ಹ್ಯಾಪಿ ಬರ್ತ್ ಡೇ ಟು ಮೀ...
ಇವತ್ತು ನನ್ನ ಬ್ಲಾಗ್ ಅನುರಾಗದ ಹುಟ್ಟು ಹಬ್ಬ. ಕಳೆದ 4 ವಷ೯ಗಳಿಂದ ನನ್ನ ಮನಸ್ಸಿಗೆ ತೋಚಿದ್ದೆಲ್ಲವನ್ನೂ ಈ ಬ್ಲಾಗ್ ನಲ್ಲಿ ಗೀಚಿದ್ದೇನೆ. ಉದ್ಯೋಗದ ನಿಮಿತ್ತ ಚೆನ್ನೈಗೆ ತೆರಳಿದಾಗ ಕನ್ನಡದಲ್ಲಿ ಹೇಗೆ ಟೈಪ್ ಮಾಡಬೇಕೆಂದೇ ಗೊತ್ತಿರಲಿಲ್ಲ. ಅಲ್ಲಿ ಕನ್ನಡ ಟೈಪ್ ಮಾಡಲು ಕಲಿತೆ. ಇಂಟರ್ನೆಟ್ ನಲ್ಲಿ ಇನ್ನೊಬ್ಬರ ಬ್ಲಾಗ್ ನೋಡುತ್ತಿದ್ದರೆ ನನಗೂ ಒಂದು ಬ್ಲಾಗ್ ಬೇಕೆಂಬ ಆಸೆ ಹುಟ್ಟಿಕೊಂಡಿತ್ತು. ಆವಾಗ ಹುಟ್ಟಿಕೊಂಡದ್ದೇ ಅನುರಾಗ. ಆಮೇಲೆ ಸಮಯ ಸಿಕ್ಕಾಗೆಲ್ಲಾ ಬ್ಲಾಗ್ ನಲ್ಲಿ ಗೀಚಿದ್ದೇ ಗೀಚಿದ್ದು, ಕೆಲವೇ ಸಮಯಗಳಲ್ಲಿ ನಾನೂ ಬ್ಲಾಗ್ ಲೋಕದಲ್ಲಿ ಪರಿಚಿತಳಾಗಿಬಿಟ್ಟೆ.ಅನುರಾಗದೊಂದಿಗೆ ಇನ್ನು ಮೂರು ಬ್ಲಾಗ್ ಗಳನ್ನು ಆರಂಭಿಸಿದೆ. ಬ್ಲಾಗ್ ಲೋಕದಲ್ಲಿನ ಈ ಪಯಣದಲ್ಲಿ ಹಲವಾರು ಗೆಳೆಯರು ಹಿತೈಷಿಗಳು ಸಿಕ್ಕಿದರು.ನನ್ನ ಲೇಖನಕ್ಕೆ ಪ್ರತಿಕ್ರಿಯೆ ನೀಡುವ ಮೂಲಕ ಪ್ರೋತ್ಸಾಹಿಸಿದರು. ಇನ್ನು ಕೆಲವರು ಕಾಲೆಳೆದರು. ಕೆಲವು ಕಾಲಗಳ ವರೆಗೆ ನನ್ನ ಬ್ಲಾಗ್ ನಿದ್ರಾವಸ್ಥೆಯಲ್ಲಿತ್ತು. ಈಗ ಮತ್ತೆ ಎಚ್ಚೆತ್ತುಕೊಂಡಿದೆ.
ನಿಮ್ಮೆಲ್ಲರ ಆಶೀವಾ೯ದ ಮತ್ತು ಪ್ರೋತ್ಸಾಹದೊಂದಿಗೆ ಬ್ಲಾಗ್ ಲೋಕದಲ್ಲಿ ನನ್ನ ಪಯಣ ಸಾಗುತ್ತಿದೆ...ಅನುರಾಗದೊಂದಿಗೆ...
ಎಲ್ಲರಿಗೂ ನನ್ನಿ,
ರಶ್ಮಿ ಕಾಸರಗೋಡು.
Comments