Posts

ಮಾಯಾನಗರಿ

Image
ಸುತ್ತಲೂ ಪಸರಿದ ಈ ಗಾಳಿಯಲ್ಲಿ ಯಾವುದೋ ಗಂಧವಿದೆ ಮೈಗೆ ಪೂಸಿದ ಸುಗಂಧ ದ್ರವ್ಯ, ಬೆವರ ಹನಿಗಳ ನೋವಿನ ವಾಸನೆ ಯಾರೋ ಬಿಟ್ಟು ಹೋದ ಚೀಲ, ಪೆಟ್ಟಿಗೆ, ಚಪ್ಪಲಿ, ವಾಹನಗಳು ಇಲ್ಲಿ ಹರಾಜಿಗಿವೆ ಎಂಬ ಬೋರ್ಡುಗಳು ಮಾಯಾನಗರಿಯ ದುಃಖಗಳನ್ನು ಗೀಚಿಟ್ಟ ಕಿರುಪತ್ರದಂತಿವೆ ಭಗ್ನವಾದ ಕನಸುಗಳ ಚೂರು ಗಳು ಒಂದಕ್ಕೊಂದು ಗುದ್ದಿ ಸದ್ದು ಮಾಡುತ್ತಿವೆ ಮುಷ್ಟಿ ಮಣ್ಣಲ್ಲೂ ಅವಿತಿದೆ ಯಾರೋ ಸವೆದ ಹಾದಿಯ ಹೆಜ್ಜೆ ಗುರುತು ನಷ್ಟಗಳ ಲೆಕ್ಕ ಭರಿಸಲಾಗದೆ ದುರಂತಗಳ ನಡುವೆ ಸಿಕ್ಕ ಮಧ್ಯಂತರ ಎಲ್ಲಿಂದಲೋ ಆರಂಭವಾಗುವುದು ಇನ್ನೇನೋ ನಡೆಯಲಿದೆ ಎಂದರಿಯುವ ಹಪಾಹಪಿಯಲ್ಲಿ ಸಮಯ ದಾಟಿದೆ ಈ ಜಂಜಾಟದ ನಡುವೆ ಸಿಕ್ಕ ಒಂದಷ್ಟು ನಿಮಿಷ ಮತ್ತೆ ಬದುಕು ಹಳಿಗೆ ಬಂದಂತೆ ಆಸೆ ಹುಟ್ಟಿಸಿ ಇನ್ನೊಂದು ಮಧ್ಯಂತರಕ್ಕೆ ಕಾಲಿಡುವಾಗ ಕಾಡುವುದು ಅನಿಶ್ಚಿತತೆ! ಬೀದಿ ನಾಯಿಗಳ ಓಡಾಟದ ನಡುವೆ ಹರೆಯದ ಹುಡುಗಿಯೊಬ್ಬಳು ಹೂ ಮಾರುತ್ತಿದ್ದಾಳೆ ಅವಳ ಜೀವನ ಲೆಕ್ಕಾಚಾರದಲ್ಲಿ ಹೆಣೆಯುವ ಆ ಮೊಗ್ಗು ನಲುಗಿ ಹೋಗಿದೆಯೆ? ನಾನು ಬಯಸಿದ ಹೂವು ಕಣ್ಣಿಗೆ ತಂಪು ಬಿಸಿಯೇರಿದೆ ಮೈ ಮತ್ತೊಮ್ಮೆ ಯೋಚಿಸಿದೆ ಆ ತಂಪು ನನ್ನನ್ನು ಬಿಸಿಯಾಗಿರಿಸಿತೆ?

