Posts

Showing posts from December, 2010

ಕಾಲಕ್ಕೆ ಸರಿದ ಥ್ರಿಲ್ಲಿಂಗ್ ಘಟನೆಗಳು....

ಮ ತ್ತೆ ಬಂದಿದೆ ಹೊಸ ವರುಷ. ಎಷ್ಟು ಬೇಗ ವರ್ಷ ಕಳೆದು ಹೋಯಿತಲ್ಲಾ ಎಂದು ಹೇಳುವುದು ಸಾಮಾನ್ಯವೇ. ಇನ್ನು ಮುಂದಿನ ವರ್ಷ ಏನೇನು ಮಾಡಬೇಕೆಂಬುದರ ಬಗ್ಗೆ ಯೋಚಿಸುವುದು ಸಾಮಾನ್ಯವೇ ಆದರೆ ಆ ಯೋಜನೆ ಕಾರ್ಯಗಳು ಕೈಗೂಡಿವೆಯೇ? ಎಂದು ಯೋಚಿಸಿದರೆ ಹೆಚ್ಚಿನ ಯೋಜನೆಗಳಿಗೆ 'ಇಲ್ಲ' ಎಂಬ ಉತ್ತರವೇ ಲಭಿಸುತ್ತದೆ. ನನ್ನ ವೈಯಕ್ತಿಕ ವಿಚಾರಗಳ ಬಗ್ಗೆ ಹೇಳುವುದಾದೆ ಈ ವರ್ಷ ಹಲವಾರು ಅನುಭವಗಳನ್ನು ನೀಡಿದೆ. 2010 ಜನವರಿಯಲ್ಲಿ ನನ್ನ ಕವನ ಸಂಕಲನ ಬಿಡುಗಡೆಗೊಳಿಸುವ ಮೂಲಕ ಹೊಸ ವರುಷಕ್ಕೆ ಭರ್ಜರಿ ಆರಂಭ ನೀಡಿದ್ದೆ. ನಂತರ ಕಾಲದೊಂದಿಗೆ ಸಿಹಿ ಕಹಿ ಘಟನೆಗಳು ಘಟಿಸಿ ಹೋದವು. ಕೆಲವೊಂದು ಘಟನೆಗಳು ಮನಸ್ಸಲ್ಲಿ ಮಾಸದೆ ಉಳಿದಿವೆ. ಕೆಲವೊಂದು ಜೀವನದಲ್ಲಿ ಮೊದಲಸಲ ಎನ್ನುವವು. ಇನ್ನು ಕೆಲವು ಮಾಡಿದ ತಪ್ಪನ್ನೇ ಮತ್ತೆ ಮಾಡುತ್ತಿದ್ದೆ ಎಂದು ಅನಿಸುವಂತವುಗಳು. ಇವುಗಳಲ್ಲಿ ಕೆಲವು ಥ್ರಿಲ್ಲಿಂಗ್ ಅಂತಾ ಅನಿಸುವ ಕೆಲವು ಘಟನೆಗಳೂ ಇವೆ. ಅವುಗಳು... 1.ಸಿಗ್ನಲ್ ಜಂಪ್ ಮಾಡಿದ್ದು (ಪೋಲಿಸ್ ಕಣ್ತಪ್ಪಿಸಿ) 2. ಟ್ರಾಫಿಕ್ ಜಾಮ್್ನಲ್ಲಿ ಒದ್ದಾಡಿ ಸುಸ್ತಾದಾಗ ಫ್ಲ್ಲಾಟ್್ಫಾರಂನಲ್ಲಿ ಗಾಡಿ ಓಡಿಸಿಕೊಂಡು ಬಂದದ್ದು (ಇನ್ಯಾರೋ ಫ್ಲಾಟ್್ಫಾರಂ ಮೇಲೆ ಗಾಡಿ ಓಡಿಸಿದ್ರೆ ನಂಗೆ ಕೋಪ ಬರುತ್ತೆ) 3. ನಂದಿಬೆಟ್ಟದ 'ಡೇಂಜರ್್' ಎಂದು ಬರೆದಿರುವ ಪ್ರದೇಶದಲ್ಲಿ ಹೋಗಿ ಫೋಟೋ ತೆಗೆಸಿಕೊಂಡದ್ದು ( ಭಯ ಆದ್ರೂ ಚಾಲೆಂಜ್ ಹಾಕಿದ ಕಾರಣ ಮಾತ್ರ ಅಲ್ಲಿಗೆ ಹೋದದ್ದು)