Posts

Showing posts from October, 2010

'ಸ್ವಂತಿಕೆ'ಯ ಅನುಭವ ಅನುಭವಿಸಿದವನೇ ಬಲ್ಲ...

ಇಂದು ಬೆಳಗ್ಗೆ ಊರಿನಿಂದ ನನ್ನ ಸ್ನೇಹಿತ ಫೋನ್ ಮಾಡಿದಾಗ 'ಏನ್ ಮಾರಾಯ್ತಿ ಈವಾಗ ಏನೂ ಬರೆಯಲ್ವಾ?' ಅಂತಾ ಕೇಳಿದ್ದ. "ಸಿಕ್ಕಾಪಟ್ಟೆ ಬ್ಯುಸಿ ಮಾರಾಯಾ. ಆಫೀಸಿನಲ್ಲೇ ದಿನ ಪೂರ್ತಿ ಕಳೆದು ಹೋಗುತ್ತೆ. ಇನ್ನು ಬ್ಲಾಗ್ ಬರೆಯೋಕೆ ಸಮಯವೇ ಸಾಕಾಗ್ತಾ ಇಲ್ಲ" ಅಂತಾ ಹೇಳಿದ್ದೆ. ನಿಜವಾಗಿಯೂ ನನ್ನ ಬ್ಲಾಗ್ ಅಪ್್ಡೇಟ್ ಆಗದೆ ತುಂಬಾ ಸಮಯ ಆಯ್ತು. ಏನಾದರೂ ಬರೆಯಬೇಕು ಅಂತ ಕುಳಿತುಕೊಂಡರೆ ಏನು ಬರೆಯಬೇಕು ಅಂತಾನೇ ಗೊತ್ತಾಗಲ್ಲ. ಯಾವ ವಿಷಯ ಬರೆಯ ಬೇಕು ಎಂದು ಯೋಚಿಸುತ್ತಲೇ ಆ ದಿನ ಕಳೆದು ಹೋಗುತ್ತದೆ. ಆಫೀಸಿಗೆ ಹೋದ ನಂತರ ಏನಾದರೂ ಬರೆಯಬೇಕು ಎಂದು ಯೋಚಿಸಿಕೊಂಡೇ ಪಿಜಿಯಿಂದ ಹೊರಡುತ್ತೇನೆ. ಆದರೆ ಆಫೀಸಿಗೆ ಬಂದ ಮೇಲೆ ಈ ಯೋಚನೆಗಳ್ಯಾವುದೂ ಅಕ್ಷರ ರೂಪಕ್ಕೆ ಇಳಿಯುವುದಿಲ್ಲ ಎಂಬುದು ಸತ್ಯ. ಹೆಚ್ಚಿನ ಯೋಚನೆಗಳು ತಲೆಯಲ್ಲಿ ಹೊಳೆಯುವುದೇ ಬಸ್ಸಿನಲ್ಲಿ ಸೀಟು ಸಿಕ್ಕದೆ ಚಡಪಡಿಸುವಾಗ, ಯಾವುದೋ ಪರೀಕ್ಷೆಗೆ ತುರಾತುರಿಯಲ್ಲಿ ಸಿದ್ದತೆ ನಡೆಸುವಾಗ ಇಲ್ಲದಿದ್ದರೆ ಬಾತ್್ರೂಮಲ್ಲಿ. ಆ ಸಮಯದಲ್ಲಿ ಬರೆಯಲಂತೂ ಸಾಧ್ಯವಿಲ್ಲ, ನಂತರ ಬರೆಯೋಣ ಅಂದ್ರೆ ಇನ್ನೊಂದು ಯೋಚನೆ ತಲೆಯೊಳಗೆ ಹೊಕ್ಕಿ ಅಲ್ಲಿ ಸಜ್ಜಿಗೆ ಬಜಿಲ್ ಆಗಿರುತ್ತೆ. ಪತ್ರಿಕಾ ಕಚೇರಿ ಅಂದ ಮೇಲೆ ದಿನಾ ನಾವು ಬರೆಯುತ್ತಲೇ ಇರುತ್ತೇವೆ. ಅದೂ ಡೆಡ್್ಲೈನ್ ಇಟ್ಟುಕೊಂಡು. ಪ್ರತಿಯೊಂದು ದಿನವೂ ಹೊಸ ಹೊಸ ಐಡಿಯಾಗಳನ್ನು ಹುಡುಕಿ ನಮ್ಮನ್ನು ನಾವೇ ಅಪ್್ಡೇಟ್ ಮಾಡಿಕೊಳ್ಳಬೇಕು. ಅದೇನೋ ಇಂತ