ಶಿಲ್ಪಿ

Image
ಸ್ವಪ್ನ ಶಿಲ್ಪಿ ನಾನು ಸುಂದರ ಶಿಲ್ಪಗಳನ್ನು ಕೆತ್ತುವುದೇ ನನ್ನ ಕಸುಬು ಕೈ ತುಂಬಾ ಕೆಲಸಗಳಿವೆ ಸಂತೃಪ್ತಿಯೇ ನನ್ನ ಆದಾಯ ನನ್ನ ಶಿಲ್ಪ ಶಾಲೆಗೆ ಬಂದಿದ್ದರು ಹಲವು ಜನ ನನ್ನ ಕೆಲಸದ ಹರುಕು ಗುಡಿಸಲಿಗೂ ನಾನೆಲ್ಲಿದ್ದೇನೋ ಅಲ್ಲಿಗೆಲ್ಲಾ ಬಂದಿದ್ದರು ಎಲ್ಲರೂ ನನ್ನನ್ನು ಬಯಸಿದರು ನನ್ನನ್ನು ಪ್ರೀತಿಸಿದರು ಅವರವರಿಗೆ ಒಪ್ಪುವಂತೆ ಸ್ವೇಚ್ಛೆಯಿಂದ ನಾನು ಸಾಕಷ್ಟು ಕನಸುಗಳನು ಮೊಗೆ ಮೊಗೆದು ಕೊಟ್ಟೆ ಕೊನೆಗೆ ಅವರು ಹೇಳಿದ್ದು... ನಿನ್ನ ಮನಸ್ಸು ಬರೀ ಕಲ್ಲು! ಅದು ನಿಜ ನನ್ನ ಮನಸ್ಸು ಕಲ್ಲೇ ಬಯಸದೇ ಬಂದ ಪ್ರೀತಿಯಲ್ಲಿ ಅದು ಮುಳುಗಿ ಹೋಗಿತ್ತು ಆ ಕಲ್ಲಿನ ಮೇಲಿರುವ ಗುಳಿಗಳೂ ಪ್ರೀತಿಯಿಂದಲೇ ತುಂಬಿದ್ದವು ಪ್ರೀತಿಯ 'ಉಳಿ'ಯಲ್ಲಿ ಕೆತ್ತುವ ಕೆಲಸ ಬಿರುಸಾಗಿ ನಡೆದಾಗ ಕಲ್ಲು ರೂಪಾಂತರಗೊಳ್ಳುತ್ತಿತ್ತು ಇನ್ನೂ ಕೆತ್ತಿದರೆ ಅದು ಒಡೆದು ಹೋಗುತ್ತಿತ್ತೇನೋ! ಅವರು ಹೇಳಿದ್ದೇ ನಿಜ ನನ್ನ ಹೃದಯ ಕಲ್ಲಾಗಿತ್ತು ಒಂದು ಚಿಕ್ಕ ಪೆಟ್ಟು ಸಾಕು ಅದಿನ್ನು ಒಡೆದು ಹೋಗಲು ಆದರೆ ಅವರಿಗೇನು ಗೊತ್ತಿತ್ತು ಕಲ್ಲಿನ ಸ್ಥಿತಿ? ಸುಂದರ ಶಿಲ್ಪಕ್ಕಾಗಿ ಅವರು ಬಯಸಿದ್ದರಲ್ಲವೇ? ಸಾಕು ನಿಲ್ಲಿಸಿ.... ಹೇಳಬೇಡಿ ಇನ್ನೊಂದು ಶಿಲ್ಪದ ರಚನೆಗೆ ನಿಮ್ಮ ಸ್ವಪ್ನಗಳನ್ನು ಕೆತ್ತಿ ಬೊಬ್ಬೆ ಎದ್ದಿರುವುದು ನನ್ನ ಕೈಗಳಲ್ಲ...ಮನಸ್ಸಿನಲ್ಲಿ ಯಾವುದೇ...

