Posts

Showing posts with the label ಪ್ರೀತಿ

ಮಗಳು ಫೋನ್ ಮಾಡಿದ್ಳು...ಇವತ್ತು ಅಪ್ಪಂದಿರ ದಿನ ಅಂತೆ

Image
ಹಲೋ ಪಪ್ಪಾ....ಇವತ್ತು ಅಪ್ಪಂದಿರ ದಿನ...ಹ್ಯಾಪಿ ಫಾದರ್ರ್ಸ್ ಡೇ" ಹೌದೇನಮ್ಮಾ...ಥ್ಯಾಂಕ್ಯೂ...ಅಂತೂ ಅಪ್ಪನಿಗೂ ಒಂದು ದಿನ ಇದೆಯಲ್ಲಾ ಎಂದು ಹೇಳಿದೆ. ಹೇಗಿದ್ದೀರಾ ಪಪ್ಪಾ? ಎಂದು ಕೇಳಿ, ಪಪ್ಪಾ... ಅಮ್ಮನಿಗೆ ಫೋನ್ ಕೊಡು ಎಂದು ಅಂದ್ಳು... ಅಷ್ಟೊತ್ತಿಗೆ ನನ್ನಾಕೆ ನನ್ನ ಬಳಿ ಬಂದು ನಿಂತಿದ್ದಳು. ಫೋನ್ ಆಕೆಯ ಕೈಗಿತ್ತು ನಾನು ಟೀವಿ ಮುಂದೆ ಕೂತೆ. ಅಮ್ಮ ಮಗಳು ಸುಮಾರು ಅರ್ಧ ಗಂಟೆಯವರೆಗೆ ಹರಟುತ್ತಲೇ ಇದ್ದರು. ಹೌದು, ನನ್ನ ಪುಟ್ಟಿ ಚಿಕ್ಕವಳಿರುವಾಗ ಅವಳಿಗೆ ಎಲ್ಲವೂ ನಾನೇ ಆಗಿದ್ದೆ. ನನ್ನನ್ನು ಬಿಟ್ಟು ಆಕೆ ಎಲ್ಲಿಯೂ ಹೋಗಲ್ಲ. ಪಪ್ಪಾ..ಪಪ್ಪಾ ಎನ್ನುತ್ತಾ ನನ್ನ ಕಿರು ಬೆರಳು ಹಿಡಿದು ನಡೆದ ಮಗಳು ಈಗ ದೊಡ್ಡವಳಾಗಿದ್ದಾಳೆ. ಹೆಣ್ಮಕ್ಕಳು ಎಷ್ಟು ಬೇಗ ಬೆಳೆದು ಬಿಡ್ತಾರೆ ಅಲ್ವಾ? ನನ್ನ ಚಪ್ಪಲಿಯೊಳಗೆ ಅವಳ ಪುಟ್ಟ ಪಾದಗಳನ್ನು ತುರುಕಿ ಹೆಜ್ಜೆಯಿಡುತ್ತಾ, ನನ್ನ ಶರ್ಟ್ ಹಾಕಿ ದೊಗಳೆ ಶರ್ಟ್್ನೊಳಗೆ ನಿಂತು "ನೋಡು ಪಪ್ಪಾ ನಿಮ್ಮ ತರಾನೇ ಕಾಣ್ತಾ ಇಲ್ವಾ?" ಎಂದು ಕೇಳುತ್ತಿದ್ದ ಮಗಳು....ನಿದ್ದೆ ಮಾಡುವಾಗಲೂ ಅಷ್ಟೇ...ನನ್ನ ಪಕ್ಕದಲ್ಲೇ ಮಲಗಿ ಒಮ್ಮೊಮ್ಮೆ ನನ್ನ ಹೊಟ್ಟೆ ಮೇಲೆ ಮಲಗಿ ಉಚ್ಚೆ ಹೊಯ್ದು ಒದ್ದೆಯಾಗಿಸುತ್ತಿದ್ದ ನನ್ನ ಪುಟ್ಟಿಗೆ ಈಗ ಮದುವೆ ವಯಸ್ಸು. ಚಿಕ್ಕವಳಿದ್ದಾಗ ಅವಳು ಕೇಳಿದ್ದನ್ನೆಲ್ಲಾ ನಾನು ಕೊಡಿಸುತ್ತಿದ್ದೆ. ಹಾಗಂತ ಅವಳು ಪಪ್ಪಾ...ನನಗೆ ಅದು ಕೊಡಿಸು, ಇದು ಕೊಡಿಸು ಎಂದು ಹಠ ಹಿಡಿದವಳ...

