ನಿರೀಕ್ಷೆಯಲ್ಲಿ...ಹಾಗೇ ಸುಮ್ಮನೆ
ನಾವು ಚಿಕ್ಕವರಿರುವಾಗ ಮಕ್ಕಳೆಲ್ಲರೂ ಸೇರಿ ನೆಲದ ಮೇಲೆ ಎರಡೂ ಕೈಗಳನ್ನಿರಿಸಿ "ಅಟ್ಟಾ ಮುಟ್ಟಾ" ಆಟವಾಡುವಾಗ ಅದರಲ್ಲಿ ಬರುವಂತಹ "ನಿನ್ನ ಗಂಡ ಎಲ್ಲಿಗೆ ಹೋದ? ಕಾಶಿಗೆ ಹೋದ..ಏನು ತಂದ? ಗಿರಿಗಿಟಿ ತಂದ.. ಯಾರಿಗೆ ಕೊಟ್ಟ? ಅರಸನ ಮಗಳಿಗೆ ಕೊಟ್ಟ..."ಎಂದು ಹೇಳಿ ಮುಗಿಸುವಾಗ 'ಏನು ತಂದ? ಯಾರಿಗೆ ಕೊಟ್ಟ ?'ಎಂಬ ಪ್ರಶ್ನೆಗಳು ನನ್ನನ್ನು ಅಷ್ಟೊಂದು ಚಿಂತೆಗೀಡು ಮಾಡಿರಲಿಲ್ಲ. ಹುಂ! ನಿಮಗೂ ಏನೂ ಅರ್ಥವಾಗಿಲ್ಲವೇ? ಹೇಳ್ತೇನೆ ಕೇಳಿ..
ದೂರದ ಊರಿನಿಂದ ಸ್ವಂತ ಮನೆಗೆ ಹಿಂತಿರುಗುವಾಗ ಯಾರಾದರೂ ಬರಿ ಕೈಯಲ್ಲಿ ಹೋಗುತ್ತಾರೆಯೇ? ಇಲ್ಲವಲ್ಲಾ.. ಕನಿಷ್ಠ ಪಕ್ಷ ಮನೆಯವರಿಗೆ ಏನಾದರೂ ವಸ್ತುಗಳನ್ನು ಕೊಂಡುಕೊಳ್ಳುವುದು ವಾಡಿಕೆ. ನಾವು ಕೊಟ್ಟ ವಸ್ತು ಅದೆಷ್ಟೇ ಚಿಕ್ಕದಾಗಿರಲಿ..ಅದನ್ನು ನಮ್ಮ ಆಪ್ತರಿಗೆ ನೀಡುವಾಗ ಅವರ ಮುಖದಲ್ಲಿ ಕಾಣುವ ಸಂತಸ ಅದನ್ನು ನೋಡಿಯೇ ನಮ್ಮ ಮನ ತುಂಬಿ ಬರುತ್ತದೆ. ಅಲ್ಲವೇ?
ನಾವು ಚಿಕ್ಕವರಿರುವಾಗ (ನಮ್ಮ ಮನೆಯ ಸುತ್ತ ಮುತ್ತಲೂ ಹೆಚ್ಚಾಗಿ ಗಲ್ಫ್ ಉದ್ಯೋಗಿಗಳ ಮನೆಯಿದೆ) ಪಕ್ಕದ ಮನೆಯವರು ಮಗ ಅಥವಾ ಗಂಡ ಊರಿಗೆ ಬಂದಿದ್ದಾನೆ ಆತ ಬರುವಾಗ ಇದನ್ನೆಲ್ಲಾ ತಂದಿದ್ದಾನೆ ಎಂದು ದೊಡ್ಡ ಪಟ್ಟಿಯೊಂದನ್ನೇ ನಮ್ಮೆದುರಿಡುತ್ತಿದ್ದರು. ಅವರೇನೂ ಹೇಳದಿದ್ದರೂ, ನಿಮ್ಮವರು ಊರಿಗೆ ಬರುವಾಗ ಏನೆಲ್ಲಾ ತಂದಿದ್ದಾರೆ? ಎಂದು ಕೇಳುವುದು ಕೂಡಾ ಇಲ್ಲಿ ಸರ್ವ ಸಾಮಾನ್ಯವಾಗಿತ್ತು. ಇದು ಮಾತ್ರವಲ್ಲದೆ ಯಾರಾದರೂ ದೂರದ ಊರಿನಲ್ಲಿ ಉದ್ಯೋಗದಲ್ಲಿದ್ದಾರೆ ಎಂಬುದನ್ನು ಹೇಳಲು ಯಾರಿಗೆ ತಾನೆ ಹೆಮ್ಮೆ ಇರುವುದಿಲ್ಲ?
