Posts

Showing posts from February, 2009

ನಗೀನಾಳ ಡೈರಿಯಿಂದ...

ಅದು ಮರೀನಾ ಬೀಚ್ ನ ಸುಂದರ ಸಂಜೆ. ಜೋಡಿ ಹಕ್ಕಿಗಳು ಕಲರವಗುಟ್ಟುತ್ತಿರುವಂತೆ ಯುವ ಪ್ರೇಮಿಗಳು ಕೈ ಕೈ ಹಿಡಿದು, ಮೈಗೆ ಮೈ ಬೆಸೆದು ಆ ಮನೋಹರವಾದ ಸಂಜೆಯಲ್ಲಿ ತಮ್ಮ ಪ್ರಣಯಗೀತೆಗೆ ಹೆಜ್ಜೆ ಹಾಕುತ್ತಿದ್ದರು. ಮರಳದಂಡೆಯಲ್ಲಿ ನಡೆದು ಮೂಡಿದ ಹೆಜ್ಜೆಗುರುತನ್ನು ಅಳಿಸಿ ಹಾಕುತ್ತಿರುವ ತೆರೆಗಳನ್ನು ನೋಡುತ್ತಾ ಅವಳು ನನ್ನೊಂದಿಗೆ ಅವನೂ ಇರುತ್ತಿದ್ದರೆ ಎಂದು ಭಾವಿಸಿರಬಹುದೇನೋ. ಅವಳ ಕಣ್ಣಾಲಿಗಳು ತುಂಬಿದ್ದವು. ಭೋರ್ಗರೆವ ಕಡಲಿನಂತೆ ಅವಳ ದುಃಖ ಹೃದಯದಲ್ಲಿ ಉಮ್ಮಳಿಸಿ ಬರುತ್ತಿದ್ದರೂ, ಅದನ್ನೆಲ್ಲಾ ಬದಿಗೊತ್ತಿ ನಾನು ಬದುಕ ಬೇಕು...ಸೋಲೊಪ್ಪಿಕೊಳ್ಳಲು ತನ್ನಿಂದ ಸಾಧ್ಯವಿಲ್ಲ ಎಂದು ಗಟ್ಟಿ ಮನಸ್ಸು ಮಾಡಿ ನಿಟ್ಟುಸಿರು ಬಿಟ್ಟಳು. -------- ಈ ಮೊದಲು ಬಣ್ಣದ ಚಿಟ್ಟೆಯಂತೆ ಹಾರಿ ಕುಣಿದಾಡಿದವಳಲ್ಲ ಅವಳು. ಅವನ ಪರಿಚಯವಾದ ನಂತರ ತನ್ನ ಜೀವನವೇ ಬದಲಾಯಿತು ಎಂದು ಆಕೆ ಪದೇ ಪದೇ ಹೇಳುತ್ತಿದ್ದಳು. ಇದು ನಿಜವೂ ಹೌದು. ಕಾಲೇಜು ದಿನಗಳಲ್ಲಿ ಸ್ವಪ್ನ ಲೋಕದಲ್ಲಿ ವಿಹರಿಸುತ್ತಾ ಮುಗ್ದ ಮನಸ್ಸಿನ ಬಾಲೆಯಂತೆ ತನ್ನದೇ ಪ್ರಪಂಚವನ್ನು ಸೃಷ್ಠಿಸಿಕೊಂಡು ಬೆಳ್ಳಿ ಮೋಡದಂತೆ ತೇಲಾಡುತ್ತಿದ್ದ ಆ ಹುಡುಗಿ ತನ್ನ ಪ್ರೀತಿಗಾಗಿ, ಅವನಿಗಾಗಿ ಎಲ್ಲವನ್ನೂ ತೊರೆದಳು. ಅಂದಹಾಗೆ ಅವರಿಬ್ಬರೂ ಪ್ರೀತಿ ಪ್ರಣಯ ಅಂತಾ ಪಾರ್ಕು, ಹೋಟೆಲ್ ಸುತ್ತಿಲ್ಲ. ಮನಸ್ಸಿನಲ್ಲೇ ತಮ್ಮ ಪ್ರೀತಿಯನ್ನು ಬಚ್ಚಿಟ್ಟು, ಕಣ್ಣಲ್ಲೇ ಮಾತನಾಡಿ ಪ್ರಣಯ ಲೋಕದ ಸುಖ ಪಡೆದವರು. ಅವನಿಗೂ ಇವಳೆಂದರೆ ಬಹಳ ಅಚ