ಹೆಣ್ಣು ನೋಡೋದು ಅಂದ್ರೆ ಸುಮ್ನೇನಾ?

ಮ್ಮ ಈ ಆನಂದ ಇದ್ದಾನಲ್ಲ...ಇವನಿಗೆ ಬರೀ ಹೆಣ್ಣು ನೋಡೋದೆ ಕೆಲ್ಸ .ಆದಾಗ್ಯೂ, ವಯಸ್ಸು ಇಪ್ಪತ್ಮೂರು ದಾಟಿದ ಮೇಲೆ ಹೆಣ್ಣು ಹುಡುಕೋಕೆ ಆರಂಭ ಮಾಡಿದ್ದಾನೆ ಈ ಮಹಾನುಭಾವ. ಈ ಶೋಧ ಕಾರ್ಯ ಆರಂಭವಾಗಿ ಮೂರು ವರ್ಷಗಳಾದರೂ ಇವನ ಮನಸ್ಸಿಗೆ ಒಪ್ಪುವಂತ ಹುಡುಗಿ ಈವರೆಗೆ ಯಾವುದೂ ಸಿಕ್ಕಿಲ್ಲಂತೆ. ಹೆಣ್ಣು ನೋಡೋಕೆ ಹೋಗೋದರಲ್ಲೇ ಇವನು ಆನಂದ ಕಂಡುಕೊಂಡಿದ್ದಾನೆ ಎಂದರೆ ಅತಿಶಯೋಕ್ತಿಯಾಗಲಾರದು. ತಾಳಿ ಕಟ್ಟಲು ಯೋಗ್ಯವಾದ ಹುಡುಗಿ ಬೇಕೂಂತಾ ಇವ ಅಲೆಯದ ಊರಿಲ್ಲ. ಕುಡಿಯದ ಬಾವಿ, ಬೋರ್್ವೆಲ್, ಬಾಟಲಿ ನೀರಿಲ್ಲ. ಈವರೆಗೆ ಹುಡುಗಿ ನೋಡೋಕೆ ಹೋಗಿ ಅಲ್ಲಿನ ಕಾಫಿ, ತಿಂಡಿ, ಊಟ ಮಾಡಿಕೊಂಡು ದೇಹದ ಭಾರ ಜಾಸ್ತಿ ಮಾಡಿದ್ದಲ್ಲದೆ ಬೇರ್ಯಾವ ಬದಲಾವಣೆಯೂ ಇವನಲ್ಲಿ ಕಂಡುಬಂದಿಲ್ಲ.

ಹುಡುಗಿ ನೋಡಿದ ಮೇಲೆ, ಹೇಗೆ ...ನಿಂಗೆ ಇಷ್ಟ ಆಯ್ತಾ? ಅಂತಾ ಬ್ರೋಕರ್ ಕೇಳಿದ್ರೆ, "ಹುಡುಗಿ ರಾಗಿಣಿಯಷ್ಟು ಎತ್ತರ ಇಲ್ಲ, ರಕ್ಷಿತಾನಂತೆ ಡುಮ್ಮಿ, ರಮ್ಯಾನಂತೆ ಮೂಗಿನಲ್ಲಿ ಕೋಪ, ಬಿಪಾಶಾನಂತೆ ಕಪ್ಪು, ಪೂಜಾ ಗಾಂಧಿ ತರಾ ಸ್ಮೈಲಾದ್ರೂ ಬೇಡ್ವ?. ಕನಿಷ್ಠ ಐಶ್ವರ್ಯಾಳಂತ ಕಣ್ಣು, ಪ್ರಿಯಾಮಣಿಯಂತಾ ಫಿಗರು, ಮೀರಾ ಜಾಸ್ಮಿನ್ ತರಾ ಸ್ವಲ್ಪ ನಾಚಿಕೆಯಾದ್ರೂ ತೋರಿಸ್ಬೇಡ್ವೆ? ಇದ್ಯಾವುದೇ ಗುಣಗಳಿಲ್ಲದ ಹೆಣ್ಣನ್ನು ನಾನು ವರಿಸುವುದೇ? "ಎಂದು ಮರುಪ್ರಶ್ನಿಸುತ್ತಿದ್ದ. "ಏನು ಮಾರಾಯಾ... ನೀನು ಹೇಳುವ ಸೈಜಿನ, ತೂಕದ ಹುಡುಗಿಯನ್ನು ಕಂಡುಹಿಡಿಬೇಕಾದ್ರೆ ನಂಗೆ ಈ ಜನ್ಮ ಸಾಕಾಗದು" ಎಂದು ಬ್ರೋಕರ್ ಕೂಡಾ ಆನಂದನಿಂದ ದೂರ ಓಡಿ ಹೋಗಿದ್ದ.

ಸುಮಾರು 30 ಹುಡುಗಿಯನ್ನು ನೋಡಿದ ನಂತರ ಅಂತೂ ಕೊನೆಗೆ ಹೆ.ನೋ(ಹೆಣ್ಣು ನೋಡೋ) ಆನಂದನಿಗೆ ಒಬ್ಬಳು ಹುಡುಗಿ ಇಷ್ಟವಾದ್ಲು. ಬ್ರೋಕರ್ ಫುಲ್್ಖುಷ್.

ಅಂತೂ ಇಂತು ನಮ್ಮ ಆನಂದನಿಗೆ ಹುಡುಗಿ ಸಿಕ್ಕಿದ್ದಾಳೆ ಎಂದು ಮನೆಯವರೂ ಸಂತಸಪಟ್ಟರು. ಇನ್ನೇನು ನಿಶ್ಚಿತಾರ್ಥ ನಡೆಸಲು ತೀರ್ಮಾನಿಸಿದಾಗ, ಆ ಹುಡುಗಿಯಿಂದ ಆನಂದನಿಗೊಂದು ಲೆಟರ್.


