ಎದೆಯ ತಲ್ಪದಲವಿತ
ಕಲ್ಪನೆಗಳ ನಗ್ನಶಿಲೆಯನು ಕೆತ್ತಿ
ಬಿರಿದ ಆಗಸದಿ ಚುಕ್ಕಿಗಳ ಚಿತ್ತಾರ
ಬಣ್ಣ ಜಾಲದಲಿ ಸಿಕ್ಕಿ, ರೂಪ
ತಳೆದ ಕನಸುಗಳ ಕರಡು ರೇಖಾಚಿತ್ರ
ಹೊಸ ದಿನದ ಹೊಂಗಿರಣ
ಪ್ರಸ್ತುತಕೆ ಧಿಕ್ಕರಿಸಿ, ವರ್ತಮಾನದ ನಡುವೆ
ಅಜ್ಜ ನೆಟ್ಟಾಲದ ರೆಂಬೆಗಳ ಸೀಳಿ
ಉದುರುವುವು, ಸ್ವಪ್ನರಶ್ಮಿಗಳ ಸುತ್ತ ಹಾರುವ
ಕ್ಷಣಿಕ ಜೀವನ ಸುಖದ ಪುಟ್ಟ ಹಾತೆಗಳು
ಮಂಜುಮುಸುಕಿದ ಓಣಿಯಲಿ ನಡೆದು
ನಗ್ನ ಪಾದದ ಗುರುತು ಮೂಡಿರೆ
ಇಕ್ಕೆಲದಿ ಇಬ್ಬನಿಯು ಕಿಕ್ಕಿರಿದು ನಗುವಾಗ
ದಳ ಪಕಳೆ ಬಿಚ್ಚಿ, ಸುಮಗಳನು ಮುತ್ತಿಕ್ಕಿ
ಬಿರಿದೆದೆಯನ್ನು ಕೆಣಕಿಸುವ ಭ್ರಮರ ಕೂಟ
ಪೊರೆ ಕಳಚಿ ಧುಮ್ಮಿಕ್ಕುವ ಹೊಂಗನಸ
ಸುಪ್ತಭಾವನೆಗಳಂತೆ, ಬೆಳ್ಮುಗಿಲ ಬಾನಿನಲಿ
ರೆಕ್ಕೆ ಬಿಚ್ಚಿ ಹಾರುವ ಗುಬ್ಬಚ್ಚಿ,
ಬೆಡಗು ಬೆಳಕಿನ ಜೀವ ಬೆನ್ನ ಹತ್ತಿಕ್ಕಿ
ಮೂಡುವುದು ನವವರುಷದ ಕಲ್ಪನೆಯ ವರ್ಣಚಿತ್ರ !!
5 comments:
ಕರಡು ವರ್ತಮಾನದಲ್ಲಿ ಭೂತದ ಆಲಾಪನೆಯ ಜೊತೆ ಬೇಸರವೋ ಅಸ್ಪಷ್ಟ ಅಪೂರ್ಣತೆಯೋ ಸೇರಿ ಭವಿಷ್ಯದ ಹೊಂಗನಸಿನ ವರ್ಣಚಿತ್ರ...
ಅಪ್ರಸ್ತುತಕೆ ಅನ್ನುವ ಬದಲು ಅಪ್ರಸ್ತುತವ ಧಿಕ್ಕರಿಸಿ ಎಂದಾದರೆ ಚೆನ್ನಾಗಿರುತ್ತಾ? ಗೊತ್ತಿಲ್ಲ.
ಇನ್ನಷ್ಟು ಬರೆಯಿರಿ.
