Posts

ನಾನೂ ನನ್ನ ಸ್ವಂತ ಕನಸು...

ಶೀರ್ಷಿಕೆ ನೋಡಿದ ಕೂಡಲೇ ಪ್ರಕಾಶ್ ರೈ ಸಿನಿಮಾದ ಬಗ್ಗೆ ಹೇಳುತ್ತಿದ್ದೇನೆ ಅಂತಾ ತಿಳಿದುಕೊಳ್ಳಬೇಡಿ. ಅದಕ್ಕೆ 'ಸ್ವಂತ 'ಎಂಬ ಪದವನ್ನು ತುರುಕಿಸಿದ್ದು. ಆ ಚಿತ್ರ ವೀಕ್ಷಿಸಿದಾಗ ಎಲ್ಲರಂತೆ ನನಗೂ ನನ್ನ ಅಪ್ಪನ ನೆನಪು ತುಂಬಾ ಕಾಡಿತ್ತು. ನನ್ನ ಪಪ್ಪ ಅಂದ್ರೆ ಹಾಗೇನೇ...ತುಂಬಾ ಸ್ವೀಟ್. ಪಪ್ಪನ ಮುದ್ದಿನ ಮಗಳು ನಾನು. ತನ್ನ ತಮ್ಮ ಅಮ್ಮನ ಸೀರೆ ಸೆರಗು ಹಿಡಿದು ಓಡಾಡುತ್ತಿದ್ದರೆ, ಅಪ್ಪನೇ ನನ್ನ ಬೆಸ್ಟ್ ಫ್ರೆಂಡ್. ನನಗೆ ಎರಡು ವರ್ಷವಿರುವಾಗಲೇ ನಾನು ಅಪ್ಪನ ಎದೆಗೆ ಅಂಟಿಕೊಂಡು ನಿದ್ದೆಹೋಗುತ್ತಿದ್ದೆ. ಅಮ್ಮನ ಗೊಡವೆಯೇ ಇಲ್ಲ, ಅವಳಿಗೆ ಅಪ್ಪ ಮಾತ್ರ ಸಾಕಿತ್ತು ಎಂದು ಅಮ್ಮ ಈಗಲೂ ನನ್ನ ಬಾಲ್ಯವನ್ನು ನೆನಪಿಸುತ್ತಾರೆ. ಆ ಬಾಲ್ಯವೇ ಅಂತದ್ದು, ಎಲ್ಲದಕ್ಕೂ ನಂಗೆ ಪಪ್ಪ ಬೇಕು. ಸ್ನಾನ ಮಾಡಿಸುವುದು, ತಿಂಡಿ ತಿನಿಸುವುದು, ಶಾಲೆಗೆ ರೆಡಿ ಮಾಡಿಸುವಾಗ ಜಡೆ ಹಾಕಲು ಮಾತ್ರ ಅಮ್ಮ (ಅದು ಅಪ್ಪನಿಗೆ ಗೊತ್ತಿಲ್ಲದ ಕಾರಣ)ನನ್ನು ಕರೆಯುತ್ತಿದ್ದೆ. ನಾನು ಚಿಕ್ಕವಳಿರುವಾಗ ಅಮ್ಮ ಅಂದ್ರೆ ನಂಗೆ ತುಂಬಾ ಭಯ. ಅಣ್ಣನ ತುಂಟಾಟಿಕೆಗೆ ಬೈಯ್ಯುವ ಅಮ್ಮನನ್ನು ನೋಡಿದರೆ ನನಗೆ ನಡುಕ. ಅಪ್ಪ ನಮ್ಮನ್ಯಾರನ್ನು ಬೈಯ್ಯಲ್ಲ. ತುಂಬಾ ಪ್ರೀತಿಯಿಂದಲೇ ಎಲ್ಲವನ್ನೂ ಹೇಳಿಕೊಡುತ್ತಿದ್ದರು. ಅದು ಮಾಡಬಾರದು ಇದು ಮಾಡಬಾರದು ಎಂದು ಯಾವತ್ತಿಗೂ ಒತ್ತಡ ಹಾಕುತ್ತಿರಲಿಲ್ಲ ಮಾತ್ರವಲ್ಲದೆ ಮಾಡಬಾರದು ಎಂದು ಹೇಳಿದರೆ ಅದ್ಯಾಕೆ ಮಾಡಬಾರದು? ಎಂದು ನಮಗೆ ವಿವರಿಸಿ ಹೇಳುತ್ತಿದ...

ಹೆಣ್ಣು ನೋಡೋದು ಅಂದ್ರೆ ಸುಮ್ನೇನಾ?