ಪಪ್ಪನೂ...ನನ್ನ ನಿದ್ದೆಯೂ

Image
ಪಪ್ಪನ ಬಗ್ಗೆ ಏನು ಹೇಳುವಾಗಲೂ ನಾನು ಹಾಗೇನೇ...ನಾನ್ಸ್ಟಾಪ್...ಅವರ ಬಗ್ಗೆ ಹೇಳಿದಷ್ಟು ಮುಗಿಯುವುದಿಲ್ಲ. ಅಫ್ಕೋರ್ಸ್, ಅವರ ಬಗ್ಗೆ ಬರೆಯುವಾಗಲೂ ಅಷ್ಟೇ... ಕೀಲಿಮಣೆಯಲ್ಲಿ ಬೆರಳುಗಳು ಸರಾಗವಾಗಿ ಓಡುತ್ತವೆ. ಮೊನ್ನೆ ಗೆಳೆಯರೊಬ್ಬರು ಅವರ ಅಪ್ಪನ ಬಗ್ಗೆ ಬರೆದ ಲೇಖನದ ಲಿಂಕ್ ಕಳುಹಿಸಿ ಆ ಲೇಖನವನ್ನು ಅಮ್ಮನಿಗೆ ಓದೋಕೆ ಹೇಳಿದ್ದೆ. ಆ ಬ್ಲಾಗ್ ಬರಹದ ಬಗ್ಗೆ ಮಾತನಾಡುವಾಗ ನಿನ್ನ ಅಪ್ಪನ ಬಗ್ಗೆನೂ ಬರೀ ಅಂದಿದ್ರು ಅಮ್ಮ. ಈಗಾಗಲೇ ಅಪ್ಪನ ಬಗ್ಗೆ ಎರಡ್ಮೂರು ಬ್ಲಾಗ್ ಬರಹ ಬರೆದಾಗಿದೆ. ಇನ್ನೆಂಥದ್ದು ಬರೆಯುವುದು? ಎಂದು ಕೇಳಿದಾಗ ಅಮ್ಮ ಹೇಳಿದ್ದು..ಅಪ್ಪನ ನಿದ್ದೆ ! ಹೂಂ...ಅಪ್ಪನ ನಿದ್ದೆ ಬಗ್ಗೆ ಬರೆಯೋದೆ ತುಂಬಾ ಇಂಟರೆಸ್ಟಿಂಗ್. ಇತ್ತೀಚೆಗೆ ಅಂದ್ರೆ ನಿವೃತ್ತಿಯಾದ ನಂತರ ಮನೆಯಲ್ಲೇ ಕೂರುವ ಕಾರಣ ಅಪ್ಪ ಸಿಕ್ಕಾಪಟ್ಟೆ ನಿದ್ದೆ ಮಾಡ್ತಾರೆ. ಯಾವತ್ತು ನೋಡಿದರೂ ಅದೇ ಕೈರಳಿ, ಮನೋರಮ, ಏಷ್ಯಾನೆಟ್ ನ್ಯೂಸ್ ನೋಡ್ತಾ ಇರ್ತಾರೆ ಎಂದು ಅಮ್ಮ ಗೊಣಗುತ್ತಿದ್ದರೂ, ನ್ಯೂಸ್ ನೋಡ್ತಾ ನೋಡ್ತಾ ಅಪ್ಪ ನಿದ್ದೆ ಮಾಡಿಬಿಡುತ್ತಾರೆ. ಅದೇ ವೇಳೆ ಸುದ್ದಿ ವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ನ ಸೌಂಡ್ ಕೇಳಿದ್ರೆ, ಥಟ್ಟನೆ ಎಚ್ಚರ ಆಗುತ್ತೆ. ಮಾತ್ರವಲ್ಲ ಹಿತ್ತಲಿನ ಯಾವ ಮೂಲೆಯಲ್ಲಿ ತೆಂಗಿನಕಾಯಿ ಬಿದ್ರೂನೂ ಅಪ್ಪನಿಗೇ ಮೊದಲು ಗೊತ್ತಾಗೋದು. ಹೀಗೆ ವಾಹಿನಿಗಳು 5 ನಿಮಿಷಕ್ಕೊಮ್ಮೆ ಬ್ರೇಕಿಂಗ್ ನ್ಯೂಸ್ ಸದ್ದು ಮಾಡುತ್ತಿದ್ದರೆ, ಅಪ್ಪ ಅರೆ ನಿದ್ದೆಯಲ್ಲೇ ಸುದ...

