Posts

Showing posts from October, 2008

ಮೊಬೈಲ್ ಪ್ರೇಮ...

ಅವನು ಮತ್ತು ಅವಳು ಒಂದು ದಿನ ರೈಲಲ್ಲಿ ಪರಿಚಿತರಾದವರು. ತನ್ನ ಎದುರು ಸೀಟಿನಲ್ಲಿ ಕುಳಿತಿದ್ದ ಆಕೆ, ಸುಂದರಾಂಗನಾದ ಆತನನ್ನು ಕಣ್ಣೆತ್ತಿಯೂ ನೋಡದೆ ಮೊಬೈಲಿನಲ್ಲಿ ಆಟವಾಡುತ್ತಿದ್ದಳು. ಇತ್ತ ಅವನು FM ಹಾಕಿ ಹಾಡು ಕೇಳುತ್ತಾ ಇದ್ದ. FM ಹಾಡು,ಮೊಬೈಲ್ ಗೇಮ್ ಬೋರ್ ಅನಿಸಿದಾಗ ಅವರಿಬ್ಬರೂ ಮಾತಿಗಿಳಿದರು. ಆಕೆ ನಾಚಿಕೊಳ್ಳುತ್ತಾ ಮಾತನಾಡುತ್ತಿದ್ದಂತೆ ಆತ ತನ್ನ ಮೊಬೈಲ್ ನಂಬರ್ ನೀಡಿದ.ರೈಲು ದೂರ ದೂರ ಸಾಗುತ್ತಿದ್ದಂತೆ ಅವರಿಬ್ಬರೂ ಹತ್ತಿರವಾಗುತ್ತಿದ್ದರು. ಅವಳು ಇಳಿಯಬೇಕಾದ ಸ್ಟಾಪ್ ಸಮೀಪಿಸುತ್ತಿದ್ದಂತೆ ಅವಳ ಮೊಬೈಲ್ ನಿಂದ ಒಂದು missed call.ಅವರಿಬ್ಬರೂ ಪರಸ್ಪರ ಮಿಸ್ ಮಾಡಿಕೊಳ್ಳ ತೊಡಗಿದರು. ಸ್ಟಾಪ್ ಬಂತು ಆಕೆ ಇಳಿದು ಹೋದಳು.ಅವಳ missed callಗೆ ಅವ ಕಾಲ್ ಮಾಡಿದ.. ಹೀಗೆ ಆ ಜೋಡಿ ಹಲವಾರು ಬಾರಿ recharge ಮಾಡಿಸಿ ಗಂಟೆಗಟ್ಟಲೆ ಹರಟಿದರು.Inbox ಪ್ರೇಮ ಸಂದೇಶಗಳಿಂದ ತುಂಬಿ ತುಳುಕುವಾಗ,ಪ್ರೇಮದ ringtone ಅವರಿಬ್ಬರ ಮನದಲ್ಲಿ ರಿಂಗಣಿಸುತ್ತಿತ್ತು.ಹೀಗಿರುವಾಗ ಒಂದು ದಿನ ಆ ಜೋಡಿ Out of coverage areaದಲ್ಲಿ ಭೇಟಿಯಾದರು.ಅವನು ಆಕೆಯನ್ನು ಬಹಳವಾಗಿ ಪ್ರೀತಿಸುತ್ತಿರುವುದಾಗಿ ಭರವಸೆ ನೀಡಿದ. ಆಕೆ ಅವನ ಹೃದಯದಲ್ಲಿ ತನಗೆ Lifetime Validity ಇದೆ ಎಂದು ನಂಬಿದಳು. ಹೀಗೆ ಕಾಲ ಕಳೆಯಿತು...ನಂತರ ಇವಳ missed callಗೆ ಅವ ಕಾಲ್ ಮಾಡಲಿಲ್ಲ.ಇವಳು ಕಾಲ್ ಮಾಡಿದಳು..Call waiting...ಪುನಃ ಮಾಡಿದಳು..Number Busy... ತನ್ನೊಂದಿ