ನ ಮ್ಮ ಈ ಆನಂದ ಇದ್ದಾನಲ್ಲ...ಇವನಿಗೆ ಬರೀ ಹೆಣ್ಣು ನೋಡೋದೆ ಕೆಲ್ಸ .ಆದಾಗ್ಯೂ, ವಯಸ್ಸು ಇಪ್ಪತ್ಮೂರು ದಾಟಿದ ಮೇಲೆ ಹೆಣ್ಣು ಹುಡುಕೋಕೆ ಆರಂಭ ಮಾಡಿದ್ದಾನೆ ಈ ಮಹಾನುಭಾವ. ಈ ಶೋಧ ಕಾರ್ಯ ಆರಂಭವಾಗಿ ಮೂರು ವರ್ಷಗಳಾದರೂ ಇವನ ಮನಸ್ಸಿಗೆ ಒಪ್ಪುವಂತ ಹುಡುಗಿ ಈವರೆಗೆ ಯಾವುದೂ ಸಿಕ್ಕಿಲ್ಲಂತೆ. ಹೆಣ್ಣು ನೋಡೋಕೆ ಹೋಗೋದರಲ್ಲೇ ಇವನು ಆನಂದ ಕಂಡುಕೊಂಡಿದ್ದಾನೆ ಎಂದರೆ ಅತಿಶಯೋಕ್ತಿಯಾಗಲಾರದು. ತಾಳಿ ಕಟ್ಟಲು ಯೋಗ್ಯವಾದ ಹುಡುಗಿ ಬೇಕೂಂತಾ ಇವ ಅಲೆಯದ ಊರಿಲ್ಲ. ಕುಡಿಯದ ಬಾವಿ, ಬೋರ್್ವೆಲ್, ಬಾಟಲಿ ನೀರಿಲ್ಲ. ಈವರೆಗೆ ಹುಡುಗಿ ನೋಡೋಕೆ ಹೋಗಿ ಅಲ್ಲಿನ ಕಾಫಿ, ತಿಂಡಿ, ಊಟ ಮಾಡಿಕೊಂಡು ದೇಹದ ಭಾರ ಜಾಸ್ತಿ ಮಾಡಿದ್ದಲ್ಲದೆ ಬೇರ್ಯಾವ ಬದಲಾವಣೆಯೂ ಇವನಲ್ಲಿ ಕಂಡುಬಂದಿಲ್ಲ. ಹುಡುಗಿ ನೋಡಿದ ಮೇಲೆ, ಹೇಗೆ ...ನಿಂಗೆ ಇಷ್ಟ ಆಯ್ತಾ? ಅಂತಾ ಬ್ರೋಕರ್ ಕೇಳಿದ್ರೆ, "ಹುಡುಗಿ ರಾಗಿಣಿಯಷ್ಟು ಎತ್ತರ ಇಲ್ಲ, ರಕ್ಷಿತಾನಂತೆ ಡುಮ್ಮಿ, ರಮ್ಯಾನಂತೆ ಮೂಗಿನಲ್ಲಿ ಕೋಪ, ಬಿಪಾಶಾನಂತೆ ಕಪ್ಪು, ಪೂಜಾ ಗಾಂಧಿ ತರಾ ಸ್ಮೈಲಾದ್ರೂ ಬೇಡ್ವ?. ಕನಿಷ್ಠ ಐಶ್ವರ್ಯಾಳಂತ ಕಣ್ಣು, ಪ್ರಿಯಾಮಣಿಯಂತಾ ಫಿಗರು, ಮೀರಾ ಜಾಸ್ಮಿನ್ ತರಾ ಸ್ವಲ್ಪ ನಾಚಿಕೆಯಾದ್ರೂ ತೋರಿಸ್ಬೇಡ್ವೆ? ಇದ್ಯಾವುದೇ ಗುಣಗಳಿಲ್ಲದ ಹೆಣ್ಣನ್ನು ನಾನು ವರಿಸುವುದೇ? "ಎಂದು ಮರುಪ್ರಶ್ನಿಸುತ್ತಿದ್ದ. "ಏನು ಮಾರಾಯಾ... ನೀನು ಹೇಳುವ ಸೈಜಿನ, ತೂಕದ ಹುಡುಗಿಯನ್ನು ಕಂಡುಹಿಡಿಬೇಕಾದ್ರೆ ನಂಗೆ ಈ ಜನ್ಮ ಸಾಕಾ...

ಬಚ್ಚಲು ಕೋಣೆಯೊಳಗೊಮ್ಮೆ ಇಣುಕಿ...