ಮದರಂಗಿ ಪುರಾಣ

Image
ಕೈ ಗಳಿಗೆ ಮದರಂಗಿ ಹಚ್ಚಿ ಸಿಂಗರಿಸುವುದು ಯಾರಿಗೆ ಇಷ್ಟ ಇಲ್ಲ ಹೇಳಿ? ಚಿಕ್ಕಂದಿನಿಂದಲೂ ನನಗೆ ಕೈ ಕಾಲಲ್ಲಿ ಮದರಂಗಿ ಚಿತ್ತಾರ ಬಿಡಿಸುವುದೆಂದರೆ ತುಂಬಾ ಇಷ್ಟ. ಕೃಷ್ಣವರ್ಣವಾಗಿರುವುದರಿಂದ ನನ್ನ ಕಾಲಲ್ಲ ಕೆಂಪು ಬಣ್ಣ ಎದ್ದು ಕಾಣುತ್ತಿರಲಿಲ್ಲ...ಆದ್ರೆ ಅಂಗೈ ತುಂಬಾ ಕೆಂಪು ಕೆಂಪು ಚಿತ್ತಾರ. ಅದೂ ಎರಡೂ ಕೈಗೆ. ಎರಡೂ ಕೈಗಳಿಗೆ ಮದರಂಗಿ ಹಚ್ಚಿದ್ದನ್ನು ನೋಡಿ ಗೆಳತಿಯರು ನೀನೇನು ಮದುಮಗಳಾ? ಎಂದು ಕೇಳಿದರೆ ಐ ಡೋಂಟ್ ಕೇರ್. ಮದರಂಗಿಯ ಕೆಂಪು, ಕಂಪು ನನಗೆ ಖುಷಿ ಕೊಡುತ್ತದೆ ಎಂದಾದರೆ ನಾನ್ಯಾಕೆ ಇಂಥಾ ಪ್ರಶ್ನೆಗಳಿಗೆ ತಲೆ ಕೆಡಿಸಿಕೊಳ್ಳಲಿ? ಜನ್ಮಾಷ್ಟಮಿ ಬಂದರಂತೂ ಕೈಯಲ್ಲಿ ಮೆಹಂದಿ ಇರಲೇ ಬೇಕು. ಇನ್ನು ಸಂಬಂಧಿಕರ ಮದುವೆ ಹೋಗುವಾಗ ಕೈಯಲ್ಲಿ ಮದರಂಗಿ ಇಲ್ಲದೇ ಇದ್ದರೆ ಹೇಗೆ? ಏನಿದ್ದರೂ ಮೆಹಂದಿ ಹಚ್ಚಿಕೊಳ್ಳುವ ಸಂಭ್ರಮ, ಆ ಚಿತ್ತಾರದ ಸೊಬಗನ್ನು ನೋಡಿ ಆಸ್ವಾದಿಸುವ ಪರಿ ಇದೆಲ್ಲವೂ ಪದಗಳಿಗೆ ನಿಲುಕದ್ದು.. ಈಗಿನ ಜಮಾನದ ಮಕ್ಕಳಂತೆ ನಾವು ಚಿಕ್ಕವರಿರುವಾಗ ಮೆಹಂದಿ cone ಬಳಸುತ್ತಲೇ ಇರಲಿಲ್ಲ. ಮನೆಯ ಮುಂದೆ ಮದರಂಗಿ ಗಿಡ ಇತ್ತು. ಅದರ ಎಲೆ ಕೊಯ್ದು...ನುಣ್ಣನೆ ಅರೆದು ಅದಕ್ಕೆ ಅಳೆದು ತೂಗಿ ನೀರು ಹಾಕಿ ಕೈಗೆ ಮೆತ್ತುತ್ತಿದ್ದೆವು. ಮದರಂಗಿ ಕೆಂಪಾಗಲಿ ಎಂದು ಅದಕ್ಕೆ ಚಹಾ Decoction ಹಾಕ್ತಿದ್ದೆವು. ಇಲ್ಲದೇ ಇದ್ದಲ್ಲಿ ಮೆಹಂದಿ ಒಣಗುತ್ತಿದ್ದಂತೆ ಸಕ್ಕರೆ ನೀರು ಇಲ್ಲವೇ ಲಿಂಬೆ ಹುಳಿ ಹಿಂಡುತ್ತಿದ್ದೆವು. ಅಕ್ಕ ಹಾಸ್ಟೆಲ್್ನಲ್ಲ...