"ಡಿಯರ್ ಆನಂದ್, ನೀವು ನನ್ನನ್ಯಾಕೆ ಆಯ್ಕೆ ಮಾಡಿದ್ದೀರಿ ಅಂತಾ ನಂಗೊತ್ತಿಲ್ಲ. ಆದ್ರೆ ನಿಮಗೆ ಸುದೀಪ್್ನಷ್ಟು ಹೈಟ್, ಹೃತಿಕ್್ನಂತಾ ಸ್ಮೈಲ್, ಶಾರುಖ್್ನಂತಾ ಹೈರ್ ಸ್ಟೈಲಾದ್ರೂ ಬೇಡವೇ? ಇದೆಲ್ಲಾ ಹೋಗಲಿ ಬಿಡಿ, ಜಾನ್ ಅಬ್ರಹಾಂ ಬಾಡಿ, ಸೂರ್ಯನ ಕಣ್ಣು, ಮಹೇಶ್ ಬಾಬುನ ತರಹಾ ಉದ್ದ ಮೂಗು...ಅದೂ ಇಲ್ಲ. ಇದೆಲ್ಲಾ ಓದಿದ ಮೇಲೆ ನಿಮಗೆ ನನ್ನ ಮೇಲೆ ಸಿಟ್ಟು ಬಂದಿದ್ರೆ ಆ ಸಿಟ್ಟಿಗೆ ಮಮ್ಮುಟ್ಟಿಯ ಕೋಪದಷ್ಟು ಪವರ್ ಇರಕ್ಕಿಲ್ಲ, ಅಥವಾ ಪೆಚ್ಚಾಗಿದ್ರೆ ಅದೂ ಕೂಡಾ ಮೋಹನ್್ಲಾಲ್್ನ 'ಪೆಚ್ಚಾಗುವ' ಆ್ಯಕ್ಟಿಂಗ್್ನ ಒಂದಶದಷ್ಟೂ ಇರುತ್ತಾ? ಇದ್ಯಾವುದೇ ಯೋಗ್ಯತೆಗಳಿಲ್ಲದ ನಿಮ್ಮನ್ನು ಪತಿಯಾಗಿ ಸ್ವೀಕರಿಸಲು ನನ್ನಿಂದ ಸಾಧ್ಯವಿಲ್ಲ. ಗುಡ್ ಬೈ".

Comments

ರಶ್ಮಿ

ಇದು "ಕಥೆಯಲ್ಲ........... ಜೀವನ........."ಕ್ಕೆ ಹೇಳಿ ಮಾಡಿಸಿದ ಸ್ಕ್ರಿಪ್ಟ್. ಆನಂದನ ಕಥೆಗೆ ಲಕ್ಷ್ಮಿಯ ಅನುಭವ ಸೇರಲಿ.
ಬಹುಶಃ ಪ್ರತ್ಯಕ್ಷ ಅನುಭವವಿರಬೇಕು ಅಲ್ವಾ ;)


ಅರವಿಂದ್
ಇದು ಪ್ರತ್ಯಕ್ಷ ಅನುಭವವೇನೂ ಅಲ್ಲ ಅರವಿಂದ್. ಅಂತೂ 'ಕಥೆಯಲ್ಲ... ಜೀವನ'ದಲ್ಲಿ ನನ್ನ ಸ್ಕ್ರಿಪ್ಟ್ ಬಳಸಿದರೆ ಅದಕ್ಕಿಂತ ಸಂತೋಷದ ವಿಷಯ ಏನಿದೆ ಹೇಳಿ?
ಪ್ರತಿಕ್ರಿಯೆಗೆ ಧನ್ಯವಾದಗಳು
-ರಶ್ಮಿ.
Harish Athreya said…
ಆತ್ಮೀಯ
ಪಾಪ ಆನ೦ದ ’ಅ೦ಥವಳೇ " ಬೇಕು ಅ೦ತ ಹೊರಟವನಿಗೆ ಸಿಕ್ಕ ಹೆಣ್ಣು ’ಇ೦ಥವನು’ ನನ್ನವನಾಗಿರ್ಬೇಕು ಅ೦ತ ಹೇಳಿದ್ರಿ೦ದ ನೊ೦ದುಕೊ೦ಡನೇನೊ?.ಚನ್ನಾಗಿದೆ.
ಹರಿ
http://ananyaspandana.blogspot.com/
Unknown said…
Very nice Rashmi

Ashwin
ರಶ್ಮಿ ಅವ್ರೆ ಬರಹ ಓದಿ .:))))) ಇದು ಬಹುಶ ಇರೂ ಅನ್ಕೊಲೋ ರೆತಿನೆ.. ನನಗೆ ಹೀಗೆಯೇ ಇರ್ವವರು ಬೇಕು ಅಂತ ಉದುಕಿ ಕೊನೆಗೆ ಯಾರನೋ ಮದ್ವೇಯಾಗಿರೋ ಎಸ್ಟೋ ಜನ ಅವ್ರೆ.. ನಾ ಸಹ ಈ ಬಗೆ ೨ ಲೇಖನ ಬರ್ದಿರ್ವೆ ಸಂಪದ.ನೆಟ್ ನಲ್ (www .sampada .net /user /venkatb83
ನಿಮ್ಮ ಬ್ಲಾಗ್ ನಲಿ ಒಲೋಲೆ ಎಸ್ಟೋ ಬರಹ ಬರ್ದುಬಿಟಿದೀರ..
ನಿಮ್ಮ ಬರಹ ಕೃಷಿ ಹೀಗೆಯೇ ಸಾಗಲಿ..
ಶುಭವಾಗಲಿ'

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