Posts

Showing posts from November, 2010

ಇವತ್ತು 'ಗಂಡಸರ ದಿನ' ಗೊತ್ತಾ?

ದೃಶ್ಯ 1 ಟೇಬಲ್ ಮೇಲಿರುವ ಪತ್ರವೊಂದನ್ನು ಅಪ್ಪ ತೆಗೆದು ಓದುತ್ತಾನೆ. ಕಣ್ಣೀರು ಸುರಿಸುತ್ತಾ, ನಡುಗುವ ಕೈಗಳಿಂದ ಆ ಪತ್ರವನ್ನು ಹಿಡಿದು ಅಮ್ಮೂ....ನೀನೇ ನನ್ನ ಬದುಕು ಕಣೇ...ಇವತ್ತು ನೀನು ಆ ವಿಶ್ವಾಸವನ್ನು ಕಳೆದುಕೊಂಡಿದ್ದೀಯಾ... ದೃಶ್ಯ -2 ಮನೆ ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋಗಲು ತೀರ್ಮಾನಿಸಿದ್ದ ಮಗಳು ಅಮ್ಮು...ಅಳುತ್ತಾ ಅರ್ಧ ದಾರಿಯಿಂದ ಮತ್ತೆ ಮನೆಗೆ ಬರುತ್ತಾಳೆ. ದೃಶ್ಯ-3 ಮನೆಗೆ ಬಂದವಳೇ ಅಪ್ಪನನ್ನು ತಬ್ಬಿಕೊಂಡು ಅಳುತ್ತಾಳೆ.... ಹಿನ್ನೆಲೆಯಲ್ಲಿ 'ವಿಶ್ವಾಸವೇ ಮಿಗಿಲು ಅಲ್ಲವೇ?' ಎಂಬ ಸ್ಲೋಗನ್್ನೊಂದಿಗೆ 'ಕಲ್ಯಾಣ್ ಜ್ಯುವೆಲ್ಲರ್ಸ್್'ನ ಜಾಹೀರಾತು ಟಿವಿ ಸ್ಕ್ರೀನ್್ನಲ್ಲಿ ಮೂಡಿಬರುತ್ತದೆ. (ನಾನು ಈ ಜಾಹೀರಾತು ನೋಡಿದ್ದು ಮಲಯಾಳಂ ವಾಹಿನಿಯಲ್ಲಿ, ಅದರ ಕನ್ನಡ ತರ್ಜುಮೆ ಇದು) ದೃಶ್ಯ-4 ಇದಾದ ನಂತರ ಕಾರಿನ ಪಕ್ಕ ತನ್ನ ಪ್ರೇಯಸಿಗಾಗಿ ಕಾಯುತ್ತಾ ನಿಂತಿರುವ ಹುಡುಗ... ಈ ದೃಶ್ಯ ಮಿಂಚಿ ಮರೆಯಾಗುತ್ತದೆ. ಅಪ್ಪನ ಬಳಿಗೆ ಹಿಂತಿರುಗಿ ಬಂದ ಮಗಳು ವಿಶ್ವಾಸ ಉಳಿಸಿಕೊಂಡಳಲ್ವಾ ಎಂದು ನಿಟ್ಟುಸಿರು ಬಿಟ್ಟು, ಜಾಹೀರಾತು ತಂತ್ರಕ್ಕೆ ಭೇಷ್ ಎನ್ನುವಾಗ ಕೊನೆಯ ದೃಶ್ಯದಲ್ಲಿ ಕಂಡು ಬರುವ ಆ ಹುಡುಗನನ್ನು ಯಾರೂ ಕ್ಯಾರೇ ಅನ್ನಲ್ಲ ಅಲ್ವಾ? ಆಕೆ ಆತನೊಂದಿಗೆ ಮಾಡಿದದ್ದು 'ವಿಶ್ವಾಸ ವಂಚನೆ' ಅಲ್ವಾ ಎಂಬುದು ಹುಡುಗರ ಪ್ರಶ್ನೆ! ಇದೊಂದು ಉದಾಹರಣೆಯಷ್ಟೇ. ಜಾಹೀರಾತು ವಿಷಯ ಬಿಟ್ಹಾಕಿ...