ಅವಳು ಮತ್ತೊಬ್ಬಳು!- ಕೃತಿ ಬಿಡುಗಡೆಗೆ ಆಮಂತ್ರಣ

Image
ಪ್ರಿಯರೇ, 2 ವರ್ಷಗಳ ಹಿಂದೆ ಕನ್ನಡಪ್ರಭ 'ಚುಕ್ಕಿ' ಪುರವಣಿಯಲ್ಲಿ ಸಾಧಕಿಯರ ಬಗ್ಗೆ ನಾನು ಬರೆದ ಲೇಖನಗಳನ್ನು ಇದೀಗ ಪುಸ್ತಕರೂಪದಲ್ಲಿ ಹೊರತರುತ್ತಿದ್ದೇನೆ. ಕೃತಿ ಹೆಸರು ಅವಳು ಮತ್ತೊಬ್ಬಳು!. ನಾನು ಪತ್ರಿಕೋದ್ಯಮಕ್ಕೆ ಕಾಲಿಟ್ಟು ಇದು ನಾಲ್ಕನೇ ವರ್ಷ. ಎರಡು ವರ್ಷಗಳ ಹಿಂದೆ ನನ್ನ ಚೊಚ್ಚಲ ಕವನ ಸಂಕಲನ "ನೆನಪಿನ ಮಳೆಯಲ್ಲಿ" ಬಿಡುಗಡೆಯಾಗಿತ್ತು. ಇದೀಗ ನನ್ನ ಎರಡನೇ ಕೃತಿ "ಅವಳು ಮತ್ತೊಬ್ಬಳು" ಲೋಕಾರ್ಪಣೆಗೆ ಸಿದ್ಧವಾಗಿದೆ. ಡಿಸೆಂಬರ್ 9 ಭಾನುವಾರ ಬೆಳಗ್ಗೆ 10.30ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅವಳು ಮತ್ತೊಬ್ಬಳು ಕೃತಿಯನ್ನು ನಟಿ ನೀತೂ ಲೋಕಾರ್ಪಣೆ ಮಾಡಲಿದ್ದಾರೆ. ನನ್ನ ಈ ಕಾರ್ಯಕ್ರಮಕ್ಕೆ ನೀವೆಲ್ಲರೂ ಬರಬೇಕು...ನಿಮ್ಮ ಹಾರೈಕೆ ನನ್ನೊಂದಿಗಿರಲಿ... ಭಾನುವಾರ ಕ.ಸಾ.ಪದಲ್ಲಿ ನಿಮ್ಮನ್ನು ಕಾಯುತ್ತಿರುತ್ತೇನೆ...ನೀವು ಬರಲೇಬೇಕು... ರಶ್ಮಿ ಕಾಸರಗೋಡು.

ಓ ಗಂಡಸರೇ...ನೀವೆಷ್ಟು ಒಳ್ಳೆಯವರು!

