ಮಣ್ಣು

ನಾನು ಸತ್ತ ಮೇಲೆ
ನಿಮ್ಮ ಅಪ್ಪನ ಗೋರಿ ಪಕ್ಕದಲ್ಲೇ
ನನ್ನನ್ನು ಮಣ್ಣು ಮಾಡಿ ಬಿಡಿ
ಎಂದಳಾ ಅಮ್ಮ...

ಅಮ್ಮನ ಇಚ್ಛೆ ನೆರವೇರಿಸಿದರು
ಮಕ್ಕಳು...
ಅಪ್ಪ ಅಮ್ಮ ಒಂದೇ ಕಡೆ
ನಿಶ್ಚಿಂತರಾಗಿ ಮಲಗಿದ್ದರು
ತಮ್ಮ ಗೋರಿಯೊಳಗೆ

ಕಾಲ ಉರುಳಿತು
ಕೊನೆಗೊಂದು ದಿನ
ಮಣ್ಣು ಮಾರಾಟವಾದಾಗ
ಅಮ್ಮ ಮಲಗಿದ್ದ ಮಣ್ಣು ಮಂಗಳೂರಿಗೂ
ಅಪ್ಪ ಮಲಗಿದ್ದ ಮಣ್ಣು ಕಣ್ಣೂರಿಗೂ
ಟಿಪ್ಪರ್ ಲಾರಿ ಮೂಲಕ ಸಾಗಿತ್ತು

ಗೋರಿಗಳು ಹೋಳಾಗಿ
ಕಲ್ಲು ಕೋರೆಯಲ್ಲಿ ಧೂಳು ಹಾರಿತ್ತು
ಕೆಂಪು ಕಲ್ಲುಗಳು
ಒಂದರ ಮೇಲೊಂದು ಏರುತಿತ್ತು.

Comments

ರಶ್ಮಿ ಅವ್ರೆ.

ಅಪ್ಪ-ಅಮ್ಮನ- ಗೋರಿ ಬಗ್ಗೆ ಒಳ್ಳೆಯ ಕವನ ಬರ್ದಿದೀರ, ನನಗನ್ನಿಸುವ ಹಾಗೆ ಅದ್ನ ನೀವ್ ಸಂಪದಕ್ಕೆ ಸೇರ್ಸಿಲ್ಲ..(ಅಲ್ಲಿ ನಿಮ್ಮ ಒಂದು ಪ್ರತಿಕ್ರಿಯೆ ಓದಿ ಇಲ್ಲಿಗ್ ಬಂದೆ) ಒಳ್ಳೊಳ್ಳೆ ಬರಹ ಬರೆಯುತ್ತೀರಿ... ವಿಭಿನ್ನ ವಿಷಯಗಳ ಬಗ್ಗೆ ನೆವ್ ಬರೆಯೋ ಬರಹ ನನಗೆ ಹಿಡಿಸಿದವು... ಒಂದಾಗಿರಬೇಕು 'ಸದಾ' ಎಂಬ ಜೋಡಿ ಜೀವಗಳ ಬಯಕೆ ಒಂದೊಂದು ಊರಿಗೆ ಮಣ್ಣು ಸಾಗಿಸುವ ಮೂಲಕ ನಾ ಒಂದು ತೇರ -ನೀ ಒಂದು ತೀರ ಆಯ್ತಲ್ಲ.. ಇದು ಕವನ ಮಾತ್ರವೇ ಆಗಲಿ, ನಿಜವಾಗಿಯೂ ಹೀಗಾಗದಿರಲಿ ಯಾರ್ಗೂ.. ನಿಮ್ಮ ಬರಹ ಕೃಷಿ ಮುಂದುವರೆಯಲಿ. ಶುಭವಾಗಲಿ .ಹೊಸ ವರ್ಷದ ಶುಭಾಶಯಗಳು .

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