ಈ ಮಳೆಯೇ ಹಾಗೆ...

ಈ ಮಳೆಯೇ ಹಾಗೆ...
ನಮ್ಮೂರಿನ ಮಳೆಯಂತಿಲ್ಲ ಇದು
ಮಳೆ ಬಂದ ಕೂಡಲೇ ಮಣ್ಣಿನ ವಾಸನೆ
ಮೂಗನ್ನು ಮೆತ್ತಿ ಕೊಳ್ಳುವುದಿಲ್ಲ...

ಈ ಮಳೆಯೇ ಹಾಗೆ...
ಮನೆ ಬಿಟ್ಟು ಹೊರಗೆ ಕಾಲಿಡಲು ಬಿಡುವುದಿಲ್ಲ
ಚರಂಡಿ ನೀರು ರೋಡಲ್ಲಿ ಹರಿದರೂ
ನಾವ್ಯಾರು ತಲೆ ಕೆಡಿಸಿಕೊಂಡಂತ್ತಿಲ್ಲ

ಈ ಮಳೆಯೇ ಹಾಗೆ...
ಬಿರುಸಿನ ಮಳೆಗೆ ಕೊಡೆ ಹಾರುವುದಿಲ್ಲ
ರೈನ್್ಕೋಟ್್ಗಳೆಡೆಯಲ್ಲಿ ಮಿಣುಕುವ ಕಣ್ಣುಗಳು
ಲಿಫ್ಟ್ ಕೇಳಿದರೂ ಕೊಡುವುದಿಲ್ಲ

ಈ ಮಳೆಯೇ ಹಾಗೆ...
ಒಮ್ಮೆ ಪಿರಿ ಪಿರಿ, ಎಡೆ ಬಿಡದೆ ಸುರಿಯೆ ಕಿರಿಕಿರಿ
ಕೆಂಪು ದೀಪದಡಿಯಲ್ಲಿ ವಿಷಣ್ಣನಾಗಿ ನಿಂತ ಗಾಡಿಗಳ
ಗಾಲಿಗಳು ಮುಂದೆ ಚಲಿಸುವುದೇ ಇಲ್ಲ

ಈ ಮಳೆಯೇ ಹಾಗೆ...
ತಂಗಾಳಿಯೊಂದಿಗೆ ನೆನಪು ಹೊತ್ತು ತರುತಿದೆ
ಕಳೆದ ಬಾಲ್ಯ, ಯೌವನದ ಮಿಡಿತ ತುಡಿತದೊಳು
ಕಣ್ಣೀರಾಗಿ ಹರಿದು, ಮತ್ತೆ ಮೋಡವಾಗುತಿದೆ.

Comments

Holesaalu said…
ಕವನವೇನೋ ಚೆನ್ನಾಗಿದೆ. ಆದರೆ ಆಫೀಸ್್ ಟೈಮ್್ನಲ್ಲಿ ಬ್ಲಾಗ್್ ಅಪ್್ಡೇಟ್್ ಮಾಡುವುದು ಅಪರಾಧ
Shashikiran.M said…
ಈ ಮಳೆಯೇ ಹಾಗೆ ಅದರ ಕಳೆಯೇ ಹಾಗೆ.
ಒಳ್ಳೆ ಕವನ
Manju said…
nimma kavithe chennagide
This comment has been removed by the author.
This comment has been removed by the author.
@Holesaalu
ಕವನ ಮೆಚ್ಚಿದ್ದಕ್ಕೆ ನನ್ನಿ.
ನಮ್ಮ ಕಚೇರಿಯಲ್ಲಿ ಬ್ಲಾಗ್ ಓಪನ್ ಆಗಲ್ಲ ಎಂಬ ವಿಷಯ ನಿಮಗೆ ತಿಳಿದಿರಬಹುದು.
ಮನಸ್ಸಿನಲ್ಲಿ ಭಾವನೆಗಳು ಬಂದಾಗ ಕವನ ಬರೆಯುವುದಕ್ಕೂ ತಡೆಯೇ?
ಕಚೇರಿಯಲ್ಲಿ blog restricted ಆಗಿದ್ದರೂ ಬೇರೆ ಕಡೆ ಇಂಟರ್ನೆಟ್ ಇದೆ ಅಲ್ಲಿ ಬ್ಲಾಗ್ ಅಪ್ಡೇಟ್ ಮಾಡಿದ್ರೆ
ತಪ್ಪೇನು?

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