ಪ್ರೀತಿ, ಸಿನಿಮಾ ಮತ್ತು ಫೇಸ್ ಬುಕ್

Image
ಶೀ ರ್ಷಿಕೆ ನೋಡಿದ ಕೂಡಲೇ ವಿಷಯ ಏನೂಂತಾ ನಿಮಗೆ ಗೊತ್ತಾಗಿರಬೇಕು ಅಲ್ವಾ? ಹೌದು ಇವತ್ತು ವ್ಯಾಲೆಂಟೈನ್ಸ್ ಡೇ(ಪ್ರೇಮಿಗಳ ದಿನ). ಪಾಶ್ಚಾತ್ಯರಿಂದ ಬಳುವಳಿಯಾಗಿ ಸಿಕ್ಕ ಈ ಆಚರಣೆ ಭಾರತದಲ್ಲಿ ಇಂದು ಗಣರಾಜ್ಯೋತ್ಸವ, ಶಿವರಾತ್ರಿಯಷ್ಟೇ ಪ್ರಾಮುಖ್ಯತೆಯನ್ನು ಪಡೆದಿದೆ ಎಂದರೆ ತಪ್ಪಾಗಲಾರದು. ಪ್ರೇಮಿಗಳ ದಿನ ಎಂದ ಕೂಡಲೇ ಪ್ರೀತಿಸಲು ಪ್ರತ್ಯೇಕ ದಿನ ಬೇಕಾ? ಅದೊಂದಿನ ಪ್ರೀತಿ ಮಾಡಿದರೆ ಸಾಕಾ? ಕೆಂಪು ಗುಲಾಬಿ ಕೊಟ್ಟು ಐ ಲವ್ ಯೂ ಅಂತಾ ಹೇಳಿ ಇಲ್ಲವೇ ದುಬಾರಿ ಗಿಫ್ಟ್, ಕಾರ್ಡ್ ಕೊಟ್ಟು ಪಾರ್ಕ್ ಸಿನಿಮಾ ಸುತ್ತಾಡಿ ವ್ಯಾಲೆಂಟೈನ್ಸ್ ಡೇ ಆಚರಿಸುವ ಪಾಶ್ಚಾತ್ಯರ ಪ್ರೇಮದ ಹುಚ್ಚು ಭಾರತೀಯರಾದ ನಮಗ್ಯಾಕೆ ಬೇಕು? ಎಂಬ ಪ್ರಶ್ನೆ ಪ್ರತೀ ವ್ಯಾಲೆಂಟೈನ್ಸ್ ಡೇ ದಿನದಂದು ಕೇಳಿ ಬರುತ್ತದೆ. ಈ ಬಗ್ಗೆ ಮಾಧ್ಯಮಗಳು ಸಾಕಷ್ಟು ಚರ್ಚೆಗಳನ್ನು ನಡೆಸಿದರೆ, ಕೆಲವೊಂದು ಸಂಘಟನೆಗಳು ವ್ಯಾಲೆಂಟೈನ್ಸ್ ಡೇ ವಿರೋಧಿಸಿ ಎಂಬ ಘೋಷಣೆಗಳನ್ನು ಕೂಗುತ್ತವೆ. ಆದರೂ ಭಾರತದಲ್ಲಿ ವ್ಯಾಲೆಂಟೈನ್ಸ್ ಆಚರಣೆ ಮುಂದುವರಿಯುತ್ತಲೇ ಇದೆ. ಯಾಕೆಂದರೆ ಇಂತಹ ಚರ್ಚೆ, ಪ್ರತಿಭಟನೆಗಳಿಂದಲೇ ವ್ಯಾಲೆಂಟೈನ್ಸ್ ಡೇ ಇನ್ನಷ್ಟು ಪ್ರಚಾರ ಗಿಟ್ಟಿಸಿಕೊಂಡಿವೆ ಎಂದರೆ ತಪ್ಪಾಗಲಾರದು. ಪ್ರತೀವರ್ಷ ಫೆ.14 ಬಂತೆಂದರೆ ಸಾಕು...ಪಾರ್ಕ್, ಸಿನಿಮಾ ಹಾಲ್ ಎಲ್ಲೆಡೆಯೂ ಪ್ರೇಮಿಗಳ ಕಲರವ. ಪ್ರೀತಿಯ ಮೆಸೇಜ್್ಗಳಿಂದ ತುಂಬಿ ತುಳುಕುವ ಐನ್್ಬಾಕ್ಸ್, ಈ ಮೇಲ್, ಗಿಫ್ಟ್... ಬೆಳಗ್ಗಿನಿಂದ ರಾತ್ರಿ ವರೆಗಿನ ಸಮಯ...

