದ್ದೇನೆ. ಉದ್ಯೋಗದ ನಿಮಿತ್ತ ಚೆನ್ನೈಗೆ ತೆರಳಿದಾಗ ಕನ್ನಡದಲ್ಲಿ ಹೇಗೆ ಟೈಪ್ ಮಾಡಬೇಕೆಂದೇ ಗೊತ್ತಿರಲಿಲ್ಲ. ಅಲ್ಲಿ ಕನ್ನಡ ಟೈಪ್ ಮಾಡಲು ಕಲಿತೆ. ಇಂಟರ್ನೆಟ್ ನಲ್ಲಿ ಇನ್ನೊಬ್ಬರ ಬ್ಲಾಗ್ ನೋಡುತ್ತಿದ್ದರೆ ನನಗೂ ಒಂದು ಬ್ಲಾಗ್ ಬೇಕೆಂಬ ಆಸೆ ಹುಟ್ಟಿಕೊಂಡಿತ್ತು. ಆವಾಗ ಹುಟ್ಟಿಕೊಂಡದ್ದೇ ಅನುರಾಗ. ಆಮೇಲೆ ಸಮಯ ಸಿಕ್ಕಾಗೆಲ್ಲಾ ಬ್ಲಾಗ್ ನಲ್ಲಿ ಗೀಚಿದ್ದೇ ಗೀಚಿದ್ದು, ಕೆಲವೇ ಸಮಯಗಳಲ್ಲಿ ನಾನೂ ಬ್ಲಾಗ್ ಲೋಕದಲ್ಲಿ ಪರಿಚಿತಳಾಗಿಬಿಟ್ಟೆ.ಅನುರಾಗದೊಂದಿಗೆ ಇನ್ನು ಮೂರು ಬ್ಲಾಗ್ ಗಳನ್ನು ಆರಂಭಿಸಿದೆ. ಬ್ಲಾಗ್ ಲೋಕದಲ್ಲಿನ ಈ ಪಯಣದಲ್ಲಿ ಹಲವಾರು ಗೆಳೆಯರು ಹಿತೈಷಿಗಳು ಸಿಕ್ಕಿದರು.ನನ್ನ ಲೇಖನಕ್ಕೆ ಪ್ರತಿಕ್ರಿಯೆ ನೀಡುವ ಮೂಲಕ ಪ್ರೋತ್ಸಾಹಿಸಿದರು. ಇನ್ನು ಕೆಲವರು ಕಾಲೆಳೆದರು. ಕೆಲವು ಕಾಲಗಳ ವರೆಗೆ ನನ್ನ ಬ್ಲಾಗ್ ನಿದ್ರಾವಸ್ಥೆಯಲ್ಲಿತ್ತು. ಈಗ ಮತ್ತೆ ಎಚ್ಚೆತ್ತುಕೊಂಡಿದೆ. ನಿಮ್ಮೆಲ್ಲರ ಆಶೀವಾ೯ದ ಮತ್ತು ಪ್ರೋತ್ಸಾಹದೊಂದಿಗೆ ಬ್ಲಾಗ್ ಲೋಕದಲ್ಲಿ ನನ್ನ ಪಯಣ ಸಾಗುತ್ತಿದೆ...ಅನುರಾಗದೊಂದಿಗೆ... ಎಲ್ಲರಿಗೂ ನನ್ನಿ, ರಶ್ಮಿ ಕಾಸರಗೋಡು.

ಇಲ್ಲ..ನನಗೆ ನಿನ್ನಲ್ಲಿ ಮುನಿಸು

ನಾ ನಡೆವ ದಾರಿಯಲಿ ನಿನ್ನ ಪಾದದ ಗುರುತು ಇರದೇ ಇರಬಹುದು ನಿನ್ನ ನೆರಳು ನಿನ್ನ ಕನಸಿನಲಿ ನಾ ಇಲ್ಲದಿರಬಹುದು ಗೆಳೆಯಾ... ನೀ ಸುರಿವ ಮಳೆಯಾದರೇನು? ಇಂಗಲು ನನ್ನೊಡಲ ತಳವಿದೆ ನೀ ಸುಡುವ ಬಿಸಿಲಾದರೇನು? ನನ್ನ ಹೃದಯದ ಗುಡಿಸಲೊಳಗೆ ತಣ್ಣನೆಯ ನೆರಳಿದೆ.... ನಿನ್ನ ಹೃದಯ ಬಾನಂತಿದ್ದರೇನು? ಹಕ್ಕಿಯಾಗಿ ನಿನ್ನತ್ತ ಹಾರಿ ಬರುವೆ ನೀನು ಭುವಿಯಂತೆ ಮಲಗಿದ್ದರೇನು? ಹನಿ ಹನಿಯಾಗಿ ಬಿದ್ದು ಪನ್ನೀರ ಚಿಮುಕಿಸುವೆ! ಸಮಾಂತರ ರೇಖೆಗಳು ನಾವು ಬಾಳ ಪಯಣಯದಲ್ಲಿ ಬೆಳಗು ರಜನಿಯಂತಿದೆ ನಮ್ಮ ಮಿಲನ ಜತೆಯಾಗಿದ್ದರೂ ಸೇರಲ್ಲ ಸೇರಿದರೂ ಬೆರೆಯಲ್ಲ ನಿನ್ನ ಪುಟ್ಟ ಹೃದಯದಲ್ಲಿ ನಾನಾಗಲಾರೆ ನಿನ್ನ 'ಕೆಟ್ಟ' ನೆನಪು ನಿನ್ನ ಹೃದಯವ ಕದ್ದೊಯ್ಯಲಾರೆ ನನ್ನಾಣೆಗೂ, ಇಲ್ಲ..ನನಗೆ ನಿನ್ನಲ್ಲಿ ಮುನಿಸು