Posts

ನಿವೇದನೆ

ಅ ಡುಗೆ ಮನೆಯತ್ತ ಮುಖ ಮಾಡಿದಾಗ ಸಾಲಲ್ಲಿರಿಸಿದ ಡಬ್ಬಗಳ ಕುಹಕ ನಗೆ ಕಾದ ಬಾಣಲೆಯಲ್ಲಿ ಸಾಸಿವೆಯ ಅಟ್ಟಹಾಸ ನನ್ನ ಭಾವನೆಗಳ ಕೆಣಕಿದಂತೆ ಇನ್ನೂ ಓದಿ ಮುಗಿದಿರದ ಪುಸ್ತಕದ ಪುಟವ ವೇಗದಿ ತಿರುವಿದಾಗ ಕೊಚ್ಚಿ ಹೋಗಿತ್ತು ನನ್ನ ಸ್ವಪ್ನ ಸುಂದರ ನೌಕೆ ಈ ನನ್ನ ಪ್ರಸವಕ್ಕೆ ಅಮ್ಮನ ಕಣ್ಣುಗಳಲ್ಲಿರುವ ವ್ಯಾಕುಲತೆಯಿಲ್ಲ ಪತಿಯ ಸಾಂತ್ವನವಿಲ್ಲ ಬಂಧುಗಳ ಮುಂಗಡ ಶುಭಾಶಯದ ಕರೆಗಳೂ ಬಂದಿಲ್ಲ ಅನೈತಿಕ ಗರ್ಭದಂತೆ... ಒಂದಷ್ಟು ಭಯ...ಕೈಗಳಲ್ಲಿ ನಡುಕ ಯಾರಿಗೂ ಕಾಣದಂತೆ ನನ್ನ ಪುಟ್ಟ ಕೋಣೆಯ ತೂಗು ತೊಟ್ಟಿಲಲ್ಲಿ ಖಾಲಿ ಹಾಳೆಗಳ ನಡುವೆ... ನಾನೆಷ್ಟು ಕಾಯಲಿ? ಉಪ್ಪಿಟ್ಟಿಗೆ ಒಗ್ಗರಣೆ ಹಾಕಿ ಒಂದಿಷ್ಟು ತಿಂದು, ಡಬ್ಬಕ್ಕೆ ತುಂಬಿಸಿ ಗುಡಿಸಿ, ಸಾರಿಸಿ, ಪಾತ್ರೆ ತಿಕ್ಕಿ... ಮಿಂದು.....ಬಿಸಿ ನೀರು ಕಾಯಿಸಿ ಸಾಕಪ್ಪಾ....ಸಾಕು! ಎಲ್ಲೋ ಕೇಳಿದೆ ಯಾರೋ ನನ್ನ ಮಗುವನ್ನು ದತ್ತು ತೆಗೆದುಕೊಂಡಿದ್ದಾರಂತ ಅವರು ಮುದ್ದು ಮಾಡಿರಬಹುದೇ? ನನ್ನ ಮಗು....ನನ್ನ ಭಾವನೆಗಳ ಚಿಗುರು ತುಂಟಾಟಿಕೆ- ಕಣ್ಣೀರಿಡುವ ಒಮ್ಮೆ ನಗುವ-ತೂಕಡಿಸುವ ಕೋಪದಿಂದ ಬಿಕ್ಕಳಿಸುವ...ಕೂಸು ಇಲ್ಲೆ ಎಲ್ಲೋ ಕೇಳಿಸಿದಂತಿದೆ ಯಾರದ್ದೋ ದನಿಯಲ್ಲಿ ನನ್ನ ಮಗುವಿನ ತೊದಲು ನುಡಿ ಅಷ್ಟು ಸಾಕು...ನನಗೆ ಬೇಡ... ನನ್ನ ಹಳಿಯಬೇಡಿ ನನ್ನ ಹಂಗಿಸಬೇಡಿ... ಕೋರಿಕೆ...ನಿಮ್ಮಲ್ಲಿ ನನಗೊಂದಷ್ಟು ಸಮಯ ಕೊಡಿ ನನ್ನ ಈ ಸಾಲುಗಳನ್ನು ಹಡೆದು ನಿಟ್ಟುಸಿರು ಬಿಡಲೇ?