ಮೊದಮೊದಲು ಮಂಗಳೂರು, ಬೆಂಗಳೂರು, ಮದ್ರಾಸ್ ದೆಹಲಿ ಅಂತಾ ಗರ್ವದಲ್ಲಿ ಹೇಳುತ್ತಿದ್ದರೂ ಇದೀಗ ಎಲ್ಲರೂ ಖತಾರ್, ಕುವೈತ್, ಅಮೆರಿಕ ಎಂದು ಹೇಳುವುದಕ್ಕೆ ಹೆಮ್ಮೆ ಪಡುತ್ತಾರೆ. ಯಾಕೆಂದರೆ ನಮಗೆಲ್ಲರಿಗೂ ಸ್ವದೇಶಕ್ಕಿಂತ ವಿದೇಶ ಪ್ರೀತಿ ಹೆಚ್ಚು ಎಂದೇ ಹೇಳಬಹುದು. ನಮ್ಮೂರಿಗೆ ಸಂಬಂಧಿಸಿದಂತೆ ಗಲ್ಫ್ ರಾಷ್ಟ್ರಗಳ ಉದ್ಯೋಗಿಗಳಿಗೇ ಡಿಮ್ಯಾಂಡು. ವರಾನ್ವೇಷಣಾ ಸಮಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆದ ಹುಡುಗ ನಮ್ಮೂರಲ್ಲಿ ಅಥವಾ ಪಕ್ಕದ ಊರಲ್ಲೇ ಇರಬಹುದು. ಆದರೆ ಕಡಿಮೆ ವಿದ್ಯಾಭ್ಯಾಸ ಗಳಿಸಿದ್ದರೂ ಗಲ್ಫ್‌ನಲ್ಲಿ ದುಡಿಯುತ್ತಾನೆ ಎಂದು ಕೇಳಿದರೆ ಸಾಕು ಕನ್ಯಾಪಿತೃಗಳು ಬೇಗನೆ ಒಪ್ಪಿಕೊಳ್ಳುತ್ತಾರೆ. ಅದೇ ವೇಳೆ "ಮರಿಮೋನ್ ಅಂಞ ದೂರೆ..ಗಲ್ಫಿಲಾ" (ಅಳಿಯ ತುಂಬಾ ದೂರದ ಊರಾದ ಗಲ್ಫ್‌ನಲ್ಲಿದ್ದಾನೆ) ಎಂದು ಅತ್ತೆ ಮಾವಂದಿರು ಎದೆ ನೆಟ್ಟಗಾಗಿಸಿ ಹೇಳುತ್ತಾರೆ. ಯಾಕೆಂದರೆ ಸ್ವದೇಶದಲ್ಲಿನ ಸಂಪಾದನೆಗಿಂತ ವಿದೇಶದಲ್ಲಿನ ಸಂಪಾದನೆಗೇ ಹೆಚ್ಚು ಬೆಲೆಯಲ್ಲವೆ? ತನ್ನ ಮಗಳನ್ನು ಶ್ರೀಮಂತ ಕುಟುಂಬಕ್ಕೆ ಮದುವೆ ಮಾಡಿಕೊಡಲು ಯಾವ ಮಾತಾಪಿತರು ತಾನೇ ಆಗ್ರಹಿಸುವುದಿಲ್ಲ? ಕೆಲವೊಮ್ಮೆ ಆತ ಗಲ್ಪ್‌ನಲ್ಲಿ ದುಡಿದು ಬಂದು ಊರಲ್ಲೇ ನೆಲೆಸಿದ್ದರೂ ಈ ಮೊದಲು ಗಲ್ಫ್‌ನಲ್ಲಿದ್ದೆ ಎಂದು ಹೇಳುವುದೂ ಹೆಮ್ಮೆಯೇ..ಹೀಗೆ ಸಾಗುತ್ತದೆ ಗಲ್ಪ್ ಪುರಾಣ...