ಬಚ್ಚಲು ಕೋಣೆಯೊಳಗೊಮ್ಮೆಇಣುಕಿ ನೋಡಿ... ಪುಟ್ಟ ಬಾಲೆಯು ಕದ್ದು ತಿಂದು ಗೊತ್ತಾಗಬಾರದೆಂಬಂತೆ ಬಾಯಿ ಮುಕ್ಕಳಿಸುತ್ತಿರಬಹುದು.. ಹದಿಹರೆಯದ ನಿಮ್ಮ ಮಗಳು ಕದ್ದು ಮುಚ್ಚಿ ಪ್ರೇಮಪತ್ರವನ್ನೋದುತಿರಬಹುದು ಬಹುಷಃ ಮೊಬೈಲ್ ಹಿಡಿದು 'ಅವನಲ್ಲಿ' ಪಿಸುಗುಟ್ಟುತ್ತಿರಬಹುದು ದುಃಖವನ್ನು ಅದುಮಿಟ್ಟ ಮಡದಿ ಯಾರೂ ಅರಿಯದಂತೆ ಕಣ್ಣೀರು ಹಾಕುತ್ತಿರಬಹುದು... ಬಹಿರ್ದೆಸೆಗೆ ಹೋದ ನಿಮ್ಮಮ್ಮ ಕಾಲು ಜಾರಿ ಬಿದ್ದು ಗೋಳಾಡುತ್ತಿರಲೂ ಬಹುದು... ಎಂದಾದರೊಂದು ದಿನ ನೀವೂ ಅತ್ತಿರಬಹುದು, ಬಿದ್ದಿರಬಹುದು ಕೋಪ ತಣಿಸಿಕೊಂಡಿರಬಹುದು ಇದೇ ಬಚ್ಚಲು ಕೋಣೆಯಲ್ಲಿ ಹೀಗೆ ಬಚ್ಚಲು ಮನೆ 'ರಹಸ್ಯ' ಮುಗಿಯುವುದೇ ಇಲ್ಲ...

ಮೊದಲ ಫಸಲಿನ ಸಂಭ್ರಮಕ್ಕೆ ಅಭಿಮಂತ್ರಣ....

ಅಂತೂ ಮಳೆ ಬಂದಿದೆ, ನಿರೀಕ್ಷೆಯೂ ಮುಗಿದಿದೆ... ಕಾವ್ಯ ಕೃಷಿಯ ಮೊದಲ ಬೆಳೆ ನೆನಪಿನ ಮಳೆಯಲ್ಲಿ ಕವನ ಸಂಕಲನದ ರೂಪದಲ್ಲಿ ಸಿದ್ಧವಾಗಿದೆ. ಜನವರಿ 10, 2010 ಭಾನುವಾರ ಬೆಳಗ್ಗೆ 10.30ಕ್ಕೆ ಕಾಸರಗೋಡಿನ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲ್್ನಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಹೂರ್ತ ಇಟ್ಟಾಗಿದೆ. ನೀವು ಬರುವುದೊಂದು ಬಾಕಿ ಮತ್ತೆಲ್ಲಾ ಕಾಲ ಮತ್ತು ನಿರೀಕ್ಷೆ.... ನಿಮ್ಮದೇ ನೆನವರಿಕೆಯಲ್ಲಿ, ರಶ್ಮಿ.

ಲಾಸ್ಟ್ ಬೆಂಚ್ ಲೀಲೆ...