ಪ್ರಶ್ನೆಯಾಗಿ ಕಾಡುತ್ತಿರುವ ಕರುತ್ತಮ್ಮ...

Image
ಹೌ ದು, ಈ ಕರುತ್ತಮ್ಮ ಕಾಡಿದಷ್ಟು ಇನ್ಯಾರೂ ನನ್ನನ್ನು ಕಾಡಿರಲಿಲ್ಲ. ಬಾಲ್ಯದಿಂದ ಹಿಡಿದು ಇಲ್ಲಿಯವರೆಗೆ ನಾನು ಇಷ್ಟಪಡುವ ಹೆಂಗಸರಲ್ಲಿ ಇವಳೂ ಒಬ್ಬಳು. ನಾನು ಹೀಗೆಹೇಳುತ್ತಿದ್ದರೆ ಆ ಕರುತ್ತಮ್ಮ ಯಾರು ಎಂಬ ಪ್ರಶ್ನೆ ನಿಮ್ಮನ್ನೂ ಕಾಡುತ್ತಿರಬಹುದು ಅಲ್ಲವೇ? ಅವಳು ಮತ್ಯಾರೂ ಅಲ್ಲ ಪ್ರಶಸ್ತಿ ವಿಜೇತ ಹಳೇ ಕಾಲದ ಮಲಯಾಳಂ ಚಿತ್ರ ಚೆಮ್ಮೀನ್್ನ ನಾಯಕಿ. ಚಿತ್ರದಲ್ಲಿ ಕರುತ್ತಮ್ಮನ ಪಾತ್ರ ನಿರ್ವಹಣೆ ಮಾಡಿದ್ದು ನಟಿಶೀಲ. ಮಲಯಾಳಂನಲ್ಲಿ ಚೆಮ್ಮೀನ್ ಅಂದ್ರೆ ಸಿಗಡಿ ಮೀನು. ತಗಳಿ ಶಿವಶಂಕರ ಪಿಳ್ಳೆ ಬರೆದ ಚೆಮ್ಮೀನ್ ಎಂಬ ಕಾದಂಬರಿ ಆಧರಿತ ಚಿತ್ರವಾದ ಚೆಮ್ಮೀನ್ 1965ರಲ್ಲಿ ತೆರೆಕಂಡರೂ ಅದರಯಶಸ್ಸು ಇಂದಿಗೂ ಚಿರನೂತನ. ಅವರ ಕಥೆ, ಹಾಡು, ನಟನೆ ಅಬ್ಬಾ...ಆ ಚಿತ್ರವನ್ನು ನೋಡಿಯೇ ಅನುಭವಿಸಬೇಕು. ಚಿಕ್ಕವರಿರುವಾಗ ಶಾಲೆಯಲ್ಲಿ ಕ್ವಿಜ್್ಗೆ ಚೆಮ್ಮೀನ್ ಕಾದಂಬರಿ ಬರೆದವರು ಯಾರು? ಎಂಬ ಪ್ರಶ್ನೆ ಕಾಮನ್ ಆಗಿತ್ತು. ಮೊದಲಬಾರಿಗೆ ಚೆಮ್ಮೀನ್ ಕಾದಂಬರಿ ಬಗ್ಗೆ ಕುತೂಹಲ ಹುಟ್ಟಿಕೊಂಡದ್ದೇ ಹೀಗೆ. ಅಂತೂ ಕೊನೆಗೂ ಅದೊಂದು ದಿನ ಡಿಡಿ 1 ಚಾನೆಲ್್ನಲ್ಲಿ ಆದಿತ್ಯವಾರ ಪ್ರಾದೇಶಿಕ ಚಲನಚಿತ್ರ ವಿಭಾಗದಲ್ಲಿ ಚೆಮ್ಮೀನ್ ಚಿತ್ರ ಪ್ರಸಾರವಾಗಿತ್ತು.ನಮ್ಮ ಬ್ಲಾಕ್ ಆ್ಯಂಡ್ ವೈಟ್ ಟೀವಿಯಲ್ಲಿ ಚೆಮ್ಮೀನ್ ಚಿತ್ರ ಮೂಡಿಬರುತ್ತಿದ್ದಂತೆ ಟೀವಿಯಲ್ಲೇ ಗಮನ ಕೇಂದ್ರೀಕರಿಸಿ ಕುಳಿತಿದ್ದೆ. ಚಿತ್ರದುದ್ದಕ್ಕೂ ಕಡಲ ಕಿನಾರೆ...ಮೀನು...ಮೀನುಗಾರರ ಸಂಭಾಷಣೆ..ಅದ್ಭುತ ಸಂಗೀತ......

