Posts

ಮದರಂಗಿ ಪುರಾಣ

Image
ಕೈ ಗಳಿಗೆ ಮದರಂಗಿ ಹಚ್ಚಿ ಸಿಂಗರಿಸುವುದು ಯಾರಿಗೆ ಇಷ್ಟ ಇಲ್ಲ ಹೇಳಿ? ಚಿಕ್ಕಂದಿನಿಂದಲೂ ನನಗೆ ಕೈ ಕಾಲಲ್ಲಿ ಮದರಂಗಿ ಚಿತ್ತಾರ ಬಿಡಿಸುವುದೆಂದರೆ ತುಂಬಾ ಇಷ್ಟ. ಕೃಷ್ಣವರ್ಣವಾಗಿರುವುದರಿಂದ ನನ್ನ ಕಾಲಲ್ಲ ಕೆಂಪು ಬಣ್ಣ ಎದ್ದು ಕಾಣುತ್ತಿರಲಿಲ್ಲ...ಆದ್ರೆ ಅಂಗೈ ತುಂಬಾ ಕೆಂಪು ಕೆಂಪು ಚಿತ್ತಾರ. ಅದೂ ಎರಡೂ ಕೈಗೆ. ಎರಡೂ ಕೈಗಳಿಗೆ ಮದರಂಗಿ ಹಚ್ಚಿದ್ದನ್ನು ನೋಡಿ ಗೆಳತಿಯರು ನೀನೇನು ಮದುಮಗಳಾ? ಎಂದು ಕೇಳಿದರೆ ಐ ಡೋಂಟ್ ಕೇರ್. ಮದರಂಗಿಯ ಕೆಂಪು, ಕಂಪು ನನಗೆ ಖುಷಿ ಕೊಡುತ್ತದೆ ಎಂದಾದರೆ ನಾನ್ಯಾಕೆ ಇಂಥಾ ಪ್ರಶ್ನೆಗಳಿಗೆ ತಲೆ ಕೆಡಿಸಿಕೊಳ್ಳಲಿ? ಜನ್ಮಾಷ್ಟಮಿ ಬಂದರಂತೂ ಕೈಯಲ್ಲಿ ಮೆಹಂದಿ ಇರಲೇ ಬೇಕು. ಇನ್ನು ಸಂಬಂಧಿಕರ ಮದುವೆ ಹೋಗುವಾಗ ಕೈಯಲ್ಲಿ ಮದರಂಗಿ ಇಲ್ಲದೇ ಇದ್ದರೆ ಹೇಗೆ? ಏನಿದ್ದರೂ ಮೆಹಂದಿ ಹಚ್ಚಿಕೊಳ್ಳುವ ಸಂಭ್ರಮ, ಆ ಚಿತ್ತಾರದ ಸೊಬಗನ್ನು ನೋಡಿ ಆಸ್ವಾದಿಸುವ ಪರಿ ಇದೆಲ್ಲವೂ ಪದಗಳಿಗೆ ನಿಲುಕದ್ದು.. ಈಗಿನ ಜಮಾನದ ಮಕ್ಕಳಂತೆ ನಾವು ಚಿಕ್ಕವರಿರುವಾಗ ಮೆಹಂದಿ cone ಬಳಸುತ್ತಲೇ ಇರಲಿಲ್ಲ. ಮನೆಯ ಮುಂದೆ ಮದರಂಗಿ ಗಿಡ ಇತ್ತು. ಅದರ ಎಲೆ ಕೊಯ್ದು...ನುಣ್ಣನೆ ಅರೆದು ಅದಕ್ಕೆ ಅಳೆದು ತೂಗಿ ನೀರು ಹಾಕಿ ಕೈಗೆ ಮೆತ್ತುತ್ತಿದ್ದೆವು. ಮದರಂಗಿ ಕೆಂಪಾಗಲಿ ಎಂದು ಅದಕ್ಕೆ ಚಹಾ Decoction ಹಾಕ್ತಿದ್ದೆವು. ಇಲ್ಲದೇ ಇದ್ದಲ್ಲಿ ಮೆಹಂದಿ ಒಣಗುತ್ತಿದ್ದಂತೆ ಸಕ್ಕರೆ ನೀರು ಇಲ್ಲವೇ ಲಿಂಬೆ ಹುಳಿ ಹಿಂಡುತ್ತಿದ್ದೆವು. ಅಕ್ಕ ಹಾಸ್ಟೆಲ್್ನಲ್ಲ...

