ಇಲ್ಲ..ನನಗೆ ನಿನ್ನಲ್ಲಿ ಮುನಿಸು

ನಾ ನಡೆವ ದಾರಿಯಲಿ
ನಿನ್ನ ಪಾದದ ಗುರುತು
ಇರದೇ ಇರಬಹುದು ನಿನ್ನ ನೆರಳು
ನಿನ್ನ ಕನಸಿನಲಿ ನಾ
ಇಲ್ಲದಿರಬಹುದು ಗೆಳೆಯಾ...


ನೀ ಸುರಿವ ಮಳೆಯಾದರೇನು?
ಇಂಗಲು ನನ್ನೊಡಲ ತಳವಿದೆ
ನೀ ಸುಡುವ ಬಿಸಿಲಾದರೇನು?
ನನ್ನ ಹೃದಯದ ಗುಡಿಸಲೊಳಗೆ
ತಣ್ಣನೆಯ ನೆರಳಿದೆ....

ನಿನ್ನ ಹೃದಯ ಬಾನಂತಿದ್ದರೇನು?
ಹಕ್ಕಿಯಾಗಿ ನಿನ್ನತ್ತ ಹಾರಿ ಬರುವೆ
ನೀನು ಭುವಿಯಂತೆ ಮಲಗಿದ್ದರೇನು?
ಹನಿ ಹನಿಯಾಗಿ ಬಿದ್ದು
ಪನ್ನೀರ ಚಿಮುಕಿಸುವೆ!


ಸಮಾಂತರ ರೇಖೆಗಳು ನಾವು
ಬಾಳ ಪಯಣಯದಲ್ಲಿ
ಬೆಳಗು ರಜನಿಯಂತಿದೆ ನಮ್ಮ ಮಿಲನ
ಜತೆಯಾಗಿದ್ದರೂ ಸೇರಲ್ಲ
ಸೇರಿದರೂ ಬೆರೆಯಲ್ಲ

ನಿನ್ನ ಪುಟ್ಟ ಹೃದಯದಲ್ಲಿ
ನಾನಾಗಲಾರೆ ನಿನ್ನ 'ಕೆಟ್ಟ' ನೆನಪು
ನಿನ್ನ ಹೃದಯವ ಕದ್ದೊಯ್ಯಲಾರೆ
ನನ್ನಾಣೆಗೂ,
ಇಲ್ಲ..ನನಗೆ ನಿನ್ನಲ್ಲಿ ಮುನಿಸು

Comments

Sandeep K B said…
i liked the 2nd and 3rd paragraph...
Nice lines.
Shashikiran.M said…
"ಸಮಾಂತರ ರೇಖೆಗಳು" ಅಲ್ಲ. ಅದು "ಸಮಾನಾಂತರ ರೇಖೆಗಳು" ಆಗಬೇಕು.
ಇದು ನನಗೆ ಮಾಯಾಮೃಗದ ಒಂದು ಡೈಲಾಗ್ ನೆನಪಿಸಿತು.
ಸಮಾನಾಂತರ ರೇಖೆಗಳ ಹಾಗೇ ಇರೋಣ ಅಂತ ಮಾಳವಿಕಾ ಅವಿನಾಶ್ಗೆ ಹೇಳುವ ಡೈಲಾಗ್ ಇದು.

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