ಹೆಣ್ಮಕ್ಕಳಿಗೆ ಕಪಾಳಮೋಕ್ಷ ಮಾಡುವಾಗ ಇವರಿಗೆ 'ಭಾರತೀಯ ಸಂಸ್ಕೃತಿ' ನೆನಪಿಗೆ ಬರಲಿಲ್ಲವೇ?

ಆ ಧುನಿಕ ದುಶ್ಯಾಸನರು! ಹೌದು. ಇವರನ್ನು ದುಶ್ಯಾಸನರು ಎಂದು ಕರೆದರೂ ಸಾಲುವುದಿಲ್ಲ. ಯಾಕೆಂದರೆ ದುಶ್ಯಾಸನ ದ್ರೌಪದಿಯ ಸೀರೆಯನ್ನು ಎಳೆಯುತ್ತಲೇ ಸುಸ್ತಾಗುತ್ತಾನೆ. ಇವರು ಹಾಗಲ್ಲ ಹೆಣ್ಮಕ್ಕಳ ಕಪಾಳಕ್ಕೆ ಹೊಡೆದು ಅವರ ಮೈಮೇಲೆ ಕೈಯಾಡಿಸುತ್ತಾರೆ. ಅಲ್ಲಿದ್ದ ಹುಡುಗನೊಬ್ಬ 'ಇನಿ ಎನ್ನ ಬರ್ತ್ ಡೇಯೇ...ಹಾಕೊಡ್ಚಿ' (ಇವತ್ತು ನನ್ನ ಹುಟ್ಟುಹಬ್ಬ, ಹೊಡಿಯಬೇಡಿ) ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದರೂ ಅವನನ್ನು ಅರೆಬೆತ್ತಲೆಯಾಗಿಸಿ ಥಳಿಸುತ್ತಾರೆ. ಹೆಣ್ಮಕ್ಕಳನ್ನು ಹಿಡಿದು, ಗುದ್ದಿ, ದೂಡಿ ಮಂಚಕ್ಕೆ ನೂಕಲಾಗುತ್ತದೆ. ಅದರಲ್ಲಿ ಹುಡುಗಿಯೊಬ್ಬಳ ಕೆನ್ನೆಗೆ 'ಚಟಾರ್್' ಎಂದು ಬಿದ್ದ ಏಟಿನಿಂದ ಆಕೆ ಮಂಚದ ಮೇಲೆ ದೊಪ್ಪನೆ ಬೀಳುತ್ತಾಳೆ. ಅಲ್ಲಿದ್ದ ಯುವಕ ಯುವತಿಯರು ಮುಖ ಮುಚ್ಚಿಕೊಳ್ಳುತ್ತಿದ್ದಂತೆ ಬಲವಂತವಾಗಿ ಅವರ ಕೈ ಹಿಡಿದು ಎಳೆಯುತ್ತಾ, ಹುಡುಗಿ ದೇಹದ ಮುಟ್ಟಬಾರದ ಜಾಗದಲ್ಲೆಲ್ಲಾ ಹಿಡಿದು ಅವರನ್ನು ತಳ್ಳಲಾಗುತ್ತದೆ. ಇದು ಮಂಗಳೂರಿನ ಹೊರವಲಯ ಪಡೀಲ್್ನ ಬಡ್ಲಗುಡ್ಡೆಯಲ್ಲಿರುವ 'ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ' ಮೇಲೆ ಶನಿವಾರ ರಾತ್ರಿ ನಡೆದ 'ನೈತಿಕ ಪೊಲೀಸ್್' ಪುಂಡಾಟಿಕೆಯ ಝಲಕ್. ಈ ಮೊದಲು ಅಂದ್ರೆ 2009 ಜನವರಿ 24ರಂದು ಮಂಗಳೂರಿನ ಪಬ್ ಒಂದರ ಮೇಲೆ ಇದೇ ರೀತಿ ದಾಳಿ ನಡೆಸಲಾಗಿತ್ತು. ಆದರೆ ಶನಿವಾರ ನಡೆದದ್ದು? ಇಲ್ಲಿನ ಹೋಂ ಸ್ಟೇನಲ್ಲಿ ರೇವ್ ಪಾರ್ಟಿ ಮಾಡುತ್ತಿದ್ದಾರೆ ಎಂದು ದಾಳಿ ನಡೆಸಲಾಗ...