ಅವಳು ಮತ್ತೊಬ್ಬಳು!- ಕೃತಿ ಬಿಡುಗಡೆಗೆ ಆಮಂತ್ರಣ

Image
ಪ್ರಿಯರೇ, 2 ವರ್ಷಗಳ ಹಿಂದೆ ಕನ್ನಡಪ್ರಭ 'ಚುಕ್ಕಿ' ಪುರವಣಿಯಲ್ಲಿ ಸಾಧಕಿಯರ ಬಗ್ಗೆ ನಾನು ಬರೆದ ಲೇಖನಗಳನ್ನು ಇದೀಗ ಪುಸ್ತಕರೂಪದಲ್ಲಿ ಹೊರತರುತ್ತಿದ್ದೇನೆ. ಕೃತಿ ಹೆಸರು ಅವಳು ಮತ್ತೊಬ್ಬಳು!. ನಾನು ಪತ್ರಿಕೋದ್ಯಮಕ್ಕೆ ಕಾಲಿಟ್ಟು ಇದು ನಾಲ್ಕನೇ ವರ್ಷ. ಎರಡು ವರ್ಷಗಳ ಹಿಂದೆ ನನ್ನ ಚೊಚ್ಚಲ ಕವನ ಸಂಕಲನ "ನೆನಪಿನ ಮಳೆಯಲ್ಲಿ" ಬಿಡುಗಡೆಯಾಗಿತ್ತು. ಇದೀಗ ನನ್ನ ಎರಡನೇ ಕೃತಿ "ಅವಳು ಮತ್ತೊಬ್ಬಳು" ಲೋಕಾರ್ಪಣೆಗೆ ಸಿದ್ಧವಾಗಿದೆ. ಡಿಸೆಂಬರ್ 9 ಭಾನುವಾರ ಬೆಳಗ್ಗೆ 10.30ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅವಳು ಮತ್ತೊಬ್ಬಳು ಕೃತಿಯನ್ನು ನಟಿ ನೀತೂ ಲೋಕಾರ್ಪಣೆ ಮಾಡಲಿದ್ದಾರೆ. ನನ್ನ ಈ ಕಾರ್ಯಕ್ರಮಕ್ಕೆ ನೀವೆಲ್ಲರೂ ಬರಬೇಕು...ನಿಮ್ಮ ಹಾರೈಕೆ ನನ್ನೊಂದಿಗಿರಲಿ... ಭಾನುವಾರ ಕ.ಸಾ.ಪದಲ್ಲಿ ನಿಮ್ಮನ್ನು ಕಾಯುತ್ತಿರುತ್ತೇನೆ...ನೀವು ಬರಲೇಬೇಕು... ರಶ್ಮಿ ಕಾಸರಗೋಡು.

ಓ ಗಂಡಸರೇ...ನೀವೆಷ್ಟು ಒಳ್ಳೆಯವರು!

