ರಜೆಗಾಗಿ ಪ್ರಾರ್ಥಿಸಿದ್ದ ದಿನಗಳಿವು...
ನಾವು ಚಿಕ್ಕವರಿರುವಾಗ ಮನೆಗೆ ಕ್ಯಾಲೆಂಡರ್ ತಂದರೆ ಮೊದಲು ಅದರಲ್ಲಿ ಎಷ್ಟು ಕೆಂಪು ಬಣ್ಣದ ದಿನಗಳಿವೆ ಎಂದು ಎಣಿಸುತ್ತಿದ್ದೆವು. ಈ ವರ್ಷ ಎಷ್ಟು ರಜೆ ಇದೆ? ಎಂದು ಎಣಿಸಲು ನಾನು ಮತ್ತು ನನ್ನ ತಮ್ಮ ಜಗಳವಾಡುತ್ತಿದ್ದೆವು. ಕೆಲವೊಂದು ಹಬ್ಬ, ಸರಕಾರೀ ರಜೆಗಳು ಆದಿತ್ಯವಾರ ಬಂದರೆ ಅಯ್ಯೋ ..ಒಂದು ರಜೆ ನಷ್ಟವಾಯಿತಲ್ಲಾ ಎಂಬ ಬೇಜಾರು ಬೇರೆ. 7ನೇ ಕ್ಲಾಸಿನವರೆಗೆ ಈ ಚಾಳಿ ಇರುತ್ತಿತ್ತು. ಹೈಸ್ಕೂಲ್್ಗೆ ತಲುಪಿದಾಗ ರಜೆ ದಿನದಲ್ಲೂ ಸ್ಪೆಷಲ್ ಕ್ಲಾಸ್ ಇರುತ್ತಿತ್ತು. ಕೆಲವೊಮ್ಮೆ ಸ್ಪೆಷಲ್ ಕ್ಲಾಸ್ ಖುಷಿ ತಂದರೆ ಇನ್ನೊಮ್ಮೆ ಬಾರೀ ತಲೆನೋವು ಆಗಿ ಬಿಡುತ್ತಿತ್ತು. ನಮ್ಮ ಮನೆಯಿಂದ ಹೈಸ್ಕೂಲ್್ಗೆ ಹೋಗಬೇಕಾದರೆ ಕಾಸರಗೋಡು ನಗರಕ್ಕೆ ಬಸ್ಸಲ್ಲಿ ಹೋಗಬೇಕು. ಆವಾಗ ಬಸ್ ಮುಷ್ಕರ ಬಂದರೆ ಬಾರೀ ಸಂತೋಷ. ಹಾಗೆ ಒಂದು ರಜೆ ನಮಗೆ ಸಿಗುತ್ತಿತ್ತು. ನಮ್ಮ ರಾಜ್ಯದಲ್ಲಂತೂ ಆಗಾಗ ಮುಷ್ಕರಗಳು ನಡೆಯುತ್ತಲೇ ಇರುವುದರಿಂದ ಒಂದಷ್ಟು 'ಮುಷ್ಕರ ರಜೆ'ಗಳೂ ನಮ್ಮ ಪಾಲಿಗೆ ಒದಗುತ್ತಿತ್ತು. ನಾನಂತೂ ಯಾವಾಗಲೂ ರಜೆಗಾಗಿಯೇ ಕಾಯುತ್ತಿದ್ದೆ. ಇದು ಮಾತ್ರವಲ್ಲದೆ ನಮ್ಮ ಮನೆಯಿಂದ ಕಾಸರಗೋಡಿಗೆ ಹೋಗಬೇಕಾದರೆ ಎರುದುಂಕಡವ್ ಎಂಬ ಹೊಳೆಯೊಂದನ್ನು ದಾಟಿ ಹೋಗಬೇಕು. ಆ ಹೊಳೆಗೆ ಸೇತುವೆಯೇನೋ ಇದೆ ನಿಜ ಆದರೆ ಮಳೆಗಾಲದಲ್ಲಿ ಸೇತುವೆ ಮೇಲೆ ನೀರು ಉಕ್ಕಿ ಹರಿಯುವುದರಿಂದಾಗಿ ಯಾವುದೇ ವಾಹನಗಳಿಗೆ ಅತ್ತ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಇನ್ನೊಂದು ದಾರಿಯಿದ್ದರೂ ಅದರಲ್ಲಿ ಬಸ್್ಗಳ...