ಒಂದು ಪೈದ್ಯ

ಇವತ್ತು 22/ 7 ಅಂದ್ರೆ Pi Approximation Day. π (ಪೈ) ಬಗ್ಗೆ ಈ ತಿಂಗಳ ರೀಡರ್ಸ್ ಡೈಜೆಸ್ಟ್್ನಲ್ಲಿ ತುಂಬಾ ಮಾಹಿತಿಪೂರ್ಣ ಲೇಖನ ಬಂದಿತ್ತು. ಅದರಲ್ಲಿ Piems (pi and poem) ಬಗ್ಗೆ ಓದಿದಾಗ ಇಂಥದ್ದೇ ಕವನ (ಪೈದ್ಯ) ಕನ್ನಡದಲ್ಲಿ ಯಾಕೆ ರಚಿಸಬಾರದು ಎಂದು ಅನಿಸಿತು. Piems ನಲ್ಲಿ ಪೈ ಬೆಲೆಯ ಪ್ರತಿಯೊಂದು ಅಂಕಿಗೆ ಸಮವಾಗಿ ಕವನದ ಅಕ್ಷರಗಳ ಜೋಡಣೆ ಇರುತ್ತದೆ. ಅಂದರೆ 3.14159265358... ಈ ಅಂಕಿಗಳಿಗೆ ಸಮವಾಗಿ ಅಕ್ಷರ ಜೋಡಿಸಿದಾಗ ಕವನ ಈ ರೀತಿ ಮೂಡಿಬಂತು. ಗೆಳೆಯಾ ನಾ ಹೇಳಲೇನು ನಾ ಬರೆದಿರುವ ಹೃದಯದಾಕವನವನು ನನ್ನ ಹೃದಯವೀಣೆಯು ಮಿಡಿಯುತಿದೆ ಇನಿಯಾ ಕಾಯುತಿರುವೆ ಒಲುಮೆಯಭಿಕ್ಷೆಗಾಗಿ

