Posts

Showing posts from July, 2011

ಯಾಕೋ ಹಳೆಯದೆಲ್ಲಾ ನೆನಪಾಗುತಿದೆ...

ಇಂ ಜಿನಿಯರಿಂಗ್ ಓದುತ್ತಿದ್ದ ಕಾಲದಲ್ಲಿ ಬೆಂಗಳೂರು ನಮ್ಮ ಕನಸಿನ ಊರಾಗಿತ್ತು. ಕಲಿಕೆಯಲ್ಲಿ ಅಷ್ಟೇನೂ ಮುಂದೆ ಇಲ್ಲದಿದ್ದರೂ ಹೇಗಾದರೂ ಪರೀಕ್ಷೆಯಲ್ಲಿ 'ಬಚಾವ್್' ಆಗಿ ಎದ್ದು ನಿಲ್ಲುತ್ತಿದ್ದೆ. ಅಂತಿಮ ವರ್ಷ ಕ್ಯಾಂಪಸ್ ಇಂಟರ್್ವ್ಯೂನಲ್ಲಿ ನನ್ನ ಬುದ್ಧಿವಂತ ಗೆಳೆಯರೆಲ್ಲ ಪಾಸಾದಾಗ ನಾವು ಕಂಗ್ರಾಟ್ಸ್ ಹೇಳುವ ಗುಂಪಿನಲ್ಲಿ ನಿಲ್ಲಬೇಕಾಗಿ ಬಂತು. ನನ್ನ ಹಾಗೆಯೇ ಎಂಟು ಹುಡುಗಿಯರು ನಮ್ಮ ಗ್ಯಾಂಗ್್ನಲ್ಲಿದ್ದರು. ಕೆಲಸ ಗಿಟ್ಟಿಸಿಕೊಳ್ಳಬೇಕೆಂದು ನಾವು ಕಂಪನಿಗಳಿಗೆ ರೆಸ್ಯೂಮೆ ಫಾರ್ವ್್ರ್ಡ್ ಮಾಡುತ್ತಿರಬೇಕಾದರೆ ನಿಮಗೆ ಯಾಕೆ ಕೆಲಸ? ಹೇಗಾದರೂ ಸಾಫ್ಟ್್ವೇರ್ ಇಂಜಿನಿಯರ್ ಒಬ್ಬ ಮದುವೆ ಆಗುತ್ತಾನೆ. ಆಮೇಲೆ ಗಂಡ, ಮನೆ ಮಕ್ಕಳು ಅಂತಾ ಲೈಫ್ ಕಳೆದುಹೋಗಿ ಬಿಡುತ್ತೆ ಎಂದು 'ಬಿಟ್ಟಿ' ಉಪದೇಶ ನೀಡುವ ಹುಡುಗರಿಗೂ ಏನೂ ಕಮ್ಮಿಯಿರಲಿಲ್ಲ. ಇಂಟರ್್ವ್ಯೂನಲ್ಲಿ ಪಾಸಾಗುವ ಅರ್ಹತೆ ನಮಗಿರಲಿಲ್ಲವೋ, ನಮ್ಮನ್ನು ಆಯ್ಕೆ ಮಾಡುವ ಅರ್ಹತೆ ಅವರಿಗಿರಲಿಲ್ಲವೋ ಅಂತೂ ನಮ್ಮ ಬೆಂಗಳೂರು ಕನಸು ಕನಸಾಗಿಯೇ ಉಳಿದಿತ್ತು. ಬೆಂಗಳೂರು ಹೋಗಿ ಅಲ್ಲಿ ಕೆಲಸ ಹುಡುಕೋಣ ಎಂದರೆ ಅಷ್ಟೊಂದು ದುಡ್ಡು ಇರಬೇಕಲ್ವಾ? ಕೆಲವೊಮ್ಮೆ ಕೆಲಸ ಸಿಕ್ಕದೇ ಇದ್ದರೆ? ಮನಸ್ಸಲ್ಲಿ ನೂರಾರು ಚಿಂತೆಗಳು. ಕಾಲೇಜಿನಲ್ಲಿರುವಾಗ ಉತ್ತರ ಭಾರತದಿಂದಲೋ ಇನ್ನಾವುದೋ ರಾಜ್ಯದಿಂದ ಬಂದ ಮಕ್ಕಳು ಇಂಗ್ಲಿಷ್್ನಲ್ಲಿ ಮಾತನಾಡಿದರೆ, ಇದು ಕೇರಳ. ನಮ್ಮ ರಾಜ್ಯ ಇಲ್ಲಿ ಮಲಯಾಳಂ ಕಲಿತುಕೊಳ್ಳಿ ಎ