Image
ನೀ ನು ಹುಡುಗ ನಮ್ಮ ಜತೆ ಬರಬಾರದು... ನಾವು ಆವಾಗ ಮೂರನೇ ಕ್ಲಾಸು. ನಮ್ಮ ಜತೆಯಲ್ಲೇ ಆಟವಾಡುತ್ತಿದ್ದ ನಮ್ಮ ಸಹಪಾಠಿಯಾಗಿದ್ದ ಆ ಹುಡುಗ ನಾವೆಲ್ಲಾ ಹುಡುಗಿಯರು ಕೈ ಕೈ ಹಿಡಿದು "ಒಂದಕ್ಕೆ" ಹೋಗುವಾಗ ಆತ "ನಾನೂ ಬರ್ತೇನೆ"ಎಂದು ರಾಗ ಎಳೆದಿದ್ದ...ಆವಾಗ ನಾವೆಲ್ಲರೂ ನೀನು ಹುಡುಗ ನಮ್ಮ ಜತೆ ಬರಬಾರದು...ಎಂದು ಒಕ್ಕೊರಲಿನಿಂದ ಹೇಳಿದ್ದೆವು. ನಮ್ಮ ಉತ್ತರ ಅವನಿಗೆ ಬೇಸರ ತರಿಸಿತ್ತು ಎಂದು ಅವನ ಮುಖ ನೋಡಿದಾಗಲೇ ಗೊತ್ತಾಗಿತ್ತು. ಕ್ರಮೇಣ ನಾವು ಬೆಳೆಯುತ್ತಾ ಬಂದಂತೆ ಹುಡುಗರು-ಹುಡುಗಿಯರ ಅಂತರ ಹೆಚ್ಚುತ್ತಾ ಹೋಯ್ತು. ಹೈಸ್ಕೂಲ್ ಮೆಟ್ಟಲು ಹತ್ತಿದಾಗಲಂತೂ ಅವರು 'ಹುಡುಗರು'..ನಾವು ದೊಡ್ಡ ಹುಡುಗೀರು. ನಮ್ಮೂರು ಹಳ್ಳಿಯಾಗಿರುವುದರಿಂದ ಹುಡುಗರು ಹುಡುಗಿಯರು ನಡುವೆ ಅಂತರ ಕಾಯ್ದುಕೊಳ್ಳಲೇ ಬೇಕಿತ್ತು. ಸಂಬಂಧಿಕರಾಗಿರಲಿ, ಗೆಳೆಯರಾಗಿರಲಿ ಅಲ್ಲೊಂದು ಲಿಂಗಬೇಧದ ಗೆರೆಯಿರುತ್ತಿತ್ತು. ಹುಡುಗರ ಮುಂದೆ ಹೇಗೆ ಮಾತನಾಡಬೇಕು, ಅವರ ಮುಂದೆ ಹೇಗೆ ನಿಲ್ಲಬೇಕು, ನಮ್ಮ ಡ್ರೆಸ್...ಕೂದಲು..ಕಣ್ಣು, ಹಾವಭಾವ ಎಲ್ಲದಕ್ಕೂ 'ನೀನು ಹುಡುಗಿ' 'ಅವನು ಹುಡುಗ' ಹಾಗೆಲ್ಲಾ ಮಾಡಬಾರದೆಂಬ ಉಪದೇಶದ ಲೇಪ ಇದ್ದೇ ಇರುತ್ತಿತ್ತು. ಪ್ಲಸ್ ಟು ...ಹದಿಹರೆಯ...ಲವ್ ಆಗುವ ಸಾಧ್ಯತೆ ಜಾಸ್ತಿಯೇ..ಹುಡುಗರೂ ನಮಗಿಂತ ಕಮ್ಮಿಯೇನಿಲ್ಲ ಬಿಡಿ. ಒಂದು ಕಾಲದಲ್ಲಿ infatuationಗೆ ಒಳಗಾಗಿ ಸಾವಿರಾರು ಕನಸು ಕಂಡು ಅದು ಏನೆಂ...