ಇನ್ನು, ದೂರದ ಊರಿನ ಉಡುಗೊರೆಯ ಬಗ್ಗೆ ಹೇಳಲೇ ಬೇಕಲ್ವಾ? ಇದು ನನ್ನ ಮಗ, ಅಪ್ಪ, ಅಣ್ಣ, ಪ್ರಿಯಕರ ಕೊಡಿಸಿದ್ದು ಎಂದು ಹೇಳಲೂ ಹೆಮ್ಮೆ ಅನಿಸುವುದಿಲ್ವಾ? ನಿಜ ಹೇಳಲಾ.. ನನಗಂತೂ ಹೆಮ್ಮೆಯಿದೆ. ನಾನು ಪ್ರೈಮರಿ ಸ್ಕೂಲಿಗೆ ಹೋಗುತ್ತಿದ್ದ ವೇಳೆ ನನ್ನಣ್ಣ ಬೆಂಗ್ಳೂರಿನ ಕಂಪೆನಿಯೊಂದರಲ್ಲಿ ಕೆಲಸದಲ್ಲಿದ್ದ. ಆವಾಗ ಅಣ್ಣ ನನಗೊಂದು ಜೀನ್ಸ್ ಶರ್ಟ್ ಕೊಡಿಸಿದ್ದ. ಅದೇನೋ ಸೈಜ್ ತುಂಬಾನೇ ದೊಡ್ಡದಾಗಿತ್ತು. ಅದನ್ನು ಹಾಕಿಕೊಂಡು ಶಾಲೆಗೆ ಹೋಗಬೇಡ ಎಂದು ಅಮ್ಮ ಹೇಳಿದ್ದರೂ, ಅದನ್ನು ಲೆಕ್ಕಿಸದೆಯೇ ನಾನದನ್ನು ಹಾಕಿಕೊಂಡು ಶಾಲೆಗೆ ಹೋಗಿದ್ದೆ. ದೊಡ್ಡ ಗಾತ್ರದ ಆ ಶರ್ಟ್ ಕಂಡು ಶಾಲೆಯಲ್ಲಿ ಇದೇನು ಅಣ್ಣನ ಶರ್ಟ್ ಹಾಕಿಕೊಂಡು ಬಂದಿದ್ದೀಯಾ? ಎಂದು ಎಲ್ಲರೂ ನಕ್ಕಿದ್ದರು. ಆದರೂ "ಇದು ನನ್ನ ಅಣ್ಣ ಬೆಂಗ್ಳೂರಿನಿಂದ ತಂದ ಶರ್ಟು, 'ಬೆಂಗ್ಳೂರಿನಿಂದ' ಅಂತ "ಇನ್ನೊಮ್ಮೆ ಒತ್ತಿ ಹೇಳಿದ್ದೆ. ಅಂದು ಬೆಂಗ್ಳೂರಿನಿಂದ ಅಣ್ಣ ತಂದಂತಹ ದೈತ್ಯ ಶರ್ಟ್ ಧರಿಸಿ ನಾನೂ ಕೂಡಾ ಜಂಭದಿಂದ ಉಬ್ಬಿ ಹೋಗಿದ್ದೆ. ಆದರೆ ಈಗ ನಾನು ಬೆಂಗ್ಳೂರಲ್ಲೇ ಇದ್ದುಕೊಂಡು ಬಾಲ್ಯದ ನನ್ನ "ಬೆಂಗ್ಳೂರು ಮಹಿಮೆ"ಯನ್ನು ನೆನೆಪಿಸಿಕೊಳ್ಳುವಾಗ ನಗು ಬರುತ್ತಿದೆ.
ಅಂದ ಹಾಗೇ ನಾವು ಕೂಡಾ ರಜೆಯಲ್ಲಿ ಊರಿಗೆ ಮರಳುವಾಗ ಏನೇನು ತೆಗೆದುಕೊಂಡು ಹೋಗಲಿ? ಯಾರ್ಯಾರಿಗೆ ಏನೇನು ಕೊಡಲಿ? ಎಂಬುದೇ ದೊಡ್ಡ ಪ್ರಶ್ನೆಯಾಗಿ ಕೆಲವೊಮ್ಮೆ ತಲೆ ತಿನ್ನುವ ಸನ್ನಿವೇಶಗಳೂ ಒದಗಿಬರುವುದಿದೆ. ಯಾಕೆಂದರೆ ನಾವು ನೀಡಿದಂತಹ ಅಥವಾ ನೀಡುವಂತಹ ಆ ಉಡುಗೊರೆಗಳು ನಮ್ಮ ಸಂಬಂಧದ ಪ್ರೀತಿಯ ಪ್ರತೀಕಗಳು. ಅದನ್ನು ನೀಡುವಾಗ ಅಥವಾ ಪಡೆಯುವಾಗ ಅನುಭವಿಸುವ ಸಂತೋಷವಿದೆಯಲ್ಲಾ ಅದನ್ನು ವರ್ಣಿಸಲಸಾಧ್ಯ. ಅವರವರ ಪ್ರೀತಿಗೆ, ಸಂಬಂಧಕ್ಕೆ, ಭಾವನೆಗಳಿಗೆ ತಕ್ಕಂತೆ ಆ ಉಡುಗೊರೆಗಳು ಪ್ರತಿಯೊಬ್ಬನ ಮನದಲ್ಲಿಯೂ ಸ್ಥಾನವನ್ನು ಗಳಿಸುತ್ತವೆ ಎಂದರೆ ತಪ್ಪಾಗಲಾರದು.