ಮಗಳು ಫೋನ್ ಮಾಡಿದ್ಳು...ಇವತ್ತು ಅಪ್ಪಂದಿರ ದಿನ ಅಂತೆ

Image
ಹಲೋ ಪಪ್ಪಾ....ಇವತ್ತು ಅಪ್ಪಂದಿರ ದಿನ...ಹ್ಯಾಪಿ ಫಾದರ್ರ್ಸ್ ಡೇ" ಹೌದೇನಮ್ಮಾ...ಥ್ಯಾಂಕ್ಯೂ...ಅಂತೂ ಅಪ್ಪನಿಗೂ ಒಂದು ದಿನ ಇದೆಯಲ್ಲಾ ಎಂದು ಹೇಳಿದೆ. ಹೇಗಿದ್ದೀರಾ ಪಪ್ಪಾ? ಎಂದು ಕೇಳಿ, ಪಪ್ಪಾ... ಅಮ್ಮನಿಗೆ ಫೋನ್ ಕೊಡು ಎಂದು ಅಂದ್ಳು... ಅಷ್ಟೊತ್ತಿಗೆ ನನ್ನಾಕೆ ನನ್ನ ಬಳಿ ಬಂದು ನಿಂತಿದ್ದಳು. ಫೋನ್ ಆಕೆಯ ಕೈಗಿತ್ತು ನಾನು ಟೀವಿ ಮುಂದೆ ಕೂತೆ. ಅಮ್ಮ ಮಗಳು ಸುಮಾರು ಅರ್ಧ ಗಂಟೆಯವರೆಗೆ ಹರಟುತ್ತಲೇ ಇದ್ದರು. ಹೌದು, ನನ್ನ ಪುಟ್ಟಿ ಚಿಕ್ಕವಳಿರುವಾಗ ಅವಳಿಗೆ ಎಲ್ಲವೂ ನಾನೇ ಆಗಿದ್ದೆ. ನನ್ನನ್ನು ಬಿಟ್ಟು ಆಕೆ ಎಲ್ಲಿಯೂ ಹೋಗಲ್ಲ. ಪಪ್ಪಾ..ಪಪ್ಪಾ ಎನ್ನುತ್ತಾ ನನ್ನ ಕಿರು ಬೆರಳು ಹಿಡಿದು ನಡೆದ ಮಗಳು ಈಗ ದೊಡ್ಡವಳಾಗಿದ್ದಾಳೆ. ಹೆಣ್ಮಕ್ಕಳು ಎಷ್ಟು ಬೇಗ ಬೆಳೆದು ಬಿಡ್ತಾರೆ ಅಲ್ವಾ? ನನ್ನ ಚಪ್ಪಲಿಯೊಳಗೆ ಅವಳ ಪುಟ್ಟ ಪಾದಗಳನ್ನು ತುರುಕಿ ಹೆಜ್ಜೆಯಿಡುತ್ತಾ, ನನ್ನ ಶರ್ಟ್ ಹಾಕಿ ದೊಗಳೆ ಶರ್ಟ್್ನೊಳಗೆ ನಿಂತು "ನೋಡು ಪಪ್ಪಾ ನಿಮ್ಮ ತರಾನೇ ಕಾಣ್ತಾ ಇಲ್ವಾ?" ಎಂದು ಕೇಳುತ್ತಿದ್ದ ಮಗಳು....ನಿದ್ದೆ ಮಾಡುವಾಗಲೂ ಅಷ್ಟೇ...ನನ್ನ ಪಕ್ಕದಲ್ಲೇ ಮಲಗಿ ಒಮ್ಮೊಮ್ಮೆ ನನ್ನ ಹೊಟ್ಟೆ ಮೇಲೆ ಮಲಗಿ ಉಚ್ಚೆ ಹೊಯ್ದು ಒದ್ದೆಯಾಗಿಸುತ್ತಿದ್ದ ನನ್ನ ಪುಟ್ಟಿಗೆ ಈಗ ಮದುವೆ ವಯಸ್ಸು. ಚಿಕ್ಕವಳಿದ್ದಾಗ ಅವಳು ಕೇಳಿದ್ದನ್ನೆಲ್ಲಾ ನಾನು ಕೊಡಿಸುತ್ತಿದ್ದೆ. ಹಾಗಂತ ಅವಳು ಪಪ್ಪಾ...ನನಗೆ ಅದು ಕೊಡಿಸು, ಇದು ಕೊಡಿಸು ಎಂದು ಹಠ ಹಿಡಿದವಳ...

ಪ್ರಜಾವಾಣಿಗೆ 'ಅನುರಾಗ'ದ ನನ್ನಿ...

ಮಾರ್ಚ್ 9, 2012ರ ಪ್ರಜಾವಾಣಿ ಮೆಟ್ರೋ ಪುರವಣಿಯ 'ಬ್ಲಾಗಿಲನು ತೆರೆದು' ಅಂಕಣದಲ್ಲಿ ನನ್ನ ಬ್ಲಾಗ್ 'ಅನುರಾಗ'ದ ಬಗ್ಗೆ ಬರೆಯಲಾಗಿದೆ. ಇವತ್ತಿನ ದಿನ ಡಬಲ್ ಖುಷಿ ನನಗೆ. ಯಾಕೆ ಗೊತ್ತಾ? ಮಾರ್ಚ್ 9 ನನ್ನ ಅಪ್ಪ ಅಮ್ಮನ 35ನೇ wedding anniversary...ಸುದ್ದಿ ತಿಳಿದು ಅಪ್ಪ ಅಮ್ಮ ಫುಲ್ ಖುಷಿಯಾಗಿದ್ದಾರೆ. ಅವರ ಮುಖದಲ್ಲಿ ಖುಷಿ ಕಂಡು ನನಗೂ ಸಂತೋಷವಾಗಿದೆ. ನಮ್ಮೆಲ್ಲರ ಸಂತಸಕ್ಕೆ ಕಾರಣವಾದ ಪ್ರಜಾವಾಣಿಗೆ 'ಅನುರಾಗ'ದ ಧನ್ಯವಾದಗಳು. ನನ್ನಿ, ರಶ್ಮಿ. ಕಾಸರಗೋಡು.