ನಿವೇದನೆ

ಅ ಡುಗೆ ಮನೆಯತ್ತ ಮುಖ ಮಾಡಿದಾಗ ಸಾಲಲ್ಲಿರಿಸಿದ ಡಬ್ಬಗಳ ಕುಹಕ ನಗೆ ಕಾದ ಬಾಣಲೆಯಲ್ಲಿ ಸಾಸಿವೆಯ ಅಟ್ಟಹಾಸ ನನ್ನ ಭಾವನೆಗಳ ಕೆಣಕಿದಂತೆ ಇನ್ನೂ ಓದಿ ಮುಗಿದಿರದ ಪುಸ್ತಕದ ಪುಟವ ವೇಗದಿ ತಿರುವಿದಾಗ ಕೊಚ್ಚಿ ಹೋಗಿತ್ತು ನನ್ನ ಸ್ವಪ್ನ ಸುಂದರ ನೌಕೆ ಈ ನನ್ನ ಪ್ರಸವಕ್ಕೆ ಅಮ್ಮನ ಕಣ್ಣುಗಳಲ್ಲಿರುವ ವ್ಯಾಕುಲತೆಯಿಲ್ಲ ಪತಿಯ ಸಾಂತ್ವನವಿಲ್ಲ ಬಂಧುಗಳ ಮುಂಗಡ ಶುಭಾಶಯದ ಕರೆಗಳೂ ಬಂದಿಲ್ಲ ಅನೈತಿಕ ಗರ್ಭದಂತೆ... ಒಂದಷ್ಟು ಭಯ...ಕೈಗಳಲ್ಲಿ ನಡುಕ ಯಾರಿಗೂ ಕಾಣದಂತೆ ನನ್ನ ಪುಟ್ಟ ಕೋಣೆಯ ತೂಗು ತೊಟ್ಟಿಲಲ್ಲಿ ಖಾಲಿ ಹಾಳೆಗಳ ನಡುವೆ... ನಾನೆಷ್ಟು ಕಾಯಲಿ? ಉಪ್ಪಿಟ್ಟಿಗೆ ಒಗ್ಗರಣೆ ಹಾಕಿ ಒಂದಿಷ್ಟು ತಿಂದು, ಡಬ್ಬಕ್ಕೆ ತುಂಬಿಸಿ ಗುಡಿಸಿ, ಸಾರಿಸಿ, ಪಾತ್ರೆ ತಿಕ್ಕಿ... ಮಿಂದು.....ಬಿಸಿ ನೀರು ಕಾಯಿಸಿ ಸಾಕಪ್ಪಾ....ಸಾಕು! ಎಲ್ಲೋ ಕೇಳಿದೆ ಯಾರೋ ನನ್ನ ಮಗುವನ್ನು ದತ್ತು ತೆಗೆದುಕೊಂಡಿದ್ದಾರಂತ ಅವರು ಮುದ್ದು ಮಾಡಿರಬಹುದೇ? ನನ್ನ ಮಗು....ನನ್ನ ಭಾವನೆಗಳ ಚಿಗುರು ತುಂಟಾಟಿಕೆ- ಕಣ್ಣೀರಿಡುವ ಒಮ್ಮೆ ನಗುವ-ತೂಕಡಿಸುವ ಕೋಪದಿಂದ ಬಿಕ್ಕಳಿಸುವ...ಕೂಸು ಇಲ್ಲೆ ಎಲ್ಲೋ ಕೇಳಿಸಿದಂತಿದೆ ಯಾರದ್ದೋ ದನಿಯಲ್ಲಿ ನನ್ನ ಮಗುವಿನ ತೊದಲು ನುಡಿ ಅಷ್ಟು ಸಾಕು...ನನಗೆ ಬೇಡ... ನನ್ನ ಹಳಿಯಬೇಡಿ ನನ್ನ ಹಂಗಿಸಬೇಡಿ... ಕೋರಿಕೆ...ನಿಮ್ಮಲ್ಲಿ ನನಗೊಂದಷ್ಟು ಸಮಯ ಕೊಡಿ ನನ್ನ ಈ ಸಾಲುಗಳನ್ನು ಹಡೆದು ನಿಟ್ಟುಸಿರು ಬಿಡಲೇ?

ಪ್ರಶ್ನೆಯಾಗಿ ಕಾಡುತ್ತಿರುವ ಕರುತ್ತಮ್ಮ...