ಅಂತೂ ಒಟ್ಟಿನಲ್ಲಿ ದೂರದ ಊರಿನಿಂದ ನಮ್ಮ ಆಪ್ತರು ಊರಿಗೆ ಬರುತ್ತಿದ್ದಾರೆ ಎಂದ ಕೂಡಲೇ ದಿನಗಳನ್ನು ಎಣಿಸಲು ಆರಂಭಿಸುತ್ತೇವೆ. ಅವರ ಹಾದಿಯನ್ನೇ ನಿರೀಕ್ಷಿಸುತ್ತಿರುವ ನಮಗೆ ಮನೆಯ ಬಾಗಿಲ ಮುಂದೆ ಹೆಜ್ಜೆ ಸದ್ದು ಕೇಳಿಸಿದಂತೆ, ಅವರ ಪ್ರೀತಿಯ ಕರೆಗೆ ಓಗೊಡುವಂತೆ ಮನಸ್ಸು ಹಪಹಪಿಸುತ್ತದೆ. ಆ ಕಾತರದ ಘಳಿಗೆಯಲ್ಲಿ ದಿನಗಳನ್ನು ಹೇಗೆ ಕಳೆಯಬೇಕೆಂಬುದೇ ತಿಳಿಯುತ್ತಿಲ್ಲ. ತನ್ನ ಆಪ್ತರನ್ನು ಕಾಣುವ ಇಂತಹ ತೀವ್ರವಾದ ಹಂಬಲ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ ಎಂಬುದು ನಿಜ.
ದೂರದ ಊರಿನಿಂದ ಮರಳುತ್ತಿರುವ ಮಗನ ದಾರಿಯನ್ನೇ ನಿರೀಕ್ಷಿಸುತ್ತಿರುವ ಅಮ್ಮನ ಕಣ್ಣಲ್ಲಿ ಮಗನ ಬಾಲ್ಯದ ದಿನಗಳು ಮತ್ತೊಮ್ಮೆ ಜೀವ ಪಡೆಯುತ್ತದೆ. ತನ್ನ ಪತಿಯ ಬರುವಿಕೆಗಾಗಿ ಕಾದು ಕುಳಿತ ಪತ್ನಿ, ತನ್ನ ಪತಿಯ ಸಾನ್ನಿಧ್ಯದಲ್ಲಿ ಅನುಭವಿಸಿದ ಸುಖ, ಅವನ ವಿರಹದಲ್ಲಿ ಮಿಡಿದ ಹೃದಯ ಎಲ್ಲವನ್ನೂ ನೆನೆದು, ಪತಿಯನ್ನು ಸ್ವಾಗತಿಸಲು ಸಜ್ಜಾಗುತ್ತಾಳೆ. ಅದೇ ವೇಳೆ ತನ್ನಿಂದ ದೂರವಾಗಿದ್ದ ಪ್ರಿಯಕರನನ್ನು ಕಣ್ತುಂಬ ಕಾಣಬೇಕೆಂಬ ಹಂಬಲ, ಇಷ್ಟು ದಿನ ದೂರವಾಗಿದ್ದಾಗ ಹೇಳದ ಕೇಳಿಸದ ಪ್ರೀತಿಯ ಮಾತುಗಳನ್ನಾಡಲು ಬಯಸುವ ಆ ಕ್ಷಣ...ಹೀಗೆ ಮಮತೆ, ವಿಶ್ವಾಸ, ಪ್ರೀತಿ ಇವೆಲ್ಲವೂ ನಿರೀಕ್ಷೆಗಳ ರೂಪ ತಳೆದು ದೂರದೂರಿನಿಂದ ಬರುವ ನಮ್ಮವರ ಸ್ವಾಗತಕ್ಕೆ ನಿಂತಿರುತ್ತದೆ. ಇದಕ್ಕೆ ಪ್ರತಿಯಾಗಿ ಅವರೊಂದು ಕಾಣಿಕೆಯನ್ನು ನಮ್ಮ ಕೈಗೆ ನೀಡಿದರೆ....
ಸದ್ಯ, ಈ ಅಪೂರ್ವ ಭಾವಾತ್ಮಕ ಕ್ಷಣಗಳನ್ನು ಬಣ್ಣಿಸಲು ಪದಗಳು ಸಾಕಾಗಲಿಕ್ಕಿಲ್ಲ ಅಂತ ಅನಿಸುತ್ತೆ.

Comments