ಹೂವಾಗಿ ಬಿರಿದ ಆಕಾಶ, ಕನಸಿ ಕಿರಣಗಳಿಗೆ ಮುತ್ತುವ ಸುಖದ ಹಾತೆಗಳು, ನಗುವ ಇಬ್ಬನಿ.... ಅಬ್ಬಾ ನಿಮ್ಮ ಹೊಸ ವರುಷದ ಕಲ್ಪನೆಯ ಕಣ್ಣಲ್ಲಿ ಇಷ್ಟೆಲ್ಲಾ ಕಂಡಿತಾ?!! ಅಥವಾ ಯಾರಿಂದಲಾದರೂ ಕಣ್ಣುಗಳನ್ನು ಎರವಲು ಪಡೆದಿದ್ದೀರಾ!!?? ;)
ನಿಜ, ಎಲ್ಲರ ಮನದಲ್ಲೂ ಸಾವಿರ ಕಣ್ಣುಗಳು, ನೋಡುವ ಮೂಡ್ ಹಾಗು ತಾಕತ್ತು ಇದ್ದರೆ ಏನೆಲ್ಲಾ ಕಂಡಿತು!!
ಅನವರತ ಬರೆಯುತ್ತಿರಿ!!
ನನ್ನ ಕವಿತೆಗೆ ದೊರಕಿದ ಉತ್ತಮವಾದ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು. ಇನ್ನು ಮುಂದೆಯೂ ನಿಮ್ಮ ಪ್ರೋತ್ಸಾಹವನ್ನು ಬಯಸುತ್ತಿರುತ್ತೇನೆ.
Rashmi nice poem.. Keep it up
ನಗುವು ಸಹಜದ ಧರ್ಮ
ನಗಿಸುವುದು ಪರ ಧರ್ಮ
ನಗುವ ನಗಿಸುತ ನಗಿಸಿ
ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ-
ಎಂದವರು ಡಿ.ವಿ.ಜಿ. ಜೀವನವನ್ನು ನೋಡುವ ದೃಷ್ಟಿಯಲ್ಲಿ ನವಿರಾದ ಹಾಸ್ಯವನ್ನು ಬೆರೆಸಿಕೊಂಡು ಬಿಟ್ಟರೆ ಯಾವ ಕಷ್ಟಗಳೂ ನಮ್ಮನ್ನು ಕುಗ್ಗಿಸುವುದಿಲ್ಲ, ಅವಮಾನಗಳು ನಮ್ಮನ್ನು ನಿರ್ನಾಮ ಮಾಡುವುದಿಲ್ಲ. ಹಾಸ್ಯ ಶಾಕ್ ಅಬ್ಸಾರ್ವರ್ನಂತೆ ಆಘಾತಗಳನ್ನು ತಾಳಿಕೊಳ್ಳಬಲ್ಲ ಶಕ್ತಿಯನ್ನು ಕೊಡುತ್ತದೆ.
ಕನ್ನಡದಲ್ಲಿ ವೈವಿಧ್ಯಮಯ ಹಾಸ್ಯಕ್ಕಾಗಿ ಮೀಸಲಾದ ಬ್ಲಾಗ್ ‘ನಗೆ ನಗಾರಿ ಡಾಟ್ ಕಾಮ್’.
ವಿಳಾಸ: http://nagenagaaridotcom.wordpress.com/
ದಯವಿಟ್ಟು ಒಮ್ಮೆ ಇಲ್ಲಿ ಭೇಟಿಕೊಡಿ. ನಿಮ್ಮ ಮುಖದ ಮೇಲೆ ತೆಳುನಗೆಯ ಗೆರೆ ಮೂಡದಿದ್ದರೆ ಕೇಳಿ. ಇಷ್ಟವಾದರೆ ನಿಮ್ಮ ಬ್ಲಾಗ್ ಫೀಡಿನಲ್ಲಿ ಇದನ್ನು ಸೇರಿಸಿಕೊಳ್ಳಿ, ಮೆಚ್ಚುಗೆಯಾದರೆ ನಿಮ್ಮ ಇತರೆ ಗೆಳೆಯ, ಗೆಳತಿಯರಿಗೆ ಇದರ ಬಗ್ಗೆ ತಿಳಿಸಿ.
ನಗೆ ಸಾಮ್ರಾಟ್
Post a Comment