Image
ಹೌ ದು, ಈ ಕರುತ್ತಮ್ಮ ಕಾಡಿದಷ್ಟು ಇನ್ಯಾರೂ ನನ್ನನ್ನು ಕಾಡಿರಲಿಲ್ಲ. ಬಾಲ್ಯದಿಂದ ಹಿಡಿದು ಇಲ್ಲಿಯವರೆಗೆ ನಾನು ಇಷ್ಟಪಡುವ ಹೆಂಗಸರಲ್ಲಿ ಇವಳೂ ಒಬ್ಬಳು. ನಾನು ಹೀಗೆಹೇಳುತ್ತಿದ್ದರೆ ಆ ಕರುತ್ತಮ್ಮ ಯಾರು ಎಂಬ ಪ್ರಶ್ನೆ ನಿಮ್ಮನ್ನೂ ಕಾಡುತ್ತಿರಬಹುದು ಅಲ್ಲವೇ? ಅವಳು ಮತ್ಯಾರೂ ಅಲ್ಲ ಪ್ರಶಸ್ತಿ ವಿಜೇತ ಹಳೇ ಕಾಲದ ಮಲಯಾಳಂ ಚಿತ್ರ ಚೆಮ್ಮೀನ್್ನ ನಾಯಕಿ. ಚಿತ್ರದಲ್ಲಿ ಕರುತ್ತಮ್ಮನ ಪಾತ್ರ ನಿರ್ವಹಣೆ ಮಾಡಿದ್ದು ನಟಿಶೀಲ. ಮಲಯಾಳಂನಲ್ಲಿ ಚೆಮ್ಮೀನ್ ಅಂದ್ರೆ ಸಿಗಡಿ ಮೀನು. ತಗಳಿ ಶಿವಶಂಕರ ಪಿಳ್ಳೆ ಬರೆದ ಚೆಮ್ಮೀನ್ ಎಂಬ ಕಾದಂಬರಿ ಆಧರಿತ ಚಿತ್ರವಾದ ಚೆಮ್ಮೀನ್ 1965ರಲ್ಲಿ ತೆರೆಕಂಡರೂ ಅದರಯಶಸ್ಸು ಇಂದಿಗೂ ಚಿರನೂತನ. ಅವರ ಕಥೆ, ಹಾಡು, ನಟನೆ ಅಬ್ಬಾ...ಆ ಚಿತ್ರವನ್ನು ನೋಡಿಯೇ ಅನುಭವಿಸಬೇಕು. ಚಿಕ್ಕವರಿರುವಾಗ ಶಾಲೆಯಲ್ಲಿ ಕ್ವಿಜ್್ಗೆ ಚೆಮ್ಮೀನ್ ಕಾದಂಬರಿ ಬರೆದವರು ಯಾರು? ಎಂಬ ಪ್ರಶ್ನೆ ಕಾಮನ್ ಆಗಿತ್ತು. ಮೊದಲಬಾರಿಗೆ ಚೆಮ್ಮೀನ್ ಕಾದಂಬರಿ ಬಗ್ಗೆ ಕುತೂಹಲ ಹುಟ್ಟಿಕೊಂಡದ್ದೇ ಹೀಗೆ. ಅಂತೂ ಕೊನೆಗೂ ಅದೊಂದು ದಿನ ಡಿಡಿ 1 ಚಾನೆಲ್್ನಲ್ಲಿ ಆದಿತ್ಯವಾರ ಪ್ರಾದೇಶಿಕ ಚಲನಚಿತ್ರ ವಿಭಾಗದಲ್ಲಿ ಚೆಮ್ಮೀನ್ ಚಿತ್ರ ಪ್ರಸಾರವಾಗಿತ್ತು.ನಮ್ಮ ಬ್ಲಾಕ್ ಆ್ಯಂಡ್ ವೈಟ್ ಟೀವಿಯಲ್ಲಿ ಚೆಮ್ಮೀನ್ ಚಿತ್ರ ಮೂಡಿಬರುತ್ತಿದ್ದಂತೆ ಟೀವಿಯಲ್ಲೇ ಗಮನ ಕೇಂದ್ರೀಕರಿಸಿ ಕುಳಿತಿದ್ದೆ. ಚಿತ್ರದುದ್ದಕ್ಕೂ ಕಡಲ ಕಿನಾರೆ...ಮೀನು...ಮೀನುಗಾರರ ಸಂಭಾಷಣೆ..ಅದ್ಭುತ ಸಂಗೀತ......

ಹೆಣ್ಮಕ್ಕಳಿಗೆ ಕಪಾಳಮೋಕ್ಷ ಮಾಡುವಾಗ ಇವರಿಗೆ 'ಭಾರತೀಯ ಸಂಸ್ಕೃತಿ' ನೆನಪಿಗೆ ಬರಲಿಲ್ಲವೇ?