ನನ್ನದೂ ಒಂದು

ನೂ ರು ರುಪಾಯಿಗೆ ಸಿಕ್ಕ ಫ್ಯಾಷನ್ ಚಪ್ಪಲಿ ಮೆಟ್ಟಿ, ಅದೇ ಜೀನ್ಸು, ಮೇಲೊಂದು ಟೀ ಶರ್ಟು ಮತ್ತೊಂದು ಬ್ಯಾಗು, ಪರ್ಸ್... ಬಿಎಂಟಿಸಿಯಲ್ಲಿ ಹೈ ಹೀಲ್ಡ್ ಚಪ್ಪಲಿ ತುಳಿತಕ್ಕೆ ಚೀರಿ, ನೂಕು ನುಗ್ಗಲಲ್ಲಿ ಚಡಪಡಿಸಿ ಬಿದ್ದು ಏಳುತಿದೆ ಬದುಕು... ಅವಸರದಲ್ಲಿ ಅರ್ಧಂಬರ್ಧ ತಿಂದ ತಿಂಡಿ ಬಸ್ಸಲ್ಲೇ ಜೀರ್ಣವಾಗಿ ಹೊಸ ಕನಸುಗಳು ಮತ್ತೆ ಚಿಗುರುತ್ತಿವೆ ಮನಸ್ಸಲ್ಲಿ ದಾರಿಯಂಗಡಿಗಳಲ್ಲಿ ತೂಗು ಹಾಕಿದ ಟೀ ಶರ್ಟು, ಸಲ್ವಾರುಗಳು ಕೈ ಬೀಸಿ ಕರೆಯುತ್ತಿವೆ... ನೂರು ರುಪಾಯಿ ಇಡಿ ನೋಟು ಬಸ್ ಪಾಸು, ಐಡಿ ಕಾರ್ಡಿನ ನಡುವೆ ಬೆಚ್ಚನೆ ಕುಳಿತಿರಲು ಹಳೇ ರಸೀದಿ ತುಂಡುಗಳು ನಡುಗ ತೊಡಗಿದ್ದವು ಒಂದರ ಹಿಂದೆ ಮತ್ತೊಂದರಂತೆ! ಕಾಯಬೇಕಾಗಿದೆ ತಿಂಗಳ ಪಗಾರಕ್ಕೆ ಮನೆಗೆ ಕಳುಹಿಸಬೇಕಾಗಿದೆ ಒಂದಿಷ್ಟು ಮೊತ್ತ ಮನೆ ಬಾಡಿಗೆ, ಕ್ರೀಮು, ಪೌಡರು ಒಂದಷ್ಟು ಮ್ಯಾರಿ ಬಿಸ್ಕತ್ತು! ಪಟ್ಟಿ ಬೆಳೆಯುತ್ತಿದ್ದರೆ ಹಣ ಕುಗ್ಗುತ್ತಿತ್ತು ಜೇಬಲ್ಲಿ ಕೊನೆಗೂ 'ಪಟ್ಟಿ'ಯಲ್ಲಿ ಕೆಲವೊಂದನ್ನು ಕಳೆದು, ಉಳಿದದ್ದನ್ನು ಕೂಡಿಸಿ ಹೇಗೋ 'ಅಡ್ಜೆಸ್ಟ್' ಮಾಡಿ ಮುಂದಿನ ಪಗಾರಕ್ಕಾಗಿ ದಿನ ಎಣಿಕೆ ಶುರುವಾಗಿದೆ...