ಪ್ರೀತಿ ಹನಿ

ಪ್ರೀತಿ ಹನಿಯೇ...ಇನ್ನೇನು ಜಾರಿ ಬಿಡಬೇಕೆಂದಿರುವೆಯಾ ನನಗಾಗಿ ನಿಲ್ಲು ಅಲ್ಲೇ ಒಂದಿಷ್ಟು ಹೊತ್ತು ನಿನ್ನ ಕಣ್ಣೀರಿನೊಳು ತುಳುಕಲಿ ನನ್ನ ಪ್ರೀತಿಯ ನೆನಪು ಹರಿದು ಸೋಕಲಿ ನಿನ್ನ ಭಾವನೆಯನು... ದೂರವಾಗುವೆ ನೀನೀಗ ಇನ್ನೇನು ನನ್ ಕಣ್ಣು ಮಿಟುಕುವ ವೇಳೆಯಲಿ ಈ ವಿರಹವನು ನಾ ಹೇಗೆ ಸಹಿಸಲಿ? ಆದರೂ ಉಕ್ಕಿ ಹರಿದ ನಿನ್ನ ಕಣ್ಣೀರಲಿ ಕಾಣುತಿದೆ ನನ್ನ ಪ್ರೀತಿಯ ಪ್ರತಿಬಿಂಬ ಈ ಕ್ಷಣದ ಸ್ಪರ್ಶವನು ಮರೆಯಲೆಂತು?

ನಿನ್ನ ನೆನಪಿನ ಮಳೆಯಲಿ...

ಮಳೆ ಹನಿಯೊಂದು ನನ್ನ ಮೈ ತಾಕಿದಾಗ ಇನಿಯಾ, ನಿನ್ನ ನೆನಪು ಬಾರದಿರುವುದೇ? ಹೀಗೆ... ಸುರಿವ ಮಳೆಯಲ್ಲಿ ನನ್ನ ಕೈ ಹಿಡಿದು ನಡೆದಾಗ, ನಡುಕ ಮೈಯಲ್ಲಿ ಆದರೂ ಬೆಚ್ಚನೆಯ ಸುಖವಿತ್ತು ನಿನ್ನ ಜತೆಯಲ್ಲಿ ನೀ ಹಣೆಗೆ ಮುತ್ತಿಟ್ಟಂತೆ ಹರಿದ ಮೊದಲ ಮಳೆ ಹನಿಯು ಸುಖಸ್ಪರ್ಷವ ನೀಡಿರಲು ಮತ್ತೆ... ನೀನು ನನ್ನೊಂದಿಗೆ ಕಳೆದ ಮಧುರ ದಿನಗಳ ನೆನಪು ಮನದಲ್ಲಿ ಮೂಡಿ ಸಂತಸದ ಹೊನಲನ್ನು ಹರಿಸಿತ್ತು. ಸನಿಹ ನೀನಿಲ್ಲದ ಕ್ಷಣ ಕಣ್ಣೀರು ಹರಿಸಿ, ನಿನ್ನ ಕಾಯುತಿರಲು ಆಗೊಮ್ಮೆ... ಕನಸಲ್ಲಿ ಬಳಿ ಬಂದು ಪಿಸು ಮಾತು ನುಡಿದ ದಿನ, ಬಿಸಿಲೆಡೆಯ ಮಳೆಯಂತೆ ಸಂತಸದ ಕಣ್ಣೀರಲಿ ನೀ ಜೊತೆಯಾಗಿದ್ದೆ. ಜಡಿಮಳೆಯ ಜೊತೆಯಲ್ಲಿ ನಾನಿಂದು ನಡೆವಾಗ, ನನ್ನ ಕಂಬನಿಗಳ ಕಾಣುವುದೆ ನಿನಗೆ? ಗೆಳೆಯ...ನೀನೀಗ ನನ್ನೊಡನೆ ಇಲ್ಲವಾದರೂ.... ಆ ಮಳೆಯಲ್ಲಿ ನೆನೆದ ಸುಖ, ಈ ಪ್ರೀತಿಯ ನೆನಪು ಮರುಕಳಿಸದಿರುವುದೇ?

