ಬಚ್ಚಲು ಕೋಣೆಯೊಳಗೊಮ್ಮೆ ಇಣುಕಿ...

ಬಚ್ಚಲು ಕೋಣೆಯೊಳಗೊಮ್ಮೆಇಣುಕಿ
ನೋಡಿ...
ಪುಟ್ಟ ಬಾಲೆಯು ಕದ್ದು ತಿಂದು
ಗೊತ್ತಾಗಬಾರದೆಂಬಂತೆ
ಬಾಯಿ ಮುಕ್ಕಳಿಸುತ್ತಿರಬಹುದು..

ಹದಿಹರೆಯದ ನಿಮ್ಮ ಮಗಳು ಕದ್ದು
ಮುಚ್ಚಿ ಪ್ರೇಮಪತ್ರವನ್ನೋದುತಿರಬಹುದು
ಬಹುಷಃ ಮೊಬೈಲ್ ಹಿಡಿದು
'ಅವನಲ್ಲಿ' ಪಿಸುಗುಟ್ಟುತ್ತಿರಬಹುದು

ದುಃಖವನ್ನು ಅದುಮಿಟ್ಟ ಮಡದಿ
ಯಾರೂ ಅರಿಯದಂತೆ
ಕಣ್ಣೀರು ಹಾಕುತ್ತಿರಬಹುದು...
ಬಹಿರ್ದೆಸೆಗೆ ಹೋದ ನಿಮ್ಮಮ್ಮ
ಕಾಲು ಜಾರಿ ಬಿದ್ದು
ಗೋಳಾಡುತ್ತಿರಲೂ ಬಹುದು...

ಎಂದಾದರೊಂದು ದಿನ ನೀವೂ
ಅತ್ತಿರಬಹುದು, ಬಿದ್ದಿರಬಹುದು
ಕೋಪ ತಣಿಸಿಕೊಂಡಿರಬಹುದು
ಇದೇ ಬಚ್ಚಲು ಕೋಣೆಯಲ್ಲಿ
ಹೀಗೆ ಬಚ್ಚಲು ಮನೆ 'ರಹಸ್ಯ'
ಮುಗಿಯುವುದೇ ಇಲ್ಲ...

Comments

Harish Athreya said…
ಆತ್ಮೀಯ
ತು೦ಬಾ ಚ೦ದನೆಯ ಕವನ

ಎಲ್ಲ ಪಿಸುಮಾತಿಗೆ
ಬಿಕ್ಕಳಿಕೆಗೆ
ಸ೦ತೈಕೆಗೆ
ಆ ನಾಲ್ಕು ಗೋಡೆಗಳು
ಮೂಕ ಪ್ರೇಕ್ಷಕ
ಅದೇ ಬಚ್ಚಲು ಮನೆಯಲ್ಲಿ
ಕವಿತೆಯ ಸಾಲು ಹುಟ್ಟಬಹುದು
ಕಥೆಗೊ೦ದು ವಸ್ತು ಹೊಳೆಯಬಹುದು
ಸುಳ್ಳು ನೆಪವೊ೦ದು ಸಿಕ್ಕಬಹುದು
ಒಟ್ಟಿನಲ್ಲಿ
ನಮ್ಮೆಲ್ಲಾ ಮಾತುಗಳಿಗೆ
ಅದು ಕಿವಿಯಾಗಿಬಿಡುತ್ತದೆ

ನಿಮ್ಮವ
ಹರಿ

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