ಆ ಧುನಿಕ ದುಶ್ಯಾಸನರು! ಹೌದು. ಇವರನ್ನು ದುಶ್ಯಾಸನರು ಎಂದು ಕರೆದರೂ ಸಾಲುವುದಿಲ್ಲ. ಯಾಕೆಂದರೆ ದುಶ್ಯಾಸನ ದ್ರೌಪದಿಯ ಸೀರೆಯನ್ನು ಎಳೆಯುತ್ತಲೇ ಸುಸ್ತಾಗುತ್ತಾನೆ. ಇವರು ಹಾಗಲ್ಲ ಹೆಣ್ಮಕ್ಕಳ ಕಪಾಳಕ್ಕೆ ಹೊಡೆದು ಅವರ ಮೈಮೇಲೆ ಕೈಯಾಡಿಸುತ್ತಾರೆ. ಅಲ್ಲಿದ್ದ ಹುಡುಗನೊಬ್ಬ 'ಇನಿ ಎನ್ನ ಬರ್ತ್ ಡೇಯೇ...ಹಾಕೊಡ್ಚಿ' (ಇವತ್ತು ನನ್ನ ಹುಟ್ಟುಹಬ್ಬ, ಹೊಡಿಯಬೇಡಿ) ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದರೂ ಅವನನ್ನು ಅರೆಬೆತ್ತಲೆಯಾಗಿಸಿ ಥಳಿಸುತ್ತಾರೆ. ಹೆಣ್ಮಕ್ಕಳನ್ನು ಹಿಡಿದು, ಗುದ್ದಿ, ದೂಡಿ ಮಂಚಕ್ಕೆ ನೂಕಲಾಗುತ್ತದೆ. ಅದರಲ್ಲಿ ಹುಡುಗಿಯೊಬ್ಬಳ ಕೆನ್ನೆಗೆ 'ಚಟಾರ್್' ಎಂದು ಬಿದ್ದ ಏಟಿನಿಂದ ಆಕೆ ಮಂಚದ ಮೇಲೆ ದೊಪ್ಪನೆ ಬೀಳುತ್ತಾಳೆ. ಅಲ್ಲಿದ್ದ ಯುವಕ ಯುವತಿಯರು ಮುಖ ಮುಚ್ಚಿಕೊಳ್ಳುತ್ತಿದ್ದಂತೆ ಬಲವಂತವಾಗಿ ಅವರ ಕೈ ಹಿಡಿದು ಎಳೆಯುತ್ತಾ, ಹುಡುಗಿ ದೇಹದ ಮುಟ್ಟಬಾರದ ಜಾಗದಲ್ಲೆಲ್ಲಾ ಹಿಡಿದು ಅವರನ್ನು ತಳ್ಳಲಾಗುತ್ತದೆ. ಇದು ಮಂಗಳೂರಿನ ಹೊರವಲಯ ಪಡೀಲ್್ನ ಬಡ್ಲಗುಡ್ಡೆಯಲ್ಲಿರುವ 'ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ' ಮೇಲೆ ಶನಿವಾರ ರಾತ್ರಿ ನಡೆದ 'ನೈತಿಕ ಪೊಲೀಸ್್' ಪುಂಡಾಟಿಕೆಯ ಝಲಕ್. ಈ ಮೊದಲು ಅಂದ್ರೆ 2009 ಜನವರಿ 24ರಂದು ಮಂಗಳೂರಿನ ಪಬ್ ಒಂದರ ಮೇಲೆ ಇದೇ ರೀತಿ ದಾಳಿ ನಡೆಸಲಾಗಿತ್ತು. ಆದರೆ ಶನಿವಾರ ನಡೆದದ್ದು? ಇಲ್ಲಿನ ಹೋಂ ಸ್ಟೇನಲ್ಲಿ ರೇವ್ ಪಾರ್ಟಿ ಮಾಡುತ್ತಿದ್ದಾರೆ ಎಂದು ದಾಳಿ ನಡೆಸಲಾಗ...

ಒಂದು ಪೈದ್ಯ

ಇವತ್ತು 22/ 7 ಅಂದ್ರೆ Pi Approximation Day. π (ಪೈ) ಬಗ್ಗೆ ಈ ತಿಂಗಳ ರೀಡರ್ಸ್ ಡೈಜೆಸ್ಟ್್ನಲ್ಲಿ ತುಂಬಾ ಮಾಹಿತಿಪೂರ್ಣ ಲೇಖನ ಬಂದಿತ್ತು. ಅದರಲ್ಲಿ Piems (pi and poem) ಬಗ್ಗೆ ಓದಿದಾಗ ಇಂಥದ್ದೇ ಕವನ (ಪೈದ್ಯ) ಕನ್ನಡದಲ್ಲಿ ಯಾಕೆ ರಚಿಸಬಾರದು ಎಂದು ಅನಿಸಿತು. Piems ನಲ್ಲಿ ಪೈ ಬೆಲೆಯ ಪ್ರತಿಯೊಂದು ಅಂಕಿಗೆ ಸಮವಾಗಿ ಕವನದ ಅಕ್ಷರಗಳ ಜೋಡಣೆ ಇರುತ್ತದೆ. ಅಂದರೆ 3.14159265358... ಈ ಅಂಕಿಗಳಿಗೆ ಸಮವಾಗಿ ಅಕ್ಷರ ಜೋಡಿಸಿದಾಗ ಕವನ ಈ ರೀತಿ ಮೂಡಿಬಂತು. ಗೆಳೆಯಾ ನಾ ಹೇಳಲೇನು ನಾ ಬರೆದಿರುವ ಹೃದಯದಾಕವನವನು ನನ್ನ ಹೃದಯವೀಣೆಯು ಮಿಡಿಯುತಿದೆ ಇನಿಯಾ ಕಾಯುತಿರುವೆ ಒಲುಮೆಯಭಿಕ್ಷೆಗಾಗಿ