ಎಲ್ಲಾ ಅಪ್ಪ ಅಮ್ಮಂದಿರಂತೆ ನನ್ನ ಅಪ್ಪ ಅಮ್ಮನಿಗೂ ನಾನು ಫಸ್ಟ್ ಬೆಂಚ್ ಸ್ಟೂಡೆಂಟ್ ಆಗಿರಬೇಕೆಂಬ ಆಸೆ. ಆದಾಗ್ಯೂ, ಕಲಿಕೆಯಲ್ಲಿ ಚುರುಕು (ಆವಾಗ) ಮತ್ತು ನನ್ನ ಎತ್ತರ ಕಡಿಮೆ ಇದ್ದುದರಿಂದ :)ಪ್ಲಸ್ ಟು ವರೆಗೆ ನಾನು ಫಸ್ಟ್ ಬೆಂಚ್್ನಲ್ಲೇ ಕುಳಿತದ್ದು. ಏನಿದ್ದರೂ ಕ್ಲಾಸಿನಲ್ಲಿ ಫಸ್ಟ್ ಬೆಂಚ್ ಸ್ಟೂಡೆಂಟ್ ಅಂತಾ ಹೇಳಿಕೊಳ್ಳುವುದರಲ್ಲಿ ಏನೋ ಒಂದು ರೀತಿ ಹೆಮ್ಮೆ. ಫಸ್ಟ್ ಬೆಂಚ್ ಅಂದರೆ ವಿಐಪಿಗಳ ಸೀಟು, ಅಲ್ಲಿ ಕುಳಿತುಕೊಳ್ಳುವವರೆಲ್ಲಾ ಬುದ್ಧಿವಂತರು, ಲಾಸ್ಟ್ ಬೆಂಚ್್ನಲ್ಲಿ ಕುಳಿತುಕೊಳ್ಳುವವರೆಲ್ಲರೂ ದಡ್ಡರು ಎಂಬುದು ಅಂಬೋಣ. ಅದಕ್ಕಾಗಿಯೇ ವಿದ್ಯಾರ್ಥಿ ದೆಸೆಯಲ್ಲಿ ಫಸ್ಟ್ ಬೆಂಚ್್ನಲ್ಲಿ ಕುಳಿತುಕೊಳ್ಳುವುದೆಂದರೆ ಏನೋ ಸಾಧನೆ ಮಾಡಿದಂತೆ. ಜೊತೆಗೆ ಹೆತ್ತವರಿಗೂ ತಮ್ಮ ಮಕ್ಕಳು ಫಸ್ಟ್ ಬೆಂಚ್್ನಲ್ಲಿ ಕುಳಿತುಕೊಳ್ಳುತ್ತಿದ್ದಾರೆ ಎಂದು ಹೇಳಲು ಹೆಮ್ಮೆಯ ವಿಷಯವೇ. ಫಸ್ಟ್ ಬೆಂಚಿನಲ್ಲಿ ಕುಳಿತುಕೊಳ್ಳುವವರೆಲ್ಲಾ ಜಾಣರು, ಅವರು ನಗುವುದು ಕಡಿಮೆ ಎಂದೆಲ್ಲಾ ಲಾಸ್ಟ್ ಬೆಂಚ್್ನವರು ಕಿರಿಕ್ ಮಾಡುತ್ತಾರೆ. ಅದು ನಿಜವೂ ಹೌದು. ನಾನೇನು ಕಲಿಕೆಯಲ್ಲಿ ಹಿಂದೆ ಬಿದ್ದಿಲ್ಲ, ಆದ್ರೆ ಪ್ಲಸ್ ಟು ವರೆಗೆ ಫಸ್ಟ್ ಬೆಂಚ್್ನಲ್ಲಿ ಕುಳಿತು ಪಾಠ ಕೇಳುವುದು ಬೋರು ಬೋರು ಎನಿಸಿತ್ತು. ಕಾಲೇಜಿಗೆ ಕಾಲಿಟ್ಟ ಮೇಲೆ ಏನೋ ಸಮಾಧಾನ. ಇನ್ಮುಂದೆ ಯಾರು ನೀನು ಈ ಬೆಂಚ್್ನಲ್ಲೇ ಕುಳಿತುಕೊಳ್ಳಬೇಕೆಂದು ಹೇಳಲ್ಲ. ನಮ್ಮದು ಇಂಜಿನಿಯರಿಂಗ್ ಕಾಲೇಜು, 40 ಮಂದಿಯಿರುವ ಒಂದು ಕ್ಲ...

ಹೆಸರಲ್ಲಿ ಏನು (ಎಲ್ಲಾ) ಇದೆ!

