ದೇವರು ಕಾಣೆಯಾಗಿದ್ದಾನೆ...

ಬ್ರೇಕಿಂಗ್ ನ್ಯೂಸ್...
ದೇವರು ಕಾಣೆಯಾಗಿದ್ದಾನೆ.
ಹೌದಾ?
ಹೂಂ...
ನಮ್ಮದ್ದಾ ಅವರದ್ದಾ?
ಅವರದ್ದಾದರೆ ಬಿಡಿ, ನಮ್ಮದ್ದಾದರೆ ಕಷ್ಟ!!
ಟೀವಿ ಪರದೆ ಮುಂದೆ ಕಣ್ಣಿಟ್ಟು
ಮೊಬೈಲ್್ನಲ್ಲಿ ಫ್ಲಾಶ್ ನ್ಯೂಸ್್ಗಾಗಿ
ತಡಕಾಡುತ್ತಾರೆ...
ಸಿಕ್ಕಿದ್ರಾ?


ಮೈಕ್, ಕ್ಯಾಮೆರ ರೆಡಿ...
'ದೇವರು ಕಾಣೆಯಾಗಿದ್ದಾರೆ...'
ಯಾವಾಗ?
ಬನ್ನಿ ನಮ್ಮ ಪ್ರತಿನಿಧಿಯಲ್ಲಿ ಕೇಳೋಣ..
ದೇವರು ಈವರೆಗೆ ಪತ್ತೆಯಾಗಿಲ್ಲ!!
ಅವರಿಗಾಗಿ ಶೋಧ ನಡೆಯುತ್ತಿದ್ದೆ...
ಅವರು ಸಿಗುವ ಸಾಧ್ಯತೆ ಇದೆಯೇ?
ಬನ್ನಿ ನೋಡೋಣ...
ಒಂದು ಪುಟ್ಟ ವಿರಾಮದ ನಂತರ...
ದೇವರು ಕೊನೆ ಬಾರಿ ಕಂಡದ್ದು ಯಾರಿಗೆ?...


ದೇವರು ಈಗ ಎಲ್ಲಿದ್ದಾರೆ?
ನಮ್ಮ ಆಪ್ತರಾಗಿದ್ದರು ಅವರು...ಜನ ಹೇಳುತ್ತಾರೆ
ಪುಟಗಟ್ಟಲೆ ಬರೆಯಿರಿ, ಅವರ ಆಪ್ತರ ಯಾರು?
ಸಂದರ್ಶನ ನಡೆಸಿ, ಹಳೇ ಫೋಟೋ
ಹುಡುಕಿ ಫೋಟೋ ಗ್ಯಾಲರಿ ಮಾಡಿ...ಕ್ಲಿಕ್


ಕಣ್ಣೀರು ಸುರಿಸಿದರು,
ದೇವರು ಮುನಿಸಿಕೊಂಡಿದ್ದಾನೆ ಎಂದು
ಬಗೆ ಬಗೆಯಾಗಿ ಅವನಲ್ಲಿ ಕ್ಷಮೆ ಕೇಳಿದರು
ಅಡ್ಡ ಬಿದ್ದರು, ಸುತ್ತು ಬಂದರು...
ಈ ಎಲ್ಲಾ ಕರಾಮತ್ತು ನೋಡಿ
"ನಿನ್ನಲ್ಲಿಯೇ ನಾನಿರುವಾಗ ನನ್ನನ್ನು
ಹುಡುಕುತ್ತಿಯಲಾ.್ಲ..." ಎಂದು
ದೇವರು ನಗುತ್ತಾ ಸುಮ್ಮನಾದ.

Comments

ವಿಷಯ, ನಿರೂಪಣೆ ಎರಡೂ ತು೦ಬಾ ಇಷ್ಟವಾಯಿತು.

ಮೊಬೈಲ್್ನಲ್ಲಿ ಫ್ಲಾಶ್ ನ್ಯೂಸ್್ಗಾಗಿ
ಹುಡುಕುತ್ತಿಯಲಾ.್ಲ
..ಈ ಸಾಲುಗಳು ಟೈಪಿಸುವಾಗ ಆದ ತೊ೦ದರೆಯೇ?

ಶುಭಾಶಯಗಳು
ಅನ೦ತ್
ಚನ್ನಾಗಿದೆ... ಇಷ್ಟವಾಯ್ತು...
@ಮಧು ದೊಡ್ಡೇರಿ :ಮೆಚ್ಚುಗೆಗೆ ಧನ್ಯವಾದಗಳು.
@ಅನಂತರಾಜ್ :ಫಾಂಟ್ ನಿಂದ ಯುನಿಕೋಡ್್ಗೆ ಕನ್ವರ್ಟ್ ಮಾಡುವಾಗ ಆ ಥರ ಆಯ್ತು. ಧನ್ಯವಾದಗಳು

ಪ್ರೀತಿಯಿಂದ,
ರಶ್ಮಿ
Harish Athreya said…
ಆತ್ಮೀಯ
ವಿಭಿನ್ನ ವಸ್ತು ’ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ’ ನೆನಪಾಯ್ತು.
ದೇವರ ಹುಡುಕಾಟ ಇ೦ದು ನಿನ್ನೆಯದಲ್ಲ ಅಲ್ವವೇ? ನಮ್ಮವನು ಹೆಚ್ಚು ನಿಮ್ಮವನು ಕಡಿಮೆ ಎ೦ಬ ತರ್ಕದಿ೦ದ ಮೊದಲ್ಗೊ೦ಡು ಎಲ್ಲಿರುವನು ಎ೦ಬುದವರೆಗೆ ಹುಡುಕಾಟ ನಿರ೦ತ ಪ್ರಕ್ರಿಯೆಯಾಗಿದೆ
ಕವನ ಮೆಚ್ಚಿಗೆಯಾಯ್ತು
ಹರೀಶ ಆತ್ರೇಯ
http://ananyaspandana.blogspot.com/
Soumya. Bhagwat said…
really nice one..... i liked it

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