Posts

Showing posts from January, 2013

ಮದರಂಗಿ ಪುರಾಣ

Image
ಕೈ ಗಳಿಗೆ ಮದರಂಗಿ ಹಚ್ಚಿ ಸಿಂಗರಿಸುವುದು ಯಾರಿಗೆ ಇಷ್ಟ ಇಲ್ಲ ಹೇಳಿ? ಚಿಕ್ಕಂದಿನಿಂದಲೂ ನನಗೆ ಕೈ ಕಾಲಲ್ಲಿ ಮದರಂಗಿ ಚಿತ್ತಾರ ಬಿಡಿಸುವುದೆಂದರೆ ತುಂಬಾ ಇಷ್ಟ. ಕೃಷ್ಣವರ್ಣವಾಗಿರುವುದರಿಂದ ನನ್ನ ಕಾಲಲ್ಲ ಕೆಂಪು ಬಣ್ಣ ಎದ್ದು ಕಾಣುತ್ತಿರಲಿಲ್ಲ...ಆದ್ರೆ ಅಂಗೈ ತುಂಬಾ ಕೆಂಪು ಕೆಂಪು ಚಿತ್ತಾರ. ಅದೂ ಎರಡೂ ಕೈಗೆ. ಎರಡೂ ಕೈಗಳಿಗೆ ಮದರಂಗಿ ಹಚ್ಚಿದ್ದನ್ನು ನೋಡಿ ಗೆಳತಿಯರು ನೀನೇನು ಮದುಮಗಳಾ? ಎಂದು ಕೇಳಿದರೆ ಐ ಡೋಂಟ್ ಕೇರ್. ಮದರಂಗಿಯ ಕೆಂಪು, ಕಂಪು ನನಗೆ ಖುಷಿ ಕೊಡುತ್ತದೆ ಎಂದಾದರೆ ನಾನ್ಯಾಕೆ ಇಂಥಾ ಪ್ರಶ್ನೆಗಳಿಗೆ ತಲೆ ಕೆಡಿಸಿಕೊಳ್ಳಲಿ? ಜನ್ಮಾಷ್ಟಮಿ ಬಂದರಂತೂ ಕೈಯಲ್ಲಿ ಮೆಹಂದಿ ಇರಲೇ ಬೇಕು. ಇನ್ನು ಸಂಬಂಧಿಕರ ಮದುವೆ ಹೋಗುವಾಗ ಕೈಯಲ್ಲಿ ಮದರಂಗಿ ಇಲ್ಲದೇ ಇದ್ದರೆ ಹೇಗೆ? ಏನಿದ್ದರೂ ಮೆಹಂದಿ ಹಚ್ಚಿಕೊಳ್ಳುವ ಸಂಭ್ರಮ, ಆ ಚಿತ್ತಾರದ ಸೊಬಗನ್ನು ನೋಡಿ ಆಸ್ವಾದಿಸುವ ಪರಿ ಇದೆಲ್ಲವೂ ಪದಗಳಿಗೆ ನಿಲುಕದ್ದು.. ಈಗಿನ ಜಮಾನದ ಮಕ್ಕಳಂತೆ ನಾವು ಚಿಕ್ಕವರಿರುವಾಗ ಮೆಹಂದಿ cone ಬಳಸುತ್ತಲೇ ಇರಲಿಲ್ಲ. ಮನೆಯ ಮುಂದೆ ಮದರಂಗಿ ಗಿಡ ಇತ್ತು. ಅದರ ಎಲೆ ಕೊಯ್ದು...ನುಣ್ಣನೆ ಅರೆದು ಅದಕ್ಕೆ ಅಳೆದು ತೂಗಿ ನೀರು ಹಾಕಿ ಕೈಗೆ ಮೆತ್ತುತ್ತಿದ್ದೆವು. ಮದರಂಗಿ ಕೆಂಪಾಗಲಿ ಎಂದು ಅದಕ್ಕೆ ಚಹಾ Decoction ಹಾಕ್ತಿದ್ದೆವು. ಇಲ್ಲದೇ ಇದ್ದಲ್ಲಿ ಮೆಹಂದಿ ಒಣಗುತ್ತಿದ್ದಂತೆ ಸಕ್ಕರೆ ನೀರು ಇಲ್ಲವೇ ಲಿಂಬೆ ಹುಳಿ ಹಿಂಡುತ್ತಿದ್ದೆವು. ಅಕ್ಕ ಹಾಸ್ಟೆಲ್್ನಲ್ಲ