ನಮ್ಮೂರ ಗೋರ್ಮೆಂಟು ಬಾವಿ

" ಊ ರಿಗೊಬ್ಬಳೇ ಪದ್ಮಾವತಿ" ಎಂಬಂತೆ ನಮ್ಮೂರಲ್ಲೂ ಒಂದು ಸರ್ಕಾರಿ ಬಾವಿ ಇದೆ. ಸರ್ಕಾರಿ ಬಾವಿ ಎಂದು ಯಾರು ಹೇಳಲ್ಲ...ಎಲ್ಲರೂ ಅದನ್ನು ಗೋರ್ಮೆಂಟು ಬಾವಿ ಎಂದೇ ಹೇಳೋದು. ನಮ್ಮೂರಿನ ಜನರ ದಾಹ ತೀರಿಸುವ ಏಕೈಕ ಜಲನಿಧಿ ಇದು. ಊರ ಮಧ್ಯೆ ಸಿಮೆಂಟು ಕಟ್ಟೆಯ ಈ ಬಾವಿಯ ಪಕ್ಕವೇ ಸಿಮೆಂಟಿನ ಒಂದು ಸಣ್ಣ ಟ್ಯಾಂಕ್ ಕೂಡ ಇದೆ. ನೀರು ಸೇದೋಕೆ ಬಂದೋರು ಯಾರಾದ್ರೂ ಆ ಟ್ಯಾಂಕ್್ಗೆ ಒಂದು ಕೊಡ ನೀರು ಹಾಕಿ ಬಿಟ್ಟರೆ ಅಲ್ಲಿರುವ ಪ್ರಾಣಿ ಪಕ್ಷಿಗಳ ದಾಹವೂ ಇಂಗುತ್ತದೆ. ಗೋರ್ಮೆಂಟು ಬಾವಿ ಅಂದರೆ ಇನ್ನು ಹೇಳಬೇಕೆ? ಸ್ವಂತ ಮನೆ ಕಟ್ಟಿ ಬಾವಿ ತೋಡುವವರೆಗೂ, ಮನೆಯ ಬಾವಿಯಲ್ಲಿ ನೀರು ಬತ್ತಿದಾಗಲೂ ನೆನಪಾಗುವುದೇ ಈ ಬಾವಿ. ಈವಾಗ ಮನೆಗೊಂದು ಬೋರ್್ವೆಲ್ ಜತೆಗೆ ಪಂಚಾಯತ್ ವತಿಯಿಂದ ಮನೆ ಮನೆಗೆ ನೀರು ಸೌಕರ್ಯವಿರುವುದರಿಂದ ಬಾಡಿಗೆ ಮನೆಯಲ್ಲಿ ವಾಸವಿರುವವರೇ ಈ ಬಾವಿಯ ಗಿರಾಕಿಗಳು. ಬೆಳಗ್ಗೆ ಬೆಳಕು ಮೂಡುತ್ತಲೇ ನೀರೆಯರು ಬಾವಿಯತ್ತ ಧಾವಿಸುತ್ತಾರೆ. ಚಾ ಆಯ್ತಾ? ತಿಂಡಿ ಏನು? ಎಂಬ ಒನ್ ಲೈನ್ ಪ್ರಶ್ನೆಗೆ ಒಂದೇ ಪದದಲ್ಲಿ ಉತ್ತರಿಸಿ ನೀರು ಸೇದಿ ಗಡಿಬಿಡಿಯಲ್ಲಿ ನೀರು ಕೊಂಡೊಯ್ಯುವುದು ಬೆಳಗ್ಗಿನ ವಿಶೇಷ . ಮಧ್ಯಾಹ್ನದ ವೇಳೆಗೆ ಬಾವಿಕಟ್ಟೆಯ ಸುತ್ತಲೂ ತಟ ಪಟ ಅಂತಾ ಬಟ್ಟೆ ಒಗೆಯುವವರೇ ಜಾಸ್ತಿ. ಅಲ್ಲೇ ಬಟ್ಟೆ ಒಗೆದು ಪಕ್ಕದಲ್ಲಿರುವ ಮರಗಳ ಕೊಂಬೆಗಳಿಗೆ ಹಗ್ಗ ಕಟ್ಟಿಯೋ, ಇಲ್ಲದಿದ್ದರೆ ಅಲ್ಲೇ ಪಾರೆಕಲ್ಲಿನ ಮೇಲೆ ಬಟ್ಟೆ ಒಣಗಿಸಿ ಮನೆಗೆ ಮರಳುವವರೇ ಜಾ