Image
ನೀ ನು ಹುಡುಗ ನಮ್ಮ ಜತೆ ಬರಬಾರದು... ನಾವು ಆವಾಗ ಮೂರನೇ ಕ್ಲಾಸು. ನಮ್ಮ ಜತೆಯಲ್ಲೇ ಆಟವಾಡುತ್ತಿದ್ದ ನಮ್ಮ ಸಹಪಾಠಿಯಾಗಿದ್ದ ಆ ಹುಡುಗ ನಾವೆಲ್ಲಾ ಹುಡುಗಿಯರು ಕೈ ಕೈ ಹಿಡಿದು "ಒಂದಕ್ಕೆ" ಹೋಗುವಾಗ ಆತ "ನಾನೂ ಬರ್ತೇನೆ"ಎಂದು ರಾಗ ಎಳೆದಿದ್ದ...ಆವಾಗ ನಾವೆಲ್ಲರೂ ನೀನು ಹುಡುಗ ನಮ್ಮ ಜತೆ ಬರಬಾರದು...ಎಂದು ಒಕ್ಕೊರಲಿನಿಂದ ಹೇಳಿದ್ದೆವು. ನಮ್ಮ ಉತ್ತರ ಅವನಿಗೆ ಬೇಸರ ತರಿಸಿತ್ತು ಎಂದು ಅವನ ಮುಖ ನೋಡಿದಾಗಲೇ ಗೊತ್ತಾಗಿತ್ತು. ಕ್ರಮೇಣ ನಾವು ಬೆಳೆಯುತ್ತಾ ಬಂದಂತೆ ಹುಡುಗರು-ಹುಡುಗಿಯರ ಅಂತರ ಹೆಚ್ಚುತ್ತಾ ಹೋಯ್ತು. ಹೈಸ್ಕೂಲ್ ಮೆಟ್ಟಲು ಹತ್ತಿದಾಗಲಂತೂ ಅವರು 'ಹುಡುಗರು'..ನಾವು ದೊಡ್ಡ ಹುಡುಗೀರು. ನಮ್ಮೂರು ಹಳ್ಳಿಯಾಗಿರುವುದರಿಂದ ಹುಡುಗರು ಹುಡುಗಿಯರು ನಡುವೆ ಅಂತರ ಕಾಯ್ದುಕೊಳ್ಳಲೇ ಬೇಕಿತ್ತು. ಸಂಬಂಧಿಕರಾಗಿರಲಿ, ಗೆಳೆಯರಾಗಿರಲಿ ಅಲ್ಲೊಂದು ಲಿಂಗಬೇಧದ ಗೆರೆಯಿರುತ್ತಿತ್ತು. ಹುಡುಗರ ಮುಂದೆ ಹೇಗೆ ಮಾತನಾಡಬೇಕು, ಅವರ ಮುಂದೆ ಹೇಗೆ ನಿಲ್ಲಬೇಕು, ನಮ್ಮ ಡ್ರೆಸ್...ಕೂದಲು..ಕಣ್ಣು, ಹಾವಭಾವ ಎಲ್ಲದಕ್ಕೂ 'ನೀನು ಹುಡುಗಿ' 'ಅವನು ಹುಡುಗ' ಹಾಗೆಲ್ಲಾ ಮಾಡಬಾರದೆಂಬ ಉಪದೇಶದ ಲೇಪ ಇದ್ದೇ ಇರುತ್ತಿತ್ತು. ಪ್ಲಸ್ ಟು ...ಹದಿಹರೆಯ...ಲವ್ ಆಗುವ ಸಾಧ್ಯತೆ ಜಾಸ್ತಿಯೇ..ಹುಡುಗರೂ ನಮಗಿಂತ ಕಮ್ಮಿಯೇನಿಲ್ಲ ಬಿಡಿ. ಒಂದು ಕಾಲದಲ್ಲಿ infatuationಗೆ ಒಳಗಾಗಿ ಸಾವಿರಾರು ಕನಸು ಕಂಡು ಅದು ಏನೆಂ...