ಹೃದಯದೊಂದಿಗೆ ಒಂದು ಸಲ್ಲಾಪ...

ನಾನು: ಏ ಹೃದಯಾ... ಏನು ಯೋಚನೆ ಮಾಡ್ತಾ ಇದ್ದೀಯಾ...? ಹೃದಯ: ಹಾಗೇ ಸುಮ್ಮನೆ ಇದ್ದೇನೆ. ನಾನು: ಇಲ್ಲಾ ಏನೋ ಯೋಚನೆ ಮಾಡುವಂತಿದೆ...ನನ್ನಲ್ಲಿ ಹೇಳಲಾರೆಯಾ? ಹೃದಯ: ಏನಿಲ್ಲಾ ಬಿಡು... ನಾನು: ಹೇಳೇ... ಹೃದಯ: ಹೂಂ. ನೋಡು ಈ ಲಾಲ್್ಬಾಗ್ ಎಷ್ಟು ಸುಂದರವಾಗಿದೆಯಲ್ಲಾ.. ನಾನು: ಹೌದು ಹೃದಯ: ಎಷ್ಟೊಂದು ಸಸ್ಯ, ಹೂಗಳು ಮತ್ತೆ.. ನಾನು: ಮತ್ತೆ (?) ಹೃದಯ: ಪ್ರೇಮಿಗಳು! ನಾನು: ಹೂಂ.. ಹೃದಯ: ನಿನ್ನಲ್ಲೊಂದು ಪ್ರಶ್ನೆ ಕೇಳಲಾ? ನಾನು: ಕೇಳು.. ಹೃದಯ: ಈ ಪ್ರೇಮಿಗಳನ್ನು ನೋಡಿ ನಿನಗೆ ಏನೂ ಅನಿಸಲ್ವಾ... ನಾನು: ಏನು ಅನಿಸಬೇಕು ಹೇಳು. ಅಬ್ಬಾ ಎಷ್ಟೊಂದು ಪ್ರೇಮಿಗಳಿದ್ದಾರೆ! ಒಂದೊಂದು ಜೋಡಿಯೂ ಭಿನ್ನ ವಿಭಿನ್ನ.. ಹೃದಯ: ಅಷ್ಟೇನಾ... ನಾನು: ಅವರ ಸ್ಟೈಲು, ಸ್ಮೈಲು, ಲುಕ್, ವೇ ಆಫ್ ಎಕ್ಸಪ್ರೆಶನ್ ಎಲ್ಲಾ ಇಂಟರೆಸ್ಟಿಂಗ್ ಹೃದಯ: ಮತ್ತೆ.. ನಾನು: ಏನಿಲ್ಲಾ.. ಹೃದಯ: ಪ್ರೀತಿಯಲ್ಲಿ ಮುಳುಗಿರುವ ಅವರ ಕಣ್ಣಲ್ಲಿ ಸಂತೋಷ ನೋಡಿದ್ದೀಯಾ? ನಾನು: ಹೌದು..ನೋಡು ಹುಡ್ಗನ ತೆಕ್ಕೆಯಲ್ಲಿರುವ ಆ ಹುಡ್ಗಿ ಎಷ್ಟೊಂದು ಖುಷಿಯಾಗಿದ್ದಾಳೆ..ಅತ್ತ ನೋಡು ಅವಳ ಹೆಗಲ ಮೇಲೆ ಕೈ ಹಾಕಿ ಕುಳಿತ ಹುಡುಗ ಅವಳ ಸೌಂದರ್ಯವನ್ನು ವರ್ಣನೆ ಮಾಡುವಂತಿದೆ. ಹೃದಯ: ಮತ್ತೆ...ಹುಡ್ಗರ ಬಗ್ಗೆ ಹೇಳಲ್ವಾ.. ನಾನು: ಹೂಂ..ಮರದ ಮರೆಯಲ್ಲಿ ಕುಳಿತ ಆ ಜೋಡಿಯನ್ನೇ ನೋಡು. ಅವ ಕದ್ದು ಮುಚ್ಚಿ ಅವಳ ಕೆನ್ನೆಗೆ ಮುತ್ತಿಡುತ್ತಾನೆ. ಅವಳು ನಾಚುತ್ತಾಳೆ..ಅವಳಿಂದ ಮುತ್ತು ಪಡೆಯಲು ಅವ ಹವಣಿಸುತ್...