'ಅವಳ್ಯಾಕೆ' ನಮ್ಮ ರೋಲ್ ಮಾಡೆಲ್ ಆಗ್ಬಾರ್ದು?

Image
ಈ ಜಗತ್ತಿನಲ್ಲಿ ಎಷ್ಟು ರೀತಿಯ ಮಹಿಳೆಯರಿದ್ದಾರೆ? ಎಂಬ ಪ್ರಶ್ನೆಯನ್ನು ನಿಮ್ಮಲ್ಲಿ ನೀವೇ ಕೇಳಿ ನೋಡಿ. ಮೊದಲಿಗೆ ಸುಂದರಿಯಾದ ಮಹಿಳೆಯ ಚಿತ್ರಣ ನಿಮ್ಮ ಮುಂದೆ ಬರುತ್ತದೆ ನಂತರ ನೊಂದ ಮಹಿಳೆ, ಯಶಸ್ವೀ ಮಹಿಳೆ, ದೌರ್ಜನ್ಯಕ್ಕೊಳಗಾದ ಮಹಿಳೆ, ಖಿನ್ನಳಾದ ಮಹಿಳೆ, ಸುಖಿ ಮಹಿಳೆ, ಅಹಂಕಾರಿ ಮಹಿಳೆ, ಮಾನ ಮಾರಿದ ಮಹಿಳೆ, ಮಕ್ಕಳನ್ನೇ ಕೊಂದ ಪಾಪಿ ಮಹಿಳೆ, ಕೈಕೊಟ್ಟ ಮಹಿಳೆ, ಕೈ ಹಿಡಿದ ಮಹಿಳೆ...ಹೀಗೆ ಮಹಿಳೆಯ ಹಲವಾರು 'ರೂಪ'ಗಳು ನಿಮ್ಮ ಕಣ್ಣ ಮುಂದೆ ಸುಳಿಯುತ್ತವೆ. ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಈ ಸಂದರ್ಭದಲ್ಲಿ ಚರ್ಚಾ ವಿಷಯಗಳಿಗೊಳಗಾಗುವ ಮಹಿಳೆಯರೆಂದರೆ ಒಂದು ಯಶಸ್ವೀ ಮಹಿಳೆ ಇನ್ನೊಂದು ದೌರ್ಜನ್ಯಕ್ಕೊಳಗಾದ ಮಹಿಳೆ. ಇಂತಹಾ ದಿನಾಚರಣೆಗಳಲ್ಲಿ ಯಶಸ್ವೀ ಮಹಿಳೆಯ ಸಾಧನೆ ಹಾಗೂ ದೌರ್ಜನ್ಯಕ್ಕೊಳಗಾದ ಮಹಿಳೆಯ 'ರೋದನೆ' ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳುತ್ತದೆ. ಮಹಿಳಾ ದಿನಾಚರಣೆಯ ಕಾರ್ಯಕ್ರಮಗಳಲ್ಲಿ ನಾವು ಓರ್ವ ಸಾಧಕಿಯ ಸಾಧನೆಗಳನ್ನು ಮೆಚ್ಚಿ ಕರತಾಡನ ಮಾಡಿದರೆ ಇನ್ನೊಂದೆಡೆ ದೌರ್ಜನ್ಯಕ್ಕೊಳಗಾದ ಮಹಿಳೆಯ ಪರ ದನಿಗೂಡಿಸುತ್ತೇವೆ. ಒಬ್ಬಳು ಯಶಸ್ಸಿನ ಮೆಟ್ಟಿಲು ಹತ್ತುತ್ತಿದ್ದರೆ ಇನ್ನೊಬ್ಬಳು ದೌರ್ಜನ್ಯದ ನೋವು ಅನುಭವಿಸುತ್ತಿರುತ್ತಾಳೆ. ಹಾಗೆ ನೋಡಿದರೆ ಯಶಸ್ವೀ ಮಹಿಳೆ ಹಾಗೂ ದೌರ್ಜನ್ಯಕ್ಕೊಳಗಾದ ಮಹಿಳೆಯನ್ನು ಎರಡು ಗುಂಪುಗಳಿಗೆ ಸೇರಿಸಿ ಪ್ರತ್ಯೇಕಿಸಬಹುದು. ಆದರೆ ಕೆಲವೊಂದು ಮಹಿಳೆಯರ ಮೇಲೆ ಆಗುವ ದೌ...