ನಿವೇದನೆ

ಅ ಡುಗೆ ಮನೆಯತ್ತ ಮುಖ ಮಾಡಿದಾಗ ಸಾಲಲ್ಲಿರಿಸಿದ ಡಬ್ಬಗಳ ಕುಹಕ ನಗೆ ಕಾದ ಬಾಣಲೆಯಲ್ಲಿ ಸಾಸಿವೆಯ ಅಟ್ಟಹಾಸ ನನ್ನ ಭಾವನೆಗಳ ಕೆಣಕಿದಂತೆ ಇನ್ನೂ ಓದಿ ಮುಗಿದಿರದ ಪುಸ್ತಕದ ಪುಟವ ವೇಗದಿ ತಿರುವಿದಾಗ ಕೊಚ್ಚಿ ಹೋಗಿತ್ತು ನನ್ನ ಸ್ವಪ್ನ ಸುಂದರ ನೌಕೆ ಈ ನನ್ನ ಪ್ರಸವಕ್ಕೆ ಅಮ್ಮನ ಕಣ್ಣುಗಳಲ್ಲಿರುವ ವ್ಯಾಕುಲತೆಯಿಲ್ಲ ಪತಿಯ ಸಾಂತ್ವನವಿಲ್ಲ ಬಂಧುಗಳ ಮುಂಗಡ ಶುಭಾಶಯದ ಕರೆಗಳೂ ಬಂದಿಲ್ಲ ಅನೈತಿಕ ಗರ್ಭದಂತೆ... ಒಂದಷ್ಟು ಭಯ...ಕೈಗಳಲ್ಲಿ ನಡುಕ ಯಾರಿಗೂ ಕಾಣದಂತೆ ನನ್ನ ಪುಟ್ಟ ಕೋಣೆಯ ತೂಗು ತೊಟ್ಟಿಲಲ್ಲಿ ಖಾಲಿ ಹಾಳೆಗಳ ನಡುವೆ... ನಾನೆಷ್ಟು ಕಾಯಲಿ? ಉಪ್ಪಿಟ್ಟಿಗೆ ಒಗ್ಗರಣೆ ಹಾಕಿ ಒಂದಿಷ್ಟು ತಿಂದು, ಡಬ್ಬಕ್ಕೆ ತುಂಬಿಸಿ ಗುಡಿಸಿ, ಸಾರಿಸಿ, ಪಾತ್ರೆ ತಿಕ್ಕಿ... ಮಿಂದು.....ಬಿಸಿ ನೀರು ಕಾಯಿಸಿ ಸಾಕಪ್ಪಾ....ಸಾಕು! ಎಲ್ಲೋ ಕೇಳಿದೆ ಯಾರೋ ನನ್ನ ಮಗುವನ್ನು ದತ್ತು ತೆಗೆದುಕೊಂಡಿದ್ದಾರಂತ ಅವರು ಮುದ್ದು ಮಾಡಿರಬಹುದೇ? ನನ್ನ ಮಗು....ನನ್ನ ಭಾವನೆಗಳ ಚಿಗುರು ತುಂಟಾಟಿಕೆ- ಕಣ್ಣೀರಿಡುವ ಒಮ್ಮೆ ನಗುವ-ತೂಕಡಿಸುವ ಕೋಪದಿಂದ ಬಿಕ್ಕಳಿಸುವ...ಕೂಸು ಇಲ್ಲೆ ಎಲ್ಲೋ ಕೇಳಿಸಿದಂತಿದೆ ಯಾರದ್ದೋ ದನಿಯಲ್ಲಿ ನನ್ನ ಮಗುವಿನ ತೊದಲು ನುಡಿ ಅಷ್ಟು ಸಾಕು...ನನಗೆ ಬೇಡ... ನನ್ನ ಹಳಿಯಬೇಡಿ ನನ್ನ ಹಂಗಿಸಬೇಡಿ... ಕೋರಿಕೆ...ನಿಮ್ಮಲ್ಲಿ ನನಗೊಂದಷ್ಟು ಸಮಯ ಕೊಡಿ ನನ್ನ ಈ ಸಾಲುಗಳನ್ನು ಹಡೆದು ನಿಟ್ಟುಸಿರು ಬಿಡಲೇ?