ಸುಮ್ಮನೆ ಕುಳಿತಿದ್ದರೆ ತಲೆಯಲ್ಲಿ ಹುಳು ಹೊಕ್ಕಂತೆ ಏನೆಲ್ಲಾ ಯೋಚನೆ ಬಂದುಬಿಡುತ್ತೆ. ಅದಕ್ಕೆ ಏನಾದರೊಂದು ಕೆಲಸ ಮಾಡುತ್ತಾ ಇರಬೇಕೆಂದು ನನ್ನಮ್ಮ ಹೇಳ್ತಾ ಇರುತ್ತಾರೆ. ಹುಂ ಅದರಂತೆಯೇ ನಾನು ಏನಾದರೂ (ಏನೆಲ್ಲಾ ಅಂತ ಮಾತ್ರ ಕೇಳ್ಬೇಡ್ಲಿ..ಪ್ಲೀಸ್) ಕೆಲಸದಲ್ಲಿ ನನ್ನನ್ನು ತೊಡಗಿಸಿಕೊಂಡು ಬ್ಯುಸಿಯಾಗಿರುತ್ತೇನೆ. ಅದಲ್ಲಾ ಪಕ್ಕಕ್ಕಿರಲಿ, ಸದ್ಯ ಏನಾದರೂ ಕೆಲಸ ಮಾಡಬೇಕಲ್ಲಾ ಎನ್ನುವಾಗಲೇ ನನ್ನ ಬಗ್ಗೆಯೇ ನಾನು ಶೋಧ ನಡೆಸಲು ತೊಡಗಿದ್ದೇನೆ. ಇದೇನು ಈ ತರ್ಲೆ ಹುಡುಗಿ ಆಧ್ಯಾತ್ಮದತ್ತ ತಿರುಗಿದಳೇನೋ ಎಂದು ಅಂದುಕೊಳ್ಬೇಡಿ. ನನ್ನ ಬಗ್ಗೆ ನಾನು ಶೋಧ ನಡೆಸುತ್ತಿರುವುದು ಗೂಗಲ್ ಎಂಬ ಸರ್ಚ್ ಇಂಜಿನ್್ನಲ್ಲಿ. ಯಾವಾಗ ಇಂಟರ್್ನೆಟ್ ನನಗೆ ಪರಿಚಿತವಾಯಿತೋ ಅಂದಿನಿಂದ ನನಗೂ ಗೂಗಲ್್ಗೂ ಬಿಟ್ಟಿರಲಾಗದ ನಂಟು. ಮೊದಲ ಬಾರಿ ಗೂಗಲ್ ಎಂಬ ಸರ್ಚ್ ಇಂಜಿನ್್ನ್ನು ಓಪನ್ ಮಾಡಿ ಅದರಲ್ಲಿ ಹುಡುಕಿದ್ದೇ ನನ್ನನ್ನು. ಅಂದ್ರೆ ನನ್ನ ಹೆಸರು. ರಶ್ಮಿ ಅಂತ ಟೈಪ್ ಮಾಡಿ ಎಷ್ಟು ಜನ ರಶ್ಮಿಯರು ಎಲ್ಲೆಲ್ಲಿ ಇದ್ದಾರೆ? ಯಾವ್ಯಾವ ಸರ್್ನೇಮ್್ಗಳಲ್ಲಿ ಇದ್ದಾರೆ ಎಂದೆಲ್ಲಾ ಕುತೂಹಲದಿಂದ ಗಮನಿಸಿದ್ದೆ. ಪ್ರತಿಯೊಬ್ಬರಿಗೂ ಅವರವರ ಹೆಸರಿನ ಬಗ್ಗೆ ಹೆಮ್ಮೆ ಇರುವಂತೆ ನನಗೂ ಇದೆ. ಎಲ್ಲಾ ಅಪ್ಪ ಅಮ್ಮಂದಿರಿಗೂ ಮಗು ಹುಟ್ಟಿದಾಗ ತಮ್ಮ ಮಕ್ಕಳಿಗೆ ವಿಶಿಷ್ಟ ಹೆಸರಿಡಬೇಕೆಂಬ ಹಂಬಲ ಇದ್ದೇ ಇರುತ್ತದಲ್ಲಾ ಅದೇ ಹಂಬಲ ನನ್ನ ಅಪ್ಪ ಅಮ್ಮನಿಗೂ ಇತ್ತು. ನನ್ನದು ಅಂತಾ ವಿಶಿಷ್ಟ ಹೆಸರೇನು ಅಲ್ಲ...

ಪ್ರೀತಿ ಹನಿ

ಪ್ರೀತಿ ಹನಿಯೇ...ಇನ್ನೇನು ಜಾರಿ ಬಿಡಬೇಕೆಂದಿರುವೆಯಾ ನನಗಾಗಿ ನಿಲ್ಲು ಅಲ್ಲೇ ಒಂದಿಷ್ಟು ಹೊತ್ತು ನಿನ್ನ ಕಣ್ಣೀರಿನೊಳು ತುಳುಕಲಿ ನನ್ನ ಪ್ರೀತಿಯ ನೆನಪು ಹರಿದು ಸೋಕಲಿ ನಿನ್ನ ಭಾವನೆಯನು... ದೂರವಾಗುವೆ ನೀನೀಗ ಇನ್ನೇನು ನನ್ ಕಣ್ಣು ಮಿಟುಕುವ ವೇಳೆಯಲಿ ಈ ವಿರಹವನು ನಾ ಹೇಗೆ ಸಹಿಸಲಿ? ಆದರೂ ಉಕ್ಕಿ ಹರಿದ ನಿನ್ನ ಕಣ್ಣೀರಲಿ ಕಾಣುತಿದೆ ನನ್ನ ಪ್ರೀತಿಯ ಪ್ರತಿಬಿಂಬ ಈ ಕ್ಷಣದ ಸ್ಪರ್ಶವನು ಮರೆಯಲೆಂತು?