ಮತ್ತೆ ಬ್ಲಾಗ್ ಬಾಗಿಲು ತೆರೆದಿದ್ದೇನೆ...

ಬದುಕು ಆ ಕ್ಷಣಕ್ಕೆ ಖಾಲಿ ಖಾಲಿ ಅನಿಸಿಬಿಡುತ್ತದೆ.ಗುರುವೋ ಗುರಿಯೋ ಇಲ್ಲದಂತೆ ಕಾಣುತ್ತದೆ.ಮುಂದೇನು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಎಲ್ಲಿಗೆ ಹೋಗಬೇಕು, ಎಲ್ಲಿ ನಿಲ್ಲಬೇಕು ಎಂಬ ಯಾವುದೇ ನಿರ್ಧಾರವಿಲ್ಲದೆ ಅದೊಂದು ಪಯಣ.ಕುಟುಂಬದಲ್ಲಿನ ಆಪ್ತರ ಅಗಲಿಕೆ ಬದುಕನ್ನು ನಲುಗಿಸಿ ಬಿಟ್ಟಿತ್ತು. ಒಂದಷ್ಟು ದಿನ ಅತ್ತು ಮತ್ತೆ ಕಣ್ಣೀರು ಒರೆಸಿ ನಿತ್ಯ ಕಾಯಕಕ್ಕೆ. ಎಲ್ಲ ನೋವುಗಳನ್ನು ನುಂಗಿ ನಗುವುದೆಷ್ಟ ಕಷ್ಚ. ಮನೆಯಲ್ಲಿ ಸೂತಕದ ಛಾಯೆ. ಎಲ್ಲರ ಮುಖದಲ್ಲೂ ದುಃಖ ,ಅವರಲ್ಲಿ ನನ್ನ ದುಃಖವನ್ನು ತೋಡಿಕೊಳ್ಳುವುದಾದರೂ ಹೇಗೆ? ಈ ಬದುಕು ನಶ್ವರ, ಹುಟ್ಟಿದವರು ಒಂದು ದಿನ ಸಾಯಲೇ ಬೇಕು ಎಂಬುದು ನಿತ್ಯ ಸತ್ಯ. ಆದರೆ ಸಾವು ಅದನ್ನು ಅರಗಿಸಿಕೊಳ್ಳುವುದು ಕಷ್ಟದ ವಿಷಯ. ಕೆಲಸದಲ್ಲಿ ತಲ್ಲೀನರಾಗಿದ್ದು ಬಿಟ್ಟರೆ ನೋವು ಗೊತ್ತಾಗುವುದಿಲ್ಲ. ಆದರೆ ಅದರ ನಡುವೆ ಸಿಕ್ಕ ಗ್ಯಾಪ್ ನಲ್ಲಿ ಆ ಸಾವು-ನೋವು ಚುಚ್ಚಿ ಬಿಡುತ್ತದೆ. ಇವತ್ತು ನಮ್ಮ ಜತೆ ಇದ್ದವರು ಮತ್ತೆ ಇಲ್ಲ, ಅವರು ತಿರುಗಿ ಬರುವುದೇ ಇಲ್ಲ ಎಂದು ಮನಸ್ಸಿಗೆ ಹೇಳುತ್ತಾ ಇದ್ದರೂ ಕಾಯುವಿಕೆ ಕಣ್ಣುಗಳಲ್ಲಿ ನೀರು ತುಂಬಿಸುತ್ತದೆ. ಈ ಜಗತ್ತೇ ಬೇಡ ಎಂದು ಕಿರುಚಿ ಹೇಳುವುದೋ, ಈ ಬದುಕು ಸಾಕಾಗಿದೆ ಎಂದು ಬಿಕ್ಕಿ ಬಿಕ್ಕಿ ಅಳುವುದೋ...ಇದನ್ನು ಗೊಂದಲವೆನ್ನಲೋ ಮನಸ್ಸಿನ ನೋವು ಎನ್ನಲೋ. ಕತ್ತಲೆ ಕೋಣೆಯೊಂದರಲ್ಲಿ ನನ್ನನ್ನು ಬಂಧಿಸಿಟ್ಟ ಸ್ಥಿತಿ. ಕಿರುಚಿದ್ದು, ಅತ್ತಿದ್ದು ಕೂಗಿದ್ದು ಯಾರಿಗೂ ಕೇಳಿಸುವುದ